IMG 20260327 WA0035 scaled

ಕಾಂಗ್ರೆಸ್ : ಚುನಾವಣೆ ಮುಗಿದ ಬಳಿಕ ಕೇಂದ್ರ ಸರ್ಕಾರದಿಂದ ತೈಲ ಬೆಲೆ ಏರಿಕೆ….!

POLATICAL STATE

 

*ಚುನಾವಣೆ ಮುಗಿದ ಬಳಿಕ ಕೇಂದ್ರ ಸರ್ಕಾರದಿಂದ ತೈಲ ಬೆಲೆ ಏರಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್*

*ಅಡುಗೆ ಅನಿಲ ಹಂಚಿಕೆಯಲ್ಲಿ ದಕ್ಷಿಣ ಭಾರತಕ್ಕೆ ಮೋಸ*

*ಕೇಂದ್ರ ಸರ್ಕಾರದಿಂದ ಪಿಕ್ ಪಾಕೆಟ್*

*ಬೆಂಗಳೂರು, ಮಾ.27:*”ಚುನಾವಣೆ ಮುಗಿದ ತಕ್ಷಣ ಮತ್ತೆ ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಮಾಡಲಿದೆ. ಈ ರೀತಿ ಹಿಂದೆಯೂ ಮಾಡಿದ್ದಾರೆ. ಇದೆಲ್ಲವೂ ಚುನಾವಣೆ ಗಿಮಿಕ್” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಹಾಗೂ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಕೇಂದ್ರ ಸರ್ಕಾರ ದಿನಕ್ಕೆ 1 ಸಾವಿರ ಕೋಟಿ ಹೆಚ್ಚುವರಿ ತೆರಿಗೆಯನ್ನು ಸಂಗ್ರಹ ಮಾಡುತ್ತಿದೆ. ಇದು ಯಾರಿಗೆ ತಲುಪುತ್ತಿದೆ. ಈ ಹಿಂದೆ ಇಂಧನಗಳ ಬೆಲೆ ಹೆಚ್ಚಿಸಿದಾಗ 100 ನಾಟ್ ಔಟ್ ಎಂದು ಹೋರಾಟ ಮಾಡಿದ್ದೆವು. ಈಗ ಅವರಿಗೆ ಬೇಕಾದಂತಹ ಕಂಪೆನಿಗಳಿಗೆ ಅನುಕೂಲವಾಗಲು ಟ್ರಯಲ್ ರನ್ ಮಾಡುತ್ತಿದ್ದಾರೆ” ಎಂದರು.

“ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ನಮ್ಮ ರಾಜ್ಯದ ಗ್ರಾಹಕರಿಗೆ ‌ಅನಿಲ ಸಿಲಿಂಡರ್ ಅನ್ನು ಸರಿಯಾದ ರೀತಿಯಲ್ಲಿ ನೀಡಲು ಕೇಂದ್ರಕ್ಕೆ ಆಗುತ್ತಿಲ್ಲ”ಎಂದರು.

*ಅಡುಗೆ ಅನಿಲ ಹಂಚಿಕೆಯಲ್ಲಿ ದಕ್ಷಿಣ ಭಾರತಕ್ಕೆ ಮೋಸ*

“ಹೊರ್ಮುಜ್ ದಾಟಿ ಎರಡು ಹಡಗುಗಳು ದೇಶಕ್ಕೆ ಬಂದವು. ಅದರಲ್ಲಿ ಒಂದನ್ನು ದಕ್ಷಿಣಕ್ಕೆ ಅಂದರೆ ಕರ್ನಾಟಕ, ತಮಿಳುನಾಡಿಗೆ ಕಳುಹಿಸಬಹುದಿತ್ತಲ್ಲವೇ? ಗುಜರಾತಿಗೆ ಏಕೆ ಹೋದವು. ಈಗ ಕೇರಳ, ತಮಿಳುನಾಡಿನಲ್ಲಿ ಚುನಾವಣೆಗಳಿವೆ. ದಕ್ಷಿಣದ ರಾಜ್ಯಗಳಲ್ಲಿ ಅವರ ಪ್ರಭಾವ ಇಲ್ಲ ಎನ್ನುವ ಕಾರಣಕ್ಕೆ ದಕ್ಷಿಣ ಭಾರತವನ್ನ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದಾರೆ” ಎಂದರು.

“ಈ ಹಿಂದೆ ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಮುಸಲ್ಮಾನ ಹೆಣ್ಣುಮಗಳು ಗ್ಯಾಸ್ ನೀಡಿದ್ದಕ್ಕೆ ಧನ್ಯವಾದ ಹೇಳುತ್ತಿರುವ ಹೋರ್ಡಿಂಗ್ ಇರುತ್ತಿತ್ತು. ಈಗ ಏಕೆ ಅದನ್ನೆಲ್ಲಾ ತೆಗೆದು ಹಾಕಿದ್ದಾರೆ. ಕೇಂದ್ರ ಸರ್ಕಾರ ಪ್ರತಿದಿನ ಗ್ರಾಹಕರ ಪಿಕ್ ಪಾಕೆಟ್ ಮಾಡುತ್ತಿದೆ”ಎಂದರು.

“2014, 26 ಮೇ ತಿಂಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಾ ಹೋಯಿತು. ಪೆಟ್ರೋಲ್ 71, ಡೀಜೆಲ್ ಅನ್ನು 56 ರೂಪಾಯಿಗೆ ನೀಡಲಾಗುತ್ತಿತ್ತು. ಈಗ 103 ರೂಪಾಯಿ ಆಗಿದೆ. ಕಚ್ಚಾ ತೈಲಬೆಲೆ ಕಡಿಮೆ ಇದ್ದರೂ ನಮ್ಮಲ್ಲಿ ಬೆಲೆ ಹೆಚ್ಚಳಕ್ಕೆ ಏನು ಕಾರಣ” ಎಂದು ಪ್ರಶ್ನಿಸಿದರು.

*ತೈಲಬೆಲೆ ಇಳಿಕೆ; ಭಾರತ ಸರ್ಕಾರ ಕೊಲೆ ಮಾಡುತ್ತಿದೆ*

ಕೇಂದ್ರ ಸರ್ಕಾರ ಇಂಧನ ತೈಲದ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ’ (special additional excise duty) ಇಳಿಕೆ ಬಗ್ಗೆ ಕೇಳಿದಾಗ,‌ “ಭಾರತ ಸರ್ಕಾರ ನಮ್ಮನ್ನ ಕೊಲೆ ಮಾಡುತ್ತಿದೆ. ಚುನಾವಣೆಗಾಗಿ ತೈಲ ಬೆಲೆ ಕಡಿಮೆ ಮಾಡಿದ್ದಾರೆ. ನಯಾರ ಕಂಪನಿಯವರು ಇಂಧನ ಬೆಲೆಯನ್ನು ಹೆಚ್ಚಳ ಮಾಡಿದ್ದಾರೆ” ಎಂದು ಹರಿಹಾಯ್ದರು.

ರಾಜ್ಯ ಸರ್ಕಾರ ತೈಲ ಬೆಲೆ ಕಡಿಮೆ ಮಾಡಲಿದೆಯೇ ಎಂದು ಕೇಳಿದಾಗ, “ಆನಂತರ ಇದರ ಬಗ್ಗೆ ಮಾತನಾಡುತ್ತೇವೆ” ಎಂದರು.