ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದ ಮ್ಯಾಟರ್ ಸಂಸ್ಥೆ
ಸಿಲಿಕಾನ್ ಸಿಟಿ : ಬೆಂಗಳೂರಿನಲ್ಲಿ ಹೊಸ ಎಕ್ಸ್‌ಪೀರಿಯನ್ಸ್ ಹಬ್ ಆರಂಭಿಸಿದೆ. ಬಿಟಿಎಂ ಎರಡನೇ ಹಂತದ ೧೦೦ ಅಡಿ ರಿಂಗ್ ರಸ್ತೆಯಲ್ಲಿರುವ ಮ್ಯಾಟರ್‌ನ ಹೊಸ ಎಕ್ಸ್‌ಪೀರಿಯನ್ಸ್ ಕೇಂದ್ರವನ್ನು ಶಾಸಕ ಸಿ.ಕೆ. ರಾಮಮೂರ್ತಿ ಅವರು ಸೋಮವಾರ ಉದ್ಘಾಟಿಸಿದರು. ಇದರೊಂದಿಗೆ ಮ್ಯಾಟರ್ ಸಂಸ್ಥೆಯು ದಕ್ಷಿಣ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಇನ್ನೂ ವಿಸ್ತರಿಸಿದೆ.
ಹೊಸ ಮ್ಯಾಟರ್ ಎಕ್ಸ್‌ಪೀರಿಯನ್ಸ್ ಹಬ್‌ನಲ್ಲಿ ಮ್ಯಾಟರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿರುವ ತಂತ್ರಜ್ಞಾನಗಳನ್ನು ಅರ್ಥ ಮಾಡಿಕೊಂಡು ಅನುಭವ ಪಡೆಯುವ ಮತ್ತು ವಾಹನಗಳನ್ನು ಬುಕ್ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಮ್ಯಾಟರ್‌ನ ಸಹಸ್ಥಾಪಕ ಮತ್ತು ಗ್ರೂಪ್ ಸಿಡಿಒ ಸರಣ್ ಬಾಬು, ಇನ್ನೊಬ್ಬ ಸಹಸ್ಥಾಪಕ ಮತ್ತು ಗ್ರೂಪ್ ಸಿಒಒ ಅರುಣ್ ಪ್ರತಾಪ್ ಸಿಂಗ್, ಮಾರಾಟ ವಿಭಾಗದ ಉಪಾಧ್ಯಕ್ಷರಾದ ವಿಲ್ಲಿ ಚೆಂಗಪ್ಪ ಮತ್ತು ಡೀಲರ್‌ಷಿಪ್ ಪಡೆದಿರುವ ಚಿರಾಗ್ ಬಾಫ್ನಾ ಉಪಸ್ಥಿತರಿದ್ದರು.
ಭಾರತದ ಮೊದಲ ಗಿಯರ್ಡ್ ಎಲೆಕ್ಟ್ರಿಕ್ ಬೈಕ್ ಆಗಿರುವ ಮ್ಯಾಟರ್ ಏರಾ ಬೈಕ್ ಈ ಅನುಭವ ಕೇಂದ್ರದ ಮುಖ್ಯ ಆಕರ್ಷಣೆಯಾಗಿದೆ. ಮ್ಯಾಟರ್ ಏರಾ ಬೈಕಿಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದೆ. ವಿನ್ಯಾಸ, ಸಾಮರ್ಥ್ಯ ಮತ್ತು ಸುಸ್ಥಿರತೆಯಿಂದಾಗಿ ಮ್ಯಾಟರ್ ಏರಾ ರೈಡಿಂಗ್ ಅನುಭವ ನೀಡಲಿದ್ದು, ಸಾಂಪ್ರದಾಯಿಕ ಬೈಕ್‌ಗಳಿಗೆ ಸಮರ್ಥ ಪರ್ಯಾಯ ಎನಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮ್ಯಾಟರ್‌ನ ಸ್ಥಾಪಕ ಮತ್ತು ಸಿಇಒ ಮೋಹಲ್ ಲಾಲ್‌ಭಾಯ್ ಅವರು “ಭಾರತದ ನಾವೀನ್ಯತೆಯ ಕ್ಷೇತ್ರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಇದಕ್ಕೆ ಪೂರಕವಾಗಿ ನಮ್ಮ ಹೆಜ್ಜೆಗುರುತನ್ನು ಇಲ್ಲಿ ಮೂಡಿಸುವ ಮೂಲಕ ಅತ್ಯಾಧುನಿಕ ತಂತ್ರಜ್ಞಾನದ ಎಲೆಕ್ಟ್ರಿಕ್ ಮೊಬಿಲಿಟಿ ಗ್ರಾಹಕರಿಗೆ ದೊರೆಯುವಂತೆ ಮಾಢಿದ್ದೇವೆ. ಎಕ್ಸ್‌ಪೀರಿಯನ್ಸ್ ಹಬ್, ಕೇವಲ ಶೋರೂಂಗೆ ಸೀಮಿತಗೊಳ್ಳದೇ, ಗ್ರಾಹಕರಿಗೆ ಹೊಸ ವಾಹನದ ಕುರಿತು ಸೂಕ್ತ ತಿಳಿವಳಿಕೆ, ಅನ್ವೇಷಣೆಗೆ ಮತ್ತು ಸಬಲೀಕರಣಕ್ಕೆ ಅವಕಾಶ ನೀಡಲಾಗಿದೆ” ಎಂದು ತಿಳಿಸಿದರು.
ಡೀಲರ್ ಪ್ರಿನ್ಸಿಪಾಲ್ ಚಿರಾಗ್ ಬಾಫ್ನಾ ಮಾತನಾಡಿ “ಮ್ಯಾಟರ್ ಜೊತೆ ಕೈಜೋಡಿಸಲು ಅತೀವ ಸಂತೋಷವಾಗುತ್ತಿದೆ. ಏರಾ ಎಲೆಕ್ಟ್ರಿಕ್ ಬೈಕ್ ಗ್ರಾಹಕರಲ್ಲಿ ಕುತೂಹಲ ಮೂಡಿಸುತ್ತಿದೆ. ಹೊಸ ಅನುಭವ ಕೇಂದ್ರ ಈ ಪ್ರದೇಶದಲ್ಲಿ ಸಮಾನ ಆಸಕ್ತ ಗ್ರಾಹಕರ ಸಮುದಾಯವನ್ನು ಸೃಷ್ಟಿಸುವುದರಲ್ಲಿ ಸಂಶಯವಿಲ್ಲ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.