ಆನೇಕಲ್ :- ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಕೊರೊನಾ ವ್ಯಾಕ್ಸಿನ್ ಲಭ್ಯತೆ ಹೇಗಿದೆ ಎಷ್ಡು ಜನರು ವ್ಯಾಕ್ಸಿನ್ ಪಡೆದಿದ್ದಾರೆ. ಇಲ್ಲಿ ಸಮಸ್ಯೆಗಳು ಏನಾದರು ಇದೆಯೆ …? ಗ್ರಾಮ ಪಂಚಾಯತಿ ಹಾಗೂ ಆರೋಗ್ಯ ಇಲಾಖೆ ಗಳ ಮಧ್ಯೆ ಹೊಂದಾಣಿಕೆ ಇದೆಯಾ…? ಪಂಚಾಯತಿ ಅಧ್ಯಕ್ಷರಿಗೆ – ಆಭಿವೃದ್ಧಿ ಅಧಿಕಾರಿಗೆ ವ್ಯಾಕ್ ಸಿನ್ ನ ಪ್ರಸ್ತುತ ಪರಿಸ್ಥಿತಿ ತಿಳಿದಿದೆಯೆ……ಇಲ್ಲವೆ…? ಅವರುಗಳು ತಮ್ಮ – ತಮ್ಮ ಬೇರೆ -ಬೇರೆ ವ್ಯವಹಾರಗಳಲ್ಲಿ ಮಗ್ನರಾಗಿದ್ದಾರಾ…? ಜನರ ಪಾಡೇನು…..
ಸಪ್ತಸ್ವರ ತಂಡ ದಿಂದ ಪಂಚಾಯತಿ ವಾರು ರಿಯಾಲಿಟಿ ಚೆಕ್ ಆರಂಭ ಮಾಡಿದ್ದು ಅದರ ಭಾಗ ವಾಗಿ ಬಿದರಗುಪ್ಪೆ ಗ್ರಾಮ ಪಂಚಾಯತಿ ಯ ವಸ್ತು ಸ್ಥಿತಿಯ ವಿವರ ಹೀಗಿದೆ…..
ಬಿದರಗುಪ್ಪೆ ಗ್ರಾಮ ಪಂಚಾಯತಿ ಅದ್ಯಕ್ಷರಾದ ರಾಜೇಶ್ ಅವರಿಗೆಸಪ್ತಸ್ವರ ತಂಡದಿಂದ ಪೋನ್ ಮಾಡಿದೆವು, ಸಾರ್ ನಿಮ್ಮ ಪಂಚಾಯತಿ ಕೊರೊನಾ ಪರಿಸ್ಥಿತಿ ಬಗ್ಗೆ ತಿಳಿಯಬೇಕು ಎಂದಾಗ ತಕ್ಷಣ ಬನ್ನಿ ಮಾತನಾಡೋಣ ಎಂದರು.
ಬಿದರಗುಪ್ಪೆ ಪಂಚಾಯಿತಿ ಕಚೇರಿಗೆ ಹೋಗಿ ಅವರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ…
ಬಿದರಗುಪ್ಪೆ ವ್ಯಾಪ್ತಿಯಲ್ಲಿ 2011 ರ ಜನ ಗಣತಿ ಪ್ರಕಾರ 6618 ಜನಸಂಖ್ಯೆ ಇದ್ದು 2328 ಕುಟುಂಬಗಳು, ಇವರಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಶೇಕಡ 9೦ ರಷ್ಟು ವ್ಯಾಕ್ಸಿನೇಷನ್ ಮಾಡಲಾಗಿದ್ದರೆ, 18 ವರ್ಷ ಮೇಲ್ಪಟ್ಟವರಿಗೆ ಶೇಕಡ 7೦ ರಷ್ಟು ವ್ಯಾಕ್ಸಿನೇಷನ್ ಹಾಕಲಾಗಿದೆ ಎಂದರು
.ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಹಾಗು ಸಿಬ್ಬಂದಿಯ ಸಹಕಾರದಿಂದ ನಾವು ಹೆಚ್ಚು ಜನರಿಗೆ ವ್ಯಾಕ್ಸಿನೇಷನ್ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ.
ಪ್ರತಿದಿನ ದ ವ್ಯಾಕ್ಸಿನೇಷನ್ ಲಭ್ಯತೆಯ ಆಧಾರದಲ್ಲಿ ಪಾಂಚಾಯತಿ ವ್ಯಾಪ್ತಿಯ ವಾರ್ಡ್ ಆಯ್ಕೆಮಾಡಿ, ವ್ಯಾಕ್ಸಿನ್ ಲಭ್ಯತೆಯ ಸಂಖ್ಯೆಯಷ್ಟು ಟೋಕನ್ ನೀಡಿ,ಜನರಲ್ಲಿ ಗೊಂದಲ – ನೂಕು-ನುಗ್ಗಲು ಆಗದ ರೀತಿ ವ್ಯಾಕ್ಸಿನೇಷನ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಿದರಗುಪ್ಪೆ ಅಧ್ಯಕ್ಷರ ಮಾತುಗಳು ಇಲ್ಲಿದೆ ಕ್ಲಿಕ್ ಮಾಡಿ ಕೇಳಿ……..