download 1

ಕಾರ್ಮಿಕ,ಸಾರಿಗೆ ಸಚಿವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ…?

POLATICAL STATE

ಬೆಂಗಳೂರು ಮೇ ೨ :- ರಾಜ್ಯ ಸಾರಿಗೆ ಸಚಿವ ಲಕ್ಷಣ ಸವದಿ ಮತ್ತು ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್ ಎಲ್ಲಿದ್ದಾರೆ..? ಏನು ಮಾಡುತ್ತಿದ್ದಾರೆ…? ‌

ಇಂದು ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ಸ್ವಂತ ಊರಿಗೆ ಹೋಗಲು ಪಡಬಾರದ ಕಷ್ಟ ನೋಡಿದರೆ,ಕೇಳಿದರೆ ಇಲ್ಲಿ ಸಾರಿಗೆ ಸಚಿವರು,ಕಾರ್ಮಿಕ ಸಚಿವರು ಇದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ ಕಳೆದ ೩-೪ ದಿನದ ಹಿಂದೆ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕಳುಹಿಸಲು ರಾಜ್ಯ ಸರ್ಕಾರಗಳು ಅಗತ್ಯ ವ್ಯವಸ್ಥೆ ಮಾಡಲು ಹೇಳಿದ ಮೇಲು ಯಾಕೆ ಮೌನವಾಗಿದ್ದು  ಈ ವಿಷಯ ಕಾರ್ಮಿಕ ಸಚಿವರಿಗೆ, ಸಾರಿಗೆ ಸಚಿವರಿಗೆ ಗೊತ್ತಿದ್ದು ಉಡಾಫೆ ಮಾಡಿದರೆ ಎಂಬ ಹಲವಾರು ಪ್ರಶ್ನೆಗಳು ಪುಂಕನೂ ಪುಂಕವಾಗಿ ಹುಟ್ಟಿಕೊಳ್ಳುತ್ತಿದೆ

02 05 2020 bng police grand welcome
ವಲಸೆ ಕಾರ್ಮಿಕರು

ವಲಸೆ ಕಾರ್ಮಿಕರ ಸಂಕಷ್ಟ: ಲೂಟಿ ಗಿಳಿದ ಕೆಎಸ್ ಆರ್‌ಟಿಸಿ

ಮೊದಲ ಲಾಕ್‌ ಡೌನ್‌  ಮಾಡುವುದಕ್ಕೆ ೨-೩ದಿನ ಮುಂಚೆ ಕಾಲಾವಕಾಶ ಕೊಟ್ಟು ನಮ್ಮ ಊರಿಗೆ ಹೋಗಲು ತಿಳಿಸಿದ್ದರೆ ನಮ್ಮ ಬಳಿ ಹಣವಿತ್ತು ನಾವು ನಮ್ಮ ಊರಿಗೆ ಹೋಗುತ್ತಿದ್ದೆವು  ಅವರೇ ಲಾಕ್‌ ಡೌನ್‌ ಮಾಡಿ ಈಗ  ಅವರೇ ಊರಿಗೆ ಹೋಗಿ ಅಂದರು ನಾವು ಈಗ ಬಸ್‌ ನಿಲ್ದಾಣಕ್ಕೆ ಬಂದಿದ್ದೇವೆ.ಇಲ್ಲಿನ ಬಸ್‌ ಧರಗಳನ್ನು ಕೇಳಿದ ಅವರಲ್ಲಿ ತೀವ್ರ ಆತಂಕ ಆಕ್ರೋಶ ಕಾಣಿಸಿಕೊಂಡಿತ್ತು ಸರ್ಕಾರ ಈ ಸಮಯ ದಲ್ಲಿ  ನಮ್ಮನ್ನು ಈ ಮಟ್ಟದಲ್ಲಿ ಸುಲಿಗೆ ಮಾಡುತ್ತೆ ಎಂಬ ನಿರೀಕ್ಷೆ ನಮಗಿರಲಿಲ್ಲ ಏಗೋ ಕಷ್ಟ ಪಟ್ಟು ಊರು ಸೇರೋಣ ಎಂದು ಬಂದರೆ ಇಲ್ಲಿ ಸುಲಿಗೆ ವಾತಾವರಣ ಕಂಡುಬಂದಿದೆ ಇದಿ ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ, ಸರ್ಕಾರ ಇಂತಹ ದಹನೀಯ ಪರಿಸ್ಥಿತಿಯಲ್ಲೂ ಈ ರೀತಿ ಕಠೋರವಾಗಿ ಮಾನವೀಯತೆ ಇಲ್ಲದೆ ವರ್ತಿಸುತ್ತಿದೆ ಇನ್ನು ಕೆಲವರು ಊಟ-ತಿಂಡಿ ಇಲ್ಲ ಕುಡಿಯಲು ನೀರು ಇಲ್ಲ  ಎಂದು ಬಹಳಷ್ಟು ವಲಸೆ ಕಾರ್ಮಿಕ  ತಮ್ಮ ಅಳಲನ್ನು,ಆಕ್ರೋಶವನ್ನು ತೋಡಿಕೊಂಡರು.

.ಕೇಂದ್ರ ಸರ್ಕಾರ ವಲಸೆ ಕಾರ್ಮಿಕರನ್ನು ಅವರ- ಅವರ ಊರುಗಳಿಗೆ ಕಳುಹಿಸಲು ನಿರ್ಧರಿಸಿದ ನಂತರ ದೇಶದ ಹಲವಾರು ರಾಜ್ಯಗಳು ಕೇಂದ್ರಕ್ಕೆ ವಿಶೇಷ ರೈಲು ವ್ಯವಸ್ಥೆಗೆ ಮನವಿ ಮಾಡಿದವು ಮತ್ತು ಕಾರ್ಮಿಕರಿಂದ ಹಣ ಪಡೆಯದೆ ಕಳುಹಿಸಲು ಸರ್ಕಾರ ತೀರ್ಮಾನಿಸಿ ʻ ಶ್ರಮಿಕ ಸ್ಪೆಷಲ್‌ʼ ಎಂಬ ವಿಶೇಷ ರೈಲು ಸಂಚಾರ ಆರಂಭಿಸಿ ಕಾರ್ಮಿಕರನ್ನು ಕಳುಹಿಸಿತು..

  ಕರ್ನಾಟಕ ಸರಕಾರ ಮಾತ್ರ ಇದರ ಗೋಜಿಗೆ ಹೋಗಿಲ್ಲ ರೈಲು ವ್ಯವಸ್ಥೆ ಗೆ ಕೇಂದ್ರಕ್ಕೆ ಮನವಿಯೇ ಮಾಡಿಲ್ಲವಂತೆ, ಬೆಳಗಾವಿ ಸಂಸದ ಸುರೇಶ್‌ ಅಂಗಡ ಅವರೇ ಕೇಂದ್ರದ ರಾಜ್ಯ ರೈಲ್ವೆ ಸಚಿವರು  ಇದ್ದರೂ ಅವರೊಂದಿಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ .ಸಮಸ್ಯೆ ನಿವಾರಿಸಬೇಕಾದ  ಕಾರ್ಮಿಕ ಸಚಿವರೆ ಕ್ವಾರಂಟೈನ್‌ ಆದರಾ…ಎಂಬ ಅನುಮಾನ ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.

ಮದ್ಯ ಪ್ರವೇಶಿಸಿದ ಮುಖ್ಯಮಂತ್ರಿ

ವಲಸೆ ಕಾರ್ಮಿಕರ ಸಮಸ್ಯೆ ತೀವ್ರತೆಯನ್ನು ಮಾದ್ಯಮದ ಮೂಲಕ ತಿಳಿದ ಹಿರಿಯ ಸಚಿವರೊಬ್ಬರು ಮುಖ್ಯಮಂತ್ರಿ ಗಮನಕ್ಕೆ ತಂದರು,ವಿಷಯದ ಗಂಭೀರತೆಯನ್ನು ವಿವರಿಸಿದರು  ಇದರಿಂದ ಕೆಂಡಮಂಡಲರಾದ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ  ಸಾರಿಗೆ ಸಚಿವರು, ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು ಎನ್ನಲಾಗಿದೆ.ಯಾವುದೇ ಕಾರಣಕ್ಕೂ ಕೆ ಎಸ ಆರ್‌ ಟಿಸಿ ಹಾಲಿ ಧರವನ್ನ ತೆಗೆದು ಕೊಳ್ಳಬೇಕು.ಒಂದು  ಪೈಸೆ ಹೆಚ್ಚು ತೆಗೆದು ಕೊಳ್ಳ ಬಾರದು ಎಂದು ಆದೇಶಿಸಿದ್ದಾರೆ

ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಮ್ಮ ಟ್ವಿಟ್‌ರ್‌ ಖಾತೆ ಮೂಲಕ ಟ್ವಿಟ್‌ ಮಾಡಿ ಸಿಎಂ ನಿರ್ಧಾರವನ್ನು ತಿಳಿಸಿ,ವಲಸೆ ಕಾರ್ಮಿಕರ ಸಮಸ್ಯೆಗೆ ಅಂತ್ಯ ಹಾಡಿದರು.

ಎಲ್ಲಾ ವಿಚಾರ ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮನಿಸಬೇಕಾದರೆ ಸಚಿವರು ಯಾಕೆ, ಜನರಕಷ್ಟ ನಿವಾರಿಸುವಲ್ಲಿ, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಗೆ ಇರುವ ಕಾಳಜಿ  ಕೆಲ ಸಚಿವರಿಗೆ ಯಾಕೆ ಇಲ್ಲ ಎಂಬುದು ಒಂದು ಯಕ್ಷ ಪ್ರಶ್ನೆ ಯಾಗಿ ಕಾಡುತ್ತಿದೆ.