IMG 20210922 WA0046

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕ್ರೀಡಾಂಗಣ ನಿರ್ಮಿಸಿ….!

Genaral STATE

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕ್ರೀಡಾಂಗಣ ನಿರ್ಮಿಸಿ: ಬಂಡೆಪ್ಪ ಖಾಶೆಂಪುರ್

ಬೀದರ್ (ಸೆ.22): ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ವಿಶೇಷ ಯೋಜನೆಯಲ್ಲಿ ನನ್ನ ಕ್ಷೇತ್ರದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿಕೊಡಬೇಕೆಂದು ರೇಷ್ಮೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಕೆ.ಸಿ ನಾರಾಯಣಗೌಡರಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಕಲಾಪದಲ್ಲಿ ಪಾಲ್ಗೊಂಡು, ಪ್ರಶ್ನೋತ್ತರ ಅವಧಿಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಲ್ಲಿನ ಕ್ರೀಡಾಂಗಣಗಳಿಗೆ ಸಂಬಂಧಿಸಿದ ಪ್ರಶ್ನೆ ಕೇಳಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಿಂದ ಹೆಚ್ಚಿನ ಕ್ರೀಡಾಪಟುಗಳು ಬರಬೇಕು. ಆದರಿಂದ ನಾನು ಈ ಪ್ರಶ್ನೆ ಕೇಳಿದ್ದೇನೆ.

IMG 20210921 WA0032
ಸರ್ಕಾರದ ಉತ್ತರದಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿರುವ ಕ್ರೀಡಾಂಗಣದ ಮಾಹಿತಿ ನೀಡಿದ್ದಾರೆ. ಆ ಕ್ರೀಡಾಂಗಣ ವಿಶ್ವವಿದ್ಯಾಲಯದ ಆವರಣದಲ್ಲಿ ಇರುವುದರಿಂದ ಅದು ಅವರಿಗೆ ಮಾತ್ರ ಸೀಮಿತವಾಗಿದೆ. ಅಲ್ಲಿ ಹೊರಗಡೆಯವರು ಯಾರು ಕೂಡ ಹೋಗುವುದಿಲ್ಲ, ನನ್ನ ಕ್ಷೇತ್ರ ಸಂಪೂರ್ಣ ಗ್ರಾಮೀಣ ಭಾಗವಾಗಿದ್ದು, 110 ಹಳ್ಳಿಗಳನ್ನು ಒಳಗೊಂಡಿದೆ. ಕಳೆದ ವರ್ಷ ನಾನು ಕೆಕೆಆರ್ಡಿಬಿ ಬಜೆಟ್ ನಲ್ಲಿ ಏಳು ಪ್ರೌಢಶಾಲೆಗಳಿಗೆ ತಲಾ 14 ಲಕ್ಷ ರೂ.ಗಳಂತೆ ಒಂದು ಕೋಟಿ ರೂ. ಗಳಿಗಿಂತ ಅಧಿಕ ಅನುದಾನವನ್ನು ಕ್ರೀಡಾಂಗಣಗಳ ಅಭಿವೃದ್ಧಿಗೆ ನೀಡಿದ್ದೇನೆ.
ನನ್ನ ಕ್ಷೇತ್ರ ತೆಲಂಗಾಣ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು, ಇಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿಕೊಟ್ಟರೆ ಗ್ರಾಮೀಣ ಭಾಗದ ಮಕ್ಕಳಿಗೆ, ಕ್ರೀಡಾಪಟುಗಳಿಗೆ ದೊಡ್ಡ ಪ್ರಮಾಣದ ಶಕ್ತಿ ಸಿಗಲಿದೆ. ಕ್ರೀಡಾಂಗಣಗಳ ನಿರ್ಮಾಣಕ್ಕೆ ಸರ್ಕಾರದಿಂದ ಸ್ಥಳ ಒದಗಿಸಿಕೊಡುವ ಕೆಲಸವನ್ನು ನಾನು ಮಾಡುತ್ತೇನೆ. ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ವಿಶೇಷ ಯೋಜನೆಯಲ್ಲಿ ನನ್ನ ಕ್ಷೇತ್ರದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿಕೊಡಬೇಕೆಂದು ರೇಷ್ಮೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉತ್ತರ ನೀಡಿ ಮಾತನಾಡಿದ ರೇಷ್ಮೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ ನಾರಾಯಣಗೌಡ, ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜಾಗವನ್ನು ಒದಸಿಕೊಟ್ಟರೆ ನಾವು ಖೇಲೋ ಇಂಡಿಯಾಗೆ ಪ್ರಸ್ತಾವನೆ ಕಳುಹಿಸಿಕೊಡುತ್ತೇವೆ. ಸಿಎಸ್ಎಸ್, ಸಿಎಸ್ಆರ್ ಪಂಡ್ ನಲ್ಲಿ ಕ್ರೀಡಾಂಗಣಗಳನ್ನು ಅಭಿವೃದ್ಧಿ ಮಾಡಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಕ್ರೀಡಾ ತರಭೇತಿ ನೀಡುವ ಕೆಲಸ ಮಾಡುವುದು ಮುಖ್ಯಮಂತ್ರಿಗಳ ಇಚ್ಛೆಯಾಗಿದೆ.
ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಬೀದರ್ ದಕ್ಷಿಣ ಕ್ಷೇತ್ರದಲ್ಲಿ 25 ರಿಂದ 30 ಎಕರೆ ಜಾಗವನ್ನು ಒದಗಿಸಿಕೊಡುವುದಾದರೇ ಕ್ರೀಡಾಂಗಣ ನಿರ್ಮಾಣ ಮತ್ತು ಅಭಿವೃದ್ಧಿ ಪಡಿಸುವ ಕೆಲಸವನ್ನು ನಾವು ಮಾಡುತ್ತೇವೆ. ಈ ವಿಷಯವಾಗಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರೊಂದಿಗೆ ಸಭೆ ನಡೆಸುತ್ತೇನೆಂದು ಸಚಿವರು ತಿಳಿಸಿದರು.