ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಮಹಾರಾಷ್ಟ್ರ , ಗುಜರಾತ್, ತಮಿಳುನಾಡು. ಮದ್ಯಪ್ರದೇಶ, ರಾಜಸ್ಥಾನ ರಾಜ್ಯದಿಂದ ಬರುವ ವಿಮಾನಯಾನಕ್ಕೆ ಹಾರಾಟ ವನ್ನು ನಿರ್ಬಂಧ ಎಂದ ಸಚಿವರು ನಂತರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ವಿಮಾನ ಸಂಖ್ಯೆ ಕಡಿಮೆ ಮಾಡಲು ತಿಳಿಸಲಾಗಿದೆ ಎನ್ನುವ ಮೂಲಕ ಗೊಂದಲ ಗೂಡಾಗಿದೆ ಸಂಪುಟ ತೀರ್ಮಾನ
ಬೆಂಗಳೂರು ಮೇ ೨೮:- ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಮಹಾರಾಷ್ಟ್ರ , ಗುಜರಾತ್, ತಮಿಳುನಾಡು. ಮದ್ಯಪ್ರದೇಶ, ರಾಜಸ್ಥಾನ ರಾಜ್ಯದಿಂದ ಬರುವ ವಿಮಾನಯಾನಕ್ಕೆ ಹಾರಾಟ ವನ್ನು ನಿರ್ಬಂಧಿಸುವ ತೀರ್ಮಾನ ತೆಗೆದು ಕೊಳ್ಳಲಾಗಿದೆ ಎಂದು ತಿಳಿಸಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ ಮಾಧು ಸ್ವಾಮಿ ನಂತರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ನಿರ್ಭಂಧವಿಲ್ಲ, ಐದು ರಾಜ್ಯಗಳಲ್ಲಿ ಕೊರೋನಾ ಪ್ರಕರಣ ಹೆಚ್ಚಾಗಿರುವುದರಿಂದ ಮುಂಜಾಗ್ರತ ಕ್ರಮವಾಗಿ ಈ ರಾಜ್ಯ ಗಳಿಂದ ಬರುವ ಮಿಮಾನ ಸಂಖ್ಯೆ ಕಡಿತ ಗೊಳಿಸಲು ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ. ಮೊದಲು ಸಂಪುಟ ತೀರ್ಮಾನ ಎಂದು ನಂತರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು ಜನರಲ್ಲಿ ಗೊಂದಲ ಉಂಟುಮಾಡಿದೆ.
ಸಂಪುಟ ಸಭೆಯ ನಂತರ ಸಚಿವರ ಸುದ್ಧಿಗೋಷ್ಠಿ ವಿವರ
ಹೆಚ್ಚುತ್ತಿರುವ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮಹಾರಾಷ್ಟ್ರ ತಮಿಳುನಾಡು, ಮಧ್ಯಪ್ರದೇಶ, ಗುಜರಾತ್ , ರಾಜಸ್ಥಾನದಿಂದ ಏರ್ ಟ್ರಾಫಿಕ್ ನಿರ್ಬಂಧ ಮಾಡಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಂಜೆ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ಮಾಹಿತಿ ನೀಡಿದ ಸಚಿವರು, ಈ ಐದು ರಾಜ್ಯಗಳಿಂದ ಬರುವ ವ್ಯಕ್ತಿಗಳಿಗೆ ಹದಿನೈದು ದಿನಗಳ ಕಾಲ ವಿಮಾನದಲ್ಲಿ ಬರುವವರನ್ನು ನಿರ್ಬಂಧಿಸಲಾಗಿದೆ.
ರಸ್ತೆ, ರೈಲ್ವೇ ಮೂಲಕವೂ ಸಹ ಈ ರಾಜ್ಯಗಳಿಂದ ಬರುವವರಿಗೆ ವಿಧಿಸುವ ನಿರ್ಬಂಧ ಮುಂದುವರಿಸಲಾಗಿದೆ.
ಮಹಾರಾಷ್ಟ್ರದಿಂದ ಬರುವವರು ಹೆಚ್ಚಾಗುತ್ತಿದೆ. ವಿಶೇಷವಾಗಿ ಮಹಾರಾಷ್ಟ್ರ ಮತ್ತು ಗುಜರಾತ್ ಕಡೆಯಿಂದ ಬರುವವರಿಗೆ ಹೆಚ್ಚು ನಿರ್ಬಂಧ ವಿಧಿಸಲಾಗುತ್ತಿದೆ. ಕಳ್ಳದಾರಿಯಿಂದ ರಾಜ್ಯ ಪ್ರವೇಶ ಮಾಡುವುದನ್ಬು ತಡೆಯಲು ಹೆಚ್ಚು ನಿಗಾ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಹೊರ ರಾಜ್ಯಗಳಿಂದ ಬಂದಿರುವವರ ಟೆಸ್ಟ್ ಹಾಗೂ ಕ್ವಾರಂಟೈನ್ ಅವಧಿ ಮುಗಿಯುವವರೆಗೆ ಮತ್ತೆ ಬೇರೆಯವರಿಗೆ ರಾಜ್ಯ ಪ್ರವೇಶಕ್ಕೆ ಅವಕಾಶವಿಲ್ಲ. ಬ್ಯಾಚ್ ಬೈ ಬ್ಯಾಚ್ ಕರೆಸಿಕೊಳ್ಳುತ್ತೇವೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಕ್ಯಾಬಿನೆಟ್ ಸಭೆಯ ಪ್ರಮುಖ ನಿರ್ಧಾರಗಳು
- ನಿಸ್ಸಾರ್ ಅಹಮದ್ ಟ್ರಸ್ಟ್ ಗೆ ಜಮೀನು ಮಂಜೂರು : ಚಿಕ್ಕಬಳ್ಳಾಪುರ ನಂದಿ ಹೋಬಳಿ ಮೋಟ್ಲೂರು ಗ್ರಾಮದಲ್ಲಿ ಬೆಂಗಳೂರಿನ ನಿಸ್ಸಾರ್ ಅಹಮದ್ ಟ್ರಸ್ಟ್‌ಗೆ 2.20 ಎಕರೆ ಜಮೀನು ಮಂಜೂರು
- ಕರ್ನಾಟಕ ಭಿಕ್ಷಾಟನೆ ನಿಷೇಧ( ತಿದ್ದುಪಡಿ) ವಿಧೇಯಕ 2020ಕ್ಕೆ ಸಂಪುಟ ಅನುಮೋದನೆ ನೀಡಿದೆ
- ಔಷಧ ಉಗ್ರಾಣ ಸ್ಥಾಪನೆ : ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ ಹಾಗೂ ಚಿಕ್ಕಬಳ್ಳಾಪುರದಲ್ಲಿ 18.80 ಕೋಟಿ ರೂ. ವೆಚ್ಚದಲ್ಲಿ ಔಷಧ ದಾಸ್ತಾನು ಉಗ್ರಾಣ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ನೀಡಿದೆ
- ಕರ್ನಾಟಕ ಸಹಕಾರಿ ಕೃಷಿ ಮತ್ರು ಗ್ರಾಮೀಣಾಭಿವೃದ್ದಿ ಬ್ಯಾಂಕ್ 1, 500 ಕೋಟಿ ರೂ ಸಾಲ ಕ್ಕೆ ಖಾತ್ರಿ ನೀಡಲಾಗಿದೆ.
- ಪುತ್ತೂರು ತಾಲೂಕಿನಲ್ಲಿ ಕುಮಾರಧಾರ ನದಿಗೆ ಸೇತುವೆ ನಿರ್ಮಾಣಕ್ಕೆ 15 ಕೋಟಿ ರೂ. ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ.
- ಕೋವಿಡ್ ಪ್ಯಾಕೇಜ್ ನಲ್ಲಿ ಮೆಕ್ಕೆ ಜೋಳ ಬೆಳೆದ ರೈತರಿಗೆ ಒಂದು ಹೆಕ್ಟೇರ್ ಗೆ ಐದು ಸಾವಿರ ರೂ. ನೀಡಲು ನಿರ್ಧರಿಸಲಾಗಿದೆ.
- ಕ್ಷೌರಿಕರು, ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ರೂ ಪರಿಹಾರ ನೀಡಲು ವಿಧಿಸಲಾಗಿದ್ದ ಶರತ್ತುಗಳನ್ನು ಸಡಿಲಿಸಲಾಗಿದೆ. ಎಲ್ಲ ಚಾಲಕರಿಗೂ ಪರಿಹಾರ ನೀಡಲು ತೀರ್ಮಾನಿಸಲಾಗಿದೆ .
- ವಯೋಮಿತಿ ಸಡಿಲಿಕೆ : ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ .ಸಾಮಾನ್ಯ ವರ್ಗಕ್ಕೆ 30 ವರ್ಷ ಮತ್ತು ಮೀಸಲು ಕ್ಯಾಟಗರಿಗೆ 38 ವರ್ಷದವರಗೆ ಒನ್ ಟೈಮ್ ಸಡಿಲಿಕೆ ನೀಡಲಾಗಿದೆ
- ಸಿಎಂ ಗೆ ಅಧಿಕಾರ : ವಿಧಾನ ಪರಿಷತ್‌ಗೆ ಐವರನ್ನು ನಾಮನಿರ್ದೇಶನ ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ಜೂನ್ 23ಕ್ಕೆ ವಿಧಾನಪರಿಷತ್ ನ ಐದು ನಾಮ ನಿರ್ದೇಶನ ಸ್ಥಾನಗಳು ಖಾಲಿಯಾಗಲಿದೆ. ನಾಮನಿರ್ದೇಶನ ಶಿಫಾರಸ್ಸು ಮಾಡುವ ಅಧಿಕಾರವನ್ನು ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ನೀಡಲಾಗಿದೆ ಎಂದು ತಿಳಿಸಿದರು.