ಬೆಂಗಳೂರು ಮೇ ೧೩ :- ಕೋವಿಡ್ ೧೯ನಿಂದಾಗಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ ಪ್ರಧಾನಿ ಮೋದಿ ಅವರ ಮಂಗಳವಾರ ೨೦ ಲಕ್ಷ ಕೋಟಿ ಪ್ಯಾಕೇಜ್ ನ ಅಂಗವಾಗಿ ಇಂದು ವಿತ್ತ ಸಚಿವೆ ನಿರ್ಮಲಾ ಸಿತಾರಾಮನ್ ಅವರು ಸ್ವಯಂ ಅವಲಂಬಿತ ಭಾರತ ಘೋಷ ವಾಕ್ಯದೊಂದಿಗೆ ತಮ್ಮ ಪ್ಯಾಕೇಜ್ ನ್ನು ವಿವರಣೆಯನ್ನು ಆರಂಭಿಸಿದರು. ದೇಶ ಸಣ್ಣ, ಅತಿ ಸಣ್ಣ, ಮದ್ಯಮ ಕೈಗಾರಿಕೆಗಳಿಗೆ ಬಂಪರ್ ಕೊಡುಗೆ ನೀಡಿದರು.
ಕೇಂದ್ರ ಆರ್ಥಿಕ ಪ್ಯಾಕೇಜ್ ಪ್ರಮುಖ ಅಂಶಗಳು
* ಎಂಎಸ್‍ಎಂಇಗಳಿಗೆ ಯಾವುದೇ ಅಡಮಾನವಿಲ್ಲದೇ ಮೂರು ಲಕ್ಷ ಕೋಟಿ ಸಾಲ ಕೊಡಲು ನಿರ್ಧಾರ
* ಬ್ಯಾಂಕ್ ನೀಡುವ ಸಾಲಕ್ಕೆ ಕೇಂದ್ರ ಸರ್ಕಾರದ ಗ್ಯಾರಂಟಿ
* ಸಾಲ ಮರುಪಾವತಿಗೆ 4 ವರ್ಷಗಳ ಅವಕಾಶ
* ಸಾಲಕ್ಕೆ ಮೊದಲ 12 ತಿಂಗಳವರೆಗೆ ಮರುಪಾವತಿ ಅವಶ್ಯಕತೆ ಇಲ್ಲ
* ಸಾಲ ಪಡೆಯಲು ಯಾವುದೇ ಶುಲ್ಕ ಇಲ್ಲ.
* ಸಂಬಳ ಪಾವತಿಗೆ ಸಣ್ಣ ಕೈಗಾರಿಕೆಗಳಿಗೆ ತಕ್ಷಣ ಸಾಲ ಮಂಜೂರು. ಅಕ್ಟೋಬರ್ 31ರವರೆಗೆ ಸಾಲ ಪಡೆಯಲು ಅವಕಾಶ.
* 200 ಕೋಟಿವರೆಗೆ ಗ್ಲೋಬಲ್ ಟೆಂಡರ್ ಇರುವುದಿಲ್ಲ. ಈ ಟೆಂಡರ್‍ನಲ್ಲಿ ವಿದೇಶಿ ಕಂಪನಿಗಳು ಭಾಗವಹಿಸಲು ಅವಕಾಶವಿರುವುದಿಲ್ಲ ಹಾಗೂ ಈ ಟೆಂಡರ್‍ಗಳಲ್ಲಿ ಸಣ್ಣ ಕೈಗಾರಿಕೆಗಳಿಗೆ ಆದ್ಯತೆ.
* ರೂ.15,000/- ವರೆಗಿನ ಸಂಬಳ ಪಡೆಯುವವರಿಗೆ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳವರೆಗೆ ತಕ್ಷಣ ಇಪಿಎಫ್ ಹಣವನ್ನು ಕೇಂದ್ರ ಸರ್ಕಾರವೇ ಪಾವತಿಸಲಿದೆ.
* ಕೇಂದ್ರ ಸರ್ಕಾರದ ಉದ್ದಿಮೆಗಳು ಉಳಿಸಿಕೊಂಡಿರುವ ಬಾಕಿಯನ್ನು 45 ದಿನಗಳೊಳಗೆ ಎಸ್‍ಎಂಇಗಳಿಗೆ ಪಾವತಿಗೆ ಕ್ರಮ.
* ವಿದ್ಯುತ್ ಸರಬರಾಜು ಕಂಪನಿಗಳಿಗೆ ೯೦ ಸಾವಿರ ಕೋಟಿ ರೂಪಾಯಿ ಪ್ಯಾಕೇಜ್,ವಿದ್ಯತ್ ಗ್ರಾಹಕರಿಗೆ ವಿನಾಯತಿ ನೀಡಿದರೆ ಸಹಾಯ ಧನ ನೀಡಲಾಗುವುದು.
- ಸರ್ಕಾರಿ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣ ಗೊಳಿಸಲು ಆರು ತಿಂಗಳ ಕಾಲಾವಕಾಶ, ಗುತ್ತಿಗೆದಾರರ ಸಾಲಕ್ಕೆ ಕೇಂದ್ರ ಗ್ಯಾರೆಂಟಿ, (ಎಷ್ಟು ಕಾಮಗಾರಿಯ ಕೆಲಸ ವಾಗಿರುತ್ತದೆಯೊ ಅದಕ್ಕೆ ಕೇಂದ್ರದ ಭದ್ರತೆ)
* ರಿಯಲ್ ಎಸ್ಟೇಟ್ ಕೊರೋನಾ ಲಾಕ್ ಡೌನ್ ನಿಂದ ಕಾಮಗಾರಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ – ಕಾಮಗಾರಿ ತಡವಾದರೆ ದಂಡವಿಲ್ಲ, ಕಾಮಗಾರಿ ಪೂರ್ಣಗೊಳಿಸಲು ಆರು ತಿಂಗಳ ಕಾಲಾವಕಾಶ.
* ಆದಾಯ ತೆರಿಗೆ ರಿಟನ್ಸ ಗೆ ನವಂಬರ್ ವರೆಗೆ ಅವಕಾಶ ವಿಸ್ತರಣೆ
* ಟಿಡಿಎಸ್/ ಟಿ ಸಿ ಎಸ್ ತೆರಿಗೆಯಲ್ಲಿ 25% ವಿನಾಯತಿ
* ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಿಗೆ ಒಂದೇ ವ್ಯಾಖ್ಯಾನವನ್ನು ನೀಡಿ, ಬಂಡವಾಳ ಹೂಡಿಕೆ ಮಿತಿಯನ್ನು ಮತ್ತು ವಾರ್ಷಿಕ ವಹಿವಾಟು ಮಿತಿಯನ್ನು ಗಣನೀಯ ಪ್ರಮಾಣದಲ್ಲಿ ಏರಿಸಲಾಗಿದೆ. ಇದರಜೊತೆಗೆ ಇತರ ಕ್ಷೇತ್ರಗಳಾದ ರಿಯಲ್ ಎಸ್ಟೇಟ್, ಎನ್‍ಬಿಎಫ್‍ಸಿ ಮತ್ತು ಎಂಎಫ್‍ಐ ಕ್ಷೇತ್ರಗಳಿಗೆ ಸವಲತ್ತುಗಳನ್ನು ಪ್ರಕಟಿಸಲಾಗಿದೆ.
ಎಫ್‍ಕೆಸಿಸಿಐ ಸಂಸ್ಥೆಯು ಸನ್ಮಾನ್ಯ ಪ್ರಧಾನ ಮಂತ್ರಿಗಳಿಗೆ, ಹಣಕಾಸು ಸಚಿವರಿಗೆ ಧನ್ಯವಾದಗಳನ್ನು ತಿಳಿಸಿದೆ. ಈ ಪ್ಯಾಕೇಜ್ ನಿಂದ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಸಾಧಿಸಿ, ಹೊಸ ಭಾರತವನ್ನು ನಿರ್ಮಿಸಲು ಪಣತೊಟ್ಟಿರುವ ನಮ್ಮ ದೇಶದ ಪ್ರಧಾನಿಗಳ ಕನಸು ನನಸಾಗಿ ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ನಾಂದಿಯಾಡಲಿದ್ದಾರೆ. ಎಂದು ಎಫ್ ಕೆ ಸಿ ಸಿ ಅಧ್ಯಕ್ಷರ ಸಿ ಆರ್ ಜನಾರ್ಧನ ತಿಳಿಸಿದ್ದಾರೆ.