ವಿವಾದಿತ ಎಪಿಎಂಸಿ ಕಾಯ್ದೆ ,ಬಿಡಿಎ 38 D ( ಅಕ್ರಮ-ಸಕ್ರಮ ) ಮಸೂದೆ ಸುಗ್ರೀವಾಜ್ಞೆ ಗೆ ಸಂಪುಟ ಸಭೆ ಗ್ರೀನ್ ಸಿಗ್ನಲ್
ಬೆಂಗಳೂರು ಮೇ ೧೪ : ರೈತರ, ಪ್ರತಿಪಕ್ಷಗಳ ತೀವ್ರ ವಿರೋಧ ದ ನಡುವೆ ಇಂದು ವಿವಾದಿತ ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣ ಮತ್ತು ಅಭಿವೃದ್ಧಿ ಎಪಿಎಂಸಿ (ತಿದ್ದುಪಡಿ) ಮಸೂದೆ ಸುಗ್ರೀವಾಜ್ಙೆ ಗೆ ಕಾಯ್ದೆ 2020ಗೆ ಸಂಪುಟ ಅನುಮೋದನೆ ನೀಡಿದೆ. ರಾಜ್ಯಪಾಲರು ಸಂಪುಟ ಒಪ್ಪಿಗೆ ಬಳಿಕ ಕಾಯ್ದೆ ಯನ್ನು ಕಳುಹಿಸಿಕೊಡುವಂತೆ ವಾಪಸ್ಸು ಕಳುಹಿಸಿದ್ದರು. ಇಂದು ಸಂಪುಟ ಸಭೆ ಎಪಿಎಂಸಿ ತಿದ್ದುಪಡಿ ಮಸೂದೆ ಗೆ ಸಂಪುಟ ಒಪ್ಪಿಗೆ ನೀಡಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಈ ಕಾಯ್ದೆ ಯ ಎರಡು ಸೆಕ್ಚನ್ ಗಳಿಗೆ ತಿದ್ದುಪಡಿ ಮಾಡಲಾಗಿದೆ., ಮಾರುಕಟ್ಟೆ ಸಮಿತಿಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಧಿಕಾರ ಇತ್ತು. ಈಗ ರೈತರು ತಾವು ಇಚ್ಚಿಸುವ ಖಾಸಗಿಯವರಿಗೆ ನೇರವಾಗಿ ಮಾರಬಹುದಾಗಿದೆ. ಹೀಗಾಗಿ ಮಾರುಕಟ್ಟೆ ಸಮಿತಿಗೆ ಮಾರುಕಟ್ಟೆ ಒಳಗೆ ಅಧಿಕಾರ ಇರುತ್ತದೆ. ಹೊರಗೆ ಇರುವುದಿಲ್ಲ. ಆದರೆ ರಾಜ್ಯ ಮಾರುಕಟ್ಟೆ ಸಮಿತಿಯ ಅಧಿಕಾರ ಮೊಟಕು ಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಯ್ದೆ ಯಿಂದ ಮಧ್ಯವರ್ತಿ ಹಾವಳಿ ಕಡಿಮೆಯಾಗಲಿದೆ. ಆದರೆ ಈ ಬಗ್ಗೆ ಬಹಳ ಕೆಟ್ಟದಾಗಿ ಅಪಪ್ರಚಾರ ಮಾಡಲಾಗುತ್ತಿದೆ. ರೈತರು ಯಾರಿಗೆ ಬೇಕಾದರು ತಮ್ಮ ಬೆಳೆದ ಬೆಳೆ ಮಾರಬಹುದು. ಇದರಿಂದ ರೈತರ ಆದಾಯ ದ್ವಿಗುಣ ವಾಗಲು ಅನುಕೂಲವಾಗಲಿದೆ ಎಂದರು.
ರೈತರ ಬೆಳೆ ಖರೀದಿಸುವ ಖಾಸಗಿ ಕಂಪೆನಿಗಳು ಬ್ಯಾಂಕ್ ಗ್ಯಾರಂಟಿ ಇಡುವುದು ಕಡ್ಡಾಯವಾಗಿದೆ. ರೈತರ ಹಿತದೃಷ್ಟಿಯಿಂದ ಈ ತಿದ್ದುಪಡಿ ಮಾಡಲಾಗಿದೆ. ಕಮಿಷನ್ ಏಜೆಂಟ್ ಗೆ ಇದರಿಂದ ನಷ್ಟವಾಗಲಿದೆ. ಮಾರುಕಟ್ಟೆಗೆ ಸೆಸ್ ಕಡಿಮೆಯಾಗಬಹುದು. ಆದರೆ ರೈತರ ಹಿತದೃಷ್ಟಿಯಿಂದ ಇದನ್ನು ತರಲಾಗಿದೆ ಎಂದರು.
ಬಿಡಿಎ ಅಕ್ರಮ ಸಕ್ರಮಕ್ಕೆ ಸಂಪುಟ ಅಸ್ತು
ಬಿಡಿಎ ಕಾಯ್ದೆ ಯ 38 d ಗೆ ತಿದ್ದುಪಡಿ ಮಾಡಲಾಗಿದೆ. ಬಡಾವಣೆಯಲ್ಲಿ 12 ವರ್ಷಗೂ ಮುನ್ನ ಕಟ್ಟಿರುವ ಮನೆಗಳನ್ನು ಸಕ್ರಮ ಮಾಡಲಾಗುತ್ತದೆ ಎಂದು ತಿಳಿಸಿದರು. ಅದರಂತೆ ಬಿಡಿಎಯ 6,000 ಎಕರೆ ಜಾಗದಲ್ಲಿ ಸುಮಾರು 75,000 ಅನಧಿಕೃತ ಕಟ್ಟಡಗಳಿವೆ. ಅವುಗಳನ್ನು ಸಕ್ರಮಗೊಳಿಸಲಾಗುವುದು. ಆದರೆ ಬಿಡಿಎಯ ಖಾಲಿ ನಿವೇಶನವನ್ನು ಸಕ್ರಮ ಮಾಡಲಾಗುವುದಿಲ್ಲ ಎಂದು ಇದೇ ವೇಳೆ ತಿಳಿಸಿದರು.
ಕಾಯ್ದೆಯ ತಿದ್ದುಪಡಿಯಂತೆ- 20/30 ಕಟ್ಟಡದವರು ಮಾರ್ಗಸೂಚಿ ದರದ 10%, 30/40 ನಿವೇಶನದಲ್ಲಿ ಕಟ್ಟಡ ಕಟ್ಟಿದವರು 20%, ಹಾಗೂ 40/60 ನಿವೇಶನದಲ್ಲಿ ಮನೆ ಕಟ್ಟಿದವರು ಮಾರ್ಗಸೂಚಿ ದರದ 40% ದಂಡ ಕಟ್ಟಬೇಕು ಎಂದು ತಿಳಿಸಿದರು. ಇದರಿಂದ ಸುಮಾರು 7000 ಕೋಟಿ ರೂ. ಆದಾಯ ಸರ್ಕಾರಕ್ಕೆ ಬರುವ ನಿರೀಕ್ಷೆ ಇದೆ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ