IMG 20200804 WA0088

ವಾಟಾಳ್ ನಾಗರಾಜ್ ರ ಪತ್ನಿ ವಿಧಿ ವಶ…!

STATE Genaral

ವಾಟಾಳ್ ನಾಗರಾಜ್ ರ ಧರ್ಮಪತ್ನಿ ವಿಧಿವಶ…!

ಬೆಂಗಳೂರು : ವಾಟಾಳ್ ನಾಗರಾಜ್ ರವರ ಪತ್ನಿ ಜ್ಞಾನಾಂಬಿಕೆ ವಾಟಾಳ್ ನಾಗರಾಜ್ (60ವರ್ಷ) ಕಿಡ್ನಿ ವೈಫಲ್ಯದಿಂದ ದಿನಾಂಕ 04-08-20 ರ ಮಂಗಳವಾರ ಸಂಜೆ 7-30 ಘಂಟೆಗೆ ಶೇಷಾದ್ರಿ ಪುರಂ ನ ಮಲ್ಲಿಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರ ಪಾರ್ಥಿವ ಶರೀರವನ್ನ ವಾಟಾಳ್ ನಾಗರಾಜ್ ರವರ ಸ್ವಗೃಹ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಕೊಂಡೊಯ್ಯಲಾಗುವುದು.

IMG 20200804 WA0087

ಬುಧವಾರ ಬೆಳಗ್ಗೆ 9-00 ಘಂಟೆಗೆ ಬೆಂಗಳೂರಿನಿಂದ ಹೊರಟು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ 16 ಗ್ರಾಮದ ಜಮೀನಿನಲ್ಲಿ ಕುಟುಂಬ ಸದಸ್ಯರು ಭಾಗಿಯಾಗಲಿದ್ದು, ಅಂತಿಮ ವಿಧಿ ವಿಧಾನ ನೆರವೇರಿಸಿ ಅಂತ್ಯಕ್ರಿಯೆ ನಡೆಸಲಾಗುವುದು.

ದಯಮಾಡಿ ಅಭಿಮಾನಿಗಳು ಜನರು ಯಾರು ಬರುವುದು ಬೇಡ. ಅಲ್ಲಿಂದಲೇ ಶ್ರದ್ಧಾಂಜಲಿ ಸಲ್ಲಿಸಲು‌ ಕುಟುಂಬ ದವರು ಮನವಿ ಮಾಡಿದ್ದಾರೆ.