Air Indid Air craft crash : ಕೇರಳದಲ್ಲಿ ಏರ್ ಇಂಡಿಯಾ ವಿಮಾನ ವಿಮಾನ ಅಪಘಾತ,ಪೈಲೆಟ್ ಸೇರಿದಂತೆ 1 0 ಜನ ಮೃತ ಪಟ್ಟಿದ್ದಾರೆ ಎಂಬ ಮಾಹಿತಿ ಸದ್ಯ ಲಭ್ಯವಾಗುತ್ತಿದೆ.. ಸರ್ಕಾರ ಇನ್ನು ಖಚಿತ ಪಡಿಸಬೇಕಿದೆ. ಕೇರಳ ಮುಖ್ಯಮಂತ್ರಿ ಜೊತೆ ಪ್ರಧಾನಿ ಮೋದಿ ಮಾತುಕತೆ.
ಕೇರಳಾದ ಕೋಜಿಕೋಡ್ (Dubai-Kozhikode Air India flight (IX-1344)) ವಿಮಾನ ನಿಲ್ದಾಣದ ರನ್ ವೇ ನಲ್ಲಿ ಲ್ಯಾಂಡಿಂಗ್ ವೇಳೆ ನೆಲಕ್ಕೆ ಅಪ್ಪಳಿಸಿ ಅಪಘಾತ ಕ್ಕೆ ಸಂಭವಿಸಿದೆ ಎನ್ನಲಾಗುತ್ತಿದೆ. ವಿಮಾನದಲ್ಲಿ ೫ ಜನ ಸಿಬ್ಬಂದಿ ಸೇರಿ 191 ಜನ ಪ್ರಯಾಣಿಕರಿದ್ದರು.
ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ ಕೇರಳಿಗರನ್ನು ಕರೆತರುತ್ತಿದ್ದ ವಿಮಾನ. ರನ್ ವೇ ನಲ್ಲಿ ಲ್ಯಾಂಡ್ ಹಾಗುವ ಸಂದರ್ಭದಲ್ಲಿ ಸುಮಾರು 35 ಅಡಿ ಎತ್ತರ ದಿಂದ ವಿಮಾನ ಅಪ್ಪಳಿಸಿದೆ, ಅಪ್ಪಳಿಸಿದ ರಭಸಕ್ಕೆ ವಿಮಾನ ಇಭ್ಭಾಗ ವಾಗಿದೆ. ಸುಮಾರು 7: 45 ಸಮಯದಲ್ಲಿ ಅಪಘಾತ ಸಂಭವಿಸಿದೆ. ಅಪಘಾತ ಕ್ಕೆ ಪ್ರತಿಕೂಲ ಹವಾಮಾನ ಕಾರಣ ಎನ್ನಲಾಗುತ್ತಿದೆ.
ಪೈಲೆಟ್ ಸೇರಿದಂತೆ 10 ಜನ ಮೃತ ಪಟ್ಟಿದ್ದಾರೆ ಎಂಬ ಮಾಹಿತಿ ಸದ್ಯ ಲಭ್ಯವಾಗುತ್ತಿದೆ. ಸರ್ಕಾರ ಇನ್ನು ಖಚಿತ ಪಡಿಸಬೇಕಿದೆ. ಏರ್ ಇಂಡಿಯಾದಿಂದ ಪ್ರಯಾಣಿಕರ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕ ಕ್ಕೆ ಸೇರಿದ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.