ಬೆಂಗಳೂರು ಮೇ ೧: ಕೋವಿಡ್ ೧೯ ಸೋಂಕಿನ ಹಿನ್ನಲೆಯಲ್ಲಿ ವಿದಿಸಿದ್ದ ಎರಡನೇ ಹಂತದ ಲಾಕ್ ಡೌನ್ ಮೇ ೩ ಕ್ಕೆ ಕೊನೆಗೊಳ್ಳುತ್ತಿದೆ. ಮೇ ೪ ರಿಂದ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಎರಡನೇ ಹಂತದ ಲಾಕ್ ಡೌನ್ ಗಿಂತ ಮೂರನೇ ಹಂತದ ಲಾಕ್ ಡೌನ್ ಅವಧಿಯ ನಿಯಮಾವಳಿಗಳು ಸ್ವಲ್ವ ಬಿನ್ನವಾಗಿರಲಿದೆ.
ಕೇಂದ್ರ ಸರ್ಕಾರ ಕೊರೋನಾ ಸೋಂಕು ಮತ್ತು ಸೋಂಕಿತ ರಹಿತ ಪ್ರದೇಶಗಳನ್ನು ಮೂರು ವಲಯಗಳಾಗಿ ಮೂರು ವಲಯಗಳಗಿ ವಿಂಗಡಿಸಿದೆ. ಕೆಂಪು (ರೆಡ್),ಕಿತ್ತಳೆ (ಆರೆಂಜ್) ಮತ್ತು ಹಸಿರು ವಲಯ.
ಕೇಂದ್ರದ ಹೊಸ ನಿಯಮಾವಳಿಗಳೇಂದರೆ ರೆಡ್ ಜೋನ್ ನಲ್ಲಿ ಬರುವ ಪ್ರದೇಶದಲ್ಲಿ ಇನ್ನು ಕಠಿನ ನಿಯಮಗಳು ಮುಂದುವರೆಯಲಿವೆ,ಆರೆಂಜ್ ಜೋನ್ ನಲ್ಲಿ ಬರುವ ಪ್ರದೇಶದಲ್ಲಿ ಕೆಲವು ವಿನಾಯತಿ ಸಿಗಲಿದೆ, ಹಸಿರು ವಲಯದಲ್ಲಿ ಬರುವ ಪ್ರದೇಶಗಳಲ್ಲಿ ನಿರ್ಬಂದಗಳನ್ನು ಸಡಿಲಿಸಿದೆ ಕೇಂದ್ರ.
ಕೆಂಪುವಲಯದಲ್ಲಿ ಹೆಚ್ಚು ಸೋಂಕಿತರು ಇರುವ ಪ್ರದೇಶವನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಗುರುತಿಸಲಾಗುವುದು
ಕಂಟೈನ್ಮೆಂಟ್ ಪ್ರದೇಶ
ಕೊರೋನಾ ಸೋಂಕು ಹೆಚ್ಚು ವ್ಯಾಪಿಸಿರುವ ಸೂಕ್ಷ್ಮ ಪ್ರದೇಶಗಳನ್ನು ಕಂಟೈನ್ಮೆಂಟ್ ಜೋನ್ ಪರಿಗಣಿಸಲಾಗಿದೆ.ಈ ಕಂಟೈನ್ಮೆಟ್ ವಲಯಗಳನ್ನು ಆಯಾ ಜಿಲ್ಲಾಡಳಿತಗಳು ಗುರುತಿಸಬೇಕೆಂದು ಕೇಂದ್ರ ಗೃಹ ಸಚಿವಾಲಯ ಸತ್ತೋಲೆಯಲ್ಲಿ ತಿಳಿಸಿದೆ. ಕಂಟೈನ್ಮೆಂಟ್ ಜೋನ್ ನಲ್ಲಿ ಆರೋಗ್ಯ ಮೊಬೈಲ್ ಆಫ್ ಸಂಪೂರ್ಣವಾಗಿ ಅಳವಡಿಕೆ ಮಾಡಿಸಬೇಕು,ಪ್ರತೀ ಮನೆಗೂ ಹೋಗಿ ಪರಿಶೀಲನೆ ನಡೆಸಬೇಕು. ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ, ಜನರ ಸಂಚಾರಕ್ಕೆ ನಿರ್ಬಂಧ ಹೇರಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ದೇಶವ್ಯಾಪ್ತಿ ಅನ್ವಯ
- ವಿಮಾನ, ರೈಲು, ಮೆಟ್ರೋ, ಶಾಲಾ ಕಾಲೇಜ್, ಸಿನಮಾ, ಮಾಲ್, ಹೋಟಲ್ ರೆಸ್ಟೋರೆಂಟ್, ಅಂತರ್ ರಾಜ್ಯ ಸಂಚಾರ, ಜಾತ್ರೆ ಮತ್ತು ದಾರ್ಮಿಕ ಕಾರ್ಯಕ್ರಮಗಳು, ಪೂಜಾ ಮಂದಿರಗಳು ಹಿಂದಿನಂತೆ ( ಬಂದ್) ಲಾಕ್ ಡೌನ್ ಮುಂದುವರೆಯಲಿದೆ.
- ಎಲ್ಲಾ ವಲಯಗಳಲ್ಲೂ ಸಂಜೆ ೭ರಿಂದ ಬೆಳ್ಳಿಗ್ಗೆ ಸಂಜೆ ೭ರ ವರೆಗೆ ಅನಗತ್ಯವಾಗಿ ಜನರು ಹೋಡಾಡುವುದಕ್ಕೆ ನಿಷೇದ
- ಸ್ಥಳೀಯ ಆಡಳಿತ ಅಗತ್ಯತೆ ಅನುಗುನವಾಗಿ ೧೪೪ ಸೆಕ್ಷನ್ ಅಥವಾ ಕರ್ಫ್ಯೂ ಜಾರಿ
- ದೊಡ್ಡ ಸಾರ್ವಜನಿಕ ಸಭೆ- ಸಮಾರಂಭ,ಸಾಮಾಜಿಕ, ರಾಜಕೀಯ ಸಾಂಸ್ಕೃತಿಕ ಕೂಟಗಳು.
- ಎಮ್ ಎಚ್ ಓ ಅನುಮತಿಸಿದ ಆಯ್ದ ಉದ್ದೇಶಗಳಿಗಾಗಿ ಮಾತ್ರ ರಸ್ತೆ ಸಂಚಾರಕ್ಕೆ ಅವಕಾಶ.
- ೬೫ ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ೧೦ವರ್ಷ ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಿಂದ ಹೊರಬರದಂತೆ ಎಚ್ಚರ ವಹಿಸಬೇಕೆಂದು ಆದೇಶದಲ್ಲಿ ತಿಳಿಸಿದೆ.
ಕೆಂಪು ವಲಯ
ಕೆಂಪು ವಲಯ ಕಂಟೈನ್ಮೆಂಟ್ ಜೋನ್ ಅಲ್ಲದ ಪ್ರದೇಶಗಳಲ್ಲಿ ಆಟೋರಿಕ್ಷಾ,ಟ್ಯಾಕ್ಸಿ ( ಒಲಾ-ಊಬರ್) , ಬಸ್ ಸೇವೆ, ಕ್ಷೌರದ ಅಂಗಡಿ, ಸ್ಪಾ ಸಲೂನ್ ಗಳು ನಿಷೇಧ.
ಕೆಂಪುವಲಯ ದಲ್ಲಿ ಯಾವಯಾವದಕ್ಕೆ ಅವಕಾಶ
- ಕಾರ್ ಗಳಲ್ಲಿ ಚಾಲಕ ಸೇರಿ ಮೂವರಿಗೆ ಕೂರಲು ಅವಕಾಶ
- ದ್ವಿಚಕ್ರವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶ ಇಲ್ಲ
- ಕೈಗಾರಿಕೆಗಳ ಆರಂಭಕ್ಕೆ ಅನುಮತಿ
- ಮಾಲ್ ಹೊರತು ಪಡಿಸಿ ಎಲ್ಲಾ ಸಣ್ಣ ಪುಟ್ಠ ಅಂಗಡಿಗಳಿಗೆ ತೆರೆಯಲು ಅವಕಾಶ.
- ಇ-ಕಾಮರ್ಸ ಕಂಪನಿಗಳುಅಗತ್ಯ ವಸ್ತುಗಳನ್ನು ಮಾತ್ರ ಪೂರೈಸಲು ಅವಕಾಶ
- ಖಾಸಗಿ ಕಂಪನಿಗಳು %೩೩ ಸಿಬ್ಬಂದಿಯೊಂದಿಗೆ ಕೆಲಸ ನಿರ್ವಹಿಸಬೆಕು ಉಳಿದವರು ಮನೆಯಿಂದ ಕೆಲಸ ನಿರ್ವಹಿಸಬೇಕು
- ಗ್ರಾಮೀಣ ಭಾಗದಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗೆ ಅವಕಾಶ.
- ಗ್ರಾಮೀಣ ಭಾಗದಲ್ಲಿ ಶಾಪಿಂಗ್ ಮಾಲ್ ಹೊರತುಪಡಿಸಿ ಉಳಿದ ಅಂಗಡಿ ತೆರೆಯಲು ಅವಕಾಶ.
- ಬ್ಯಾಂಕ್, ಸಹಕಾರಿ ಸಂಘ ಸೇರಿದಂತೆ ಎಲ್ಲಾ ಹಣಕಾಸು ಸೇವಾ ಸಂಸ್ಥೆಗಳಿಗೆ ಅವಕಾಶ.
- ಕೃಷಿ, ಮೀನುಗಾರಿಕೆ ಪಶುಸಂಗೋಪನೆ ಸೇರಿದಂತೆ ಎಲ್ಲಾ ಚಟುವಟಿಕೆ ಅನುಮತಿ
- ಕೊರಿಯ ಮತ್ತು ಅಂಚೆ ಸೇವೆಗೆ ಅನುಮತಿ.
- ಕ್ಷೌರಿಕರನ್ನು ಹೊರತು ಪಡಿಸಿ ಸ್ವಯಂ ಉದ್ಯೋಗಿಗಳಿಗೆ ಅನುಮತಿ
ಆರೆಂಜ್ ವಲಯ
ಕೆಂಪುವಲಯದಲ್ಲಿ ನೀಡಿದ ವಿನಾಯತಿಗಳ ಜೊತೆಗೆ ಕೆಲವು ಸಡಲಿಕೆ ನೀಡಲಾಗಿದೆ.
- ಟ್ಯಾಕ್ಸಿ- ಕ್ಯಾಬ್ ಗಳಲ್ಲಿ ಒಬ್ಬ ಚಾಲಕ ಮತ್ತು ಒಬ್ಬ ಪ್ರಯಾಣಿಕನಿಗೆ ಅವಕಾಶ.
- ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರಿಗೆ ಅವಕಾಶ ನೀಡಲಾಗುವುದು
- ಶರತ್ತು ಬದ್ದ ಅಂತರ್ ಜಿಲ್ಲಾ ಸಂಚಾರಕ್ಕೆ ಅನುಮತಿ.
ಹಸಿರು ವಲಯ
ದೇಶ ವ್ಯಾಪಿ ಲಾಕ್ ಡೌನ್ ವಿದಿಸಲಾದ ನಿರ್ಬಂಧಗಳನ್ನು ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳಿಗೆ ಗ್ರೀನ್ * ಜೋನ್ ನಲ್ಲಿ ಅನಮತಿ ನೀಡಲಾಗಿದೆ.
- ಬಸ್ ಸಂಚಾರಕ್ಕೆ ಅವಕಾಶ ಅದರೆ ಶೇಕಡ ೫೦ ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಮತ್ತು ಬಸ್ ಡಿಪೋ ಗಳಲ್ಲಿ ಶೇಕಡ ೫೦ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬೇಕು.
- ಎಲ್ಲಾ ಸರಕು ಸಾಗಣೆ ವಾಹನಗಳಿಗೆ ಅನುಮತಿ.
ಕೇಂದ್ರ ಸರ್ಕಾರದ ಸಡಲಿಕೆಯ ನಿಯಮ ಮೇ ೪ ರಿಂದ ಅನ್ವಹಿಸಲಿದ್ದು ಆದರೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ.