ಬೆಂಗಳೂರು ಮೇ ೧೩ :- ಜುಲೈ ೩೦ ಮತ್ತು ೩೧ರಂದು ಸಿಇಟಿ ಪರೀಕ್ಷೆ ನೆಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ.
ನೀಟ್, ಜೆಇಇ ಪರೀಕ್ಷೆ ದಿನಾಂಕ ಪ್ರಕಟವಾಗಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂದು ಸಿಇಟಿ ದಿನಾಂಕ ಪ್ರಕಟಿಸಲಾಗಿದೆ, ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗುವುದು,ಸಿಇಟಿ, ನೀಟ್ ಪರೀಕ್ಷೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರʻ ಗೆಟ್ ಸೆಟ್ ಗೊ ಆನ್ ಲೈನ್ ಕೋರ್ಸ್ ಆರಂಭಿಸಿದೆ ಇದರ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದು ಕೊಳ್ಳಬೇಕು ಎಂದರು
ಕೋನಿಡ್ ೧೯ ತಡೆಗಟ್ಟಲು ಲಾಕ್ ಡೌನ್ ಜಾರಿಯಾಗಿದ್ದರಿಂದ ಸಿ ಇ ಟಿ ಪರೀಕ್ಷೆ ನೆಡೆಸಲು ಸಾದ್ಯವಾಗಿರಲಿಲ್ಲ, ಜುಲೈ ೩೦ ಮತ್ತು ೩೧ ರಂದು ಸಿ ಇಟಿ ಪರೀಕ್ಷೆ ನೆಡೆಸಲು ತೀರ್ಮಾನಿಸಲಾಗಿದೆ ಎಂದು ಕೊರೋನಾ ಸೋಂಕು ತಡೆಗಟ್ಟಲು ಲಾಕ್ ಡೌನ್ ಸತತವಾಗಿ ವಿಸ್ತರಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಯ ಇಂಗ್ಲೀಷ್ ಪರೀಕ್ಷೆ ಮತ್ತು ಸಿ ಇಟಿ ಪರೀಕ್ಷೆಗಳನ್ನು ನೆಡೆಸಲು ಸಾಧ್ಯವಾಗಿರಲಿಲ್ಲ, ಸಿ ಇಟಿ ಪರೀಕ್ಷೆಗೆ ಮುಂಚೆ ಬಾಕಿಯಿರುವ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ನಡೆಸಿ ನಂತರ ಜುಲೈ ೩೦ ಮತ್ತು ೩೧ ರಂದು ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ಪಿಯುಸಿ ಪರೀಕ್ಷೆಯ ದಿನಾಂಕವನ್ನು ಶೀಘ್ರ ದಲ್ಲೆ ತಿಳಿಸಲಾಗುವುದು, ಸಿಇಟಿ ಪರೀಕ್ಷೆಗಳು ಆನ್ ಲೈನ್ ನಲ್ಲಿ ಇರುವದಿಲ್ಲ ಎಂದು ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಈ ಬಾರಿಯ ಶೈಕ್ಷಣಿಕ ವರ್ಷ ಸೆಪ್ಟಂಬರ್ ನಿಂದ ಆರಂಭವಾಗಲಿದೆ. ಪದವಿ ಶಿಕ್ಷಣ ದಲ್ಲಿ ಬಾಕಿಯಿರುವ ಪಠ್ಯವನ್ನು ಮೇ ಅಂತ್ಯದೊಳಗೆ ಆನ್ ಲೈನ್ ಮುಖಾಂತರ ಪೂರ್ತಿ ಮಾಡಲು ತಿಳಿಸಲಾಗಿದೆ, ಸೆಪ್ಟಂಬರ್ ನಲ್ಲಿ ಡಿಗ್ರಿ ಕಾಲೇಜ್ ಆರಂಭವಾಗುವ ಸೂಚನೆಯನ್ನು ನೀಡಿದರು. ರಾಜ್ಯದಲ್ಲಿ ರುವ ೮೦೦೦ ಮೆಡಿಕಲ್ ಮತ್ತು ೬೨,೦೦ ಇಂಜಿನಿಯರಿಂಗ್ ಸೀಟ್ ಗಳಿಗಾಗಿ ಸಿಇಟಿ ಪರೀಕ್ಷೆ ನಡೆಯಲಿದೆ ಅಶ್ವತ್ಥ ನಾರಾಯಣ್ ತಿಳಿಸಿದರು..