ಬೆಂಗಳೂರು ಮೇ ೧ :- ಕಾರ್ಮಿಕರ ದಿನಾಚರಣೆ ದಿನ ವೇ ಕಾರ್ಮಿಕರ ಸಂಕಷ್ಟಕೇಳುವುವರೇ ಇಲ್ಲದಂತಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಬೆಂಗಳೂರಿನಲ್ಲೆ ಉಳಿದು ಕೊಂಡಿದ್ದ ವಲಸೆ ಕಾರ್ಮಿಕರಿಗೆ ಅವರ ಸ್ವಸ್ಥಾನ ಗಳಿಗೆ ಕಳುಹಿಸುವ ನಿರ್ಧಾರವನ್ನು ತೆಗೆದು ಕೊಂಡಿರು ರಾಜ್ಯ ಸರ್ಕಾರ ನೂಡಲ್ ಅಧಿಕಾರಿಯನ್ನು ನೇಮಿಸಿದೆ ಆದರೆ ಅವರಿಗೆ ಯಾವುದು ಸಾರಿಗೆವ್ಯವಸ್ಥೆ ಮಾಡಿಲ್ಲ. ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕ ನೆರವಿಗೆ ಬರಬೇಕಾದ ಸರ್ಕಾರ ದ ಸಾರಿಗೆ ಸಂಸ್ಥೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ಮಾಲೀಕರು ಟಿಕೆಟ್ ಧರ ವನ್ನು ಮನ ಬಂದಂತೆ ಹೆಚ್ಚಿಸಿ ಲೂಟಿಗೆ ಇಳಿದಿದ್ದಾರೆ,ಎಂದು ಕಾರ್ಮಿಕರು ತಮ್ಮ ನೋವನ್ನು ತೋಡಿಕೊಂಡರು. ಕೊಪ್ಪಳ ಬಾಗಲಕೋಟೆ, ಯಾದಗಿರಿ, ಗುಲ್ಬರ್ಗಾ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಕಾರ್ಮಿಕರು ತಮ್ಮ ಊರುಗಳಿಗೆ ತಲುಪಬೇಕಾಗಿದೆ ವಲಸೆ ಕಾರ್ಮಿಕರ ಪ್ರಯಾಣ ದರವನ್ನು ಸರ್ಕಾರವೇ ಭರಿಸಬೇಕು ಹಾಗೂ ಪ್ರಯಾಣ ವೇಳೆ ಅವರಿಗೆ ಊಟ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಮನವಿ ಮಾಡಿದ್ದಾರೆ