ಬೆಂಗಳೂರು ೨೩ :- ನಾಳೆ ಭಾನುವಾರ ಇಡೀ ರಾಜ್ಯವೇ ಲಾಕ್ ಡೌನ್ ಅಗಲಿದೆ, ಅಗತ್ಯ ಸೇವೆ ಹೊರತು ಪಡಿಸಿ ಬೇರೆಲ್ಲಾ ಬಂದ್ ಆಗಲಿದೆ. ಅನಗತ್ಯವಾಗಿ ಹೊರಬಂದರೆ ಲಾಠಿ ಏಟು ಗ್ಯಾರಂಟಿ.
ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಭಾನುವಾರ ರಾಜ್ಯವನ್ನು ಸಂಪೂರ್ಣ ಲಾಕ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಲಾಕ್ ಡೌನ್ ಸಡಲಿಕೆ ನಂತರ ಕೊರೋನಾ ಸೊಂಕು ಹೆಚ್ಚುತ್ತಿರುವುದು ಜನರಲ್ಲಿ ಆತಂಕವನ್ನು ಮಾಡಿಸಿದೆ. ಇಂದಿಗೆ ೧೯೫೯ ಸೋಂಕಿತರ ಪ್ರಕರಣಗಳು ಪತ್ತೆ ಯಾಗಿವೆ.
ಬೆಂಗಳೂರು ಸಂಪೂರ್ಣ ಲಾಕ್ ಡೌನ್
ಅಗತ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಬಂದ್ ಮಾಡಲಾಗುವುದು, ಯಾವುದೇ ವಾಹನ ಸಂಚಾರಕ್ಕೂ ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತರಾದ ಅನಿಲ್ ಕುಮಾರ್ ತಿಳಿಸಿದ್ದಾರೆ.ಲಾಕ್ ಡೌನ್ ಒಂದರ ರೀತಿ ಸಂಪೂರ್ಣ ಬಂದ್ ಇರಲಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದರು.
ಶನಿವಾರ ಸಂಜೆ ೭ಗಂಟೆಯಿಂದ ಸೋಮವಾರ ಬೆಳಿಗ್ಗೆ ೭ರ ವರೆಗೆ ಕರ್ಫ್ಯೂ ಇರಲಿದ್ದು ಅಗತ್ಯ ಸೇವೆ ಹೊರತು ಪಡಿಸಿ ಸಂಪೂರ್ಣ ಬಂದ್ ಆಗಲಿದೆಎಂದು ಬೆಂಗಳೂರು ಪೋಲಿಸ್ ಆಯುಕ್ತ ಭಾಸ್ಕರರಾವ್ ತಿಳಿಸಿದ್ದಾರೆ.ಸುಖಾ ಸುಮ್ಮನೆ ಓಡಾಡುವವರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದರು.