ಪ್ರಧಾನಿ ಮೋದಿ ಆರ್ಥಿಕ ಪ್ಯಾಕೇಜ್ ಭಾಗ ಎರಡು : ಕೋವಿಡ್ 19 ರಿಂದ ಆರ್ಥಿಕ ಸಂಕಷ್ಟ ಕ್ಕೆ ಹೊಳಗಾದ ರೈತರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳ ನೆರವಿಗೆ ಬಂದ ಕೇಂದ್ರ ಸರಕಾರ.
ಬೆಂಗಳೂರು ಮೇ 14 ;- ಕೊರೋನಾ ಸೋಂಕಿನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಮೋದಿ ಘೊಷಿಸಿದ್ದ ಪ್ಯಾಕೇಜ್ ನ ಭಾಗ 2 ನ್ನು ಇಂದು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾನ್ ಪ್ರಕಟಿಸಿದರು.
ವಲಸೆ ಕಾರ್ಮಿಕರು,ರೈತರು, ಬೀದಿ ವ್ಯಾಪಾರಗಳು, ಮದ್ಯಮ ವರ್ಗ, ಬುಡಕಟ್ಟು, ಆದಿವಾಸಿ ಜನಾಂಗಗಳಿಗೆ ಕೇಂದ್ರ ಸರ್ಕಾರ ಸಹಾಯ ಧನಗಳನ್ನು ಘೋಷಿಸಿದೆ. ಮುಂಬರುವ ದಿನಗಳಲ್ಲಿ ಇನ್ನು ಹಲವು ಯೋಜನೆಗಳನ್ನು ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕೇಂದ್ರ ಸರ್ಕಾರದ ಪ್ಯಾಕೇಜ್ ಭಾಗ ಎರಡರ ಮುಖ್ಯಾಂಶಗಳು
ಸಣ್ಣ ರೈತರಿಗೆ ಇಂದಿನ ಪ್ಯಾಕೇಜ್
- ರೈತರ ಸಾಲ ಮರುಪಾವತಿ ಅವಧಿ ವಿಸ್ತರಣೆ
- ರೈತರಿಗೆ ಹೆಚ್ಚುವರಿ ಸಾಲ ಸೌಲಭ್ಯ; ನಬಾರ್ಡ ಮೂಲಕ 30 ಸಾವಿರ ಕೋಟಿ ಹೆಚ್ಚುವರಿಯಾಗಿ ಬಿಡುಗಡೆ ನೀಡಲಾಗುವುದು, ಸಹಕಾರಿ ಗ್ರಾಮೀಣ ಬ್ಯಾಂಕ್ ಮುಕಾಂತರ ರೈತರು ಸಾಲ ಪಡೆಯಬಹುದು.
- ಮೀನುಗಾರರು, ಹೈನುಗಾರಿಕೆ ಮಾಡುವವರನ್ನು ಕಿಸಾನ್ ಕ್ರಡಿಟ್ ಕಾರ್ಡ್ ವ್ಯಾಪ್ತಿಗೆ ತರಲಾಗಿದೆ
- ಸಣ್ಣ ರೈತರಿಗೆ 2.5 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ ನೀಡಲಾಗುವುದು
- ಸಾಲ ಮರುಪಾವತಿ ಮಾಡುವವರಿಗೆ ಸಹಾಯ ಧನ
- ರೈತರಿಗೆ ಬೆಳೆ ಸಾಲ – 29.500 ಕೋಟಿ ರೂಪಾಯಿನ್ನು ನಬಾರ್ಡ ಮೂಲಕ ಸಹಕಾರಿ, ಗ್ರಾಮೀಣ ಬ್ಯಾಂಕ್ ಗಳಿಂದ ಮಾರ್ಚ 2020 ನಂತರ ರೈತರಿಗೆ ನೀಡಲಾಗಿದೆ
- ರೈತರ ಬೆಳೆಗಳನ್ನು ಖರೀದಿಸಲು ರಾಜ್ಯ ಗಳಿಗೆ 6700 ಕೋಟಿ ನೀಡಲಾಗಿದೆ
ವಲಸೆ ಕಾರ್ಮಿಕರು
- ವಲಸೆ ಕಾರ್ಮಿಕರಿಗೆ ಮೂರು ಒತ್ತು ಊಟ, ವಸತಿ ಗಾಗಿ ಎಲ್ಲಾ ರಾಜ್ಯಗಳಿಗೆ SDRF ಪಂಡ್ ಮೂಲಕ 11 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ.
- ವಲಸೆ ಕಾರ್ಮಿಕರು ತಮ್ಮ ಸ್ವಂತ ಸ್ಥಳದಲ್ಲೆ ಕೆಲಸ ಮಾಡಲು ಅವಕಾಶ, ಮನ್ ರೇಗ ಯೋಜನೆ ಯ ಮೂಲಕ ಕೆಲಸ,
- ಉದ್ಯೋಗ ಖಾತ್ರಿ ಯೋಜನೆಯ ಪ್ರತಿ ದಿನದ ಕನಿಷ್ಟ ವೇತನ 182 ರಿಂದ 202 ರೂ ಗೆ ಹೆಚ್ಚಳ
- ಎಲ್ಲಾ ಕಾರ್ಮಿಕರಿಗೆ ಕನಿಷ್ಟ ವೇತನ ನಿಗದಿ.
- ರಾಜ್ಯದಿಂದ ರಾಜ್ಯಕ್ಕೆ ಇರುವ ವೇತನ ತಾರತಮ್ಯ ನಿವಾರಣೆಗೆ ಕ್ರಮ
- ಕಾರ್ಮಿಕರಿಗೆ ESI ಕಡ್ಡಾಯ
- ವಲಸೆ ಕಾರ್ಮಿಕರಿಗೆ ಇನ್ನು ಎರಡು ತಿಂಗಳು ಉಚಿತ ಪಡಿತರ
- ವಲಸೆ ಕಾರ್ಮಿಕರಿಗೆ ರೇಷನ್ ಕಾರ್ಡ ಇಲ್ಲದಿದ್ದರು ಪಡಿತರ ನೀಡಲಾಗುವುದು., ಪಡಿತರ ವಿತರಿಸುವ ಜವಬ್ದಾರಿ ಆಯಾ ರಾಜ್ಯಗಳಿಗೆ ಸೇರಿದ್ದು.
- ಒಂದು ದೇಶ ಒಂದು ಕಾರ್ಡ ಯೋಜನ್ ಜಾರಿ, 27 ರಾಜ್ಯಗಳಲ್ಲಿ ಇಲ್ಲಿಯವರೆಗು 67 ಕೋಟಿ ಜನರಿಗೆ ಕಾರ್ಡ ನೀಡಲಾಗಿದೆ. ಪಡಿತರ ಕಾರ್ಡ ಹೊಂದಿದವರು ದೇಶದ ಯಾವುದೇ ಭಾಗ ಕ್ಕೆ ಉದ್ಯೋಗಕ್ಕೆ ಹೋದರೆ ಅಲ್ಲೇ ತಮ್ಮ ಪಡಿತರ ತೆಗೆದುಕೊಳ್ಳುಬಹುದು.
- ವಲಸೆ ಕಾರ್ಮಿಕರಿಗೆ ವಸತಿ ಸೌಲಭ್ಯ, ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರದಿಂದ ವಸತಿ ಸೌಲಭ್ಯ ಹೊದಗಿಸಲು ಯೋಜನೆ
ಮದ್ಯಮ ವರ್ಗದವರಿಗೆ ( ವರ್ಷಕ್ಕೆ 6 ರಿಂದ 18 ಲಕ್ಷ ಆದಾಯ ಹೊಂದಿದವರಿಗೆ)
- ಮುದ್ರಾಯೋಜನೆಯ ಸಿಶು ಸ್ಕೀಮ್ ನಲ್ಲಿ ೫೦ ಸಾವಿರ ದ ವರೆಗೆ ಸಾಲ ಪಡೆದವರಿಗೆ ಶೇಕಡ 2 ಬಡ್ಡಿ ಕಡಿತ
- ಮದ್ಯಮ ವರ್ಗದವರಿಗೆ ಮನೆ ಕಟ್ಟಲು ಸಾಲ ಸಬ್ಸಿಡಿ ಯೋಜನೆ.೨೦೧೭ ರಲ್ಲಿ ಜಾರಿಯಾಗಿದ್ದ ಈ ಯೋಜನೆ ಮಾರ್ಚ ೨೦೨೦ ಕ್ಕೆ ಕೊನೆಗೊಂಡಿತ್ತು. ಇದೇ ಯೋಜನೆಯನ್ನು ಮಾರ್ಚ್ ೨೦೨೧ ರವರೆಗೆ ವಿಸ್ತರಿಸಿದ್ದಾರೆ.
- ೭೦ಸಾವಿರ ಕೋಟಿಯ ಯೋಜನೆ ಇದಾಗಿದ್ದು, ೨,೫ ಲಕ್ಷ ಜನರಿಗೆ ಇದರ ಉಪಯೋಗ ಸಿಗಲಿದೆ ಎಂದಿದೆ ಕೇಂದ್ರ
ಬೀದಿ ಬದಿ ವ್ಯಾಪಾರಿಗಳಿಗೆ
- 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ 5 ಸಾವಿರ ಕೋಟಿ ವಿಶೇಷ ಸಾಲ ಯೋಜನೆ.
- ಬೀದಿ ವ್ಯಾಪಾರಿಗಳಿಗೆ 10 ಸಾವಿರ ಸಾಲ ಸಿಗಲಿದೆ, ಲಾಕ್ ಡೌನ್ ನಂತರ ಈ ಯೋಜನೆ ಜಾರಿಗೆ ಬರಲಿದೆ.
ಬುಡಕಟ್ಟು- ಆದಿವಾಸಿಗಳಿಗೆ
ಆದಿವಾಸಿಗಳು ಮತ್ತ ಬುಡಕಟ್ಟು ಜನಾಂಗದವರಿಗೆ ತಮ್ಮ ಅರಣ್ಯ ಹಂಚಿನಲ್ಲೆ ಉದ್ಯೋಗ ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.