Session Photos 15

ವಿಧಾನಸಭೆ : ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಾಗಿರಬೇಕು……!

Genaral POLATICAL STATE
ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಾಗಿರಬೇಕು: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು ಆಗಸ್ಟ್ 18 (ಕರ್ನಾಟಕ ವಾರ್ತೆ) : ಪ್ರಧಾನಿಗಳು ದೇಶವನ್ನು ಆರ್ಥಿಕ ಶಕ್ತಿಯನ್ನಾಗಿಸಬೇಕು ಅಂದರೆ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಾಗಿದ್ದರೆ ಮಾತ್ರ ಸಾಧ್ಯ. ನಮ್ಮಲ್ಲಿರುವ ಸಾಮಥ್ರ್ಯ ಸಾಭೀತುಪಡಿಸಲು ಸಾಧ್ಯ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಇಂದು ವಿಧಾನಸಭೆಯ ಚರ್ಚೆಯ ಸಮಯದಲ್ಲಿ ಮಾತನಾಡಿದ ಅವರು ಪ್ರಧಾನಿಗಳು ಮೈಸೂರಿಗೆ ಬಂದಿದ್ದಾಗ. ಅವರ ಬಳಿ, ರಾಜ್ಯದ ಹಿತಕ್ಕಾಗಿ ಏನೇನು ಕೆಲಸ ಆಗಬೇಕು ಎನ್ನುವುದನ್ನು ಮನವಿ ರೂಪದಲ್ಲಿ ಸಲ್ಲಿಸಿದ್ದೇನೆ.. ಇತಿಹಾಸದಲ್ಲಿ ಏನೇನೆಲ್ಲಾ ಆಗಿದೆ ಎನ್ನುವುದನ್ನು ಅವರ ಗಮನಕ್ಕೆ ತಂದಿದ್ದೇನೆ. ನಮ್ಮಲ್ಲಿರುವ ಟ್ಯಾಲೆಂಟ್ ಪೂಲ್ ಬಗ್ಗೆ, ಅದರ ಶಕ್ತಿಯ ಬಗ್ಗೆ ಅವರ ಗಮನ ಸೆಳೆದಿದ್ದೇನೆ ಎಂದರು.

ಅಧಿಕಾರ ಯಾವತ್ತಿಗೂ ಶಾಶ್ವತ ಅಲ್ಲ ಅನ್ನೋ ಸತ್ಯ ನನಗೆ ತಿಳಿದಿದೆ. ನನ್ನ ಪಾಲಿಗೆ ದೊರೆತ ಸ್ಥಾನಕ್ಕೆ ಗೌರವ ಸಲ್ಲಿಸುತ್ತಾ ಬಂದಿದ್ದರಿಂದ ಇವತ್ತು ಈ ಸ್ಥಾನದಲ್ಲಿ ಕುಳಿತಿದ್ದೇನೆ. ನನ್ನ ಹೃದಯ ನಿಷ್ಕಲ್ಮಶವಾಗಿದೆ. ಮನಸ್ಸಿನಲ್ಲಿ ಯಾವುದೇ ದ್ವೇμÁಸೂಯೆಗಳು ಇಲ್ಲದೆ ಈ ನಾಡಿನ ಜನರ ಸೇವೆ ಮಾಡಬೇಕು ಅಂತ ಸಂಕಲ್ಪ ಮಾಡಿದ್ದೇನೆ ಎಂದರು.

ರಾಜಕೀಯದಲ್ಲಿ ಅಧಿಕಾರ ದುರಪಯೋಗ ಆಗಬಾರದು. ರಾಜ್ಯದ ಹಿತಾಸಕ್ತಿಗೆ ಎಲ್ಲರೂ ಬಹಳ ಮುಖ್ಯ. ವಿರೋಧ ಪಕ್ಷಗಳ ಟೀಕೆ, ಟಿಪ್ಪಣಿಗಳು, ನಮ್ಮವರ ಸಲಹೆಗಳು ಎಲ್ಲವೂ ಬೇಕು. ನಾವೆಲ್ಲ ಸೇರಿ ಈ ರಾಜ್ಯದ ಹಿತಾಸಕ್ತಿಯಾಗಿ ಕೆಲಸ ಮಾಡೋಣ. ಎಲ್ಲರ ಉದ್ದೇಶ ಒಂದೇ. ಜನಸೇವೆ ಎಂದರು.

ರಾಜ್ಯದ ಅಭಿವೃದ್ದಿ ಕುರಿತು ಚರ್ಚೆ ಮಾಡೋಣ: ಮು.ಮಂ. ಡಿ.ಕೆ.ಶಿಕುಮಾರ್

ಇಡೀ ದೇಶದಲ್ಲಿ ರಾಜಸ್ಥಾನ ಬಳಿಕ ಅತಿ ಹೆಚ್ಚು ಒಣ ಭೂಮಿ ಇರುವ ರಾಜ್ಯ ಕರ್ನಾಟಕ. ನಾವು ರೈತರ ಬಗ್ಗೆ ಆಲೋಚನೆ ಮಾಡಬೇಕು, ಅವರನ್ನು ಬದುಕಿಸಬೇಕು. ಹೀಗಾಗಿ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ರೈತರಿಗೆ ಮಾರ್ಗದರ್ಶನ ನೀಡಲು ಮುಂದಾಗಿದ್ದೇವೆ. ಬೆಂಗಳೂರಿನ ನಗರ ವಿದ್ಯಾರ್ಥಿಗಳಿಗೆ ಹಳ್ಳಿ, ರೈತನ ಬದುಕು ಪರಿಚಯಿಸಬೇಕು ಎಂದು ಕೃಷಿ ವಿವಿಗೆ ಹೇಳಿ 3 ದಿನ ಪ್ರವಾಸದ ಪಠ್ಯಕ್ರಮ ಕಾರ್ಯಕ್ರಮ ಏರ್ಪಡಿಸಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ಇಂದು ವಿಧಾನಸಭೆಯ ಚರ್ಚೆಯ ಸಮಯದಲ್ಲಿ ಮಾತನಾಡಿದ ಅವರು ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾದಾಗ ಬೆಂಗಳೂರು ಜನ ಸಂಖ್ಯೆ 7-8 ಲಕ್ಷ ಇತ್ತು. ಪೆÇಲೀಸ್ ಕಮೀಷನರೇಟ್ ಆರಂಭವಾದಾಗ 10 ಲಕ್ಷ ಇತ್ತು. ಇವತ್ತು ಬೆಂಗಳೂರ ಜನಸಂಖ್ಯೆ 1.5 ಕೋಟಿ ಆಗಿದೆ. 1.4 ಕೋಟಿ ವಾಹನಗಳಿವೆ. ಇಷ್ಟು ಜನರು ವಾಸಿಸುವುದಕ್ಕೆ ಸ್ಥಳ, ನೀರು ಒದಗಿಸಬೇಕು. ಇಲ್ಲಿಗೆ ಬಂದವರು ಯಾರೂ ಕೂಡ ಮತ್ತೆ ಊರಿಗೆ ವಾಪಸ್ಸು ಹೋಗುತ್ತಿಲ್ಲ. ನನ್ನನ್ನೂ ಒಳಗೊಂಡಂತೆ ಹೊರಗಡೆ ಇಂದ ಬೆಂಗಳೂರಿಗೆ ಬಂದವರು, ಈ ವಾತಾವರಣ, ಪರಿಸರ, ಜ್ಞಾನಕ್ಕೆ ಮಾರುಹೋಗಿ ಹೊರಗಡೆಗೆ ಹೋಗುತ್ತಿಲ್ಲ. ಬೆಂಗಳೂರಿನ ಎಲ್ಲಾ ಸಮಸ್ಯೆ ಪರಿಹಾರಕ್ಕೆ ನಾವೆಲ್ಲರೂ ಒಗ್ಗಟ್ಟಾಗಿ ಚರ್ಚಿಸಿ ಕಾರ್ಯನಿರ್ವಹಿಸಬೇಕಾಗಿದೆ” ಎಂದರು.

ಮುಂದಿನ 25 ವರ್ಷಗಳಲ್ಲಿ ಕರ್ನಾಟಕವನ್ನು ದೇಶದಲ್ಲಿ ಶಕ್ತಿಯುತ ರಾಜ್ಯವನ್ನಾಗಿ ರೂಪಿಸಲು ಆಡಳಿತ ಪಕ್ಷ – ವಿರೋಧ ಪಕ್ಷಗಳು ಎರಡೂ ಸಾಮರಸ್ಯದಿಂದ ಒಟ್ಟಿಗೆ ಕೆಲಸ ಮಾಡಿದರೆ ಮಾತ್ರ ಸಾಧ್ಯ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ.

ಪ್ರಧಾನಿಗಳು ಬೆಂಗಳೂರಿನ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಅವರು ನನ್ನ ಬಳಿ ವಿಶ್ವದ ಎಲ್ಲಾ ನಾಯಕರು, ಹೂಡಿಕೆದಾರರು ಬೆಂಗಳೂರನ್ನೇ ಬಯಸುತ್ತಿದ್ದಾರೆ ಎಂದಿದ್ದರು. ಸುಪ್ರಿಂ ಕೋರ್ಟ್ ದೆಹಲಿಯಲ್ಲಿದೆ. ಆದರೆ, ಕಾನೂನು ಕಾಲೇಜು ಬೆಂಗಳೂರಲ್ಲಿ ಏಕಿದೆ? ಇಸ್ರೋ ಏಕೆ ಬೆಂಗಳೂರಲ್ಲಿ ಶುರುವಾಯಿತು? ವಿವೇಕಾನಂದರು- ಜೆಮ್ ಶೆಡ್ ಜೀ ಟಾಟಾ ಅವರೊಂದಿಗೆ ಸಂಭಾಷಣೆಯಿಂದ ಮೈಸೂರು ಮಹಾರಾಜರು ವಿಜ್ಞಾನದಿಂದ ಅಭಿವೃದ್ಧಿ ಸಾಧ್ಯ ಅನ್ನೋದನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿ ಜಾಗ ಕೊಟ್ಟರು ಎಂದು ಹೇಳಿದರು.

ನಮ್ಮ ವಿರೋಧ ಪಕ್ಷದಲ್ಲಿರುವವರೂ ಕೂಡ ಒಂದು ಕಾಲದಲ್ಲಿ ವಿವಿಧ ಸಚಿವ ಸ್ಥಾನಗಳನ್ನು ಅಲಂಕರಿಸಿದವರು. ಬೆಂಗಳೂರಲ್ಲಿ 26 ಲಕ್ಷ ಐಟಿ ವೃತ್ತಿಪರರು ಇದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೆÇೀರ್ಟ್ ದಾರರು ಇದ್ದಾರೆ. ಎμÉ್ಟೂೀ ಜನ ಮೆಡಿಕಲ್ ಕಾಲೇಜುಗಳನ್ನು ನಡೆಸುತ್ತಿದ್ದಾರೆ. 13,940 ವೈದ್ಯರು ಬೆಂಗಳೂರಲ್ಲಿ ತಯಾರಾಗುತ್ತಿದ್ದಾರೆ. 1ಲಕ್ಷ ಪ್ಯಾರಾ ಮೆಡಿಕಲ್ ಸ್ಟಾಫ್ ತಯಾರಾಗುತ್ತಿದ್ದಾರೆ.

ಇಡೀ ಭಾರತದಲ್ಲಿ ಬೆಂಗಳೂರಂಥ ಟ್ಯಾಲೆಂಟ್ ಪೂಲ್ ಎಲ್ಲಿದೆ? ಇಂಥ ಟ್ಯಾಲೆಂಟ್ ಪೂಲ್ ಗೆ ನಾವು ಯಾವ ರೀತಿ ಮಾನ್ಯತೆ ಕೊಡಬೇಕು? ಈ ಬಗ್ಗೆ ನಾವು-ನೀವೆಲ್ಲಾ ಚಿಂತನೆ ಮಾಡಬೇಕಾಗಿದೆ. ವಿಶ್ವ ಬೆಂಗಳೂರನ್ನು ನೋಡುತ್ತಿದೆ. ಬೆಂಗಳೂರು, ಕರ್ನಾಟಕದ ಮೂಲಕ ದೇಶ ಅಭಿವೃದ್ಧಿಯಾಗಬೇಕು ಅಂತ ಪ್ರಧಾನಿ ಅವರಿಗೆ ನಾನೇ ಹೇಳಿದ್ದೇನೆ. ಇವೆಲ್ಲ ಸಾಧ್ಯವಾಗಿಸಲು ನಾವೆಲ್ಲ ಸೇರಿ ಜೊತೆಯಲ್ಲಿ ಕೆಲಸ ಮಾಡೋಣ ಮುಖ್ಯಮಂತ್ರಿಗಳು ಸದನಕ್ಕೆ ಮನವಿ ಮಾಡಿದರು ಎಂದರು.

ಈಶಾನ್ಯ ಭಾಗದವರು ಬೆಂಗಳೂರಲ್ಲಿ ಬಂದು ನೆಲೆಸಿದ್ದಾರೆ. ಹೊಸಕೋಟೆಯಲ್ಲಿ ಅಸ್ಸಾಂನವರು 10 ಸಾವಿರ ಯುವಕರಿಗೆ ತರಬೇತಿ ಕೊಟ್ಟಿದ್ದಾರೆ. ಈ ರಾಜ್ಯಕ್ಕೆ ಇರುವ ಸಂಪತ್ತನ್ನು ಉಳಿಸಿಕೊಳ್ಳಬೇಕು. ನಾವು ರಾಜಕಾರಣವನ್ನು ಹೊರಗೆ ಮಾಡೋಣ. ಮುಂದಿನ ಯುವಜನಾಂಗದ ಭವಿಷ್ಯಕ್ಕಾಗಿ ನಾವು ಕೆಲಸ ಮಾಡಬೇಕು ಎಂದು ಹೇಳಿದರು.

ಬೆಂಗಳೂರಿಗೆ ನೀರು ಬೇಕು: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರಿಗೆ ನೀರು ಒದಗಿಸುವುದು ಸವಾಲಿನ ಕೆಲಸ. ಅದನ್ನು ನಾವು ಮಾಡುತ್ತಿದ್ದೇವೆ. ಹಿಂದೆ ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಹೆಬ್ಬಾಳದ ನಂತರದ ಪ್ರದೇಶಗಳಿಗೆ ಜಲಮಂಡಳಿಯಿಂದ ನೀರು ಒದಗಿಸುವುದು ಬೇಡ ಅಂತ ತೀರ್ಮಾನಿಸಿ, ನಾನೇ ಆದೇಶಕ್ಕೆ ಸಹಿ ಹಾಕಿದ್ದೆ. ಆದರೆ ಇಂದು ಬೆಂಗಳೂರು ಅಗಾಧವಾಗಿ ಬೆಳೆದಿದೆ. ಹೆಸರಘಟ್ಟ ಕೆರೆ, ಹೊಸಕೋಟೆ ಕೆರೆ, ತಿಪ್ಪಗೊಂಡನಹಳ್ಳಿಯಂಥ ಐದಾರು ಕೆರೆಗಳನ್ನು ಅಭಿವೃದ್ಧಿಗೊಳಿಸಿ, ಅಂತರ್ಜಲ ಹೆಚ್ಚಿಸಿ ಬೆಂಗಳೂರು ಜನರ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನಕ್ಕೆ ನಮ್ಮ ಸರ್ಕಾರ ಕೈಹಾಕುತ್ತಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಕಾವೇರಿ ವಿಚಾರದಲ್ಲಿ ಸಹಕಾರ ಕೊಟ್ಟ ವಿರೋಧ ಪಕ್ಷಗಳಿಗೆ ಧನ್ಯವಾದ ಸಲ್ಲಿಸಿದ ಅವರು, ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗಲ್ಲ ಎಂದು ಈ ಹಿಂದೆ ಹೇಳಿದ್ದೆ. ನಾವು ನೀವು ಎಲ್ಲರೂ ಸೇರಿ ಪ್ರಕೃತಿಗೆ ಪ್ರಾರ್ಥಿಸೋಣ ಎಂದರು.

ನಮ್ಮಲ್ಲಿರುವ ಪ್ರತಿಭೆಗಳು ಪ್ರಪಂಚದಲ್ಲಿ ಇಲ್ಲ. ಕ್ಯಾಲಿಫೋರ್ನಿಯದಲ್ಲಿರುವ ಇಂಜಿನಿಯರ್ ಗಳ ಪೈಕಿ ಮೂವರಲ್ಲಿ ಇಬ್ಬರು ಭಾರತೀಯರು, ಅದರಲ್ಲೂ ಹೆಚ್ಚು ಕರ್ನಾಟಕದವರು. ಇದು ನಮ್ಮ ಶಕ್ತಿ, ಇದನ್ನು ಕಾಪಾಡಬೇಕು. ನಾವು ರಾಜ್ಯದ 350 ಕಿ.ಮೀ ಉದ್ದದ ಕರಾವಳಿಯನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುತ್ತಿದ್ದೇವೆ. ಕೇರಳ, ಗೋವಾ ರಾಜ್ಯಗಳು ಕರಾವಳಿ ಭಾಗವನ್ನು ಹೇಗೆ ಬಳಸಿಕೊಂಡಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುತ್ತಿದ್ದೇವೆ. ಹೀಗೆ ನಾವು ರೈತರು, ನೀರಾವರಿ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ ಎಂದರು.

Leave a Reply

Your email address will not be published. Required fields are marked *