ದೇಶದ ವಾಣಿಜ್ಯ ನಗರ ಖ್ಯಾತಿ ಮುಂಬೈ ಅಕ್ಷರ ಸಹಾ ದ್ವಂಸ ಮಾಡಿದೆ ಕೊರೋನಾ ಸೋಂಕು, ಏಕೆ ಈ ಗತಿ ಬಂತು ಎಂಬ ಪ್ರಶ್ನೆ ದೇಶ ದೆಲ್ಲೆಡೆ ಜನರಲ್ಲಿ ಕಾಡುತ್ತಿದೆ.
ಬೆಂಗಳೂರು ಮೇ 31 :- ಪ್ರತಿದಿನ ಜನ ಜಂಗುಳಿಯಿಂದ ಗಿಜ-ಗುಡುವ ಮುಂಬೈ ಇಂದು ಕೋವಿಡ್ 19 ಕಾರಣದಿಂದ ಅಕ್ಷರ ಸಹಾ ನಲುಗಿದೆ.
2008 ರಲ್ಲಿ ಬಾಂಬ್ ದಾಳಿಯಾದ ಸಂದರ್ಭದಲ್ಲೂ ಮುಂಬೈ ಜನ ಜೀವನ ಸಾಮಾನ್ಯವಾಗಿತ್ತು, ರೈಲುಗಳು ಹೊಡಾಡುತ್ತಿದ್ದವು, ಲಕ್ಷಾಂತರ ಜನ ಕೆಲಸಗಳಿಗೆ ಹೊಗುತ್ತಿದ್ದರು, ರೆಸ್ಟೋರೆಂಟ್ ಆಫಿಸ್ ಗಳು ತೆರೆದಿದ್ದವು.ಆದರೆ ಈಗ ಕೋವೀಡ್ 19 ಈ ಮಹಾನಗರವನ್ನು ಸ್ತಬ್ದ ಮಾಡಿದೆ. ಸೋಂಕು ಅಧಿಕವಾಗಿರುವುದರಿಂದ ಲಾಕ್ ಡೌನ್ ಮುಂದುವರೆದಿದೆ.
ಕೊರೋನಾ ವೈರಸ್ ಒಡೆತಕ್ಕೆ ಅತ್ಯತ್ತಮ ಆರೋಗ್ಯ ಸೇವೆ ಎಂಬ ಹೆಗ್ಗಳಿಕೆಯ ನಗರದಲ್ಲಿ ಇಂದು ಕೊರೋನಾ ಸೋಂಕಿಗೆ ಚಿಕಿತ್ಸೆ ನೀಡುವುದೇ ಕಷ್ಟವಾಗಿದೆ.
ಮುಂಬೈ ಇಂದು ಭಾರತದ ಕೊರೋನಾ ವೈರಸ್ ಕೇಂದ್ರ ವಾಗಿ ಬಿಟ್ಟಿದೆ, ದೇಶದ ಒಟ್ಟು ಸೋಂಕಿತರಲ್ಲಿ ಐದರಷ್ಟು ಭಾಗ ಅಂದರೆ 38 ಸಾವಿರಕ್ಕೂ ಹೆಚ್ಚು ಸೋಂಕಿತರು ಇಲ್ಲಿ ಇದ್ದಾರೆ.ಇನ್ನು ಸಾವಿನ ವಿಷಕ್ಕೆ ಬಂದರೆ ದೇಶದ ನಾಲ್ಕರಷ್ಟು ಸಾವು ಇಲ್ಲೇ ಸಂಭವಿಸಿವೆ.
ದೇಶದ ಆರ್ಥಿಕ ರಾಜಧಾನಿಗೆ ಮುಂಬೈಗೆ ಏಕೆ ಈ ಗತಿ…?
ವರದಿಗಳ ಪ್ರಕಾರ ಕಳೆದ ರಾತ್ರಿ ಆರು ಗಂಟೆಗಳಲ್ಲಿ 18 ಮಂದಿ ಸಾವನ್ನಪ್ಪಿದ್ದರೆ ಅದರಲ್ಲಿ 15 ಜನ ಕೊರೋನಾ ಸೋಂಕಿನಿಂದ ಸತ್ತಿದ್ದಾರೆ. ಒಂದು ಶಿಪ್ಟ್ ನಲ್ಲಿ ಇಷ್ಟು ಸಾವನ್ನು ನಾನು ನೋಡಿಯೇ ಇಲ್ಲ ಎನ್ನುತ್ತಾರೆ ಹೆಸರು ಹೇಳಲು ಬಯಸದ ಕೆ ಇ ಎಂ ಆಸ್ಪತ್ರೆಯ ವೈದ್ಯರು .
ಯುದ್ಧ ಭೂಮಿಯ ರೀತಿ ಪರೀಸ್ಥಿತಿ ಇದೆ, ಒಂದು ಬೆಡ್ ಮೇಲೆ ಇಬ್ಬರು – ಮೂವರು ರೋಗಿಗಳು, ಕೆಲವರಂತು ನೆಲದ ಮೆಲೆ, ಇನ್ನು ಕೆಲವರು ಹೊರಾಂಡಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಅಗತ್ಯತೆಗೆ ಬೇಕಾದಷ್ಟು ಆಕ್ಸಿಜನ್ ಪೋರ್ಟಲ್ ಗಳಿಲ್ಲ, ಕೆಲವರಿಗೆ ಆಕ್ಸಿಜನ್ ಕೊಡಬೇಕಾಗಿದ್ದರು ನೀಡಲು ಸೌಲಭ್ಯಗಳಿಲ್ಲ ಎನ್ನುತ್ತಾರೆ ವೈದ್ಯರು.
ಸರ್ಕಾರಿ ಆಸ್ಪತ್ರೆ ಸಿಯಾನ್ ನಲ್ಲಿ ಒಂದು ಆಕ್ಸಿಜನ್ ಸಿಲೆಂಡರ್ ನಿಂದ ಇಬ್ಬರು- ಮೂವರಿಗೆ ಆಕ್ಸಿಜನ್ ನೀಡಲಾಗುತ್ತಿದೆ. ಪಿಪಿಇ ಕಿಟ್ ಧರಿಸು ಜಾಗವಂತು ಗಲೀಜು ಮಯವಾಗಿದೆ ಎನ್ನುತ್ತಾರೆ ಅಲ್ಲಿನ ವೈದ್ಯರು
ಬೇಸಿಗೆ ಕಾಲ, ಮುಂಬೈ ಸಮುದ್ರ ತೀರ ಪ್ರದೇಶವಾಗಿರುವುದರಿಂದ ಬಿಸಿಲ ಧಗೆ ಗೆ ಬೆವರು ಹೆಚ್ಚು, ಪಿಪಿಇ ಕಿಟ್ ಧರಿಸುವುದರಿಂದ ಸ್ವಲ್ಪ ಹೊತ್ತಿನಲ್ಲೆ ಬೆವರಿನಿಂದ ನೆಂದು ಬಟ್ಟೆಯೆಲ್ಲಾ ಮುದ್ದೆ ಯಾಗುತ್ತವೆ ಎಂಬುದು ವೈದ್ಯರ ಅಳಲು.
ಸಿಯಾನ್, ಕೆಈಎಂ ಆಸ್ಪತ್ರೆಗಳಲ್ಲಿ ಶವಗಳ ಪಕ್ಕದಲ್ಲೆ ಚಿಕಿತ್ಸೆ ನೀಡಲಾಗುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು.
ಕನಸಿನ ನಗರ ಮುಂಬೈ ಈ ಹಿಂದೆ :
ದೇಶದ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಮತ್ತು ವೈದ್ಯರಿರುವ ನಗರ ಎಂಬ ಖ್ಯಾತಿ ಮುಂಬೈದು ಆದರೆ ಕೋವಿಡ್ 19 ಎದುರಿಸುವಲ್ಲಿ ಪೂರ್ವ ತಯಾರಿಯಲ್ಲಿ ಎಡವಿದೆ. ಮುಂಬೈ ಎಂದರೆ ಕನಸಿನ ನಗರವಾಗಿತ್ತು ಆದರೆ ಇಂದು ಕನಸಿನಲ್ಲೂ ಬೆಚ್ಚಿ ಬೀಳಿಸುವ ನಗರ ವಾಗಿದೆ ಎನ್ನುತ್ತಾರೆ ವೈದ್ಯರು.
ದೇಶದ ಆರ್ಥಿಕ ರಾಜಧಾನಿ ಮುಂಬೈ ಅರೆಬಿಯನ್ ಸಮುದ್ರಕ್ಕೆ ಹೊಂದಿಕೊಂಡಿದೆ. ದೇಶದ್ಯಾಂತ ಜನರು ಕೆಲಸ ಹುಡುಕಿಕೊಂಡು ನಿತ್ಯವು ಬರುತ್ತಿರುತ್ತಾರೆ. ಕೊರೋನಾ ಸೊಂಕು ಹೆಚ್ಚಾಗಿ ಹರಡಲು ಕಾರಣ ಜನಸಂಖ್ಯೆ.
2017 ರ ಸಮೀಕ್ಷೆ ಪ್ರಕಾರ ಪ್ರಪಂಚದ ಅತಿ ಹೆಚ್ಚು ಜನ ಸಂಖ್ಯೆಯ ಎರಡನೆಯ ನಗರವಾಗಿದೆ ಈ ಮುಂಬೈ. ಒಂದು ಸೋಂಕು ಬಂದರೆ ನಾವು ಅದನ್ನು ಎದುರಿಸಲು ಎಷ್ಟು ಸಮರ್ಥರಿದ್ದೇವೆ ಎಂಬುದು ಈಗ ಅರ್ಥವಾಗುತ್ತಿದೆ. ನಮ್ಮ ವೈದ್ಯಕೀಯ ವ್ಯವಸ್ಥೆಗಳ ಅನಾವರಣ ವಾಗುತ್ತಿದೆ ಎನ್ನುತ್ತಾರೆ ಒಬ್ಬ ವೈದ್ಯರು.
ಸರ್ಕಾರದ ವರದಿಗಳ ಪ್ರಕಾರ ಮುಂಬೈ ನಲ್ಲಿ 70 ಸರ್ಕಾರಿ ಆಸ್ಪತ್ರೆಗಳಿದ್ದು ಅಲ್ಲಿ 20,700 ಬೆಡ್ ಗಳಿವೆ ಇನ್ನು 1500 ಖಾಸಗಿ ಆಸ್ಪತ್ರೆಗಳಲ್ಲಿ 20 ಸಾವಿರ ಬೆಡ್ ಗಳು ಲಭ್ಯತೆ ಇದೆ. ಮುಂಬೈ ಜನ ಸಂಖ್ಯೆ ಆಧಾರ ದಲ್ಲಿ ಪ್ರತಿ 3 ಸಾವಿರ ಮಂದಿಗೆ ಒಂದು ಬೆಡ್ ಲಭ್ಯತೆ ಇದೆ. ಡಬ್ಲೂಎಚ್ ಓ ನಿಯಮಾವಳಿಗಳ ಪ್ರಕಾರ ಪ್ರತಿ 550 ಮಂದಿಗೆ ಒಂದು ಬೆಡ್ ಲಭ್ಯವಿರಬೇಕು.
ಸರ್ಕಾರಿ ವೈದ್ಯರ ಮೇಲೆ ಹೆಚ್ಚಿನ ಒತ್ತಡ
ಕೊರೋನಾ ಸೋಂಕು ನಿವಾರಣೆಯ ಸಂಪೂರ್ಣ ಜವಾಬ್ದಾರಿ ಸರ್ಕಾರಿ ವೈದ್ಯರ ಮೇಲೆ ಬಿದ್ದಿದೆ, ತೀವ್ರ ಒತ್ತಡದಲ್ಲಿ ಕೆಲಸ ಮಾಡುವ ಸನ್ನಿವೇಶ ದಲ್ಲಿ ಅವರಿದ್ದಾರೆ, ಸರ್ಕಾರಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗಲು ಕಾರಣ ಖಾಸಗಿ ಆಸ್ಪತ್ರೆಗಳು ನೆಪ ಮಾತ್ರಕ್ಕೆ ಕಾರ್ಯನಿರ್ವಹಿಸುತ್ತಿರುವುದು ಎನ್ನುತ್ತಾರೆ ಮುಂಬೈನ ಡಾಕ್ಟರ್ ರಾಣೆ.
ಖಾಸಗಿ ಆಸ್ಪತ್ರೆಗಳು ಶೇಕಡ 80 ರಷ್ಟು ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ನೀಡಬೇಕು ಎಂದು ಮಹಾರಾಷ್ಟ್ರಾ ಸರ್ಕಾರ ಆದೇಶಿಸಿತ್ತು. ಸೋಂಕು ಹೆಚ್ಚಾಗಿ ಹರಡುತ್ತಿರುವುದರಿಂದ ಮೊದಲು ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಮುಂದೆ ಬರಲಿಲ್ಲ ಎಂದು ಮಹಾರಾಷ್ಟ್ರ ದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಆಧ್ಯಕ್ಷ ರಾದ ಡಾಕ್ಟರ್ ಅವಿನಾಶ್ ಭೌಂಡ್ವೇ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳ ಸಂಘ 3 ಸಾವಿರ ವೈದ್ಯರನ್ನು ಕೊವಿಡ್ 19 ಚಿಕಿತ್ಸೆ ನೀಡಲು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿ ಕೊಂಡಿದೆ ಆದರೆ ನಮಗೆ ಪಿಪಿಇ ಕಿಟ್ ಗಳು ಬೇಕು, ಸರ್ಕಾರ ಇಲ್ಲಿಯವರೆಗೆ ಪೂರೈಸಿಲ್ಲ ಎನ್ನುವುದು ಸಂಘದ ವಾದ.
ಖಾಸಗಿ ಆಸ್ಪತ್ರೆಗಳ ವೈದ್ಯರು ಚಿಕಿತ್ಸೆ ನೀಡಲು ಮುಂದೆ ಬರುವ ತನಕ, ಸರ್ಕಾರಿ ಆಸ್ಪತ್ರೆಗಳ ಒತ್ತಡ ಕಡಿಮೆಯಾಗದು. ನಗರದಲ್ಲಿ ಇನ್ನು ಆಸ್ಪತ್ರೆ, ಬೆಡ್ ಗಳನ್ನು ಹೆಚ್ಚಿಸಬೇಕಿದೆ ಮಹಾರಾಷ್ಟ್ರ ಸರ್ಕಾರ.
ಧಾರವಿ ಪರಿಸ್ಥಿತಿ
ಮುಂಬೈ ನ ಧಾರವಿ ಸ್ಲಂಮ್ ನ ಪರಿಸ್ಥಿತಿಯಂತು ಘನ ಗೋರ, ಒಂದು ಚದುರ ಮೈಲಿಯಲ್ಲಿ ಸುಮಾರು 10 ಲಕ್ಷ ಮಂದಿ ವಾಸಿಸುತ್ತಿದ್ದಾರೆ. 50 ಜನಕ್ಕೆ ಒಂದು ಬಾತ್ ರೂಮ್, ಚಿಕ್ಕ- ಚಿಕ್ಕ ರೂಮ್ ಗಳಲ್ಲಿ 12 ಜನ ರ ವಾಸ, ಇಂತ ಸ್ಥಳದಲ್ಲಿ ಸಾಮಾಜಿಕ ಅಂತರ ಹೇಗೆ ಸಾಧ್ಯ…? ಎನ್ನುತ್ತಾರೆ ರೆಹಮಾನ್.
ಲಾಕ್ ಡೌನ್ ನಿಂದ ಧಾರವಿಯಲ್ಲಿ ಜನ ಸಂಕಷ್ಟಕ್ಕೆ ಒಳಗಾಗಿದ್ದರು ಅವರಿಗೆ ನಿತ್ಯ ಅವಸರ ವಸ್ತುಗಳನ್ನು ನಮ್ಮ ಸಂಘಟನೆ ಯಂದ ನೀಡಿದ್ದೆವು, ನನ್ನ ಜೀವನದಲ್ಲೆ ಇಂತ ಸಂಕಷ್ಟ ಸ್ಥಿತಿ ಕಂಡಿಲ್ಲ ಎನ್ನುವುದು ರೆಹಮಾನ್ ಮಾತು. ಈಗ ನಮ್ಮ ಬಳಿ ಆರ್ಥಿಕ ಸಂಪನ್ಮೂಲಗಳು ಇಲ್ಲದ ಕಾರಣ ನಿತ್ಯ ಅವರಸವಸ್ತು ಹಂಚುವುದನ್ನು ನಿಲ್ಲಿಸಿದ್ದೇವೆ ಅನ್ನುತ್ತಾರೆ.
ಮುಂಬೈ ಅನ್ನು ಕಾಡುತ್ತಿರುವ ಮತ್ತೊಂದು ಸಮಸ್ಯೆ ಎಂದರೆ ಮುಂದೆ ಬರಲಿರುವ ಮಳೆಗಾಲ ಇದು ಆರಂಭ ವಾದರೆ ಮಲೆರಿಯಾ,ಟೈಫಾಯಿಡ್ ನಂತ ಸೋಂಕು ಹರಡುವ ಸಾಧ್ಯತೆಗಳಿದೆ, ಆಗ ಮುಂಬೈ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತೆ. ಸರ್ಕಾರ ಮುಂಜಾಗ್ರತೆ ವಹಿಸಬೇಕಿದೆ.
ಅತ್ಯಧಿಕ ಜನಸಂದಣಿ, ಆರೋಗ್ಯ ಮೂಲಸೌಕರ್ಯಗಳ ಕೊರತೆ, ಹಿಂದಿನ – ಇಂದಿನ ಸರ್ಕಾರಗಳು ಮುಂದಾಲೋಚನೆ ಇಲ್ಲದೆ ವ್ಯವಹರಿಸಿರುವುದು ಇಂದಿನ ಸ್ಥಿತಿ ಗೆ ಕಾರಣ ನಾ…? ಎಂಬುದು ಸಾರ್ವಜನಿಕರಲ್ಲಿ ಮನದಲ್ಲಿ ಅಡಗಿರುವ ಮಾತು.
Input- BBC News Telugu –