15 6 21 SRKS Guest teachers 2

ಪಾವಗಡ: ಸರ್ಕಾರಿ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕರಿಗೆ ದಿನಸಿ ಕಿಟ್‌ ವಿತರಣೆ…!

DISTRICT NEWS ತುಮಕೂರು

ಪಾವಗಡ:-  ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಪಾವಗಡ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 217 ಅತಿಥಿ ಶಿಕ್ಷಕರ ಪೈಕಿ ಎರಡನೆ ಹಂತವಾಗಿ 92 ಅತಿಥಿ ಶಿಕ್ಷಕ ರಿಗೆ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸ್ವಾಮಿ ಜಪಾನಂದಜಿ ರವರು ಅತಿಥಿ ಶಿಕ್ಷಕರನ್ನುದ್ದೇಶಿಸಿ ಮಾತನಾಡಿ ನಿಮ್ಮೆಲ್ಲರ ಗುತ್ತಿಗೆ ಆಧಾರದ ಸೇವೆ ಖಾಯಂ ಆಗಲಿ ಎಂದು ಹಾರೈಸಿದರು. ಈ ಬಗ್ಗೆ ಸಂಬಂಧಪಟ್ಟ ಸಚಿವರಲ್ಲಿ, ಅಧಿಕಾರಿಗಳಲ್ಲಿ ವಿಚಾರ ವಿಮರ್ಶೆ ಮಾಡುವುದಾಗಿಯೂ ತಿಳಿಸಿದರು.

ಶ್ರೀಮತಿ ಸುಧಾಮೂರ್ತಿ, ಅಧ್ಯಕ್ಷರು, ಇನ್ಫೋಸಿಸ್ ಫೌಂಡೇಷನ್ ಇವರು ನೀಡಿರುವ ಈ ಆಹಾರ ಧಾನ್ಯಗಳ ಕಿಟ್‍ಗಳನ್ನು ಪ್ರಸಾದರೂಪವಾಗಿ ಸ್ವೀಕರಿಸಬೇಕೆಂದು ಕೋರಿದರು. ನಂತರ ಮಾತನಾಡಿದ ಶ್ರೀ ಸುದೇಶ್ ಬಾಬು ರವರು ಲಸಿಕೆಯ ಮಹತ್ವವನ್ನು ವಿವರಿಸಿದರು ಹಾಗೆಯೇ ಕಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಪವನ್ ಕುಮಾರ್ ರೆಡ್ಡಿ ರವರು ಮಾತನಾಡಿ ಕೋವಿಡ್ ಪರಿಣಾಮದಿಂದ ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿದ್ದ ಗುತ್ತಿಗೆ ಆಧಾರದ ಶಿಕ್ಷಕರನ್ನು ಗುರುತಿಸಿ ಆಹಾರ ಧಾನ್ಯಗಳ ಕಿಟ್ ವಿತರಿಸಿರುವುದಕ್ಕೆ ತುಂಬು ಹೃದಯದ ಸಂತೋಷವನ್ನು ವ್ಯಕ್ತಪಡಿಸಿದರು. ಶಿಕ್ಷಣ ಇಲಾಖೆಗೆ ಶ್ರೀ ಸ್ವಾಮೀಜಿಯವರು ನೀಡುತ್ತಿರುವ ಸಹಕಾರವನ್ನು ಕೊಂಡಾಡಿದರು. ದಿನಸಿ ಕಿಟ್ಟುಗಳ ವಿತರಣೆಯ ಸಂದರ್ಭದಲ್ಲಿ  ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ಬಸವರಾಜು, ಶ್ರೀ ಶಿವಕುಮಾರ್, ಶ್ರೀ ಸಾದಿಕ್, ವಿವೇಕ ಬ್ರಿಗೇಡಿನ ಶ್ರೀ ಲೋಕೇಶ್ ದೇವರಾಜ್, ಶ್ರೀ ವೇಣುಗೋಪಾಲರೆಡ್ಡಿ, ಮತ್ತಿತರು ಹಾಜರಿದ್ದರು.