ಬಿಎಸ್ ವೈ ವಿರುದ್ದ ಕತ್ತಿ ವರಸೆ ಶುರುವಾಗಿದೆ, ಉಮೇಶ್ ಕತ್ತಿಗೆ ಮಂತ್ರಿಗಿರಿ, ತಮ್ಮ ರಮೇಶ್ ಕತ್ತಿ ಗೆ ರಾಜ್ಯಸಭಾ ಟಿಕೇಟ್ ಬಿಎಸ್ ವೈ ಹಲವು ನಾಯಕರಿಗೆ ಭರವಸೆ ಕೊಟ್ಟಿದ್ದರು, ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂಬುದು ಬಿಜೆಪಿ ಬಂಡಾಯಗಾರರ ಬೇಡಿಕೆಯಾಗಿದೆ
ಬೆಂಗಳೂರು ಮೇ ೨೮ :- ಕೊರೋನಾ ಸೋಂಕು ಪ್ರತಿದಿನ ಹೆಚ್ಚಳವಾಗುತ್ತಿದ್ದರೆ, ಇತ್ತ ಕೆಲವು ಬಿಜೆಪಿ ಶಾಸಕರು ಬಂಡಾಯದ ಬಾವುಟ ಹಾರಿಸಿದ್ದಾರೆ ಎನ್ನಲಾಗುತ್ತಿದೆ.
ಮಾಜಿ ಸಚಿವರಾದ ಉಮೇಶ್ ಕತ್ತಿ , ಬಸವರಾಜು ಪಾಟೀಲ್ ಯೆತ್ನಾಳ್ ಮತ್ತು ಮುರಗೇಶ್ ನಿರಾಣಿ ನೇತೃತ್ವದಲ್ಲಿ ೨೭ ಶಾಸಕರು ಬಂಡಾಯದ ಬಾವುಟ ಹಾರಿಸಿದ್ದಾರೆ ಎಂದು ಖಾಸಗಿ ವಾಹಿನಿಗಳು ಸುದ್ದಿ ಬ್ರೇಕ್ ಮಾಡಿವೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಎರಡು ಬಾರಿ ಸಭೆ ಮಾಡಿ ಚರ್ಚಿಸಿದ್ದೇವೆ, ಇದು ಬಂಡಾಯದ ಸಭೆಯಲ್ಲ ಎನ್ನುತ್ತಿವೆ ಬಂಡಾಯ ಶಾಸಕರ ಮೂಲಗಳು.
ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ಕೊರೋನಾ ವಿಚಾರದಲ್ಲಿ ದಣಿವರಿಯದೆ ಕೆಲಸ ಮಾಡುತ್ತಿರುವಾಗ ತನ್ನದೆ ಪಕ್ಷದ ಶಾಸಕರೇ ನುಂಗಲಾರದ ಬಿಸಿ ತುಪ್ಪವಾಗುತ್ತಿದ್ದಾರೆ.
ಉಮಶ್ ಕತ್ತಿ ಸಿಎಂನ್ನು ಭೇಟಿ ಮಾಡಿ ತಮ್ಮ ಸಹೋದರ ರಮೇಶ್ ಕತ್ತಿ ಗೆ ರಾಜ್ಯಸಭೆಗೆ ಟಿಕೇಟ್ ನೀಡುವಂತೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ.
ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ರಮೇಶ್ ಕತ್ತಿ ರಾಜಕೀಯ ನಿಂತ ನೀರಲ್ಲ, ರಾಜಕೀಯದಲ್ಲಿ ಯಾರು ಪರಮ ಶತ್ರುಗಳು ಅಲ್ಲ ಮಿತ್ರುರು ಅಲ್ಲ, ನಾನು ಲೋಕಸಭಾ ಆಕಾಂಕ್ಷಿ ಯಾಗಿದ್ದೆ, ಲೋಕಸಭೆಯಲ್ಲಿ ಸಕ್ರಿಯವಾಗಿ ಕೆಲಸಮಾಡಿದ್ದೆ, ನನಗೆ ಲೊಕಸಭಾ ಟಿಕೆಟ್ ಕೈತಪ್ಪಿತ್ತು ಆ ಸಂದರ್ಭದಲ್ಲಿ ರಾಜ್ಯ ಸಭೆಗೆ ಕಳುಹಿಸುವ ಭರವಸೆಯನ್ನು ಬಿಎಸ್ ವೈ ನೀಡಿದ್ದರು, ಈಗ ರಾಜ್ಯ ಸಭಾ ಚುನಾನಾವಣೆ ಬರುತ್ತಿರುವುದರಿಂದ ನಮ್ಮ ಅಣ್ಣ ಸಿಎಂ ರನ್ನು ಭೇಟಿ ಮಾಡಿ ಕೊಟ್ಟ ಮಾತಿನಂತೆ ರಾಜ್ಯಸಭೆ ಟಿಕೇಟ್ ನೀಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಮಾಜಿ ಸಚಿವ ಹೆಚ್ ವಿಶ್ವನಾಥ್ ಸರ್ಕಾರ ಬರಲು ಕಾರಣರಾದ ನಾನು, ಶಂಕರ್, ಮನಿರತ್ನ, ಎಂ ಟಿ ಬಿ ನಾಗರಾಜ್ ಗೆ ಸ್ಥಾನ ಮಾನ ನೀಡಬೇಕು ಹೈಕಮಾಂಡ್ ನೊಂದಿಗೆ ಮಾತನಾಡುತ್ತೇವೆ ಎಂದಿದ್ದಾರೆ.
ಸಿಎಂ ಬಿಎಸ್ ವೈ ವಿರುದ್ದ ಎರಡುಬಾರಿ ಸಭೆ ಸೇರಿರುವ ಬಂಡಾಯ ಶಾಸಕರಿ ಗೆ ಹೈಕಮಾಂಡ್ ಬ್ರೇಕ್ ಹಾಕಲಿದೆಯಾ.? ಕಾಲವೇ ಉತ್ತರಿಸಬೇಕಿದೆ.