33214810 ea6a 4deb 8503 e146998bde91

ರೈತ, ನೇಕಾರರ ನೆರವಿಗೆ ಬಂದ – ಬಿಎಸ್ ವೈ

Genaral STATE

ಕೋವೀಡ್‌ ೧೯  ಲಾಕ್‌ ಡೌನ್‌ ನಿಂದ ಆರ್ಥಿಕ ಸಂಕಷ್ಟಕ್ಕೆ ಹೊಳಗಾದ  ರೈತರು, ನೇಕಾರರಿ ಗೆ 137 ಕೋಟಿ ವಿಶೇಷ ಪ್ಯಾಕೇಜ್‌ ನೀಡಿದ ಬಿಎಸ್‌ ವೈ 

ಬೆಂಗಳೂರು ಮೇ 14 :-  ಲಾಕ್‌ ಡೌನ್‌ ನಿಂದ ಸಂಕಷ್ಟಕ್ಕೆ ಸಿಲುಕಿದ್ದ  ರೈತರು, ನೇಕಾರರಿಗೆ ನೆರವಿಗೆ  ಇಂದು ವಿಶೇಷ ಪ್ಯಾಕೇಜ್‌ ಘೋಷಿಸಿದ್ದಾರೆ. ರೈತರು ಬೆಳೆದ ಏಳು ತರದ ಹಣ್ಣು ಹಾಗೂ 10 ಬಗೆಯ ತರಕಾರಿಗಳಿಗೆ  ಒಬ್ಬ ರೈತನಿಗೆ ಒಂದು ಹೆಕ್ಟೇರ್‌ ಗೆ 15 ಸಾವಿರ ಪರಿಹಾರ ಮತ್ತು ವಿದ್ಯುತ್ ಚಾಲಿತ ಘಟಕದಲ್ಲಿ ಕೆಲಸ ಮಾಡುವ ಪ್ರತಿ ಕೂಲಿ ಕಾರ್ಮಿಕನಿಗೆ 2,000 ರೂ. ಆ ಮೂಲಕ 25 ಕೋಟಿ ರೂ. ವೆಚ್ಚ ತಗುಲಲಿದೆ ಎಂದು ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ತಿಳಿಸಿದರು

ರೈತರು ಬೆಳೆದ ಏಳು  ತರಹದ ಹಣ್ಣುಗಳು, ಹತ್ತು ಬಗೆಯ ತರಕಾರಿಗಳಿಗೆ ಪರಿಹಾರ ಸಿಗಲಿದೆ ಎಂದರು  ಇಂದು ಘೋಷಿಸಿರು ವ  ಪ್ಯಾಕೇಜ್‌ ನಿಂದ  137 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ ಎಂದು ಇದೇ ವೇಳೆ ಬಿಎಸ್‌ ವೈ ತಿಳಿಸಿದರು.

ಯಾವೆಲ್ಲಾ ಹಣ್ಣು ಗಳಿಗೆ ಪರಿಹಾರ ಸಿಗಲಿದೆ…!

  ಬಾಳೆ, ಪಪ್ಪಾಯ, ಟೇಬಲ್ ದ್ರಾಕ್ಷಿ, ಅಂಜೂರಾ, ಅನಾನಸ್, ಕಲ್ಲಂಗಡಿ/ ಕರ್ಜೂರಾ, ಬೋರೆ/ ಬೆಣ್ಣೆ ಹಣ್ಣು

ಯಾವ ಯಾವ ತರಕಾರಿಗೆ ಪರಿಹಾರ…!

 ಟೊಮ್ಯಾಟೊ, ಹಸಿರು ಮೆಣಸಿನಕಾಯಿ, ಹೂ ಕೋಸು, ಎಲೆ ಕೋಸು, ಸಿಹಿ ಕುಂಬಳಕಾಯಿ, ಬೂದು ಕುಂಬಳಕಾಯಿ, ಕ್ಯಾರೆಟ್, ಈರುಳ್ಳಿ, ದಪ್ಪ‌ ಮೆಣಸಿನಕಾಯಿ, ಸೊಪ್ಪುಗಳು/ಹೀರೇಕಾಯಿ/

ಈ ಹಿಂದೆ ಘೋಷಿಸಿದ 1610 ಕೋಟಿ ರೂಪಾಯಿಗಳಿಗೆ ಹೆಚ್ಚುವರಿಯಾಗಿ ಇಂದು ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ 137 ಕೋಟಿ ರೂಪಾಯಿಗಳ ಘೋಷಣೆಯಿಂದ 1747 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ನ್ನು ರಾಜ್ಯ ಸರ್ಕಾರ ನೀಡಿದಂತಾಗಿದೆ.

.