ಆನೇಕಲ್ :- ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಕೊರೊನಾ ವ್ಯಾಕ್ಸಿನ್ ಲಭ್ಯತೆ ಹೇಗಿದೆ ಎಷ್ಡು ಜನರು ವ್ಯಾಕ್ಸಿನ್ ಪಡೆದಿದ್ದಾರೆ. ಇಲ್ಲಿ ಸಮಸ್ಯೆಗಳು ಏನಾದರು ಇದೆಯೆ …? ಗ್ರಾಮ ಪಂಚಾಯತಿ ಹಾಗೂ ಆರೋಗ್ಯ ಇಲಾಖೆ ಗಳ ಮಧ್ಯೆ ಹೊಂದಾಣಿಕೆ ಇದೆಯಾ…? ಪಂಚಾಯತಿ ಅಧ್ಯಕ್ಷರಿಗೆ – ಆಭಿವೃದ್ಧಿ ಅಧಿಕಾರಿಗೆ ವ್ಯಾಕ್ಸಿನ್ ನ ಪ್ರಸ್ತುತ ಪರಿಸ್ಥಿತಿ ತಿಳಿದಿದೆಯೆ……ಇಲ್ಲವೆ…? ಅವರುಗಳು ತಮ್ಮ – ತಮ್ಮ ಬೇರೆ -ಬೇರೆ ವ್ಯವಹಾರಗಳಲ್ಲಿ ಮಗ್ನರಾಗಿದ್ದಾರಾ…? ಜನರ ಪಾಡೇನು…..
ಸಪ್ತಸ್ವರ ತಂಡ ದಿಂದ ಪಂಚಾಯತಿ ವಾರು ರಿಯಾಲಿಟಿ ಚೆಕ್ ಆರಂಭ ಮಾಡಿದ್ದು ಅದರ ಭಾಗ ವಾಗಿ ಸರ್ಜಾಪುರ ಗ್ರಾಮ ಪಂಚಾಯತಿ ಯ ವಸ್ತು ಸ್ಥಿತಿಯ ವಿವರ ಹೀಗಿದೆ…..
ಸರ್ಜಾಪುರ ಗ್ರಾಮ ಪಂಚಾಯತಿ ಅದ್ಯಕ್ಷರಾದ ಶ್ರೀನಿವಾಸ್ ಅವರನ್ನು ಸಪ್ತಸ್ವರ ತಂಡದಿಂದ ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ……
ಸರ್ಜಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಪ್ಪತ್ತರಿಂದ- ಇಪ್ಪತ್ತೆರಡು ಸಾವಿರ ಜನಸಂಖ್ಯೆ ಇದೆ, ಇಲ್ಲಿಯವರೆಗೆ ಅಂದಾಜು ಐದು ಸಾವಿರ (5000) ಜನರಿಗೆ ಲಸಿಕೆ ನೀಡಿದ್ದೇವೆ ಒಂದು ವಾರದಿಂದ ನಮ್ಮ ಪಂಚಾಯತಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ, ಆರೋಗ್ಯ ಇಲಾಖೆ ಸಿಬ್ಬಂದಿಯವರು ಸರ್ಕಾರದಿಂದ ಸಪ್ಲೆ ಇಲ್ಲ ಎನ್ನತ್ತಾರೆ. ಪಂಚಾಯತಿಯವರು ಏನು ಮಾಡುವುದು,,,?
ವ್ಯಾಕ್ಸಿನ್ ಕೊರತೆಯಿಂದ ಹೆಚ್ಚು ಜನರಿಗೆ ನೀಡಲು ಆಗುತ್ತಿಲ್ಲ, ಪ್ರತಿದಿನ 150 ಡೋಸ್ ಮಾತ್ರ ನೀಡುತ್ತಿದ್ದರು. ವಾರದಲ್ಲಿ ಗುರುವಾರ ಬಿಟ್ಟು ವಾರಾದ್ಯಂತ ಲಸಿಕೆ ನೀಡಲಾಗುತ್ತಿತ್ತು. ಈಗ ಒಂದು ವಾರದಿಂದ ಲಸಿಕೆ ಕೊರತೆ ಎದುರಾಗಿದೆ.
ಲಸಿಕೆ ಕೊರತೆಯಿಂದ ಹೆಚ್ಚು ಜನರಿಗೆ ನೀಡಲು ಆಗುತ್ತಿಲ್ಲ.ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡಿದರೆ ನಾವು ವಾರ್ಡ ಮಟ್ಟದಲ್ಲಿ ಎಲ್ಲಾ ಸದಸ್ಯರು ಮನೆ- ಮನೆಗಳಿಗೆ ತೆರಳಿ ಜನರಿಗೆ ಲಸಿಕೆ ಕೊಡಿಸಲು ತಯಾರಿದ್ದೇವೆ ಆದರೆ ಸರ್ಕಾರದಿಂದ ಲಸಿಕೆ ಲಭ್ಯತೆ ಪ್ರಮಾಣ ಕಡಿಮೆ ಇದೆ ಎನ್ನುತ್ತಾರೆ. ಸರ್ಕಾರ ಲಸಿಕೆ ನೀಡಿದಾಗ ಮಾತ್ರ ಶೇಕಡ ನೂರರ ಗುರಿ ಸಾಧಿಸಲು ಸಾಧ್ಯ ಎನ್ನುತ್ತಾರೆ ಸರ್ಜಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್ ………
ಸರ್ಜಾಪುರ ಅಧ್ಯಕ್ಷರ ಮಾತುಗಳು ಇಲ್ಲಿದೆ ಕ್ಲಿಕ್ ಮಾಡಿ ಕೇಳಿ……..