IMG 20210831 WA0003

ಎನ್.ಎಸ್.ಯು.ಐ.ಅಧ್ಯಕ್ಷರ ಪದಗ್ರಹಣ….!

POLATICAL STATE

*ಎನ್.ಎಸ್.ಯು.ಐ.ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ.

ಬೆಂಗಳೂರು: ಕೆಪಿಸಿಸಿ ಭಾಗವಾದ ಎನ್ .ಎಸ್.ಯು.ಥ ಗೆ ನೂತನ ಅಧ್ಯಕ್ಷರಾಗಿ ಕೀರ್ತಿ ಗಣೇಶ್  ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಕೆ ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.IMG 20210831 WA0004

ವಿರೋಧ ಪಕ್ಷದ ನಾಯಕರಾದ   ಸಿದ್ದರಾಮಯ್ಯ ಕಾರ್ಯಾಧ್ಯಕ್ಷರುಗಳಾದ ಧೃವನಾರಾಯಣ್ ,ಸಲೀಮ್ ಅಹಮದ್ಮ ಮತ್ತು ಅಖಿಲಾ ಭಾರತ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ ಲೋಕಸಭಾ ಸದಸ್ಯರಾದ ಡಿ.ಕೆ.ಸುರೇಶ್,ಶಾಸಕರು ಪಾಲ್ಗೊಂಡಿದ್ದರು.

ಹಿರಿಯನಾಯಕರು  ದೀಪಾ ಬೆಳಗಿಸಿ ನಂತರ ಪದಗ್ರಹಣ ಕಾರ್ಯಕ್ರಮ ಚಾಲನೆ ನೀಡಿದರು  ರಾಜ್ಯಾಧ್ಯಕ್ಷರಿಗೆ ಎನ್.ಎಸ್.ಯು.ಐ.ಧ್ವಜಾ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪದಗ್ರಹಣ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿದರು.

IMG 20210831 WA0018

ನಾನು ಎಸ್ ಜೆಆರ್ ಸಿ ಕಾಲೇಜಿನಲ್ಲಿದ್ದಾಗ ಎನ್ ಎಸ್ ಯು ಐ ಚುನಾವಣೆಗೆ ನನಗೆ ಟಿಕೆಟ್ ನೀಡಲಿಲ್ಲ. ಆಗ ದೇಶದ ಪ್ರಧಾನಿಯಾಗಿ ಇಂದಿರಾಗಾಂಧಿ ಅವರಿದ್ದರು. ಆಗ ಬೇರೆ ಪಕ್ಷದಿಂದ ಆಹ್ವಾನ ಬಂದಿತ್ತು. ಆಗ ನಾನು ನನ್ನ ಸಿದ್ಧಾಂತವೇ ಬೇರೆ, ಹೀಗಾಗಿ ನಾನು ಕಾಂಗ್ರೆಸಿನಲ್ಲೇ ಇರುತ್ತೇನೆ ಎಂದು ಹೇಳಿದೆ.

* ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ಯಾರು ಏನು ಬೇಕಾದರೂ ಆಗಬಹುದು. ಇಲ್ಲಿ ನಾಯಕತ್ವ ಬೆಳೆಸಿಕೊಳ್ಳಲು ಅವಕಾಶ ನೀಡಲಾಗಿದೆ.

* ಮೊದಲು ಸದಸ್ಯತ್ವ ಮಾಡಬೇಕು. ಕಾಂಗ್ರೆಸ್ ಪಕ್ಷಕ್ಕೆ ನೀವು ಕೊಡುಗೆ ನೀಡಬೇಕು ಎಂದು ಇಚ್ಛೆ ಇದ್ದರೆ, ನಾಯಕರಾಗಬೇಕಾದರೆ ಸದಸ್ಯತ್ವ ಮಾಡಿಸಬೇಕು. ಸದಸ್ಯತ್ವ ಮಾಡಿಸಿದರೆ ನೀವು ನಾಯಕರಾಗಿ ಬೆಳೆಯಲು ಸಾಧ್ಯ.

* ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ 100 ವರ್ಷಗಳ ಹಿಂದೆ ಇರಲಿಲ್ಲ. ಆಗ ಕೆಪಿಸಿಸಿ ಸಮಿತಿ ಇತ್ತು. ನಾಗ್ಪುರ ಅಧಿವೇಶನದಲ್ಲಿ ಕರ್ನಾಟಕ ಪ್ರಾವೀನ್ಷಿಯಲ್ ಕಾಂಗ್ರೆಸ್ ಸಮಿತಿ ಎಂದು ಘೋಷಿಸಿದರು. ಅದಕ್ಕೀಗ 100 ವರ್ಷವಾಗಿದೆ.

* ಕನ್ನಡ ಮಾತಾನಾಡುವವರನ್ನು ಸೇರಿಸಿ ಈ ಸಮಿತಿ ರಚಿಸಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದ್ದು, ಈ ವರ್ಷ ನೀವು 75 ಸಾವಿರ ನೂತನ ಸದಸ್ಯತ್ವ ಮಾಡಿಸಬೇಕು.

* ನೀವು ಒಬ್ಬ ನಾಯಕ 1 ಸಾವಿರ ಸದಸ್ಯತ್ವ ಮಾಡಿಸಲಿಲ್ಲ ಎಂದರೆ ನೀವು ನಾಯಕರಾಗಲು ಸಾಧ್ಯವಿಲ್ಲ. ಒಬ್ಬೊಬ್ಬರು ಒಂದೊಂದು ಕಾಲೇಜು ಉಸ್ತುವಾರಿ ವಹಿಸಿಕೊಳ್ಳಲಿ.

* ಎನ್ ಎಸ್ ಯು ಐ ನಮ್ಮ ಬೇರು. ಮುಂದೆ ಫಲ ಅನುಭವಿಸಬೇಕು ಎಂದರೆ ನಮ್ಮ ಬೇರು ಗಟ್ಟಿಗೊಳಿಸಬೇಕು. ನೀವು ಮೊದಲು ಕನಸು ಕಾಣಬೇಕು, ಆ ಕನಸನ್ನು ಇಷ್ಟಪಡಬೇಕು. ಅದನ್ನು ಸಾಕಾರಗೊಳಿಸಲು ನಿರ್ಧರಿಸಬೇಕು. ಜತೆಗೆ ಶಿಸ್ತು ಬೆಳೆಸಿಕೊಳ್ಳಬೇಕು.

* ನೀವು ಸಾವಿರ ಸದಸ್ಯತ್ವ ಮಾಡಿಕೊಂಡು ಬನ್ನಿ, ನಿಮ್ಮನ್ನು ಆಹ್ವಾನ ಕೊಟ್ಟು ನಾನೇ ಕರೆಯುತ್ತೇನೆ.

* ಎನ್ ಎಸ್ ಯು ಐ ಆರಂಭಿಸಿದ್ದು ಇಂದಿರಾಗಾಂಧಿ ಅವರು. ಯುವಕರಿಗೆ ಆದ್ಯತೆ ಕೊಟ್ಟಿದ್ದು ರಾಜೀವ್ ಗಾಂಧಿ ಅವರು. ಇವರಿಬ್ಬರು ಇಲ್ಲದೇ ಎನ್ ಎಸ್ ಯು ಐ ಬ್ಯಾನರ್ ಇರಬಾರದು.

* ಪಕ್ಷದ ಪೋಸ್ಟರ್ ಗಳಲ್ಲಿ ಯಾರ ಫೋಟೋ ಇರಬೇಕು, ಇರಬಾರದು ಎಂಬ ನಿಯಮ ಸಿದ್ಧಪಡಿಸುತ್ತಿದ್ದೇವೆ. ನಿಮ್ಮ ಹೋರಾಟದ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿ ಬರಬೇಕು. ಅಂತಹ ಹೋರಾಟಗಳನ್ನು ರೂಪಿಸಬೇಕು. ಆಗ ನೀವು ನಾಯಕರಾಗಲು ಸಾಧ್ಯ.

* ಕೇಂದ್ರ ಸರ್ಕಾರ 2 ಕೋಟಿ ಕೆಲಸ ಕೊಡ್ತೀವಿ ಅಂತು. ಯಾರೆಲ್ಲಾ ಕೆಲಸ ಕಳೆದುಕೊಂಡಿದ್ದಾರೋ ಅವರ ಪದವಿಯನ್ನು ವಾಪಸ್ ತೆಗೆದುಕೊಳ್ಳಿ ಎಂದು ಸರಕಾರವನ್ನು ಆಗ್ರಹಿಸಿ ಹೋರಾಟ ಆರಂಭಿಸಿದ್ದಾರೆ. ನಾನು ಈ ಹೋರಾಟ ಬೆಂಬಲಿಸುತ್ತೇನೆ.

* ನೀವು ಕೆಲಸ ಕಳೆದು ಕೊಂಡವರ ಪದವಿ ಪ್ರಮಾಣಪತ್ರ 3 ಪ್ರತಿ ಮಾಡಿಸಿ, ಪ್ರಧಾನಿಗಳಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ನಮಗೆ ಕಳುಹಿಸಿಕೊಡಿ.

* ಬಿಜೆಪಿ ಸರ್ಕಾರ ಬಂದ ನಂತರ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ದೊಡ್ಡ, ದೊಡ್ಡ ವ್ಯಕ್ತಿಗಳು ಅತ್ಯಾಚಾರ ಮಾಡುತ್ತಿದ್ದಾರೆ. ಮೈಸೂರು ವಿವಿಯ ಕುಲಸಚಿವರು ಹೆಣ್ಣು ಮಕ್ಕಳು ಸಂಜೆ 6.30ರ ನಂತರ ವಿವಿ ಆವರಣದಲ್ಲಿ ಓಡಾಡಬಾರದು ಅಂತಾ ಆದೇಶ ಹೊರಡಿಸಿದ್ದಾರೆ. ಅವರಿಗೆ ಹೊಸ ಡಾಕ್ಟರೇಟ್ ಕೊಡಬೇಕು.

* ಇದರ ವಿರುದ್ಧ ನೀವು ಹೋರಾಟ ಮಾಡಬೇಕು. ನೀವು ವಿದ್ಯಾರ್ಥಿಗಳ ಸಮಸ್ಯೆಯ ಧ್ವನಿ ಆಗಿ.

* ಈ ದೇಶದಲ್ಲಿ ಬದಲಾವಣೆ ಆಗಬೇಕಾದರೆ ಅದು ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರಿಂದ ಸಾಧ್ಯ.

* ಸಾವಿರ ಸದಸ್ಯತ್ವ ಮಾಡಿಸಿ ನಾನು ನಿಮಗೆ ಪದಾಧಿಕಾರಿ ಹುದ್ದೆ ನೀಡುತ್ತೇನೆ. ನನಗೆ ಜಾತಿ ಮೇಲೆ ನಂಬಿಕೆ ಇಲ್ಲ. ವಿದ್ಯಾರ್ಥಿ ನಾಯಕರೇ ನಮ್ಮ ಆಸ್ತಿ. ತ್ರಿವರ್ಣ ಧ್ವಜ ನಮ್ಮ ಶಕ್ತಿ.

* ನೀವು ಬದಲಾವಣೆ, ಅಭಿವೃದ್ಧಿ ಹಾಗೂ ವಿಜಯದ ಭಾಗವಾಗಬೇಕು.

* ನಿಮ್ಮ ಬದ್ಧತೆ ಮುಖ್ಯ. ನೀವು ಬೇಗ ಸಾಗಬೇಕಾದರೆ ಏಕಾಂಗಿಯಾಗಿ ಸಾಗಿ, ನೀವು ದೂರ ಸಾಗಬೇಕಾದರೆ ಎಲ್ಲರ ಒಟ್ಟಿಗೆ ಸಾಗಿ.

* ಜತೆಗೂಡುವುದು ಆರಂಭ, ಜತೆಯಾಗಿ ಯೋಚಿಸುವುದು ಪ್ರಗತಿ, ಜತೆಯಾಗಿ ಕೆಲಸ ಮಾಡುವುದು ಯಶಸ್ಸು. ನೀವು ಒಟ್ಟಾಗಿ ಕೆಲಸ ಮಾಡಬೇಕು.

* ರಾಜ್ಯದಲ್ಲಿ ಶೇ.80 ರಷ್ಟು ಇಂಜಿನಿಯರಿಂಗ್ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ.

* ರಾಜ್ಯದಲ್ಲಿ 200 ಇಂಜಿನಿಯರಿಂಗ್ ಕಾಲೇಜುಗಳು ಇವೆ. ನಮ್ಮ ರಾಜ್ಯ ತಂತ್ರಜ್ಞಾನ ಕ್ಷೇತ್ರದ ಕೇಂದ್ರ ಸ್ಥಾನ. ಇಲ್ಲೇ ನಿರುದ್ಯೋಗ ಹೆಚ್ಚಾಗಿರುವಾಗ ಇನ್ನು ದೇಶದ ಕತೆ ಏನು?

* ನಾವು ಸರ್ಕಾರಿ ಉದ್ಯೋಗ ನೀಡಿ ಎನ್ನುತ್ತಿಲ್ಲ. ಇದಕ್ಕೆ ನಾವು ಏನು ಮಾಡಬಹುದು ಎಂದು ನೀವೆಲ್ಲ ಸೇರಿ ನನಗೆ ಸಲಹೆ ನೀಡಿ. ಪಕ್ಷದ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿ ಧ್ವನಿ, ಪಕ್ಷದ ಧ್ವನಿ ಇರಲಿದೆ.

* ರಾಹುಲ್ ಗಾಂಧಿ ಅವರು ರಾಷ್ಟ್ರ ಧ್ವಜ ನನ್ನ ಧರ್ಮ ಎಂದರು. ಈ ರೀತಿ ಬಿಜೆಪಿಯ ಯಾರಾದರೂ ಒಬ್ಬ ನಾಯಕ ಹೇಳಿದ್ದಾನಾ?

* ಇದು ಕಾಂಗ್ರೆಸ್ ಇತಿಹಾಸ ಹಾಗೂ ಸಂಸ್ಕೃತಿ.

* ಧಾರವಾಡದಲ್ಲಿ ರಾಷ್ಟ್ರ ಧ್ವಜ ತಯಾರು ಮಾಡುತ್ತಾರೆ. ಅಂತಹ ತ್ರಿವರ್ಣ ಧ್ವಜ ನಿಮ್ಮ ಮೈಮೇಲಿದೆ. ಇದನ್ನು ಬಿಟ್ಟುಕೊಡಬೇಡಿ.

* ಎನ್ ಎಸ್ ಯು ಐ ಸದಸ್ಯ ಎಂದಿಗೂ ಪಕ್ಷ ಬದಲಿಸುವುದಿಲ್ಲ. ಈ ದೇಶ, ರಾಜ್ಯಕ್ಕೆ ಒಳ್ಳೆಯದಾಗ ಬೇಕು ಎಂದರೆ ನೀವುಗಳು ಗಟ್ಟಿಯಾಗಬೇಕು.

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರು* ಮಾತನಾಡಿ

IMG 20210831 142052

ಜಾತ್ಯತೀತ ಮತ್ತು ಸಮ ಸಮಾಜ ನಿರ್ಮಾಣ ಸಿದ್ದಾಂತವೆ ಕಾಂಗ್ರೆಸ್ ಪಕ್ಷದ ತತ್ವ .

ಇಂದಿನ ಯುವಕರು ಇತಿಹಾಸ ,ಸಂವಿಧಾನವನ್ನು ಓದಬೇಕು .ಇತಿಹಾಸ ಅರಿತವನು ,ಇತಿಹಾಸ ಬರೆಯಬಲ್ಲನು .ಬಿ.ಜೆ.ಪಿ.ಪಕ್ಷದವರಿಗೆ ಇತಿಹಾಸ ಗೊತ್ತಿಲ್ಲ .ಪ್ರಧಾನಿ ನರೇಂದ್ರ ಮೋದಿರವರು ಮನ್ ಕೀ ಬಾತ್ ಸುಳ್ಳಿನ ಕಂತೆಯಾಗಿದೆ .ಪ್ರತಿ ವರ್ಷ ಎರಡು ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು 7ವರ್ಷದಲ್ಲಿ 14ಕೋಟಿ ಉದ್ಯೋಗ ಲಭಿಸಬೇಕಿತ್ತು ಅದರೆ 14ಸಾವಿರವು ಉದ್ಯೋಗ ಸೃಷ್ಟಿಯಾಗಿಲ್ಲ ಎಂದು ಹೇಳಿದರು .

 

*ಬಿ.ವಿ.ಶ್ರೀನಿವಾಸ್* ರವರು ಮಾತನಾಡಿ ಬಿ.ಜೆ.ಪಿ. ಪಕ್ಷದ ಆನ್ಯಾಯ ವಿರುದ್ದ ಹೋರಾಟ ಮಾಡಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರಾಣತ್ಯಾಗ ಮಾಡಲು ಸಿದ್ದ .
ಉದ್ಯೋಗವಿಲ್ಲ ಮತ್ತು ಆರ್ಥಿಕ ಕುಸಿತ ಮಹಿಳೆಯರಿಗೆ ರಕ್ಷಣೆ ಇಲ್ಲ .ಬಿ.ಜೆ.ಪಿ.ಸರ್ಕಾರದ ವಿರುದ್ದ ಎನ್.ಎಸ್.ಯು.ಐ.ಪ್ರತಿ ಜಿಲ್ಲೆಯಲ್ಲಿ ಹೋರಾಟ ಮಾಡಿ ಜನಜಾಗೃತಿ ಮೂಡಿಸಬೇಕು ಎಂದು ಹೇಳಿದರು.

IMG 20210831 125709

 

ನೂತನವಾಗಿ ರಾಜ್ಯಾಧ್ಯಕ್ಷರಾದ ಕೀರ್ತಿ ಗಣ ಆಶ* ರವರು ಮಾತನಾಡಿ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ,ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರ ನೇತೃತ್ವದಲ್ಲಿ ಎನ್.ಎಸ್.ಯು.ಐ.ವಿದ್ಯಾರ್ಥಿ ಸಂಘಟನೆ ಬಿ.ಜೆ.ಪಿ.ಪಕ್ಷದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ರಾಜ್ಯದ್ಯಂತ ಹೋರಾಟ ಮಾಡುತ್ತಿದೆ .ಯುವಕರೆ ದೇಶದ ಶಕ್ತಿ ,ರಾಜ್ಯದಲ್ಲಿರುವ ಯುವಕರನ್ನ ಸಂಘಟನೆ ಮಾಡುವ ಮೂಲಕ ನಮ್ಮ ಹೋರಾಟಕ್ಕೆ ಇನ್ನು ವೇಗ ಮುಟ್ಟಿಸಲಾಗುವುದು ಎಂದರು.