images 11

ರಾಜ್ಯಸರ್ಕಾರಕ್ಕೆ ಛೀಮಾರಿ ಹಾಕಿದ ಹೈಕೋರ್ಟ್….!

Genaral STATE

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಲಸಿಕೆ ಕೊರತೆ ಎದ್ದು ಕಾಣುತ್ತಿದ್ದು, ಜನರು ಲಸಿಕೆಗಾಗಿ ಪರದಾಡುವಂತಾಗಿದೆ. ಹೀಗಾಗಿ ಹೈಕೋರ್ಟ್​ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ರಾಜ್ಯದಲ್ಲಿ 6 ಕೋಟಿಗೆ ಹೆಚ್ಚು ಜನಸಂಖ್ಯೆ ಇದೆ. ನೀವು ಒಂದು ಪರ್ಸೆಂಟ್ ಜನರಿಗೂ ವ್ಯಾಕ್ಸಿನ್ ಒದಗಿಸಿಲ್ಲ. ಇದು ನಿಮ್ಮ ವ್ಯಾಕ್ಸಿನೇಷನ್‌ ಕಾರ್ಯಕ್ರಮದ ರೀತಿಯೇ ಎಂದು ಹೈಕೋರ್ಟ್​ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟವರಿಗೆ 2ನೇ ಹಂತದ ವ್ಯಾಕ್ಸಿನ್ ಕೊರತೆಯಾಗಿದೆ. 31 ಲಕ್ಷ ಜನರಿಗೆ ವ್ಯಾಕ್ಸಿನ್ ಯಾವಾಗ ಒದಗಿಸುತ್ತೀರಾ ಹೇಳಿ. ಲಸಿಕೆ ಒದಗಿಸಲು ನಿಮ್ಮಿಂದಾಗದಿದ್ದರೆ ಹೇಳಿ. ನಾವು ನಿಮ್ಮಿಂದ ಸಾಧ್ಯವಿಲ್ಲ ಎಂದೇ ಆದೇಶದಲ್ಲಿ ದಾಖಲಿಸ್ತೇವೆ ಎಂದು ಸರ್ಕಾರಕ್ಕೆ ನ್ಯಾಯಾಲಯ ಚಾಟಿ ಬೀಸಿದೆ.

ರಾಜ್ಯದಲ್ಲಿ 6 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ನೀವು ಒಂದು ಪರ್ಸೆಂಟ್ ಜನಕ್ಕೂ ವ್ಯಾಕ್ಸಿನ್ ಒದಗಿಸಿಲ್ಲ. ಇದು ನಿಮ್ಮ ವ್ಯಾಕ್ಸಿನೇಷನ್‌ ಕಾರ್ಯಕ್ರಮದ ರೀತಿಯೇ? ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಕೇಂದ್ರ ಸರ್ಕಾರ ರಾಜ್ಯಗಳಿಗೆ ಮಾರ್ಗಸೂಚಿಯೊಂದನ್ನು ನೀಡಿತ್ತು. ನೀಡಲಾಗುವ ಲಸಿಕೆಯಲ್ಲಿ ಶೇ.70 ರಷ್ಟನ್ನು 2ನೇ ಡೋಸ್​​ಗೆ ಬಳಸುವಂತೆ ಹೇಳಿತ್ತು. ಈ ಮಾರ್ಗಸೂಚಿ ಪಾಲಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಹೈಕೋರ್ಟ್ ಗೆ ಕೇಂದ್ರ ಸರ್ಕಾರದ ಎಎಸ್ ಜಿ ಐಶ್ವರ್ಯ ಭಾಟಿ ಹೇಳಿದ್ದಾರೆ

ಕೇಂದ್ರ ಸರ್ಕಾರದಿಂದಲೂ ಮಾಹಿತಿ ಕೇಳಿದ ಹೈಕೋರ್ಟ್

ರಾಒಂದನೇ ಡೋಸ್ ತೆಗೆದುಕೊಂಡವರಿಗೆ ಎರಡ ನೇ ಡೋಸ್ ಸಿಕ್ಕಿಲ್ಲ. ಎರಡನೇ ಡೋಸ್ ತೆಗೆದುಕೊಳ್ಳುವುದು ಜನರ ಹಕ್ಕಲ್ಲವೇ. 26 ಲಕ್ಷ ಜನರಿಗೆ ವ್ಯಾಕ್ಸಿನ್ ಕೊರತೆಯಿದೆ. ಈ ಗ್ಯಾಪ್ ಅನ್ನು ಹೇಗೆ ಸರಿಪಡಿಸುತ್ತೀರಿ ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ. ಇದಕ್ಕೆ ಉತ್ತರ ನೀಡಿದ ಕೇಂದ್ರ ಸರ್ಕಾರದ ಎಎಸ್ಜಿ ಐಶ್ವರ್ಯಾ ಭಾಟಿ, ವ್ಯಾಕ್ಸಿನ್ ವಿಳಂಬವಾದರೆ 1 ನೇ ಡೋಸ್ ವ್ಯರ್ಥವಾಗಲ್ಲ. ಕೊವ್ಯಾಕ್ಸಿನ್ 2ನೇ ಡೋಸ್ಗೆ 6 ವಾರ ಕಾಲಾವಕಾಶವಿದೆ. ಕೊವಿಶೀಲ್ಡ್​ಗೆ 8 ವಾರ ಕಾಲಾವಕಾಶವಿದೆ. ಈ ಬಗ್ಗೆ ತಜ್ಞರ ಸಮಿತಿಯೂ ಪರಿಶೀಲನೆ ನಡೆಸುತ್ತಿದೆ. ಕಾಲಮಿತಿ ಹೆಚ್ಚಿಸುವ ಬಗ್ಗೆ 2 ದಿನದಲ್ಲಿ ಅಭಿಪ್ರಾಯ ತಿಳಿಸಲಿದೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಮಾರ್ಗಸೂಚಿ ನೀಡಿತ್ತು. ನೀಡಲಾಗುವ ಲಸಿಕೆಯಲ್ಲಿ ಶೇ.70 ರಷ್ಟನ್ನು 2ನೇ ಡೋಸ್​ಗೆ ಬಳಸುವಂತೆ ಮಾರ್ಗಸೂಚಿ ನೀಡಿತ್ತು. ಈ ಮಾರ್ಗಸೂಚಿ ಪಾಲಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಹೈಕೋರ್ಟ್​ಗೆ ಕೇಂದ್ರದ ASG ಐಶ್ವರ್ಯಾ ಭಾಟಿ ಹೇಳಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರ ನಿಯಮ ಪಾಲಿಸದಿದ್ದರೆ ಜನರೇನು ಮಾಡಬೇಕು. 2ನೇ ವ್ಯಾಕ್ಸಿನ್ ಸಿಗದ ಜನರದ್ದೇನು ತಪ್ಪಿದೆ. ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳಬಯಸುತ್ತೀರಾ ಎಂದು ಮತ್ತೆ ಕೇಂದ್ರ ಸರ್ಕಾರದ ಎಎಸ್​​ಜಿಗೆ ಹೈಕೋರ್ಟ್ ಪ್ರಶ್ನಿಸಿದೆ. ಎಲ್ಲರೂ ಇದೀಗ ಕಷ್ಟಕರ ಸ್ಥಿತಿ ಎದುರಿಸುತ್ತಿದ್ದಾರೆ. ನಾವು ರಾಜ್ಯ ಸರ್ಕಾರವನ್ನು ದೂರಲು ಬಯಸುವುದಿಲ್ಲ. ನಾಳೆ ವ್ಯಾಕ್ಸಿನೇಷನ್‌ ಹಂಚಿಕೆ ನಿಗದಿಯಾಗಿದೆ. ಈ ವೇಳೆ ವ್ಯಾಕ್ಸಿನ್ ಕೊರತೆ ಬಗ್ಗೆಯೂ ಗಮನಹರಿಸಲಾಗುವುದು. ಕರ್ನಾಟಕ ವ್ಯಾಕ್ಸಿನೇಷನ್‌ ವಿಚಾರದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಕೇಂದ್ರ ಸರ್ಕಾರದ ಎಎಸ್ ಜಿ ಐಶ್ವರ್ಯ ಭಾಟಿ ಹೈಕೋರ್ಟ್ ಕೇಳಿದ ಪ್ರಶ್ನೆಗೆ ಸಮರ್ಥನೆ ನೀಡಿದ್ದಾರೆ.

ಇನ್ನು ಮುಂದುವರೆದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ವ್ಯಾಕ್ಸಿನೇಷನ್‌ ಬಗ್ಗೆ ಮಾರ್ಗಸೂಚಿ ನೀಡಿತ್ತೇ ಎಂದು ಕೇಂದ್ರ ಸರ್ಕಾರದ ವಕೀಲರಿಗೆ ಹೈಕೋರ್ಟ್ ಪ್ರಶ್ನೆ ಮಾಡಿದೆ. ಈ ವರೆಗೆ ಮೂರು ಬಾರಿ ಮಾರ್ಗಸೂಚಿ ನೀಡಲಾಗಿದೆ. ಏಪ್ರಿಲ್ 16ರಂದೇ ಕೇಂದ್ರ ಸರ್ಕಾರ ಪತ್ರ ಬರೆದಿದೆ ಎಂದು ಹೈಕೋರ್ಟ್​ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.