ವಿಶ್ವ ಕ್ಯಾನ್ಸರ್ ದಿನದಂದು ಮಕ್ಕಳನ್ನು ರಕ್ತ ಸ್ಟೆಮ್ ಸೆಲ್ ದಾನಿಗಳಾಗಿ ನೋಂದಾಯಿಸಲು ಬೆಂಬಲಿಸುವಂತೆ ತಾಯಂದಿರಿಗೆ ಮೇಘನಾ ರಾಜ್ ಸರ್ಜಾ ಮನವಿ
ಬೆಂಗಳೂರು, ಫೆಬ್ರವರಿ 4: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ, ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ತಮ್ಮ ಅಭಿನಯದಿಂದ ಗುರುತಿಸಿಕೊಂಡಿರುವ ಖ್ಯಾತ ನಟಿ ಮೇಘನಾ ರಾಜ್ ಸರ್ಜಾ ಹಾಗೂ ರಕ್ತ ಕ್ಯಾನ್ಸರ್ ಮತ್ತು ಥಲಸೇಮಿಯಾ, ಅಪ್ಲಾಸ್ಟಿಕ್ ಅನೀಮಿಯಾ ಮುಂತಾದ ರಕ್ತ ಸಂಬಂಧಿತ ಕಾಯಿಲೆಗಳ ವಿರುದ್ಧ ಹೋರಾಡುತ್ತಿರುವ NGO ಸಂಸ್ಥೆಯಾದ DKMS ಫೌಂಡೇಶನ್ ಇಂಡಿಯಾ, ಭಾರತದೆಲ್ಲೆಡೆ ಇರುವ ತಾಯಂದಿರು ಮತ್ತು ಕುಟುಂಬಗಳನ್ನು — 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ತಮ್ಮ ಮಕ್ಕಳನ್ನು ರಕ್ತ ಸ್ಟೆಮ್ ಸೆಲ್ ದಾನಿಗಳಾಗಿ ನೋಂದಾಯಿಸಿಕೊಳ್ಳಲು ಬೆಂಬಲಿಸುವಂತೆ ಕರೆ ನೀಡುತ್ತಿದ್ದಾರೆ.
ಈ ಜಾಗೃತಿ ಅಭಿಯಾನದ ಭಾಗವಾಗಿ, ಮೇಘನಾ ತಮ್ಮ ಇನ್‌ಸ್ಟಾಗ್ರಾಂ ಚಾನೆಲ್‌ನಲ್ಲಿ ಕನ್ನಡ ವೀಡಿಯೊ ಸಂದೇಶವನ್ನು ಹಂಚಿಕೊಂಡಿದ್ದಾರೆ (https://www.instagram.com/reel/DUUqnr5j-7o/?igsh=MXA1cW0yaHBjYXc0). ಈ ಸಂದೇಶದಲ್ಲಿ ಅವರು ತಾಯಂದಿರನ್ನು ನೇರವಾಗಿ ಉದ್ದೇಶಿಸಿ ಮಾತನಾಡುತ್ತಾ – ರಕ್ತ ಸ್ಟೆಮ್ ಸೆಲ್ ದಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಹಾಗೂ ತಮ್ಮ ಮಕ್ಕಳು ತೆಗೆದುಕೊಳ್ಳುವ ಜಾಗೃತ ನಿರ್ಧಾರಗಳಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ತಾಯಿಯ ದೃಷ್ಟಿಕೋಣದಿಂದ ಮಾತನಾಡಿದ ಮೇಘನಾ, ರಕ್ತ ಕ್ಯಾನ್ಸರ್ ಮತ್ತು ಗಂಭೀರ ರಕ್ತ ರೋಗಗಳಿಂದ ಬಳಲುತ್ತಿರುವ ಅನೇಕ ರೋಗಿಗಳಿಗೆ ರಕ್ತ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟ್ ಒಂದೇ ಜೀವ ಉಳಿಸುವ ಚಿಕಿತ್ಸೆಯಾಗಿದೆ ಎಂಬ ಮಹತ್ವದ ಸತ್ಯವನ್ನು ಒತ್ತಿ ಹೇಳಿದ್ದಾರೆ. ಆದರೆ ಹೊಂದಾಣಿಕೆಯ ದಾನಿಯನ್ನು ಹುಡುಕುವುದು ಅತ್ಯಂತ ಅಪರೂಪ — ಕೆಲವೊಮ್ಮೆ ಒಂದು ಮಿಲಿಯನ್‌ನಲ್ಲಿ ಒಬ್ಬರಷ್ಟೇ match ಆಗುವ ಸಾಧ್ಯತೆ ಇರುತ್ತದೆ. ತಮ್ಮ ಸಂದೇಶದಲ್ಲಿ ಮೇಘನಾ ರಕ್ತ ಸ್ಟೆಮ್ ಸೆಲ್ ದಾನಕ್ಕೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ನಿವಾರಿಸುತ್ತಾ, ಇದು organ ದಾನದಂತಲ್ಲ, ಇದು ಸುರಕ್ಷಿತ ಮತ್ತು ಸ್ವಯಂಪ್ರೇರಿತ ಪ್ರಕ್ರಿಯೆಯಾಗಿದ್ದು ಪ್ಲೇಟ್‌ಲೆಟ್ ದಾನದಂತೆಯೇ ಎಂದು ವಿವರಿಸಿದ್ದಾರೆ. ದಾನಿಗಳ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ, ದೌರ್ಬಲ್ಯ ಅಥವಾ ಫಲವತ್ತತೆ ಮೇಲೆ ಯಾವುದೇ ಪರಿಣಾಮ ಇರುವುದಿಲ್ಲ ಹಾಗೂ ದೇಹವು ದಾನ ಮಾಡಿದ ಸ್ಟೆಮ್ ಸೆಲ್‌ಗಳನ್ನು ಸ್ವಾಭಾವಿಕವಾಗಿ ಪುನಃ ಉತ್ಪಾದಿಸುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.
“ರಕ್ತ ಕ್ಯಾನ್ಸರ್ ಮತ್ತು ರಕ್ತ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ತಾಯಂದಿರು ಪ್ರತಿದಿನ ಅನುಭವಿಸುವ ನೋವನ್ನು ನಾನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅದೇ ಸಮಯದಲ್ಲಿ, ದಾನಿಯ ತಾಯಿಯ ಮನಸ್ಸಿನಲ್ಲಿ ಮೂಡುವ ಆತಂಕ, ಭಯದಿಂದ ಕೂಡಿದ ಮಿಶ್ರ ಭಾವನೆಗಳು, ಪ್ರಶ್ನೆಗಳು ಮತ್ತು ಮಕ್ಕಳನ್ನು ರಕ್ಷಿಸಬೇಕೆಂಬ ಸಹಜ ಪ್ರವೃತ್ತಿಯನ್ನೂ ನಾನು ಅರ್ಥಮಾಡಿಕೊಳ್ಳುತ್ತೇನೆ. ತಾಯಂದಿರು ತಮ್ಮ ಮಕ್ಕಳಿಗೆ ಮೊದಲ ಭಾವನಾತ್ಮಕ ಆಧಾರಸ್ತಂಭರಾಗಿರುತ್ತಾರೆ. ವಯಸ್ಕ ಮಕ್ಕಳು ಜಾಗೃತ ನಿರ್ಧಾರ ತೆಗೆದುಕೊಂಡು matching blood ಸ್ಟೆಮ್ ಸೆಲ್ ದಾನಿಗಳಾಗಿ ನೋಂದಾಯಿಸಿಕೊಳ್ಳುವಾಗ, ತಾಯಿಯ ಬೆಂಬಲಮಾತ್ರವಲ್ಲ — ಎಲ್ಲೋ ಜೀವ ಉಳಿಸುವ ಅವಕಾಶಕ್ಕಾಗಿ ಕಾಯುತ್ತಿರುವ ರೋಗಿಗೂ ಅಪಾರವಾದ ನಂಬಿಕೆ ತರಬಲ್ಲದು. ಇದು ಈ ಕ್ಷಣದ ಅಗತ್ಯ ಎಂದು ನಾನು ನಂಬುತ್ತೇನೆ. ಅನುಮಾನ ಅಥವಾ ಭಯದಲ್ಲಿ ಸಿಲುಕಿಕೊಳ್ಳುವ ಬದಲು, ತಾಯಂದಿರು ಜಾಗೃತಿ, ಅರಿವು ಮತ್ತು ಕರುಣೆಯನ್ನು ಆಯ್ಕೆ ಮಾಡಬೇಕು,” ಎಂದು ಮೇಘನಾ ರಾಜ್ ಸರ್ಜಾ ಹೇಳಿದ್ದಾರೆ.
ಈ ಸಹಯೋಗದ ಮೂಲಕ ಕುಟುಂಬಗಳ ನಡುವೆ ರಕ್ತ ಸ್ಟೆಮ್ ಸೆಲ್ ದಾನದ ಬಗ್ಗೆ ಇರುವ ಭಯ ಹಾಗೂ ಗೊಂದಲವನ್ನು ನಿವಾರಿಸಿ, ಅರಿವು ಮೂಡಿಸುವ ಮೂಲಕ ಜವಾಬ್ದಾರಿಯುತ ಮತ್ತು ಮಾಹಿತಿ ಆಧಾರಿತ ನಿರ್ಧಾರಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸುವುದೇ DKMS ಫೌಂಡೇಶನ್ ಇಂಡಿಯಾದ ಮುಖ್ಯ ಗುರಿಯಾಗಿದೆ.
DKMS ಇಂಡಿಯಾದ Executive Chairman ಪ್ಯಾಟ್ರಿಕ್ ಪಾಲ್ ಮಾತನಾಡಿ, “ಈ ಮಹತ್ವದ ಕಾರಣಕ್ಕಾಗಿ ತಮ್ಮ ಧ್ವನಿಯನ್ನು ನೀಡಿದ ಮೇಘನಾ ರಾಜ್ ಸರ್ಜಾಗೆ ನಾವು ಕೃತಜ್ಞರಾಗಿದ್ದೇವೆ. ಚಿತ್ರರಂಗದ ಮೂಲಕ ಕುಟುಂಬಗಳು, ವಿಶೇಷವಾಗಿ ತಾಯಂದಿರೊಂದಿಗೆ ಹೊಂದಿರುವ ಅವರ ನಂಟು, ಈ ಸಂದೇಶವನ್ನು ಜನರಿಗೆ ತಲುಪಲು ಸಹಾಯ ಮಾಡುತ್ತದೆ.
ರಕ್ತ ಸ್ಟೆಮ್ ಸೆಲ್ ದಾನದ ಕುರಿತು ಜಾಗೃತಿ ಎಂದರೆ ಕೇವಲ ವ್ಯಕ್ತಿಗಳ ಬಗ್ಗೆ ಮಾತ್ರವಲ್ಲ — ಕುಟುಂಬಗಳು ಒಟ್ಟಾಗಿ ಮಾಹಿತಿ ಆಧಾರಿತ ಹಾಗೂ ಬೆಂಬಲದ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿದೆ,” ಎಂದರು.
ಅವರು ಮುಂದುವರೆಸಿ, “ತಾಯಂದಿರು ತಮ್ಮ ವಯಸ್ಕ ಮಕ್ಕಳು potential ದಾನಿಗಳಾಗಿ ನೋಂದಾಯಿಸಿಕೊಳ್ಳುವ ನಿರ್ಧಾರಕ್ಕೆ ಬೆಂಬಲ ನೀಡಿ ಅವರೊಂದಿಗೆ ನಿಂತಾಗ, ಅದು ಶಕ್ತಿಶಾಲಿ ಅಲೆ ಪರಿಣಾಮವನ್ನು ಸೃಷ್ಟಿಸುತ್ತದೆ. ಇದರಿಂದ ಭಾರತದಲ್ಲಿ ಪ್ರಸ್ತುತ ಕೇವಲ 0.09% eligible ಜನಸಂಖ್ಯೆ ಮಾತ್ರ ಇರುವ ಸ್ಟೆಮ್ ಸೆಲ್ ದಾನಿಗಳ ನೋಂದಣಿಯನ್ನು ಬಲಪಡಿಸಬಹುದು. ಇದು ‘genetic ಬಾಟಲ್‌ನೆಕ್’ ಅನ್ನು ದಾಟಲು ಸಹಾಯ ಮಾಡಿ ಹೆಚ್ಚಿನ ರೋಗಿಗಳಿಗೆ ಜೀವ ಉಳಿಸುವ ಹೊಂದಾಣಿಕೆಯನ್ನು ಕಂಡುಕೊಳ್ಳುವ ಅವಕಾಶವನ್ನು ನೀಡುತ್ತದೆ.
ತಾಯಂದಿರು ಈ ಬದಲಾವಣೆಗೆ ಮುನ್ನಡೆ ನೀಡಿದರೆ, ದಾನಿಗಳ ನೋಂದಣಿ ಮತ್ತು ರೋಗಿಗಳ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ಇದು ನಿಜಕ್ಕೂ ಪರಿವರ್ತನಾತ್ಮಕವಾಗಿರಬಹುದು.”
ಯಾರು ನೋಂದಾಯಿಸಿಕೊಳ್ಳಬಹುದು?
18 ರಿಂದ 55 ವರ್ಷದೊಳಗಿನವರು, ಸಾಮಾನ್ಯವಾಗಿ ಉತ್ತಮ ಆರೋಗ್ಯ ಹೊಂದಿರುವವರು, BMI 40ಕ್ಕಿಂತ ಕಡಿಮೆ ಇರುವವರು ಮತ್ತು ಈಗಾಗಲೇ ನೋಂದಾಯಿಸದವರು ಸಾಧ್ಯತೆಯಿರುವ ದಾನಿಗಳಾಗಿ ನೋಂದಾಯಿಸಿಕೊಳ್ಳಬಹುದು.
ರಕ್ತ ಸ್ಟೆಮ್ ಸೆಲ್ ದಾನಿಯಾಗಿ ನೋಂದಾಯಿಸಲು, ನೀವು 18–55 ವರ್ಷದೊಳಗಿನ ಆರೋಗ್ಯವಂತ ಭಾರತೀಯ ವಯಸ್ಕರಾಗಿರಬೇಕು. ನೋಂದಾಯಿಸಲು ಸಿದ್ಧರಾಗಿದ್ದಾಗ, ನೀವು consent form ಭರ್ತಿ ಮಾಡಿ, ನಿಮ್ಮ ಗಲ್ಲದ ಒಳಭಾಗವನ್ನು ಸ್ವ್ಯಾಬ್ ಮಾಡುವ ಮೂಲಕ tissue cells ಸಂಗ್ರಹಿಸಬೇಕು. Eligible ಆಗಿದ್ದರೆ, www.dkms-india.org/register ಮೂಲಕ ನಿಮ್ಮ ಮನೆಗೆ ಬರುವ ಸ್ವ್ಯಾಬ್ ಕಿಟ್ ಮೂಲಕ ರಕ್ತ ಸ್ಟೆಮ್ ಸೆಲ್ ದಾನಿಯಾಗಿ ನೋಂದಾಯಿಸಿಕೊಳ್ಳಬಹುದು.
