ಬೆಂಗಳೂರು ಮೇ೧೦ :- ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು ಇಂದು ( ಭಾನುವಾರ) ಒಂದೇ ದಿನ ೫೪ ಕೊರೋನ ಕೇಸ್ ಗಳು ಧೃಡಪಟ್ಟಿವೆ, ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ ೮೪೮ ಕ್ಕೆ ಏರಿಕೆಯಾಗಿದೆ, ರಾಜ್ಯದಲ್ಲಿ ಕೊರೋನಾ ನಿಯಂತ್ರಿಸುವುದು ಮತ್ತು ಹೊರ ರಾಜ್ಯಗಳು ಮತ್ತು ವಿದೇಶಗಳಿಂದ ರಾಜ್ಯಕ್ಕೆ ಆಗಮಿಸುತ್ತಿರುವವರ ಸುರಕ್ಷತೆ ಹಾಗೂ ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಹಲವು ಮುಂಜಾಗ್ರತ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕರೆದ ಸಭೆಯಲ್ಲಿ ಸಚಿವರಾದ ಸುರೇಶ್ ಕುಮಾರ್, ಸುಧಾಕರ್, ಅಶ್ವಥ್ಥ್ ನಾರಾಯಣ, ಆರ್ ಅಶೋಕ್ ,ಗೋವಿಂದ್ ಕಾರಜೋಳ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಕೊವೀಡ್ ೧೯ ಹತೋಟಿಗೆ ತರಲು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಮತ್ತು ಪ್ರಧಾನಿ ಮೋದಿ ಯವರ ನಾಳಿನ ವಿಡಿಯೋ ಸಂವಾದದಲ್ಲಿ ರಾಜ್ಯದ ನಿಲುವುಗಳ ಬಗ್ಗೆ ಕುರಿತು ಚರ್ಚೆ ನಡೆದಿದೆ.
ಮುಖ್ಯ ಮಂತ್ರಿಗಳ ಸಭೆಯ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್ ಅಶೋಕ್ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ತಳಿಸಿದರು.
- ಹೊರ ರಾಜ್ಯದಲ್ಲಿ ಸಾವನ್ನಪ್ಪಿದವರ ಶವ ವನ್ನು ರಾಜ್ಯಕ್ಕೆ ತರುವಂತಿಲ್ಲ, ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಬೇಕು.
- ರಾಜ್ಯದಲ್ಲಿ ತೀರಿಕೊಂಡರೆ ತೀರಿಕೊಂಡ ಸ್ಥಳದಲ್ಲಿಯೇ ಅಂತ್ಯಕ್ರಿಯೆ ಮಾಡಬೇಕು.
- ಹೊರ ರಾಜ್ಯ- ಹೊರದೇಶದಿಂದ ಬರುವವರು ಆನ್ ಲೈನ್ ಮೂಲಕ ರಿಜಿಸ್ಠಾರ್ ಮಾಡಿಕೊಳ್ಳಬೇಕು
- ಕ್ವಾರಂಟೈನ್ ಗೆ ಬರಲು ಸಿದ್ದವಾಗಿದ್ದರೆ ಮಾತ್ರ ರಿಜಿಸ್ಟಾರ್ ಮಾಡಿಕೊಳ್ಳಬೇಕು.
- ಕ್ವಾರಂಟೈನ್ ಅವರ ಜಿಲ್ಲೆಯಲ್ಲೆ ಮಾಡಲಾಗುವುದು.
- ಹೊರ ರಾಜ್ಯದಿಂದ ರೈಲುಗಳಲ್ಲಿ ಬರುವವರಿಗೆ ರಾಜ್ಯ ಸರ್ಕಾರವೇ ವೆಚ್ಚ ಭರಿಸುತ್ತದೆ.
- ಬೇರೆ ರಾಜ್ಯದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರೂ ಇಲ್ಲಿಯೂ ಕೋವಿಡ್ ಟೆಸ್ಟ್ ಮಾಡಿಸಲೇಬೇಕು.