ಸಿಲಿಕಾನ್ ಸಿಟಿ ಯಲ್ಲಿ ಸೈಟ್ ಬೇಕಾ… ಎಚ್ಚರ …ಎಚ್ಚರ….?
ಆನೇಕಲ್ :- ಎಲೆಕ್ಟಾನಿಕ್ ಸಿಟಿಗೆ ಹೊಂದಿಕೊಂಡಂತಿರುವ ಗ್ರಾಮ ಶಾಂತಿಪುರ ಇಲ್ಲಿ ನಾಯ್ಡು ಲೇಔಟ್ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಉದ್ಭವ ವಾಗಿದೆ. ಇಲ್ಲಿ ಪರಿಶಿಷ್ಟ ಜಾತಿ ಯವರ ಭೂಮಿಗಳನ್ನು ಕಬಳಿಸಿ ಲೇಔಟ್ ಮಾಡಲಾಗಿದೆ ಎಂಬ ವಿವಾದ ಸೃಷ್ಠಿ ಯಾಗಿದೆ.
ನಾಯ್ಡು ಲೇಔಟ್ ವಿವಾದ
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮಾಜಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಸುಮಾರು 6೦ ಎಕರೆ ಪ್ರದೇಶದಲ್ಲಿ ಸುಮಾರು 9೦೦ ಸೈಟ್ ಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಿದ್ದಾರೆ ಎಂದು ನಾಯ್ಡು ಲೇಔಟ್ ಸಂಘ ದ ಅಧ್ಯಕ್ಷರಾದ ಎನ್ ಇ ನಾಯ್ಡು ಹೇಳತ್ತಾರೆ. ಸರ್ವೇ ನಂಬರ್ 153 ಮತ್ತು 143 ರಲ್ಲಿ ಇರುವ ಸೈಟ್ ಗಳಲ್ಲಿ ನಿರ್ಮಿಸಿರುವ ಸೆಡ್, ಕಾಂಪೌಡ್ ಗಳನ್ನು ಆಟೋ ಗಣೇಶ ಮತ್ತು ನಂಜುಂಡಪ್ಪ ಅವರುಗಳು ಗೂಂಡಾಗಳನ್ನು ಕರೆದುಕೊಂಡು ಜಿಸಿಬಿ ಗಳ ಮೂಲಕ ದ್ವಂಸ ಮಾಡಿದ್ದಾರೆ ಎನ್ನುತ್ತಾರೆ.
ನಾಯ್ಡು ಲೇಔಟ್ ಭೂಪರಿವರ್ತನೆಯಾಗಿಲ್ಲ, ಲೇಔಟ್ ಪ್ಲಾನ್ ಮಾಡಿ ಸರ್ಕಾರಿ ಏಜನ್ಸಿಗಳ ಅನುಮತಿ ಪಡೆದಿಲ್ಲಾ ಎನ್ನುವುದನ್ನು ಸ್ವತಾ ಎನ್ ಇ ನಾಯ್ಡು ಒಪ್ಪಿ ಕೊಳ್ಳುತ್ತಾರೆ. ಹಸಿರುವಲಯದ ಭೂಮಿಗಳನ್ನು ಭೂ ಪರಿವರ್ತನೆ ಮಾಡಿಕೊಳ್ಳದೆ. ಅಕ್ರಮವಾಗಿ ಅರವತ್ತು ಎಕರೆ ಪ್ರದೇಶದಲ್ಲಿ ಈ ನಾಯ್ಡು ಲೇಔಟ್ ನಿರ್ಮಾಣ ವಾಗಿದೆ. ಇಲ್ಲಿನ ಮತ್ತೊಂದು ಪ್ರಮುಖ ವಿಷಯ ವೆಂದರೆ ಪರಿಶಿಷ್ಟ ಜಾತಿ ಯವರಿಗೆ ಸರ್ಕಾರ ದ ಗ್ರಾಂಟ್ ನಲ್ಲಿ ನೀಡುವ ಜಮೀನನ್ನು ಪಡೆದು ಲೇಔಟ್ ನಿರ್ಮಾಣ ಮಾಡಿದ್ದಾರೆ. ಸರ್ಕಾರ ಪರಿಶಿಷ್ಟ ಜಾತಿಯವರಿಗೆ ನೀಡುವ ಜಮೀನು ಪರಭಾರೆ ಮಾಡುವ ಅಧಿಕಾರ ಸ್ವತ ಜಮೀನು ಮಾಲಿಕರಿಗೆ ಇರುವುದಿಲ್ಲ. ಅವರು ಮಾರಾಟ ಮಾಡಬೇಕಾದರೆ ಸರ್ಕಾರದ ಅನುಮತಿ ಪಡೆದು ಮಾರಾಟ ಮಾಡಬೇಕು. ಎಲ್ಲಾ ನಿಯಮ ಉಲ್ಲಂಘಿಸಿ ಶಾಂತಿಪುರದ ನಾಯ್ಡು ಲೇಔಟ್ ನಿರ್ಮಾಣ ಮಾಡಲಾಗಿದೆ.
ದಲಿತ ಮಹಿಳೆಯ ಮೇಲೆ ದೌರ್ಜನ್ಯ ಆರೋಪ
ಶಾಂತಿ ಪುರದಲ್ಲಿ ನಿರ್ಮಾಣವಾಗಿರುವ ನಾಯ್ಡು ಲೇಔಟ್ ನ 143 ಸರ್ವೇ ನಂಬರ್ ನ ಜಮೀನು ಪರಿಶಿಷ್ಟ ಜಾತಿ ಗೆ ಸೇರಿದ ಗುರಪ್ಪ ಭೋವಿಯವರಿಗೆ ಸರ್ಕಾರ 1959-60 ರಲ್ಲಿ ಮಂಜೂರೂ ಮಾಡಿರುತ್ತದೆ. ಈ ಜಮೀನನ್ನು ಸರ್ಕಾರದ ಅನುಮತಿ ಪಡೆಯದೆ ಕಟ್ಟಾ ಸುಬ್ರಮಣ್ಯನಾಯ್ಡು ಅವರು ತಮ್ಮ ನಾಯ್ಡು ಲೇಔಟ್ ಗೇ ಸೇರಿಸಿಕೊಂಡು ಬಡಾವಣೆ ನಿರ್ಮಾಣ ಮಾಡುತ್ತಾರೆ.
ಗುರಪ್ಪ ಭೋವಿ ವಂಶಸ್ಥರಾದ ಕಾಂತಮ್ಮ ಎ ಸಿ ನ್ಯಾಯಾಲಯದಲ್ಲಿ 143 ಸರ್ವೇ ನಂಬರ್ ಜಮೀನು ನಮಗೆ ಸೇರಿದ್ದು ಎಂದು ಕೇಸ್ ಹಾಕುತ್ತಾರೆ ಕೇಸ್ ನಂಬರ್ KSC-ST (A) NO 04/2019/20 ಎಸಿ ಯವರು ವಿಚಾರಣೆ ನಡೆಸಿ 23/೦9/2021 ರಂದು ಅಂತಿಮ ತೀರ್ಪನ್ನು ನೀಡುತ್ತಾರೆ. ತೀರ್ಪಿನಂತೆ 143 ಸರ್ವೇ ನಂಬರ್ ಕಾಂತಮ್ಮ ಅವರಿಗೆ ಸೇರುತ್ತದೆ. ಅರ್ ಟಿ ಸಿ, ( ಪಹಣಿ), ಮ್ಯುಟೇಶನ್ ನಲ್ಲಿ ಕಾಂತಮ್ಮ ನವರ ಹೆಸರಿದೆ
ಕಾಂತಮ್ಮ ಕುಟುಂಬಸ್ಥರು 143 ಸರವೇ ನಂಬರ್ ಜಮೀನಿಗೆ ಪ್ರವೇಶಿಸಿ ಸ್ವಾಧೀನಕ್ಕೆ ಮುಂದಾಗುತ್ತಾರೆ ಆಗ ನಾಯ್ಡು ಲೇಔಟ್ ನಲ್ಲಿ ನಿವೇಶನ ಪಡೆದ ಎನ್ ಇ ನಾಯ್ಡು, ಸದಾಶಿವಯ್ಯ ಸೇರಿದಂತೆ ಕೆಲವರು ಮತ್ತು ಕಾಂತಮ್ಮ ಹಾಗು ಅವರ ಮಗ ಆಟೋ ಗಣೇಶ್ ನಡುವೆ ಜಗಳ ನಡೆದಿದೆ ಎನ್ನುತ್ತಿದ್ದಾರೆ.
ನಾಯ್ಡು ಲೇಔಟ್ ನಮ್ಮ ಸ್ವತ್ತಿ ನಲ್ಲಿ ಅತಿಕ್ರಮವಾಗಿ ಪ್ರವೇಶಿಸಿ ನಮ್ಮ ಮೇಲೆ ಕಾಂತಮ್ಮ ನವರ ಮಗ ಗಣೇಶ್ ಹಲ್ಲೆ ಮಾಡಿದ್ದಾನೆ ಎಂದು ಸದಾಶಿವಯ್ಯನವರು ಪರಪ್ಪನ ಅಗ್ರಹಾರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಎಫ್ ಐ ಆರ್ ಆಗುತ್ತದೆ.
ಕಾಂತಮ್ಮ ನವರು ಸಾದಶಿವಯ್ಯ,ಬಿ ಸಿ ದಿನಕರ್ ರೆಡ್ಡಿ ನಿರಂಜನ್ ದಾಸ್ ಸೇರಿದಂತೆ ಹಲವರು ನನ್ನ ಮೇಲೆ ದೌರ್ಜನ್ಯ ಮಾಡಿದ್ದಾರೆ. ಜೊತೆಗೆ ಜಾತಿ ನಿಂದನೆ ಸಹ ಮಾಡಿದ್ದಾರೆ ಎಂಬ ಆರೋಪವನ್ನು ಮಾಡುತ್ತಾರೆ. ಪರಪ್ಪನ ಅಗ್ರಹಾರ ಪೋಲೀಸ್ ಠಾಣೆ ಗೆ ಹೋಗಿ ದೂರು ನೀಡಲು ಹೋದರೆ ದೂರು ಪಡೆಯದೆ ಸತಾಯಿಸಿ ಕೊನೆಗೆ ಎರಡು ದಿನದ ನಂತರ ಎನ್ ಸಿ ಆರ್ ( ಸ್ವೀಕೃತಿ ಪತ್ರ) ನೀಡಿ ಇದು ಸಿವಿಲ್ ಕೇಸ್ ಎನ್ನುತ್ತಾರೆ. ದಲಿತ ಮಹಿಳೆ ಗೆ ದೌರ್ಜನ್ಯ ವಾದರು ರಕ್ಷಣೆ ಗೆ ಬರಬೇಕಾದ ಆರಕ್ಷಕರೆ ಬರುವುದಿಲ್ಲ ನಾನು ಅವರ ವಿರುದ್ದ ನ್ಯಾಯಾಲಯದ ಮೊರೆ ಹೋಗುತ್ತೇನೆ ಎನ್ನುತ್ತಾರೆ ಕಾಂತಮ್ಮ .
ಸದಾಶಿವಯ್ಯನವರ ಸ್ವತ್ತೇ ಇಲ್ಲ ಆದರೆ ಎಫ್ ಐ ಆರ್ ಆಗುತ್ತದೆ…..?
ಪರಪ್ಪನ ಅಗ್ರಹಾರ ಪೋಲಿಸರ ಸದಾಶಿವಯ್ಯ ನವರ ದೂರಿನ ಅನ್ವಯ ದಾಖಲಾದ ಎಫ್ ಐ ಆರ್ ನಲ್ಲಿ ಉಲ್ಲೇಖ ವಾಗಿರುವಂತೆ ಆನೇಕಲ್ ತಾಲ್ಲೂಕು, ಸರ್ಜಾಪುರ ಹೋಬಳಿ, ಚಿಕ್ಕ ನಾಗಮಂಗಲ ಗ್ರಾಮದ ವಿಪಿ ಖಾತಾ ನಂ 467,ಹೌಸ್ ಲೀಸ್ಟ್ ನಂಬರ್ 143,ಸೈಟ್ ನಂಬರ್ 193 ರಲ್ಲಿರುವ 6೦* 4೦ ಸ್ವತ್ತು ಇದೆ ಎಂದು ನಮೂದಾಗಿದೆ.
ಶಾಂತಿ ಪುರ ಗ್ರಾಮ ಪಂಚಾಯತಿ ದಾಖಲೆಗಳ ಪ್ರಕಾರ ಚಿಕ್ಕ ನಾಗಮಂಗಲ ಗ್ರಾಮದ ಡಿಮ್ಯಾಂಡ್ ರಿಜಿಸ್ಟರ್ ನಲ್ಲಿರುವಂತೆ ಕ್ರಮ ಸಂಖ್ಯೆ 467 ಖಾತೆ ಜೆ ಎಲ್ ಶೋಭ ಎಂದು, ಶಾಂತಿ ಪುರ ಡಿಮ್ಯಾಂಡ್ ರಿಜಿಸ್ಟಾರ್ ನಲ್ಲಿರುವಂತೆ 467 ಖಾತೆ ಸಿಂಹಾದ್ರಿ ವೆಂಕಟೇಶ್ ರವರ ಹೆಸರಿನಲ್ಲಿದೆ.
ಸದಾಶಿವಯ್ಯನವರ ಸ್ವತ್ತೇ ಇಲ್ಲ ಆದರೇ ಎಫ್ ಐ ಆರ್ ಆಗುತ್ತೆ ಈ ವಿಷಯ ಕೇಳಲು ಸದಾಶಿವಯ್ಯ ನರಿಗೆ ಪೋನ್ ಮಾಡಿದಾದ ಅವರು ಹೇಳಿದ್ದು ಹೀಗೆ… ಎಫ್ ಐ ಆರ್ ನಲ್ಲಿ ತಪ್ಪಾಗಿದೆ ಅದನ್ನು ಸರಪಡಿಸಿದರೆ ಆಯ್ತು ಎನ್ನುತ್ತಾರೆ. ಒಮ್ಮೆ ಎಫ್ ಐ ಆರ್ ಆದ ಮೇಲೆ ಹೇಗೆ ತಿದ್ದುತ್ತಾರೆ. ಸದಾಶಿವಯ್ಯನವರು ಆಡಳಿತ ಪಕ್ಷದ ಕಾರ್ಯಕರ್ತರಂತೆ ಆದ್ದರಿಂದ ಇವರ ದೂರಿನ ಎಫ್ ಐ ಆರ್ ತಿದ್ದಲು ಅವಕಾಶ ವಿರಬಹುದೇನೋ..?
ನಾಯ್ಡು ಲೇಔಟ್ ಮೇಲ್ನೋಟಕ್ಕೆ ಅಕ್ರಮ ಬಡಾವಣೆ ಯಾಗಿದೆ. ಕಾನೂನನ್ನು ಉಲ್ಲಂಘಿಸಿ ಅಕ್ರಮ ವಾಗಿ ಬಡಾವಣೆ ನಿರ್ಮಾಣ ಮಾಡಿದ ಆಸಾಮಿಗಳು, ರಿಜಿಸ್ಟಾರ್ ಮಾಡಿದ ಅಧಿಕಾರಿಗಳು, ಅಕ್ರಮ ವಾಗಿ ಖಾತೆ ಮಾಡಿಕೊಟ್ಟ ಪಿ ಡಿ ಒ ಗಳ ಮೇಲೆ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿ ತಪ್ಪಿತಸ್ತರ ಮೇಲೆ ತನಿಖೆ ಮಾಡಬೇಕು.
ಸಾಮಾನ್ಯ ಜನರ ನೆರವಿಗೆ ಸರ್ಕಾರ ಬರಬೇಕು
ಬೆಂಗಳೂರಿನಲ್ಲಿ ಒಂದು ಸೈಟ್ ತಗೊಬೇಕು, ಮನೆ ಕಟ್ಟಬೇಕು ಎಂಬ ಕನಸು ಪ್ರತಿಯೊಬ್ಬರದ್ದು ಅದರಲ್ಲು ಮದ್ಯಮ ವರ್ಗದ ಜನರಲ್ಲಿ ಹೆಚ್ಚಾಗಿ ಇರುತ್ತದೆ. ಜನರು ಹೊಟ್ಟೆ-ಬಟ್ಟೆ ಕಟ್ಟಿ ರೂಪಾಯಿ-ರೂಪಾಯಿ ಕಲೆ ಹಾಕಿ ಇಂತಹ ಅಕ್ರಮ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದ್ದಾರೆ. ಪರಿಶಿಷ್ಟ ಜಾತಿ ಯವರಿಗೆ ಸರ್ಕಾರ ನೀಡುವ ಜಮೀನನ್ನು ಸರ್ಕಾರದ ನಿಯಮಾವಳಿಗಳನ್ನು ಉಲಂಘಿಸಿ ಜಮೀನು ಖರೀದಿಸಿ ಲೇಔಟ್ ಮಾಡಿ ಸಾಮಾನ್ಯ ಮಧ್ಯಮ ವರ್ಗದವರಿಗೆ ಮಾರಿ ಅವರ ಬದುಕಿ ಜೊತೆ ಚಲ್ಲಾಟ ವಾಡುತ್ತಿವೆ ಭೂಮಾಫಿಯಾಗಳು….
ನಿವೇಶದಾರರ ನೆರವಿಗೆ ಸರ್ಕಾರ ಬಂತು ಸಕ್ರಮ ಮಾಡಿ ಕೊಡುವುದರ ಜೊತೆಗೆ ಈ ರೀತಿ ಜನರಿಗೆ ವಂಚಿಸುತ್ತಿರು ಲೇ ಔಟ್ ಸೃಷ್ಠಿ ಕರ್ತರು ಇದ್ದಕ್ಕೆ ಸಹಕರಿಸುತ್ತಿರುವ ಅಧಿಕಾರಿ ಗಳ ಮೇಲೆ ಕಠಿಣ ಶಿಕ್ಷೆ ಮಾಡುವ ಜವಬ್ದಾರಿ ಸರ್ಕಾರದ ಮೇಲಿದೆ. ಗಾದೆ ಮಾತಿನಂತೆ ” ಬೇಲಿ ಎದ್ದು ಹೊಲ ಮೇಯಿದರೆ ರಕ್ಷಿಸವ ವ್ಯವಸ್ಥೆಯಲ್ಲಿ ” ನಾವು ಬದುಕುತ್ತಿಲ್ಲ ಈ ವ್ಯವಸ್ಥೆ ನಿರ್ಮಾಣಕ್ಕೆ ನಾವು ಹೊಣೆಯಲ್ಲವೆ…..?