*ವಿಷನ್ ಕರ್ನಾಟಕ ಫೌಂಡೇಷನ್ ಮತ್ತು ಕಿಷ್ಕಿಂದ ವಿವಿಯಿಂದ ರಫ್ತುಉತ್ಕೃಷ್ಟ ಕೇಂದ್ರ ನಿರ್ಮಾಣಕ್ಕೆ ಒಪ್ಪಂದ*
ಬೆಂಗಳೂರು ಜನವರಿ 22: ವಿಷನ್ ಕರ್ನಾಟಕ ಫೌಂಡೇಷನ್ (ವಿಕೆಎಫ್) ಮತ್ತು ಕಿಷ್ಕಿಂದ ವಿಶ್ವವಿದ್ಯಾಲಯವು ಭಾರತದ ಮೊದಲ ರಫ್ತುಉತ್ಕೃಷ್ಟ ಕೇಂದ್ರ(ಇನ್ಕ್ಯುಬೇಷನ್ ಕ್ಲಸ್ಟರ್) ಸ್ಥಾಪನೆಗೆ ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಕಿಷ್ಕಿಂದಾ ವಿಶ್ವವಿದ್ಯಾಲಯದ ಕುಲಾಧಿಪತಿ ವೈ.ಜಿ.ಪೃಥ್ವಿರಾಜ್ ಭೋಪಕ್ ಮತ್ತು ಕರ್ನಾಟಕ ವಿಷನ್ ವಿಶ್ವವಿದ್ಯಾಲಯದ ಅಧ್ಯಕ್ಷ ಕಿಶೋರ್ ಜಾಗೀದಾರ್ ಒಪ್ಪಂದಕ್ಕೆ ಸಹಿ ಹಾಕಿದರು. ಈ ವೇಳೆ ಕಿಷ್ಕಿಂದ ವಿವಿಯ ಕುಲಪತಿ ಡಾ.ಟಿ.ನಾಗಭೂಷಣ್ ಇತರರು ಇದ್ದರು.
Watch Video
ಹಬ್ ಅಂಡ್ ಸ್ಪೋಕ್ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಆರಂಭಿಸಲು ನಿರ್ಧರಿಸಿಲಾಗಿದೆ. ರಫ್ತು ಉತ್ತೇಜನ ಪಡಿಸಿಸುವುದು. ಜಾಗತಿಕ ಮಾರುಕಟ್ಟೆಯ ಸೌಲಭ್ಯವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆ ಜತೆಗೆ ಜೊಡಿಸುವುದು. ಸಂಶೋಧನಾ ಆಧಾರಿತವಾಗಿ ಲಭ್ಯವಿರುವ ರಫ್ತು ಅವಕಾಶಗಳು, ಮೌಲ್ಯ ವರ್ಧನೆ ಮತ್ತು ಪೂರೈಕೆ ಸರಪಳಿಯನ್ನು ಬಲಪಡಿಸುವುದು. ಬೆಳೆ ಪ್ರಗತಿ, ಗುಣಮಟ್ಟ ಹೆಚ್ಚಳ ಪಡಿಸುವ ಪ್ರಮುಖ ಗುರಿಯನ್ನು ಈ ಒಪ್ಪಂದವು ಹೊಂದಿದೆ.
ಈ ವೇಳೆ ಮಾತನಾಡಿದ ಕಿಷ್ಕಿಂದಾ ವಿಶ್ವವಿದ್ಯಾಲಯದ ಕುಲಾಧಿಪತಿ ವೈ.ಜಿ.ಪೃಥ್ವಿರಾಜ್ ಭೋಪಾಲ್, “ರಫ್ತು ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ, ಈ ಕ್ಷೇತ್ರದಲ್ಲಿನ ಪ್ರಗತಿಯನ್ನು ಹೆಚ್ಚಿಸುವ ಸಲುವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ನಾವು ಎಪಿಇಡಿಎ, ಕೆಎಪಿಪಿಇಸಿ, ವಿಟಿಪಿಸಿ, ಎಸ್‌ಐಡಿಬಿಐ, ನಬಾರ್ಡ್ ಹಾಗೂ ಎಂಎಸ್‌ಎಂಇ ಸಹಯೋಗ ಪಡೆದುಕೊಳ್ಳಲಾಗಿದೆ” ಎಂದರು.
ಕರ್ನಾಟಕ ವಿಷನ್ ವಿಶ್ವವಿದ್ಯಾಲಯದ ಅಧ್ಯಕ್ಷ ಕಿಶೋರ್ ಜಾಗೀದಾರ್ ಮಾತನಾಡಿ, “ಈ ಒಪ್ಪಂದದಿಂದ ಶೈಕ್ಷಣಿಕ, ಕೈಗಾರಿಕೆ, ಆರ್ಥಿಕತೆಯನ್ನು ಒಗ್ಗೂಡಿಸುವ ಪ್ರಯತ್ನ ಇದಾಗಿದೆ. ವಿಶ್ವವಿದ್ಯಾಲವು ರಾಷ್ಟ್ರೀಯ ರಫ್ತು ಉದ್ಯಮಿಗಳನ್ನು ಸೃಷ್ಟಿಗೆ ಕಾರಣವಾಗಲಿದೆ. ಭಾರತೀಯ ಉದ್ಯಮಿಗಳನ್ನು ಜಾಗತಿಕ ಮಟ್ಟದಲ್ಲಿ ನಿರೂಪಿಸಲು ಇದು ಸಹಾಯಕಾರಿಯಾಗಿದೆ” ಎಂದರು.
