Covid 19 : ವಿಕಾಸಸೌಧ, ಶಕ್ತಿ ಸೌಧಕ್ಕೂ ಎಂಟ್ರಿ ಕೊಟ್ಟ ಕೊರೋನಾ, ವಿಕಾಸ ಸೌಧ ಆಹಾರ ಇಲಾಖೆ ಮಹಿಳಾ ಸಿಬ್ಬಂದಿಗೆ ಕೊರೋನಾ ಪಾಸಿಟೀವ್ ಬಂದಿದೆ. ಪರಿಣಾಮವಾಗಿ ಆಹಾರ ಇಲಾಖೆ ಕಚೇರಿ ಸೇರಿದಂತೆ ಪ್ರಮುಖ ಕಚೇರಿಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಬೆಂಗಳೂರು ಜೂನ್ ೧೬ :- ವಿಕಾಸ ಸೌಧ ಮತ್ತು ಶಕ್ತಿ ಸೌಧ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿದ್ದು ಎರಡು ಕಟ್ಟಡಗಳನ್ನು ಸೀಲ್ ಡೌನ್ ಮಾಡಲಾಗಿದೆ.
ವಿಕಾಸಸೌಧ ದ ಆಹಾರ ಇಲಾಖೆಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ೪೦ ವರ್ಷದ ಮಹಿಳೆ ಕೊರೋನಾ ಪಾಸಿಟಿವ್ ಬಂದಿದೆ, ಆಹಾರ ಇಲಾಖೆ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಸೋಂಕು ತಗುಲಿರುವ ಮಹಿಳೆ ಜೊತೆ ಸಂಪರ್ಕದಲ್ಲಿದ್ದವರನ್ನು ಕೂಡ ಪತ್ತೆ ಹಚ್ಚಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.
ಹಲವು ಹಿರಿಯ ಅಧಿಕಾರಿಗಳು ಇಂದು ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರನ್ನು ಭೇಟಿ ಮಾಡಿ ಕೂಡಲೆ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.