ಔರಂಗಾಬಾದ್ ಮೇ ೮:- ರೈಲ್ವೇ ಹಳಿಯ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಇಂದು ಮುಂಜಾನೆ ಗೂಡ್ಸ್ ರೈಲು ಹರಿದು 16 ಜನ ಮೃತ ಮೃತ ಪಟ್ಟಿದ್ದು 4 ಜನ ಗಂಭೀರವಾಗಿ ಗಾಯಗೊಂಡಿರು ಘಟನೆ. ಮಹಾರಾಷ್ಟ್ರಾದ ಔರಂಗಾಬಾದ್ ನ ಜಲ್ನಾ ರೈಲ್ವೆ ಟ್ರಾಕ್ ಬಳಿ ಈ ಘಟನೆ ಸಂಭವಿಸಿದೆ.ಗಾಯಗೊಂಡವರನ್ನು ಔರಂಗಾಬಾದ್ ನ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಘಟನೆ ಬೆಳಗಿನಜಾವ 5 ಗಂಟೆ ಸುಮಾರಿಗೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ರೈಲ್ವೆ ಟ್ರಾಕ್ ಮೇಲೆ ಮಲಗಿದ್ದ 19 ಕಾರ್ಮಿಕರು ಗೂಡ್ಸ್ ರೈಲು ಹರಿದ ಪರಿಣಾಮ 14 ಮಂದಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.ಒಬ್ಬ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತಪಟ್ಟ ಕಾರ್ಮಿಕರು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ
ಲಭ್ಯವಾಗಿರುವ ಮಾಹಿತಿ ಪ್ರಕಾರ ಜಲ್ನಾದಿಂದ ಭೂಸಾಲ್ ಹೋಗಿ,ಅಲ್ಲಿಂದ ಮಧ್ಯಪ್ರದೇಶ ತೆರಳಲು ಈ ಕಾರ್ಮಿಕರು ರೈಲ್ವೆ ಹಳಿಗಳ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ದಣಿವಾಗಿ ರೈಲ್ವೆ ಹಳಿಯ ಮೇಲೆ ಕುಳಿತಿದ್ದಾರೆ ನಂತರ ನಿದ್ರೆಗೆ ಜಾರಿದ್ದರಿಂದ ಈ ಘಟನೆ ನಡೆದಿದೆ ಎಂದು ಔರಂಗಾಬಾದ್ ಎಸ್ ಪಿ ತಿಳಿಸಿದ್ದಾರೆ. ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ
ಪ್ರಧಾನಿ ಸಂತಾಪ,
ಈ ದುರಂತಕ್ಕೆ ಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡಿ ಸಂತಾಪ ಸೂಚಿಸಿದ್ದು, ರೈಲ್ವೆ ಸಚಿವ ಫಿಯೋಶ್ ಗೋಯಲ್ ರೊಂದಿಗೆ ಮಾತನಾಡಿದ್ದು ಕೇಂದ್ರ ಅಗತ್ಯ ನೆರವು ನೀಡಲಿದೆ ಎಂದಿದ್ದಾರೆ.