ಕೊರೋನಾ ಲಾಕ್ ಡೌನ್ ನಿಂದ ಸಂಕಷ್ಟ ದಲ್ಲಿರುವ ಮೆಕ್ಕೆ ಜೋಳ ಬೆಳೆದ ರೈತ, ಆಶಾ ಕಾರ್ಯಕರ್ತರಿಗಾಗಿ ಮೂರನೆ ಪ್ಯಾಕೇಜನ್ನು ಘೋಷಿಸಿದ ಬಿಎಸ್ ವೈ
ಬೆಂಗಳೂರು ಮೇ ೧೫ : ಕೋವಿಡ್ ೧೯ ರಿಂದ ಆರ್ಥಿಕ ಸಂಕಷ್ಟ ಕ್ಕೆ ಒಳಗಾಗಿದ್ದ ರೈತರು, ಆಶಾ ಕಾರ್ಯಕರ್ತರಿಗೆ ಮೂರನೆ ಪ್ಯಾಕೇಜ್ ೫೧೨,೫ ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ತುರ್ತು ಪತ್ರಿಕಾಗೋ಼ಷ್ಠಿ ಕರೆದು ತಿಳಿಸಿದರು
ಕೊರೋನಾ ಸಂಕಷ್ಟ ಕ್ಕೆ ರಾಜ್ಯ ಸರ್ಕಾರ ಏನೆಲ್ಲಾ ಕೊಡಬಹುದೋ ಕೊಟ್ಟಿದ್ದೇನೆ, ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು
ರಾಜ್ಯದಲ್ಲಿ ಮೆಕ್ಕೆ ಜೊಳ ಬೆಳೆದ ರೈತರು ಸಂಕಷ್ಟದಲ್ಲಿದ್ದು ಬೆಂಬಲ ಬೆಲೆ ೧೭೬೦ ರೂ ಇದ್ದರು ಅದು ಸಿಗುತ್ತಿಲ್ಲ ಎಂದು ರೈತರು ತಮ್ಮ ನೋವನ್ನು ತೋಡಿ ಕೊಂಡಿದ್ದರು, ಸಚಿವರು , ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೊಚಿಸಿ ದೇಶದಲ್ಲೇ ಐತಿಹಾಸಿ ತೀರ್ಮಾನ ತೆಗೆದು ಕೊಂಡಿದ್ದೇವೆ, ರಾಜ್ಯದಲ್ಲಿ ೧೦ ಲಕ್ಷ ಮೆಕ್ಕೆ ಜೋಳ ಬೆಳೆದ ರೈತರಿದ್ದಾರೆ, ಪ್ರತಿಯೊಬ್ಬ ರೈತರಿಗೆ ೫ ಸಾವಿರ ಕೊಡಲು ತೀರ್ಮನಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಕೋವಿಡ್ ೧೯ ಸೋಂಕು ತಡೆಯಲು ಹಗಲು ಇರುಳು ಎನ್ನದೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಸಹಕಾರ ಇಲಾಖೆ ಮುಖಾಂತರ ೩೦೦೦ ಸಾವಿರ ರಪಾಯಿ ಪ್ರೋತ್ಸಾಹ ಧನ ನೀಡಲಾಗುವುದು, ರಾಜ್ಯದ ೪೦.೨೪೦ ಆಶಾ ಕಾರ್ಯಕರ್ತರಿಗೆ ನೆರವು ಸಿಗಲಿದೆ, ಇದಕ್ಕೆ ೧೨,೫ ಕೋಟಿ ಮೀಸಲು ಇಡಲಾಗಿದೆ ಎಂದು ತಿಳಿಸಿದರು.
ನೈಸರ್ಗಿಕ ವಿಕೋಪ ನಿಯಮ ದ ಅಡಿಯಲ್ಲಿ ಅಪಘಾತ ದಲ್ಲಿ ಸತ್ತರೆ ಕುರಿ,ಮೇಕೆಗಳಿಗೆ ೫೦೦೦ ರೂಪಾಯಿ ಪರಿಹಾರ ನೀಡುವುದನ್ನು ಮುಂದುವರೆಸಲಾಗಿದೆ ಎಂದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ಸಮರ್ತಿಸಿಕೊಂಡ ಬಿಎಸ್ ವೈ
ಎಪಿಎಂಸಿ ಮಸೂದೆಗೆ ತಿದ್ದುಪಡಿ ತಂದಿರುವುದರಿಂದ ರೈತರಿಗೆ ಅನುಕೂಲವಾಗಲಿದೆ. ಪ್ರಧಾನಿ ಮೋದಿ ಯವರು ರೈತರ ಆದಾಯ ೨೦೨೦ ಕ್ಕೆ ದ್ವಿಗುಣ ಆಗಬೇಕು ಎಂಬ ಆಶಯ ನೆರವೇರಲು ಸಹಕಾರಿ ಯಾಗಲಿದೆ. ಈ ಕಾಯ್ದೆಗೆ ತಿದ್ದುಪಡಿ ತರಲಾಗಿರುವ ಉದ್ದೇಶವನ್ನು ವಿರೋಧಪಕ್ಷದ ನಾಯಕರು, ರೈತ ಮುಖಂಡರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ವಿವರಿಸಿದ್ದೇನೆ. ರೈತರು ತಾವು ಬೆಳೆದ ಬೆಳೆಯನ್ನು ಯಾರಿಗೆ ಬೇಕಾದರು ಮಾರಲು ಅವಕಾಶ ನೀಡಲಿದೆ ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗಲಿದೆ ಎಂದು ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಸಮರ್ತಿಸಿಕೊಂಡರು ಬಿಎಸ್ ವೈ .