ಕೋವೀಡ್ 19 ಪರಿಸ್ಥಿತಿ ನಿರ್ವಣೆಗೆ ಪ್ರಧಾನಿ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ಹಂಚಿಕೆಯ ಅಂಗವಾಗಿ ಇಂದು ಕೃಷಿ, ಹೈನುಗಾರಿಕೆ, ಮೀನುಗಾರಿಕೆ ವಿಶೇಷ ಪ್ಯಾಕೇಜ್ ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಟಿ ವಿವರ ನೀಡಿದರು
ನವದೆಹಲಿ ಮೇ 15 :- ಕೊರೋನ ಸೋಂಕು ಸೃಷ್ಟಿಸಿರುವ ಆರ್ಥಿಕ ಕಷ್ಟಗಳನ್ನು ನಿವಾರಿಸಲು ಕೇಂದ್ರಸರ್ಕಾರ ಘೋಷಿಸಿದ್ದ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್‌ನ ಮೂರನೆ ಭಾಗವನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಟಿ ಯಲ್ಲಿ ವಿವರ ನೀಡಿದರು.
ಕೃಷಿ ಕ್ಷೇತ್ರ, ಮೀನುಗಾರಿಕೆ, ಹೈನುಗಾರಿಕೆ, ಜೇನುಗಾರಿಕೆ ಮತ್ತು ಹಲವು ಕಾನೂನು ತಿದ್ದುಪಡಿಗಳನ್ನು ತರಲಾಗುವುದು ಎಂದ ಸಚಿವರು, ಇಂದು 11 ಕ್ರಮಗಳನ್ನು ಘೋಷಿಸಲಾಗುವುದು ಅವುಗಳಲ್ಲಿ ಎಂಟು ಮೂಲಸೌಕರ್ಯ ಹಾಗೂ ಸಾಮರ್ಥ್ಯ ಬಲಪಡಿಸಲು ಮತ್ತು ಮೂರು ಕ್ರಮಗಳು ಸರ್ಕಾರ ಹಾಗೂ ಆಡಳಿದ ಸುಧಾರಣೆಗೆ ಸಂಬಂಧಿಸಿದ್ದವು ಆಗಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ನಮ್ಮ ದೇಶದಲ್ಲಿ ಶೇಕಡ 85 ರಷ್ಟು ಜನ ಸಣ್ಣ – ಅತಿ ಸಣ್ಣ ರೈತರಿದ್ದಾರೆ, ಹೈನುಗಾರಿಕೆಯಲ್ಲಿ ಪ್ರಪಂಚದಲ್ಲೆ ಮೊದಲ ಸ್ಥಾನದಲ್ಲಿದ್ದೇವೆ, ಹಣ್ಣು, ತರಕಾರಿ , ಮೀನು ಉತ್ಪಾದನೆಯಲ್ಲಿ ಎರಡನೆ ಸ್ಥಾನ ದಲ್ಲಿದೆ.ನಮ್ಮ ದೇಶ ಕೃಷಿ ಪ್ರದಾನ ದೇಶ, ಲಾಕ್ ಡೌನ್ ನಿಂದ ಹಾಲಿನ ಬೇಡಿಕೆ ಶೇಕಡ 20 ರಿಂದ 25 ಕಡಿಮೆಯಾಗಿದೆ ಎಂದರು.
ಕೃಷಿ, ಮತ್ತು ಹೈನುಗಾರಿಕಾ ಕ್ಷೇತ್ರ
- ಲಾಕ್ ಡೌನ ಅವಧಿಯಲ್ಲಿ 74,3೦೦ ಕನಿಷ್ಟ ಬೆಂಬಲ ಬೆಲೆ ನೀಡಲಾಗಿದೆ
- ಕಿಸಾನ್ ಸನ್ಮಾನ್ ಯೋಜನೆಯಡಿ 18,7೦೦ ಕೋಟಿ ಬಿಡುಗಡೆ
- ಫಸಲ್ ಭೀಮಾ ಯೋಜನೆಯಡಿ 6,400 ಕೋಟಿ ರೂಪಾಯಿ ರೈತರಿಗೆ ಬರಬೇಕಾದ ಪರಿಹಾರ ನೀಡಲಾಗಿದೆ
- ಕೃಷಿ ಮೂಲಭೂತ ಸೌಕರ್ಯಕ್ಕೆ ಒಂದು ಲಕ್ಷ ಕೋಟಿ ತಕ್ಷಣ ನೆರವು.
- ಆಹಾರ ಸಂಸ್ಕರಣಾ ಘಟಕ, ಕೋಲ್ಢ್ ಸ್ಟೋರೇಜ್ ಗಳ ನಿರ್ಮಾಣಕ್ಕೆ 1೦ಸಾವಿರ ಕೋಟಿ, ಇದರಿಂದ 2 ಲಕ್ಷ ಆಹಾರ ಘಟಕಗಳಿಗೆ ಪ್ರಯೋಜನ
- ಈಗಾಗಲೇ ಇರುವ ಆಹಾರ ಘಟಕಗಳಿಗೆ ಸಹಾಯ ಧನ
- ಸ್ಥಳೀಯ ಬೆಳೆಗಳ ಸಂಸ್ಕರಣಾ ಘಟಕಗಳಿಗೆ ನಿರ್ಮಾಣಕ್ಕೆ ಆದ್ಯತೆ
- ಅಯಾ ರಾಜ್ಯಗಳ ಸ್ಥಳೀಯ ಬೆಳೆಗಳ ಸಂಸ್ಕರಣಾ ಘಟಕ ಸ್ಥಾಪನೆಗೆ ಪ್ರೋತ್ಸಾಹ, ಇದರಿಂದ ಸ್ಥಳೀಯ ಉದ್ಯೋಗ ಸೃಷ್ಠಿಯಾಗಲಿದೆ.
- ಹೈನುಗಾರಿಕೆಗೆ 5೦೦ ಕೋಟಿ ಹೆಚ್ಚುವರಿ ಸಾಲ
- ೧೫ ಸಾವಿರ ಕೋಟಿ ಹೈನುಗಾರಿಕೆ ಮೂಲಭೂತ ಸೌಕರ್ಯ ಅಭಿವೃದ್ಧಿ
- ಹೈನುಗಾರಿಕಾ ಉತ್ಪನ್ನಗಳ ತಯಾರಿಕಾ ಘಟಕಗಳಿಗೆ ಸಹಾಯ ಧನ
- ಹೈನು ಉತ್ಪನ್ನ, ಸಂಸ್ಕರಣಾ ಘಟಕಗಳನ್ನು ಖಾಸಗಿ ವಲಯ ನಿರ್ಮಾಣಕ್ಕೆ ಪ್ರೋತ್ಸಾಹ.
- ಹೈನುಗಾರಿಕೆ ಸಾಲದ ಬಡ್ಡಿಯಲ್ಲಿ ಶೇಕಡ ೨2ರಷ್ಟು ವಿನಾಯತಿ
- ರಾಷ್ರೀಯ ಪಶು ರೋಗ ನಿಯಂತ್ರಣಕ್ಕೆ 13,343 ಕೋಟಿ
- ಮುಂದಿನ ಎರಡು ವರ್ಷಗಳಲ್ಲಿ 1೦ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಔಷಧಿ ಬೆಳೆಗಳಿಗೆ 4 ಸಾವಿರ ಕೋಟಿ ಮೀಸಲು.
- ಔಷಧಿ ಸಸ್ಯಗಳ ಮರುಕಟ್ಟೆ ವ್ಯವಸ್ಥೆ.
- ರೈತರಿಗೆ 5 ಸಾವಿರ ಕೋಟಿ ಆದಾಯ ನಿರೀಕ್ಷೆ
ಮೀನುಗಾರಿಕೆ
- ಮೀನುಗಾರಿಕೆಗೆ 2೦ ಸಾವಿರ ಕೋಟಿ
- ಐದು ವರ್ಷ 7೦ಲಕ್ಷ ಟನ್ ಹೆಚ್ಚುವರಿ ಮೀನು ಉತ್ಪಾದನೆ ಗುರಿ
- 55 ಲಕ್ಷ ಜನರಿಗೆ ಉದ್ಯೋಗ ಅವಕಾಶ
- 1 ಲಕ್ಷ ಕೋಟಿ ಮೀನು ರಫ್ತು ಸಾಧ್ಯತೆ
- ಒಂಬತ್ತು ಸಾವಿರ ಮೀನು ಬಂದರು, ಕೋಲ್ಡ್ ಸ್ಟೋರೇಜ್ ನಿರ್ಮಾಣ
ಜೇನು ಉದ್ಯಮ
- ಜೇನು ಉದ್ಯಮಕ್ಕೆ 5೦೦ ಕೋಟಿ ಮೀಸಲು
- ಜೇನು ಸಂಗ್ರಹ, ಮಾರಟ ಮತ್ತು ಸಂಸ್ಕರಣಾ ಘಟಕ ಸ್ಥಾಪನೆಗೆ ಒತ್ತು.
- 2 ಲಕ್ಷ ಸಾಕಾಣೆ ಗಾರರಿಗೆ ಈ ಯೋಜನೆಯಿಂದ ಲಾಭ
- ಜೇನು ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ.
ಅಗತ್ಯ ವಸ್ತು ಕಾಯ್ದೆಗೆ ತಿದ್ದುಪಡಿ
- ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡಲು ಅಗತ್ಯ ವಸ್ತು ಕಾಯ್ದೆಗೆ ತಿದ್ದುಪಡಿ
- ಈರುಳ್ಳಿ, ಆಲುಗಡ್ಢೆ, ಬೇಳೆಕಾಳುಗಳಿಗೆ ಎಷ್ಟು ಬೇಕಾದರು ಖರೀದಿಸಬಹುದು, ಸಂಗ್ರಹಿಸಬಹುದು ಮಾಡಬಹುದಾಗಿದೆ
- ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಮಾತ್ರ ನಿರ್ಭಂಧ ಇರಲಿದೆ.
ಇ- ಟ್ರೇಡಿಂಗ್
- ರೈತರಿಗೆ ಆಕರ್ಷಕ ಬೆಲೆಗೆ ಬೆಳೆ ಮಾರಾಟ ಆಯ್ಕೆ
- ಇ- ಟ್ರೇಡಿಂಗ್ ಹೊಸ ನಿಯಮಗಳ ಜಾರಿ, ಆಕರ್ಷಕ ಬೆಲೆಗೆ ತಾವು ಬೆಳೆದ ಬೆಳೆ ಮಾರಾಟ ಮಾಡುವ ಆಯ್ಕೆ ರೈತರಿಗೆ.
- ಅಂತರ್ ರಾಜ್ಯ ಮಾರಟ ಕ್ಕೆ ಇದ್ದ ಅಡೆ- ತಡೆ ನಿವಾರಣೆ.
- ಬೆಳೆ ಖರೀದಿಗೆ ಬರುವ ದೊಡ್ಡ ರೀಟೈಲರ್ ಗಳಿಗೆ ಪ್ರೋತ್ಸಾಹ
- ಅತಿ ಹೆಚ್ಚು ಬೆಲೆ ನೀಡುವವರಿಗೆ ಅವಕಾಶ.
- ಏಪಿಎಂಸಿ ಯಲ್ಲಿ ಮಾರಟ ಮಾಡಬೇಕು ಎಂಬ ನಿರ್ಬಂಧವಿಲ್ಲ.