IMG 20220328 WA0012

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರ ಪದಗ್ರಹಣ….!

POLATICAL STATE

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರ ಪದಗ್ರಹಣ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್:

ದೇಶ ಇಂದು ವಿವಿಧ ರೀತಿಯಲ್ಲಿ ಕವಲು ಹಾದಿಯಲ್ಲಿದೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ.

ಬಿಜೆಪಿಯವರದ್ದು ನಾವು ಹಿಂದೂಗಳು ನಾವು ಮುಂದೆ ಎಂಬ ನೀತಿ, ಆದರೆ ನಮ್ಮದು ನಾವು ಹಿಂದೂ, ಮುಸಲ್ಮಾನರು, ಸಿಖ್ಖರು, ಕ್ರೈಸ್ತರು, ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟರು, ಹಿಂದುಳಿದವರು ಎಲ್ಲರೂ ಒಂದು ಎಂಬ ನೀತಿ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ.

ನಾನು ಬಿಜೆಪಿ ಸ್ನೇಹಿತರಿಗೆ ಒಂದು ವಿಚಾರ ಹೇಳಲು ಬಯಸುತ್ತೇನೆ. ಇಲ್ಲಿ ಎಲ್ಲ ಧರ್ಮದ ನಾಯಕರು ಇದ್ದಾರೆ. ಇದು ಕಾಂಗ್ರೆಸ್ ಪಕ್ಷದ ಶಕ್ತಿ. ಈ ಸಿದ್ಧಾಂತವನ್ನು ನಾವು ತೆಗೆದುಕೊಂಡು ಹೋಗುತ್ತಿದ್ದೇವೆ. ರಾಜ್ಯದಲ್ಲಿ ನಡೆದ ವಿವಿಧ ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ಸರ್ಕಾರ ಜಾತಿ, ಧರ್ಮದ ಮೇಲೆ ಒಡೆಯುವ ಪ್ರಯತ್ನ ನಡೆಯುತ್ತಿದೆ.

ಮುಖ್ಯಮಂತ್ರಿ ಜಿಲ್ಲೆ ಹಾನಗಲ್, ಮಸ್ಕಿ, ವಿಧಾನ ಪರಿಷತ್ ನಲ್ಲಿ 11 ಕ್ಷೇತ್ರಗಳಲ್ಲಿ ಗೆಲುವು, ಸಂಸತ್ ಉಪಚುನಾವಣೆಯಲ್ಲಿ ಕೇವಲ 3 ಸಾವಿರ ಮತಗಳಲ್ಲಿ ಸೋತಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗಿಂತ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ರಾಜ್ಯದ ಜನರ ತೀರ್ಪು ಏನು ಎಂದು ಪ್ರಕಟವಾಗಿದೆ.

ಉತ್ತರ ಭಾರತದ ಐದು ರಾಜ್ಯಗಳ ಚುನಾವಣೆ ಪೈಕಿ ಪಂಜಾಬ್ ನಲ್ಲಿ ನಾವು ಸೋತಿದ್ದೇವೆ. ನಾವು ತೀರ್ಪನ್ನು ಒಪ್ಪುತ್ತೇವೆ. ಗೋವಾದಲ್ಲಿ ನಮ್ಮ ಬಳಿ ಕೇವಲ 2 ಶಾಸಕರಿದ್ದರು, ಇಂದು 12 ಶಾಸಕರಿದ್ದಾರೆ. ಪಂಜಾಬ್ ನಲ್ಲಿ ಆಂತರಿಕ ವಿಚಾರದಿಂದ ಸೋತಿದ್ದೇವೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯವರ ಸಂಖ್ಯೆ ಕುಸಿದಿದೆ. ಇಂದು ಜಾತಿ, ಧರ್ಮದ ವಿಚಾರ ಮಾಡುತ್ತಿದ್ದೀರಿ.

ಮಾರ್ಚ್ 31ರಂದು ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಮುಕ್ತಾಯಗೊಳ್ಳುತ್ತಿದ್ದು, ಸದಸ್ಯತ್ವ ಪಕ್ಷ ಆಧಾರಸ್ತಂಭ. ಹೀಗಾಗಿ ನಾನು ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.

ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯನ್ನು ನಿಗದಿ ಮಾಡಿದ್ದಾರೆ. ನಿವೆಲ್ಲರೂ ಸೇರಿ 45 ಲಕ್ಷ ಸದಸ್ಯರನ್ನು ಮಾಡಿದ್ದು, ರಾಷ್ಟ್ರದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದೀರಿ. ಇದಕ್ಕೆ ನಾನು ಕರಾಣನಲ್ಲ, ನೀವು ಕಾರಣ. ನಿಮಗೆಲ್ಲ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ.

ಈ ಸದಸ್ಯತ್ವದ ಶಕ್ತಿ ಏನು ಎಂದು ಇನ್ನೊಮ್ಮೆ ತಿಳಿಸುತ್ತೇನೆ. ನಮ್ಮ ಆಚಾರ ವಿಚಾರ ಪ್ರಚಾರ ಮಾಡುವವರಿಗೆ ಇದು ಶಕ್ತಿ ತುಂಬಿದಂತೆ. ಇಲ್ಲಿ ಇಕ್ಬಾಲ್ ಅನ್ಸಾರಿ ಅವರಿದ್ದಾರೆ. ಅವರ ಜಿಲ್ಲೆಯಲ್ಲಿ ಜನ ಕರೆ ಮಾಡಿ ಈ ಸರ್ಕಾರ ಸಾಕು, ಈ ಬೆಲೆ ಏರಿಕೆ, ಬೆಳೆಗಳಿಗೆ ಬೆಂಬಲ ಇಲ್ಲ ಹೀಗಾಗಿ ಕಾಂಗ್ರೆಸ್ ಸದಸ್ಯರಾಗಿದ್ದೇವೆ ಎಂದು ಹೇಳುತ್ತಿದ್ದಾರೆ.

ಸೋನಿಯಾ ಗಾಂಧಿ ಅವರು ಬೆಲೆ ಏರಿಕೆ ವಿರುದ್ಧ 31ರಂದು ಪ್ರತಿಭಟನೆಗೆ ಕರೆ ನೀಡಿದ್ದಾರೆ. ನೀವೆಲ್ಲರೂ ನಿಮ್ಮ ಮನೆ ಬಾಗಿಲಲ್ಲಿ ಗ್ಯಾಸ್, ವಾಹನ ನಿಲ್ಲಿಸಿ ಅದಕ್ಕೆ ಹೂವಿಟ್ಟು ಜಾಗಟೆ ಬಾರಿಸಿ ಪ್ರತಿಭಟನೆ ಮಾಡಿ.

ನಾವು ಕೋವಿಡ್ ಸಮಯದಲ್ಲಿ 100 ನಾಟೌಟ್, ರೈತರ ಪರ ಹೋರಾಟ ಮಾಡಿದ್ದಕ್ಕೆ ನಮ್ಮ ಮೇಲೆ ಕೇಸ್ ಹಾಕಿದ್ದಾರೆ. ಅವರ ನಾಯಕರ ಮೇಲೆ ಕೇಸ್ ಹಾಕಿಲ್ಲ. ಬೊಮ್ಮಾಯಿ ಅವರೇ ಕೇಸ್ ಗಳಿಗೆ ಕಾಂಗ್ರೆಸ್ ನಾಯಕರು ಹೇದರುವುದಿಲ್ಲ. ನಿಮ್ಮನ್ನು ಯಾವ ರೀತಿ ತೆಗೆದುಕೊಂಡು ಹೋಗಬೇಕು ಎಂದು ನಮಗೂ ಗೊತ್ತಿದೆ. ದೇಶದ ರೈತರು, ಬಡವರು, ಸಾಮಾಜಿಕ ನ್ಯಾಯ, ಕುಡಿಯುವ ನೀರಿಗೆ ಹೋರಾಟ ಮಾಡಿದ್ದೇವೆ.

ಈಗ ಭಗವದ್ಗೀತೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸಬೇಕು ಎಂಬ ವಿಚಾರ ಎತ್ತಿದ್ದಾರೆ. ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಇನ್ನು ಹುಟ್ಟೇ ಇರಲಿಲ್ಲ. ಅವರು ಕೇವಲ 2 ರೂ.ಗೆ ಭಗವದ್ಗೀತೆ ಪುಸ್ತಕ ಹಂಚಿದ್ದರು. ರಾಜೀವ್ ಗಾಂಧಿ ಅವರು ದೇಶದ ಪ್ರಧಾನಿ ಆಗಿದ್ದಾಗ ದೂರದರ್ಶನದಲ್ಲಿ ಪ್ರತಿ ಭಾನುವಾರ ರಾಮಾಯಣ, ಮಹಾಭಾರತ, ಹನುಮಂತನ ಕಥೆಗಳನ್ನು ಸಾರುವ ಧಾರಾವಾಹಿಗಳನ್ನು ಪ್ರಸಾರ ಮಾಡಿದ್ದರು. ನಮ್ಮ ದೇಶದ ಸಂಸ್ಕೃತಿ ತೋರಿಸಿದ್ದರು. ಇದೆಲ್ಲವನ್ನು ನೀವು ತೋರಿಸಿದ್ದಿರೋ, ರಾಜೀವ್ ಗಾಂಧಿ ಅವರು ತೋರಿಸಿದ್ದರೋ?

ನಾನಿಲ್ಲಿ ಪಠ್ಯ ಪುಸ್ತಕ ತಂದಿದ್ದೇನೆ. ಇವುಗಳಲ್ಲಿ ರಾಮಾಯಣ, ಭಗವದ್ಗೀತೆ ಅಂಶಗಳು ಇವೆಯಲ್ಲ. ನಾನು ಶಾಲೆಯಲ್ಲಿದ್ದಾಗಲೇ ಭಗವದ್ಗೀತೆ ಶ್ಲೋಕ ಕಲಿತಿದ್ದೆ.
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||

ಇದನ್ನು ನೀವು ಕಲಿಸಿದ್ದಿರಾ? ಕಾಂಗ್ರೆಸ್ ನವರು ಪಠ್ಯಪುಸ್ತಕದಲ್ಲಿ ಸೇರಿಸಿದ್ದ ಅಂಶ ಹಾಗೂ ರಾಜೀವ್ ಗಾಂಧಿ ಅವರು ತೋರಿಸಿದ್ದ ಧಾರಾವಾಹಿಗಳಿಂದ ಚಿಕ್ಕಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಕಲಿಸಿತ್ತು.

IMG 20220328 WA0009

ನಾವೆಲ್ಲರೂ ಹಿಂದೂಗಳಲ್ಲವೇ? ಈ ರಾಷ್ಟ್ರಧ್ವಜ ನಮ್ಮ ಧರ್ಮ ಎಂದು ರಾಹುಲ್ ಗಾಂಧಿ ಅವರು ಹೇಳಿದರು. ನಮ್ಮ ಪಾಲಿಗೆ ಭಗವದ್ಗೀತೆ, ಕುರಾನ್, ಬೈಬಲ್ ಎಲ್ಲವೂ ನಮ್ಮ ಸಂವಿಧಾನ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ. ಇದನ್ನು ರಕ್ಷಣೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಇತಿಹಾಸ, ಚರಿತ್ರೆ, ನಾಯಕತ್ವ ಇದೆ. ಕಾಂಗ್ರೆಸ್ ಪಕ್ಷ ಅಧಿಕಾರದ ಬಗ್ಗೆ ಚಿಂತೆ ಮಾಡುತ್ತಿಲ್ಲ.

ನಮ್ಮ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆಗಿದ್ದಾಗ ಪ್ರಧಾನಮಂತ್ರಿಯಾಗುವಂತೆ ಅಹ್ವಾನ ನೀಡಲಿಲ್ಲವೇ? ಆಗ ಅವರು ದೇಶಕ್ಕೆ ಒಬ್ಬ ಆರ್ಥಿಕ ತಜ್ಞನ ಅಗತ್ಯವಿದೆ ಎಂದು ತಮ್ಮ ಪಾಲಿಗೆ ಬಂದ ಅಧಿಕಾರವನ್ನು ಮನಮೋಹನ್ ಸಿಂಗ್ ಅವರಿಗೆ ನೀಡಲಿಲ್ಲವೇ? ಅವರನ್ನು 10 ವರ್ಷ ಪ್ರಧಾನಿ ಮಾಡಿದರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕೆ ಪ್ರಾಣ ತ್ಯಾಗ ಮಾಡಿದರು. ಸೋನಿಯಾಗಾಂಧಿ ಅವರು ಈ ದೇಶಕ್ಕಾಗಿ ಅಧಿಕಾರ ತ್ಯಾಗ ಮಾಡಿದರು.

ಇಂದು ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಕೇಳುತ್ತೀರಿ. ಈಗ ನೂತನ ಶಿಕ್ಷಣ ನೀತಿ ಜಾರಿಗೆ ತರುತ್ತಿದ್ದಾರೆ. ಇದು ನಾಗ್ಪುರ ಶಿಕ್ಷಣ ನೀತಿ. ಈಗಿರುವ ಶಿಕ್ಷಣ ನೀತಿಯಲ್ಲಿ ವಿದ್ಯಾಭ್ಯಾಸ ಮಾಡಿ ಎಷ್ಟು ಜನ ವೈದ್ಯರು, ಇಂಜಿನಿಯರ್ ಗಳಾಗಿದ್ದಾರೆ. ರಾಜ್ಯದಲ್ಲಿ 63 ಮೆಡಿಕಲ್ ಕಾಲೇಜುಗಳಿವೆ. 240 ಇಂಜಿನಿಯರ್ ಕಾಲೇಜು ಗಳಿವೆ. ಬೆಂಗಳೂರು ಸಿಲಿಕಾನ್ ಸಿಟಿ ಮಾಡಿದ್ದೇವೆ. ನಾವ್ಯಾರೂ ವಿದ್ಯಾವಂತ, ಬುದ್ಧಿವಂತರಲ್ಲವೇ? ಈ ದೇಶ ರಾಜ್ಯದಿಂದ ಪ್ರಪಂಚಕ್ಕೆ ಮಾನವಸಂಪನ್ಮೂಲ ಕೊಟ್ಟಿಲ್ಲವೇ?

ಅಟಲ್ ಬಿಹಾರ ವಾಜಪೇಯಿ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದಾಗ ಒಂದು ಮಾತು ಹೇಳಿದ್ದರು. ಒಂದು ಕಾಲವಿತ್ತು ವಿಶ್ವದ ಅನೇಕ ನಾಯಕರು ಮೊದಲು ದೆಹಲಿಗೆ ಹೋಗಿ, ಅಲ್ಲಿಂದ ಭಾರತದ ಬೇರೆ ಪ್ರದೇಶಗಳಿಗೆ ಹೋಗುತ್ತಿದ್ದರು. ಆದರೆ ಈಗ ಮೊದಲು ಬೆಂಗಳೂರಿಗೆ ಬಂದು ನಂತರ ದೆಹಲಿಗೆ ಹೋಗುತ್ತಾರೆ ಎಂದು ಹೇಳಿದ್ದರು.

ಇಂದು ನೀವು ಮಾಡುತ್ತಿರುವ ಕೋಮು ಗಲಭೆಯಿಂದ ರಾಜ್ಯಕ್ಕೆ ಯಾವುದೇ ಕೈಗಾರಿಕೆಗಳಿಗೆ ಬಂಡವಾಳ ಹೂಡಲು ಬರುವುದಿಲ್ಲ. ಬೆಂಗಳೂರನ್ನು ಕಟ್ಟಿದವರು ಯಾರು? ನೀವು ಕಟ್ಟಿದ್ದರಾ?

ನಿಮ್ಮಲ್ಲಿ ವಿಶ್ವಾಸ ಇರಲಿ. ಪಂಚರಾಜ್ಯ ಚುನಾವಣೆಯಲ್ಲಿ ಹಿನ್ನಡೆ ಆಯ್ತು ಎಂದು ಆತ್ಮಸ್ಥೈರ್ಯ ಕಳೆದುಕೊಳ್ಳುವುದು ಬೇಡ. ನಾವೆಲ್ಲ ಕಾಂಗ್ರೆಸ್ ಕಾರ್ಯಕರ್ತರು. ನಾವೆಲ್ಲರೂ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದೇವೆ. ನಮಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ನಾಯಕತ್ವ ಇದೆ. ನಾವು ಹಳ್ಳಿ ಹಳ್ಳಿಗೆ ನಮ್ಮ ಆಚಾರ ವಿಚಾರವನ್ನು ತೆಗೆದುಕೊಂಡು ಹೋಗಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ.

ಕಿತ್ತೂರು ಕರ್ನಾಟಕದಲ್ಲಿ ಒಂದು ಕಾರ್ಯಕ್ರಮ ರೂಪಿಸುವಂತೆ ಹೆಚ್.ಕೆ ಪಾಟೀಲ್, ಎಂ.ಬಿ ಪಾಟೀಲ್ ಹಾಗೂ ಸತೀಶ್ ಜಾರಕಿಹೊಳಿ ಅವರಿಗೆ ಹೇಳಿದ್ದೇನೆ. ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಕಾರ್ಯಕ್ರಮ. ಮಲೆನಾಡು ಹಾಗೂ ಕರಾವಳಿ ಕರ್ನಾಟಕ ಹಾಗೂ ಬಯಲು ಸೀಮೆ ಕರ್ನಾಟಕದಲ್ಲೂ ಹೋರಾಟ ಮಾಡೋಣ. ನಾವು ಕುಡಿಯುವ ನೀರು, ರೈತನಿಗಾಗಿ ಹೋರಾಟ ಮಾಡಲು ನಮ್ಮ ನೀರು ನಮ್ಮ ಹಕ್ಕು ಎಂದು ಹೆಜ್ಜೆ ಹಾಕಿದ್ದೇವೆ. ನಿಮ್ಮೆಲ್ಲರಿಗೂ ಪಕ್ಷದ ಪರವಾಗಿ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ.

ಇಂದು ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಕಾಂಗ್ರೆಸ್ ಸದಸ್ಯರಾಗುವುದೇ ದೊಡ್ಡ ಭಾಗ್ಯ. ಭ್ರಷ್ಟ ಸರ್ಕಾರದ ಬಗ್ಗೆ ಗಂಟೆಗಟ್ಟಲೇ ಮಾತನಾಡಬಹುದು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಮನವರು ಏಪ್ರಿಲ್ ತಿಂಗಳಿಂದ ಹೋರಾಟ ಮಾಡುವುದಾಗಿ ಘೋಷಿಸಿದ್ದಾರೆ. ಕೆಂಪಣ್ಣನವರೇ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ನಿಮಗೆ ನಾವು ಬಲ ತುಂಬುತ್ತೆವೆ ಎಂದು ಹೇಳಲು ಬಯಸುತ್ತೇನೆ.

2 ಲಕ್ಷ ಗುತ್ತಿಗೆದಾರರು ಇರುವ ಸಂಘ. ಮಾಧ್ಯಮದಲ್ಲಿ ಒಂದು ವರದಿ ಬಂತು, ಪೊಲೀಸ್ ಇಲಾಖೆಯಲ್ಲಿ ಒಂದೊಂದು ಹುದ್ದೆಗೆ ಒಂದೊಂದು ದರ ನಿಗದಿ ಮಾಡಿದ್ದಾರೆ. ನಿಮಗೆ ಮಾನ ಮಾರ್ಯಾದೆ ಬೇಡವೇ? ಈ ಆರೋಪ ಮಾಡುತ್ತಿರುವುದು ನಾವಲ್ಲ. ಮಾಧ್ಯಮಗಳು ನಮ್ಮ ಬಂಡವಾಳವನ್ನು ಬಯಲು ಮಾಡಿ ನಿಮ್ಮನ್ನು ಬೆತ್ತಲೆ ಮಾಡುತ್ತಿವೆ.

ಈ ಎಲ್ಲ ವಿಚಾರವನ್ನು ನೀವು ಮನೆ ಮನೆಗೆ ತೆಗೆದುಕೊಂಡು ಹೋಗಬೇಕು. ದಿನನಿತ್ಯ ಬೆಲೆ ಏರಿಕೆ ಮಾಡಿ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದ್ದಾರೆ.

ಕೋವಿಡ್ ಸಮಯದಲ್ಲಿ ನಾವು ಯಾರೂ ಮನಯಲ್ಲಿ ಕೂರಲಿಲ್ಲ. ಕೂಲಿಕಾರ್ಮಿಕರನ್ನು ಅವರ ಮನೆಗಳಿಗೆ ಕಳುಹಿಸಲು ಮೂರುಪಟ್ಟು ದರ ತೆಗೆದುಕೊಳ್ಳು ಮುಂದಾದರು. ನಾವು ಚೆಕ್ ಕೊಟ್ಟ ಮೇಲೆ ಅವರನ್ನು ಉಚಿತವಾಗಿ ಕಳುಹಿಸಲಾಯಿತು. ಆಕ್ಸಿಜನ್ ಇಲ್ಲದೆ ಜನ ಸತ್ತಾಗ ಅವರ ಮನೆಗೆ ಒಬ್ಬ ಮಂತ್ರಿ ಹೋಗಿ ಭೇಟಿ ಮಾಡಲಿಲ್ಲ. ಕೋವಿಡ್ ನಿಂದ 4 ಲಕ್ಷ ಜನ ಸತ್ತಿದ್ದು ಕೇವಲ 50 ಸಾವಿರ ಜನರಿಗೂ ಪರಿಹಾರ ಕೊಡಲು ಸಾಧ್ಯವಾಗಿಲ್ಲ. ಈ ಸರ್ಕಾರ ಕಿತ್ತೊಗೆಯಲು ನೀವು ಸಂಕಲ್ಪ ಮಾಡಬೇಕು.

ಇಂದು ನಾವೆಲ್ಲರೂ ಎಂ.ಬಿ ಪಾಟೀಲ್ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಿದ್ದೇವೆ. ಅವರ ಹೋರಾಟದ ಬಗ್ಗೆ ನನಗೆ ವಿಶ್ವಾಸವಿದೆ. ಕಾಂಗ್ರೆಸ್ ಅಧ್ಯಕ್ಷನಾಗಿ ನನ್ನ ಕಾರ್ಯಕಾರಿ ಸದಸ್ಯರು ಎಲ್ಲರೂ ನಿಮ್ಮ ಜತೆ ನಿಂತು ನಿಮಗೆ ಶಕ್ತಿ ನೀಡುತ್ತೇವೆ. ಈ ಸಂದರ್ಭದಲ್ಲಿ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ.

IMG 20220328 WA0011

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ:

ಸ್ನೇಹಿತರೆ, ಇಂದು ಅಧಿಕಾರದಲ್ಲಿ ಕೂತಿರುವವರು ರಾಜ್ಯದ ಅತ್ಯಂತ ಭ್ರಷ್ಟ ಸರ್ಕಾರ. ಇದು ಶೇ.40ರಷ್ಟು ಕಮಿಷನ್ ಸರ್ಕಾರವಾಗಿದೆ. ಇದು ನಿಷ್ಪ್ರಯೋಜಕ ಸರ್ಕಾರವಾಗಿದೆ. ಇದು ರಾಜ್ಯದ ಜನರ ಮತದಿಂದ ರಚನೆಯಿಂದಾಗಿಲ್ಲ, ಬದಲಿಗೆ ಶಾಸಕರನ್ನು ಮಂಡಿಯಲ್ಲಿ ಖರೀದಿಸಿದಂತೆ ಖರೀದಿಸಿ ರಚಿಸಿರುವ ಸರ್ಕಾರ.

ಈ ಸರ್ಕಾರ ರಾಜ್ಯದಲ್ಲಿ ಒಂದು ದಿನ ಆಡಳಿತ ನಡೆಸಲು ಯೋಗ್ಯವಲ್ಲ. ಪ್ರತಿ ಹಂತದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಇಂದು ಬೊಮ್ಮಾಯಿ ಅವರ ಸರ್ಕಾರ ಹಾಗೂ ಅದರ ಮಂತ್ರಿಗಳು, ನಾಯಕರು ಶೇ.40 ರಷ್ಟು ಕಮಿಷನ್ ಪಡೆದು ಆಡಳಿತ ಮಾಡುತ್ತಿದ್ದಾರೆ. ಜನರ ತೆರಿಗೆ ಹಣದಲ್ಲಿ ಶೇ.40 ರಷ್ಟು ಹಣ ಬಿಜೆಪಿ ನಾಯಕರ ಜೇಬು ಸೇರುತ್ತಿದೆ. ಹಾಗಾದರೆ ಸರ್ಕಾರ ನಡೆಯುವುದು ಹೇಗೆ? ಇದರಿಂದ ಜನರಿಗೇನು ಪ್ರಯೋಜನ? ಈ ಸರ್ಕಾರ ತಮ್ಮ ನಾಯಕರ ಜೇಬು ತುಂಬಿಸುವ ಕೆಲಸ ಮಾಡುತ್ತಿದೆ. ಇದೇ ಸತ್ಯ.

ರಾಜ್ಯದ ಎಲ್ಲ ಗುತ್ತಿಗೆದಾರರು ಪ್ರಧಾನಿಗಳಿಗೆ ಪತ್ರ ಬರೆದು ನಿಮ್ಮ ಸಚಿವರು, ಶಾಸಕರು ಶೇ.40ರಷ್ಟು ಲಂಚ ಕೇಳುತ್ತಿದ್ದಾರೆ. ಅದೇ ಪ್ರಧಾನಮಂತ್ರಿಗಳು ಕರ್ನಾಟಕಕ್ಕೆ ಬಂದು ಆಗಿನ ಸಿದ್ದರಾಮಯ್ಯ ಅವರ ಸರ್ಕಾರವನ್ನು ಟೀಕಿಸಿದ್ದವರು ಇಂದು ಮೌನವಹಿಸಿದ್ದಾರೆ. ಈಗ ಸಿಬಿಐ, ಇಡಿ, ಹಾಗೂ ಭ್ರಷ್ಟಾಚಾರ ನಿಗ್ರಹ ದಳಗಳು ಎಲ್ಲಿವೆ? ಪ್ರಧಾನಿಗಳು, ಮುಖ್ಯಮಂತ್ರಿಗಳು ಸುಮ್ಮನಿದ್ದಾರೆ? ಕ್ರಮ ತೆಗೆದುಕೊಳ್ಳುವ ಬದಲು ಸಾಕ್ಷಿ ಕೇಳುತ್ತಿದ್ದಾರೆ. ನಾವು ಸಾಕ್ಷ್ಯಾಧಾರಗಳನ್ನು ನೀಡಲು ಸಿದ್ಧ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಆದರೂ ಸ್ವತಂತ್ರ ತನಿಖೆ ಯಾಕೆ ನಡೆಯುತ್ತಿಲ್ಲ.

ಇಂದು ಇಲ್ಲಿರುವ ಎಲ್ಲರೂ ಒಂದು ಸಂಕಲ್ಪ ಮಾಡಬೇಕು. ಈ ವಿಚಾರವನ್ನು ರಾಜ್ಯದ ಮೂಲೆ ಮೂಲೆಗೆ ತಲುಪಿಸಬೇಕು. ರಾಜ್ಯದ ಜನರ ಹಣ ತಿಂದು ಅಧಿಕಾರದಲ್ಲಿ ಕೂರಲು ಸಾಧ್ಯವಿಲ್ಲ. ಬಿಜೆಪಿಯ ನಾಯಕರೊಬ್ಬರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದು, ಸಚಿವರುಗಳು ಹಣ ಕೇಳುತ್ತಿದ್ದಾರೆ ಶೇ.40ರಷ್ಟು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಉಲ್ಲೇಕಿಸಿದ್ದಾರೆ. ಆ ಪತ್ರ ಇಲ್ಲಿದೆ. ಸದ್ಯದಲ್ಲೇ ಅಮಿತ್ ಶಾ ಹಾಗೂ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂಬ ವಿಚಾರ ಕೇಳಿಪಟ್ಟೆ. ಅವರು ಇಲ್ಲಿರುವ ಎಲ್ಲ ಭ್ರಷ್ಟ ಮಂತ್ರಿಗಳನ್ನು ಕಿತ್ತೊಗೆಯಬೇಕು, ಇಲ್ಲದಿದ್ದರೆ ಇಲ್ಲಿ ದೋಚಲಾಗುತ್ತಿರುವ ಹಣ ದೆಹಲಿ ಸರ್ಕಾರಕ್ಕೆ ಹಾಗೂ ನಾಗ್ಪುರಕ್ಕೆ ರವಾನೆಯಾಗಲಿದೆ ಎಂಬುದು ಸಾಬೀತಾಗುತ್ತದೆ.

ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಎಂ.ಬಿ ಪಾಟೀಲರಿಗೆ ಬಹಳ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ಕಾಂಗ್ರೆಸ್ ಪ್ರಚಾರದ ಮುಖವಾಗಲು ಅವಕಾಶ ಕೊಟ್ಟಿದ್ದಾರೆ. ನೀವು ಎಲ್ಲ ನಾಯಕರ ಜತೆ ಈ ಜವಾಬ್ದಾರಿ ನಿಯಂತ್ರಿಸಬೇಕು. ನೀವು ಒಂದು ಕಾಲದಲ್ಲಿ ರಾಜ್ಯದ ಗೃಹಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾಗಿದ್ದಿರಿ. ನಿಮ್ಮ ಜತೆ ಎಲ್ಲ ನಾಯಕರು ನಿಮ್ಮ ಜತೆ ಸೇರಿ ಕುಡಿಯುವ ನೀರು, ಕೃಷಿಗೆ ನೀರು ಕೊಟ್ಟಿದ್ದೀರಿ. ಇಂದು ಮತ್ತೆ ಮತ್ತೊಂದು ಕ್ರಾಂತಿಯ ಸಂಕಲ್ಪ ಮಾಡಬೇಕು. ಈ ರಾಜ್ಯಕ್ಕೆ ಹೊಸ ಆಲೋಚನೆ ನೀಡಿ, ಹೊಸ ದಾರಿಯಲ್ಲಿ ಮುನ್ನಡೆಸಲು, ಯುವಕರಿಗೆ ಉದ್ಯೋಗ, ರೈತರಿಗೆ ಹೊಸ ಜೀವನ, ಸಣ್ಣ ಉದ್ಯೋಗತಾದರು, ವ್ಯಾಪಾರಿ, ದಲಿತರಿಗೆ ಕಲ್ಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ನೀವೆಲ್ಲರೂ ಒಟ್ಟಾಗಿ ಇದನ್ನು ನಿಭಾಯಿಸಬೇಕಾಗಿದೆ.

ಈ ಸಂದರ್ಭದಲ್ಲಿ ನೀವೆಲ್ಲರೂ ಸೇರಿ ಮುಂದಿನ 12 ತಿಂಗಳಲ್ಲಿ ರಾಜ್ಯದಲ್ಲಿ ಕೇವಲ ಸರ್ಕಾರ ಬದಲಿಸುವುದಲ್ಲ, ವ್ಯವಸ್ಥೆ, ಶಾಸನಗಳು, ದೃಷ್ಟಿಕೋನ ಬದಲಾವಣೆ ಮಾಡಿ ಗೌರವಯುತ ಕರ್ನಾಟಕಕ್ಕಾಗಿ ಪಾರದರ್ಶಕ ಹಾದಿಯಲ್ಲಿ ಸಾಗುವ, ಜವಾಬ್ದಾರಿಯುತ, ಜನರ ಪರ ಕೆಲಸ ಮಾಡುವ ಸರ್ಕಾರ ಕೊಡಬೇಕು. ಈ ಶೇ.40ರಷ್ಟು ಲಂಚದ ಸರ್ಕಾರವನ್ನು ಶಾಶ್ವತವಾಗಿ ದೂರ ಮಾಡಬೇಕು.

ಈ ಸಂದರ್ಭದಲ್ಲಿ ಎಂ.ಬಿ ಪಾಟೀಲರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ:

ದೇಶದಲ್ಲಿ ಇಂದು ನಿರುದ್ಯೋಗ ಇಷ್ಟು ಪ್ರಮಾಣದಲ್ಲಿ ಬೆಳದಿದೆ. ಹೆಚ್ಚು ಕಡಿಮೆ 19ರಿಂದ 30 ವರ್ಷದೊಳಗಿನ ಯುವಕರಲ್ಲಿ ಸುಮಾರು ಶೇ.26 ಮಂದಿ ನಿರುದ್ಯೋಗಿಗಳಾಗಿದ್ದಾರೆ. ಹಳ್ಳಿಯಲ್ಲಿ ಶೇ.9.5ರಷ್ಟು ಜನ ನಿರುದ್ಯೋಗಗಳಾಗಿದ್ದು, ನಗರದಲ್ಲಿ ಶೇ.7.5 ರಷ್ಟು ಜನ ನಿರುದ್ಯೋಗಿಗಳಾಗಿದ್ದಾರೆ.

ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಸಾಕಷ್ಟು ವಾಗ್ದಾನ ನೀಡಿದರು. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು. ಆದರೆ ಅದೇ ವ್ಯಕ್ತಿ ಇಂದು ಕೋಟ್ಯಂತರ ಜನ ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ. ಸರ್ಕಾರದಲ್ಲಿ ಸುಮಾರು 9 ಲಕ್ಷ ಹುದ್ದೆ ಖಆಲಿ ಇವೆ. ಅದನ್ನು ಭರ್ತಿ ಮಾಡುತ್ತಿಲ್ಲ. ಎಸ್ ಸಿ ಎಸ್ಟಿ, ಹಿಂದುಳಿದವರು, ಆರ್ಥಿಕ ದುರ್ಬಲರಿಗೆ ಉದ್ಯೋಗ ಸಿಗುತ್ತದೆ. ಆದರೆ ಈ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಹೊಸ ನೌಕರಿ ಇರಲಿ, ಇರುವ ಉದ್ಯೋಗ ನೀಡುತ್ತಿಲ್ಲ.

ಪ್ರತಿ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ ಎಂದು ಭರ್ತಿ ಆಗುತ್ತಿಲ್ಲ. ದೇಶದಲ್ಲಿ ಒಟ್ಟು 10 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದೆಲ್ಲವೂ ಯುವಕರಿಗೆ ಸಿಗಬೇಕಾದದ್ದು, ಅನೇಕ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಕರಣ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ ಅವರು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದರು, ಅನೇಕ ಸಾರ್ವಜನಿಕ ಕ್ಷೇತ್ರಗಳಿಗೆ ನೆಹರು ಅವರು ಪ್ರತ್ಸಾಹ ನೀಡಿ ಲಕ್ಷಾಂತರ ಉದ್ಯೋಗ ನೀಡಿದರು. ಆದರೆ ಮೋದಿ ಹಾಗೂ ಶಾ ಅವರು ಬಂದು ಎಲ್ಲವನ್ನು ಮಾರಿಕೊಳ್ಲುತ್ತಿದ್ದಾರೆ. ನಾವು ಸಂಪಾದಿಸಿದ ಆಸ್ತಿಯನ್ನು ಇವರು ಮಾರುತ್ತಿದ್ದಾರೆ.

ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಕಾಂಗ್ರೆಸ್ ಟೀಕಿಸಿ 70 ವರ್ಷ ಏನು ಮಾಡಿದಿರಿ ಎಂದು ಕೇಳುತ್ತಾರೆ. ನಾವು ದೊಡ್ಡ ಆಸ್ತಿ ಕಟ್ಟಿದ್ದೇವೆ. ನೀವದನ್ನು ಮಾರಿಕೊಂಡು ತಿನ್ನುತ್ತಿದ್ದೀರಿ.

ಒಬ್ಬ ವ್ಯಕ್ತಿ ಕಷ್ಟ ಪಟ್ಟು ಆಸ್ತಿ ಗಳಿಸಿದ್ದ ಆದರೆ ಅವನ ಮಗ ಬೇಜವಾಬ್ದಾರಿ ಆಗಿದ್ದ. ಆಗ ಜನ ನಿಮ್ಮ ಪರಿಸ್ಥಿತಿ ಯಾಕೆ ಹೀಗಾಗಿದೆ ಎಂದು ಕೇಳಿದಾಗ ಆತ ನಮ್ಮಪ್ಪ ನನಗಾಗಿ ಏನು ಮಾಡಿಟ್ಟಿಲ್ಲ ಅದಕ್ಕಾಗಿ ನನ್ನ ಪರಿಸ್ಥಿತಿ ಹೀಗೆ ಆಗಿದೆ ಎಂದ. ಅದೇ ರೀತಿ ನೆಹರೂ ಅವರು ಮಾಡಿಟ್ಟ ಆಸ್ತಿಗಳನ್ನು ಇವರು ಮಾರುತ್ತಿದ್ದಾರೆ. ಎಲ್ಲವನ್ನು ಮಾರಿಕೊಂಡು ನಿಮ್ಮ ಆಸ್ತಿ ಎಲ್ಲಿ ಎಂದು ಕೇಳುತ್ತಾರೆ. ಬಂದರು, ರೈಲ್ವೆ, ವಿಮಾನ ನಿಲ್ದಾಣ ಎಲ್ಲವನ್ನು ಮಾರುತ್ತಿದ್ದೀರಿ. ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದೀರಿ.

ಪಕ್ಷದಲ್ಲಿ ಯುವಕರಿಗೆ ನಾವಿಂದು ಪ್ರಾಮುಖ್ಯತೆ ನೀಡಬೇಕು. ಗೋಪಾಲಕೃಷ್ಣ ಗೋಕಲೆ ಕಾಂಗ್ರೆಸ್ ಅಧ್ಯಕ್ಷರಾದಾಗ ಅವರ ವಯಸ್ಸು 39, ರಾಜೀವ್ ಗಾಂಧಿ ಅವರು ಅಧ್ಯಕ್ಷರಾದಾಗ ಅವರ ವಯಸ್ಸು 41, ಇಂದಿರಾ ಅವರು ಆದಾಗ ವಯಸ್ಸು 42, ಸುಭಾಶ್ ಚಂದ್ರ ಬೋಸ್ 41 ವರ್ಷವಾಗಿತ್ತು. ಹೀಗಾಗಿ ರಾಜ್ಯದಲ್ಲಿ ಯುವಕರನ್ನು ಬೆಳೆಸಿ ತಾಕತ್ತು ತುಂಬಲು ಸಾಧ್ಯವಿಲ್ಲವೇ?

ನೆಹರೂ ತತ್ವ, ಇಂದಿರಾ ಅವರ ಕಾರ್ಯ ಪ್ರಚಾರ ಮಾಡಲು ನಾವು ಯುವಕರನ್ನು ಸಿದ್ಧಪಡಿಸಬೇಕು. ನಾವು ಯುವಕರಾಗಿದ್ದಾಗಲೇ ಮಂತ್ರಿ ಆಗಿದ್ದೆವು. ಈಗಲೂ ಅದೇ ರೀತಿ ಪರಿಸ್ಥಿತಿ ರೂಪಿಸುವ ಸಮಯ ಬಂದಿದೆ. ಯುವಕರಿಗೆ ಎಲ್ಲೆಲ್ಲ ಅವಕಾಶ ಸಿಗುತ್ತದೆ ಅವರಿಗೆ ನೀಡಬೇಕು.

ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ನಮ್ಮ ಅಧ್ಯಕ್ಷರು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಕೆಲವು ಕಡೆ ವ್ಯತ್ಯಾಸ ಇರುವ ಕಾರಣ ಮಂದಗತಿಯಲ್ಲಿ ಸಾಗಿದೆ. ಪ್ರಚಾರ ಸಮಿತಿ ಅಧ್ಯಕ್ಷರ ಜವಾಬ್ದಾರಿ ಹೆಚ್ಚಾಗಿದೆ. ನನ್ನ ಕಾಲದಲ್ಲಿ ಎಸ್.ಎಂ.ಕೃಷ್ಣ ಅವರು ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು. ಈ ಜವಾಬ್ದಾರಿ ಸಣ್ಣದಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿ ನಿಮ್ಮದೇ ಆದ ಛಾಪು ಮೂಡಿಸಲು ನಿಮಗೆ ಅವಕಾಶ ಸಿಕ್ಕಿದೆ. ಇದನ್ನು ನೀವು ಬಳಸಿಕೊಂಡು ಪಕ್ಷ ಬಲಪಡಿಸಿಕೊಳ್ಳಬೇಕು.

ಬಹಳ ಜನರಿಗೆ ನಮ್ಮ ಕಾರ್ಯಕ್ರಮ ಗೊತ್ತಿಲ್ಲ. ಹೀಗಾಗಿ ನೀವೇನು ಮಾಡಿದ್ದೀರಿ ಎಂದು ಅವರು ಪ್ರಶ್ನೆ ಮಾಡುತ್ತಾರೆ. ಅವರಿಗೆ ಬಹಳ ಸುಲಭವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಮೆಡಿಕಲ್, ಐಐಟಿ, ಏಮ್ಸ್ ಹೀಗೆ ಅಲ್ಲವು ಸುಲಭವಾಗಿ ಸಿಕ್ಕಿವೆ. ಅಲ್ಲಿ ಓದಿ ಅವರು ನಮ್ಮ ವಿರುದ್ಧ ಇಂದು ತಲ್ವಾರ್ ಹಿಡಿದು ನಿಂತಿದ್ದಾರೆ. ಹೀಗಾಗಿ ಅವರಿಗೆ ಮಾಹಿತಿ ನೀಡಬೇಕಾದ ಕೆಲಸ ಆಗಬೇಕಿದೆ.

ದಿನೇದಿನೆ ಇಂಧನ ತೈಲ, ಗ್ಯಾಸ್, ಎಲ್ಲವೂ ಬೆಲೆ ಏರುತ್ತಿದೆ. ಧಾನ್ಯಗಳು, ಅಡುಗೆ ಎಣ್ಣೆ ಲ್ಲವೂ ಬೆಲೆ ಹೆಚ್ಚುತ್ತಿದೆ. ಪ್ರತಿ ಜಿಲ್ಲೆ, ತಾಲೂಕಿನಲ್ಲಿ ಹೋರಾಟ ಮಾಡಿ, ಜನರಲ್ಲಿ ಅರಿವು ಮೂಡಿಸಬೇಕು. ಈ 40% ಸರ್ಕಾರವನ್ನು ಕಿತ್ತೊಗೆಯಬೇಕು. ನಾಗ್ಪುರದವರು ಎಲ್ಲ ಕಡೆ ಕೈಯಾಡಿಸುತ್ತಾರೆ. ಅವರ ಚೇಷ್ಠೆಯಿಂದಲೇ ಇಷ್ಟೆಲ್ಲಾ ಆಗುತ್ತಿದೆ. ಅವರು ಏನೆ ಮಾಡಿದರು ಜನರನ್ನು ಎಚ್ಚರಿಸಿ, ಜನರೇ ಅವರನ್ನು ಓಡಿಸುವಂತೆ ಮಾಡಿ.

ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ ಪಾಟೀಲ್:

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಈ ಸಮಯದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಎಲ್ಲರಿಗೂ ನಮನ ಸಲ್ಲಿಸುತ್ತೇನೆ. ದೇಶದಲ್ಲಿ ಅಜ್ಞಾನದ ಕತ್ತಲು ಹೋಗಲಾಡಿಸಿದ ನೂರಾರು ಪುಣ್ಯ ಪುರುಷರು, ಸಮಾಜ ಸುಧಾರಕರು, ಸಂತರಿಗೆ ನಮಿಸುತ್ತೇನೆ.

ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಲು ಹೋರಾಟ ಮಾಡಿದ ಪಕ್ಷ. ತ್ಯಾಗ ಬಲಿದಾನ ಮಾಡಿ, ದೇಶ ಕಟ್ಟಿರುವ ಪಕ್ಷ ಕಾಂಗ್ರೆಸ್. ಬಿಜೆಪಿಯವರು ಆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಆದರೂ ದೇಶಭಕ್ತಿ ಬಗ್ಗೆ ನಮಗೇ ಪಾಠ ಹೇಳುತ್ತಿದ್ದಾರೆ. ಈ ದೇಶ ಹಾಗೂ ರಾಜ್ಯ ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ. ನೋಟ್ ಬ್ಯಾನ್, ಜಿಎಸ್ ಟಿಯಿಂದ ಸಂಕಷ್ಟ ಎದುರಾಗಿತ್ತು ನಂತರ ಕೋವಿಡ್ ನಿಂದ ತತ್ತರಿಸಿದೆ.

ಇಂದು ರೈತರಿಂದ ಹಿಡಿದು ಬಡ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಮಧ್ಯಮ ವರ್ಗದವರನ್ನು ಬಿಜೆಪಿ ದುಸ್ಥಿತಿಗೆ ದೂಡಿದೆ. ಶಾಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗದಿರುವುದು ನಮ್ಮ ಮುಂದೆ ಇರುವ ಪರಿಸ್ಥಿತಿ. ಹೀಗಾಗಿ ಈ ಎಲ್ಲರಿಗೂ ಶಕ್ತಿ ತುಂಬಬೇಕಿದೆ.

ನಮ್ಮ ಜನಕ್ಕೆ ಈಗ ಬೇಕಿರೋದು ಅನ್ನ, ಅಕ್ಷರ, ಆಶ್ರಯ, ಆರೋಗ್ಯ ಮತ್ತು ಅಭಿವೃದ್ಧಿ. ಕುವೆಂಪು ಅವರು ಬಯಸಿದ ಸರ್ವಜನಾಂಗದ ಶಆಂತಿ ತೋಟವನ್ನಾಗಿ ರಾಜ್ಯವನ್ನು ನಿರ್ಮಾಣ ಮಾಡಬೇಕು. ಹಸಿದ ಹೊಟ್ಟೆಗೆ ಬೇಕಿರೋದು ಅನ್ನ. ಹೀಗಾಗಿ ಇಂದಿರಾ ಗಾಂಧಿ ಅವರು ಯಾರೂ ಹಸಿವಿನಿಂದ ಮಲಗಬಾರದು ಎಂದು ಪಡಿತರ ವ್ಯವಸ್ಥೆ ಜಾರಿಗೆ ತಂದರು. ಇನ್ನು ನಮ್ಮ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಅನ್ನ ಭಾಗ್ಯ ಯೋಜನೆ ಕೊಟ್ಟು ಬಡವರ ಹಸಿವು ನೀಗಿಸಿದ್ದರು. ಇದು ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ, ಸ್ರೇಜನೋ ಸುಖಿನೋಭವಂತು ಎಂಬುದು ಕಾಂಗ್ರೆಸ್ ಪಕ್ಷದ ಧ್ಯೇಯ.

ಇನ್ನು ಅಕ್ಷರ ವಿಚಾರ. ಮನಮೋಹನ್ ಸಿಂಗ್ ಅವರು ಎಲ್ಲರಿಗೂ ಕಡ್ಡಾಯ ಶಿಕ್ಷಣ ಸಿಗಬೇಕು ಎಂದು ಶಿಕ್ಷಣ ಹಕ್ಕು ಜಾರಿಗೆ ತಂದರು. ನಮ್ಮ ಸರ್ಕಾರ ಇದ್ದಾಗ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಎಲ್ಲ ಪದವಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣ ನೀಡಲು ಮುಂದಾಗಿತ್ತು. ಪರಮೇಶ್ವರ್ ಅವರು ಸಚಿವರಾಗಿದ್ದಾಗ ಅಕ್ಕ ಮಹಾದೇವಿ ಅವರ ಹೆಸರಲ್ಲಿ ಮಹಿಳಾ ವಿಶ್ವವಿದ್ಯಾಲಯ ಆರಂಭಿಸಿದ್ದರು. ಆದರೆ ಬಿಜೆಪಿ ಸರ್ಕಾರ ಮಹಿಳಾ ವಿವಿಯನ್ನು ಸಾಮಾನ್ಯ ವಿವಿಯನ್ನಾಗಿ ಮಾಡಬೇಕು ಎನ್ನುತ್ತಿದೆ. ಅಲ್ಲಿನ ಹುದ್ದೆಗಳನ್ನು ತುಂಬದೇ, ಅದನ್ನು ಕೇವಲ ವಿಜಯಪುರ ಜಿಲ್ಲೆಗೆ ಸೀಮಿತ ಮಾಡಬೇಕು ಎಂದು ಅದನ್ನು ಮುಚ್ಚುವ ಪ್ರಯತ್ನಿಸುತ್ತಿದೆ. ಇದು ಬಿಜೆಪಿ ಕೆಲಸ. ಹೆಣ್ಣೋಂದು ಕಲಿತರೆ ಶಆಲೆಯೊಂದು ತೆರೆದಂತೆ ಎಂಬ ಮಾತಿದೆ. ಅದಕ್ಕೆ ವಿರುದ್ಧವಾಗಿ ಬಿಜೆಪಿ ನಡೆದುಕೊಳ್ಳುತ್ತಿದೆ.

ಇನ್ನು ಆರೋಗ್ಯ ವಿಚಾರದಲ್ಲಿ ಏಮ್ಸ್ ಆರಂಭಿಸಿದ್ದು, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಆಸ್ಪತ್ರೆ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ. ನಮ್ಮ ಸರ್ಕಾರದಲ್ಲಿ ಬಡವರು, ರೈತರಿಗೆ ಆರೋಗ್ಯ ನೀಡಲು ಯಶಸ್ವಿನಿ ಯೋಜನೆ ಆರಂಭಿಸಿತು. ಕೋವಿಡ್ ಸಮಯದಲ್ಲಿ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡರು. ಮನೆ ಮಠ ಕಳೆದುಕೊಂಡರು. ಚಾಮರಾಜನಗರದಲ್ಲಿ 23 ಜನ ಆಕ್ಸಿಜನ್ ಅಲ್ಲದೆ ಸತ್ತರು. ರೆಮಡಿಸಿವರ್ ಕಾಳಸಂತೆಯಲ್ಲಿ ಮಾರಾಟ ಮಾಡಿದರು. ಈ ಸಮಯದಲ್ಲಿ ಮಾನವೀಯತೆ ಮೆರೆಯಬೇಕಿದ್ದ ಬಿಜೆಪಿ ಸರ್ಕಾರ ಈ ಸಮಯದಲ್ಲಿ ಸಾವಿರಾರು ಕೋಟಿ ಲಪಟಾಯಿಸಿದರು. ಜನರ ಪ್ರಾಣದ ಜತೆ ಚೆಲ್ಲಾಟವಾಡಿ ಲೂಟಿ ಮಾಡಿದ್ದಾರೆ.

ಆಶ್ರಯ ವಿಚಾರ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ 20 ಅಂಶಗಳ ಕಾರ್ಯಕ್ರಮಗಳ ಮೂಲಕ ಮನೆ ಕಟ್ಟುವ ಯೋಜನೆ ಆರಂಭಿಸಿದರು. ನಂತರ ಬಂಗಾರಪ್ಪನವರ ಕಾಲದಲ್ಲಿ ಆಶ್ರಯ ಯೋಜನೆ ಆರಂಭಿಸಿತು. ಸಿದ್ದರಾಮಯ್ಯ ಅವರ ನೇತೃತ್ವ ಸರ್ಕಾರದಲ್ಲಿ 15 ಲಕ್ಷ ಮನೆ ಕಟ್ಟಿದ್ದೇವೆ. ಈ ಸರ್ಕಾರ ಬಂದ ನಂತರ ಒಂದೇ ಒಂದು ಮನೆ ಕಟ್ಟಿಲ್ಲ.

ಅಭಿವೃದ್ಧಿ ವಿಚಾರ ಪಂಚಸೂತ್ರಗಳಲ್ಲಿ ಒಂದಾಗಿದೆ. 70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ನಮಗೆ ಸ್ವಾತಂತ್ರ್ಯ ಸಿಕ್ಕಾಗ ನಮ್ಮ ಬಳಿ ಅನ್ನ ಇರಲಿಲ್ಲ. ನಾವು ಸ್ವಾವಲಂಬನೆಯಾಗಿ ನಮ್ಮ ಆಹಾರ ಉತ್ಪಾದನೆ ಮಾಡುತ್ತಿದ್ದೇವೆ. ಇದಕ್ಕೆ ಕಾರಣ ನೆಹರೂ ಅವರು. ಗೋದಿಯನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ದನಗಳಿಗೆ ಹಾಕುವ ಗೋಧಿಯನ್ನು ನಮಗೆ ಕಳುಹಿಸುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಈಗ ನಾವೇ ಗೋಧಿ ಬೆಳಎಯುತ್ತಿದ್ದೇವೆ. ಈ ದೇಶದಲ್ಲಿ ಸೂಜಿ ಮಾಡಲು ಕಷ್ಟವಾಗಿತ್ತು.

ನಮ್ಮ ರಾಜ್ಯದಲ್ಲಿ ಹೆಚ್ ಎಎಳ್, ಬಿಇಎಲ್, ಬಿಇಎಂಎಲ್, ಹೆಚ್ ಎಂಟಿ, ಐಟಿಐ, ಡಿಆರ್ ಡಿಒ ಮಾಡಿದ್ದರು. ಇವೆಲ್ಲವನ್ನು ಮೋದಿ ಅವರು ಬಂದು 2014ರಿಂದ ಪ್ರಾರಂಭ ಮಾಡಿದರಾ? ಏಮ್ಸ್, ಐಐಎಂ, ಐಐಟಿ ಆರಂಭವಾಗಿದ್ದು ಕಾಂಗ್ರೆಸ್ ಅಧಿಕಾರದಲ್ಲಿ. ಆದರೂ ಕಾಂಗ್ರೆಸ್ ಏನು ಮಾಡಿದೆ ಎಂದು ಕಳುತ್ತಾರೆ.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿ ಆದಾಗ ಕ್ಷೀರ ಕ್ರಾಂತಿ ಅಥವಾ ಶ್ವೇತ ಕ್ರಾಂತಿ ಆಯಿತು. ಉತ್ತರ ಕರ್ನಾಟಕದ ಆಲಮಟ್ಟಿ ಆಣೆಕಟ್ಟಿಗೆ ಶಂಕು ಸ್ಥಾಪನೆ ಮಾಡಿದ್ದು ಶಾಸ್ತ್ರಿ ಅವರು. ಈ ಎಲ್ಲ ಆಣೆಕಟ್ಟು ಆಗಿದ್ದು ಕಾಂಗ್ರೆಸ್. ಇವರು ಒಂದು ಆಣೆಕ್ಟ್ಟು ಕಟ್ಟಿದ್ದು ಕಾಂಗ್ರೆಸ್.

ಶ್ರೀಮಂತಿ ಇಂದಿರಾ ಗಾಂಧಿ ಅವರು ಬ್ಯಾಂಕ್ ರಾಷ್ಟ್ರೀಕರಣ ಮಾಡಿದರು. ಶ್ರೀಮಂತರು ಮಾತ್ರ ಬ್ಯಾಂಕುಗಳ ಸೇವೆ ಪಡೆಯುತ್ತಿದ್ದರು. ಇದನ್ನು ಸಾಮಾನ್ಯ ಜನರಿಗೆ ಕಲ್ಪಿಸಿದ್ದು ಇಂದಿರಾ ಗಾಂಧಿ. ಅವರ ಅಲಿಪ್ತ ನೀತಿ, 20 ಅಂಶಗಳ ಕಾರ್ಯಕ್ರಮ, ಅಸ್ಪೃಶ್ಯ ನಿವಾರಣಾ ಕಾರ್ಯಕ್ರಮ, ಚೀನಾ ವಿರುದ್ಧದ ಯುದ್ಧ ನಂತರ ಅವರನ್ನು ವಾಜಪೇಯಿ ಅವರು ವೀರ ಮಹಿಳೆ ಎಂದು ಕರೆದರು.

ನರಸಿಂಹ ರಾವ್ ಅವರು ಬಂದ ನಂತರ ಆರ್ಥಿಕ ಉದಾರಿಕರಣ, ಜಾಗತಿಕರಣದಿಂದ ದೇಶಕ್ಕೆ ಹೊಸ ದಿಕ್ಕು ಕೊಟ್ಟರು. ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ರಾಷ್ಟ್ರವಾಗಿದೆ.

ಮನಮೋಹನ್ ಸಿಂಗ್ ಅವರು ಪ್ರಧಾನಿ ಆದ ನಂತರ, ಆರ್ಥಿಕ ಭದ್ರತೆ, ಶಿಕ್ಷಣ ಹಕ್ಕು, ನರೇಗಾ ಯೋಜನೆ ತಂದು ದೊಡ್ಡ ಬದಲಾವಣೆ ತಂದು, ದೇಶವನ್ನು ಬಲಿಷ್ಠ ಮಾಡಿದರು.

ಈ ಬಿಜೆಪಿ ಸರ್ಕಾರ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ಇಂದು ರಾಜ್ಯ ಸರ್ಕಾರ 40 ಪರ್ಸೆಂಟ್ ಸರ್ಕಾರ ಆಗಿದೆ. ನಿಮ್ಮ 100 ರೂಪಾಯಿಯಲ್ಲಿ 60 ರೂಪಾಯಿ ಖರ್ಚಾದರೆ 40 ರೂಪಾಯಿ ಅವರಿಗೆ ಲಂಚವಾಗಿ ಹೋಗುತ್ತದೆ. ಇದನ್ನು ನಾವು ಹೇಳಿದರೆ, ಅದನ್ನು ನಿರ್ಲಕ್ಷಿಸುತ್ತಾರೆ. ಈ ಆರೋಪ ನಾವು ಮಾಡಿದ್ದಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಈ ವಿಚಾರವಾಗಿ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಈ ವಿಚಾರವಾಗಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ.

ಪ್ರಧಾನಿಗಳು, ಗೃಹ ಸಚಿವರು ಈ ವಿಚಾರದಲ್ಲಿ ಸುಮ್ಮನೆ ಕೂತರೆ ಮೌನಂ ಸಮ್ಮತಿ ಲಕ್ಷಣಂ ಎನ್ನುವ ಹಾಗೆ ಆಗುತ್ತದೆ. ಅವರ ವಿರುದ್ದ ಕ್ರಮ ಆಗುತ್ತಿಲ್ಲ.

ನಾವು ಜಾತಿ ಧರ್ಮ ಮೀರಿ ಕೆಲಸ ಮಾಡಿದ್ದೇವೆ. ಈ ದೇಶ ಎಲ್ಲ ರಂಗದಲ್ಲಿ ಎಲ್ಲ ವರ್ಗದ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಿರುವುದು ಕಾಂಗ್ರೆಸ್. ಭಾವನೆ ಜತೆ ಚೆಲ್ಲಾಟವಾಡುತ್ತಿರುವ ಬಿಜೆಪಿಯನ್ನು ಕಿತ್ತೊಗೆದು, ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು 2023ರಲ್ಲಿ 140-150 ಕ್ಷೇತ್ರ ಗೆದ್ದು ಜನರ ಸೇವೆ ಮಾಡುವಂತಾಗಬೇಕು. ನಾವು ಜನರ ಬದುಕು ಕಟ್ಟುವ ಕೆಲಸ ಮಾಡಿದರೆ, ಅವರು ಜನರ ಭಾವನೆ ಕೆರಳಿಸಿ ರಾಜಕಾರಣ ಮಾಡುತ್ತಿದ್ದಾರೆ.

ನಮ್ಮದು ಬದುಕಿನ ಹೋರಾಟ, ಬದುಕಿಗಾಗಿ ಹೋರಾಟ. ನಮ್ಮದು ಸಕಾರಾತ್ಮಕ ರಾಜಕಾರಣ. ಅವರು ಭಾವನಾತ್ಮಕವಾಗಿ ನಕಾರಾತ್ಮಕ ರಾಜಕಾರಣ ಮಾಡುತ್ತಾರೆ.

ನಾನು ಶಕ್ತಿ ಮೀರಿ ಕಾಂಗ್ರೆಸ್ ಸಾಧನೆ, ಬಿಜೆಪಿ ವೈಫಲ್ಯವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್

ಕಠಿಣ ಪರಿಸ್ಥಿತಿಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಮಹತ್ತರವಾದ ಜವಾಬ್ದಾರಿಯನ್ನು ಎಂ.ಬಿ ಪಾಟೀಲ್ ಅವರಿಗೆ ವಹಿಸಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಎಂದರೆ ಸಾಕಷ್ಟು ಸವಾಲುಗಳಿವೆ. ಪ್ರಚಾರ ಸಮಿತಿ ಎಂದರೆ ಕಾಂಗ್ರೆಸ್ ಪಕ್ಷದ ಇತಿಹಾಸ, ಕೊಡುಗೆ, ತ್ಯಾಗ ಬಲಿದಾನವನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ರಾಷ್ಟ್ರದಲ್ಲಿ ಪವಿತ್ರವಾದ ಕೆಲಸ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ. ಇದರ ಕಾರ್ಯಕರ್ತರು ನಾವು. ಪ್ರಚಾರ ಸಮಿತಿ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರ ಜತೆಗೂಡಿ ಕಾಂಗ್ರೆಸ್ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕಾಗುತ್ತದೆ.

ನಾಗ್ಪುರದ ಖಾಕಿ ಚಡ್ಡಿ, ಕರಿ ಟೋಪಿಯ ಪ್ರಚಾರಕರ ಸುಳ್ಳಿನ ಕಂತೆಗಳ ವಿರುದ್ದ ಪ್ರಚಾರ ಮಾಡುವ ಜವಾಬ್ದಾರಿ ಇದೆ. ಮಹಾತ್ಮಾಗಾಂಧಿ ಅವರನ್ನು ಕೊಂದ ಸಂಘ ಪರಿವಾರದವರು, ನೆಹರೂ ಅವರ ವಿಚಾರ, ದೇಶದ ಇತಿಹಾಸ ತಿರುಚುವವರು ರಣ ಹೇಡಿಗಳು. ಇವರ ಬಗ್ಗೆ ತಾವು ಕಠಿಣ ನಿರ್ಧಾರ ತೆಗೆದುಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಆರ್ ಎಸ್ಎಸ್ ಸಂಘ ಪರಿವಾರದವರು ಪಾಲ್ಗೊಂಡಿರಲಿಲ್ಲ. ಅವರು ಸಂವಿಧಾನ ವಿರುದ್ಧ ಹೋಗುತ್ತಿದ್ದಾರೆ. ಅದಕ್ಕೂ ಮುನ್ನ ಧರ್ಮ ಆಧಾರದ ಮೇಲೆ ನಡೆಯುತ್ತಿತ್ತು. ಆಗ ಶೋಷಿತರನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಾಣುತ್ತಿದ್ದರು. ಸಂವಿಧಾನ ಬಂದ ನಂತರ ಮನುಷ್ಯರನ್ನಾಗಿ ಕಾಣುವಂತಾಯಿತು. ಇಂದು ಬಿಜಿಪಿ ಅವರು ಅಂಬೇಡ್ಕರ್, ನೆಹರು, ಮೌಲಾನಾ ಅಬ್ದುಲ್ ಕಲಾಂ ಅಜಾದ್, ರಾಜೇಂದ್ರ ಪ್ರಸಾದ್ ಅವರು ಸೇರಿ ಕೊಟ್ಟ ಸಂವಿಧಾನವನ್ನು ಬದಲಿಸಲು ಹೊರಟಿದ್ದಾರೆ. ನಾವೆಲ್ಲರೂ ಅದರ ವಿರುದ್ಧ ಹೋರಾಡಬೇಕಿದೆ.

ಈ ಸಂವಿಧಾನ ಇಲ್ಲದಿದ್ದರೆ ಮಹಿಳೆಯರು ಯಾವುದೇ ರೀತಿ ಮನ್ನಣೆ ಇರುತ್ತಿರಲಿಲ್ಲ. ದೇವಾಲಯಗಳಲ್ಲಿ ಅರ್ಚಕರಾಗಿ, ಮಸೀದಿಗಳಲ್ಲಿ ಮುಲ್ಲಾಗಳಾಗಿ, ಚರ್ಚ್ ಗಳಲ್ಲಿ ಫಾದರ್ ಸ್ಥಾನದಲ್ಲಿ ಮಹಿಳೆಯರು ಕೂರಲು ಸಾಧ್ಯವಿಲ್ಲ. ಆದರೆ ಸಂವಿಧಾನದಿಂದ ಈ ದೇಶದಲ್ಲಿ ಮಹಿಳೆ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಆಗಬಹುದು. ಇದರ ಕೊಡುಗೆ ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿ ಅಲ್ಲ. ಇದನ್ನು ಸಹಿಸದೇ ಕಾಂಗ್ರೆಸ್ ಹಾಗೂ ಸಂವಿಧಾನ ವಿರುದ್ಧ ಬಿಜೆಪಿ ಷಡ್ಯಂತ್ರ ನಡೆಯುತ್ತಿದೆ.

ಪ್ರಧಾನಿ ಮೋದಿ ಅವರು ನಾ ಖಾವೂಂಗಾ ನಾ ಖಾನೇದೂಂಗಾ ಎಂದು ಹೇಳಿದ್ದರು. ಆದರೆ ಈ ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಬೊಮ್ಮಾಯಿ ಅವರ ಸರ್ಕಾರ. ಅವರು ನಾವು ಹಣ ಪಡೆಯುತ್ತಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಈ 40 ಪರ್ಸೆಂಟ್ ಹಣ ನಾಗ್ಪುರಕ್ಕೆ ಹೋಗುತ್ತಿದೆಯೋ? ಕೇಶವಕೃಪಕ್ಕೆ ಹೋಗುತ್ತಿದೆಯೋ? ಮಂತ್ರಿಗಳಿಗೆ ಹೋಗುತ್ತಿದೆಯೋ?

ಈಶ್ವರಪ್ಪನವರು ನನಗೆ ಹಣ ಬಿಡುಗಡೆ ಮಾಡಲು 40 ಪರ್ಸೆಂಟ್ ಹಣ ಕೇಳುತ್ತಿದ್ದಾರೆ ಎಂಬ ಆರೋಪ ಮಾಡಲಾಗಿದೆ. ನ್ಯಾಯಾಲಯ ಗಡಿಪಾರ್ ಮಾಡಿದ್ದ ಅಮಿತ್ ಶಾ ಇಂದು ದೇಶದ ಗೃಹಮಂತ್ರಿ ಆಗಿರುವುದು ದುರಂತ.

1947ರಲ್ಲಿ ದೇಶ ಇಬ್ಭಾಗವಾದಾಗ ದೇಹಲಿಯಲ್ಲಿ ದಂಗೆ ನಡೆಯುವಾಗ ನೆಹರೂ ಅವರು ಹೋಗುತ್ತಾರೆ. ಆಗ ಒಬ್ಬ ವ್ಯಕ್ತಿ ನೆಹರೂ ಅವರ ಕತ್ತಿನ ಪಟ್ಟಿ ಹಿಡಿಯುತ್ತಾರೆ. ಆದರೂ ಅವರು ಬೇಸರ ಮಾಡಿಕೊಳ್ಳುವುದಿಲ್ಲ. ದೇಶದಲ್ಲಿ ಶಾಂತಿ ಕಾಪಾಡಲು ಸರ್ವ ಪ್ರಯತ್ನ ಮಾಡುತ್ತಾರೆ. ಇಂದು ಕಾಂಗ್ರೆಸ್ ಪಕ್ಷದ ದೊಡ್ಡ ಜವಾಬ್ದಾರಿ ಎಂದರೆ ಹೆಣ್ಣುಮಕ್ಕಳ ಶಿಕ್ಷಣ ಕಿತ್ತುಕೊಳ್ಳಲು ಪ್ರಯತ್ನಿಸುವ ನೀತಿ ತರುತ್ತಿದ್ದಾರೆ. ಅವರ ಷಡ್ಯಂತ್ರಕ್ಕೆ ಉತ್ತರ ಕೊಡಬೇಕಾದರೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಶಾಲೆ ಕಾಲೇಜು ಮುಂದೆ ಪ್ರತಿಭಟನೆ ಮಾಡಿ.

ಇಂದು ಅವರ ಮಕ್ಕಳು, ನಾಳೆ ನಿಮ್ಮ ಮಕ್ಕಳು ಆಸ್ಥಾನದಲ್ಲಿರುತ್ತಾರೆ. ಪಕ್ಕದ ಮನೆಗೆ ಬೆಂಕಿ ಬಿದ್ದಿದೆ. ನಿಮ್ಮ ಮನೆಗೆ ಬೆಂಕಿ ಬೀಳುವವರೆಗೂ ಕಾಯಬೇಡಿ. ಅದನ್ನು ಆರಿಸುವ ಕೆಲಸ ಮಾಡಿ. ಸ್ವಾತಂತ್ರ್ಯ ಹೋರಾಟದಲ್ಲಿ ಕೇವಲ ಹಿಂದೂಗಳು ಮಾತ್ರವಲ್ಲ, ಮುಸಲ್ಮಾನರು, ಸಿಖ್ಖರು, ಬೌದ್ಧರು ಎಲ್ಲರೂ ಹೋರಾಡಿದ್ದರು. ಈ ದೇಶ ಎಲ್ಲ ಧರ್ಮ, ಜಾತಿ, ಭಾಷೆಯವರ ದೇಶ. ಮೋದಿ, ಅಮಿತ್ ಶಾ, ಆರ್ ಎಸ್ಎಸ್ ಷಡ್ಯಂತ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಉತ್ತರ ಕೊಡಬೇಕು. ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ಬಿ ಪಾಟೀಲ್ ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ:

ಎಂ.ಬಿ ಪಾಟೀಲ್ ಅವರಿಗೆ ಅಭಿನಂದನೆಗಳು. ಅವರು ವಹಿಸಿಕೊಂಡಿರುವ ಹೊಸ ಜವಾಬ್ದಾರಿಯಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.

ಐದು ವರ್ಷ ಜಲಸಂಪನ್ಮೂಲ ಸಚಿವರಾಗಿ ಅತ್ಯಂತ ದಕ್ಷತೆಯಿಂದ ಪ್ರಾಮಾಮಿಕವಾಗಿ ಕೆಲಸ ಮಾಡಿದ್ದರು ಎಂದರೆ ಅದು ಅತಿಶಯೋಕ್ತಿಯಲ್ಲ. ಅವರ ಕೆಲಸ ನೋಡಿದ್ದೇನೆ. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ವಿಶ್ವಾಸವಿದೆ. ಅವರನ್ನು ನೇಮಕ ಮಾಡಿರುವ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಅನೇಕ ಧನ್ಯವಾದಗಳು ಹೇಳಲು ಬಯಸುತ್ತೇನೆ.

ರಾಜ್ಯದಲ್ಲಿ ಹಂಬಾಗಿಲಿನಿಂದ ಬಂದ ಅನೈತಿಕ ಸರ್ಕಾರ ಅಧಿಕಾರದಲ್ಲಿದೆ. 2008ರಲ್ಲಿ ಆಗಲಿ, ಅಥವಾ 2018ರಲ್ಲಿ ಜನ ಬಿಜೆಪಿಗೆ ಆಶೀರ್ವಾದ ಮಾಡಿಲ್ಲ. ಆಪರೇಷನ್ ಕಮಲ ಮಾಡಿ, ಲಂಚದ ರೂಪದಲ್ಲಿ ಪಡೆದ ಹಣದಲ್ಲಿ ಶಾಸಕರನ್ನು ಖರೀದಿ ಮಾಡಿ ಮುಖ್ಯಮಂತ್ರಿ ಆಗಿದ್ದಾರೆ. ಈ ಅನೈತಿಕ ಸರ್ಕಾರ ಯಾವತ್ತೂ ಬಡವರು, ರೈತರ ಬಗ್ಗೆ ಚಿಂತನೆ ಮಾಡುವುದಿಲ್ಲ. ಕಾಳಜಿ ವಹಿಸಲಿಲ್ಲ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಅಭಿವೃದ್ಧಿ ಮಾಡಲು ಹಣವಿಲ್ಲ. ಇವರು ಬಂದ ನಂತರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆ. ಪ್ರತಿವರ್ಷ 70 ಸಾವಿರ ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ. 2021-22ರಲ್ಲಿ ರಾಜ್ಯದ ಸಾಲದ ಮೊತ್ತ 5.18 ಲಕ್ಷ ಕೋಟಿ. 2022-23ರಲ್ಲಿ ರಾಜ್ಯ ಕಟ್ಟ ಬೇಕಾದ ಬಡ್ಡಿ ಮೊತ್ತ 44 ಸಾವಿರ ಕೋಟಿ.

ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇದನ್ನು ನಾನು ಹೇಳುತ್ತಿಲ್ಲ, ಅವರ ಪಕ್ಷದವರೇ ಹೇಳುತ್ತಿದ್ದಾರೆ. ವಿಶ್ವನಾಥ್, ಯತ್ನಾಳ್ ಅವರೇ ಹೇಳುತ್ತಿದ್ದಾರೆ. ಯಡಿಯೂರಪ್ಪನವರ ಮನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳುತ್ತಾರೆ. ವಿಶ್ವನಾಥ್ ಅವರು ಭದ್ರ ಮೇಲ್ದಂಡೆ ಯೋಜನೆಯಲ್ಲಿ 20 ಸಾವಿರ ಕೋಟಿ ರೂ.ಗೆ ಟೆಂಡರ್ ಕರೆದಿದ್ದು, ಯಡಿಯೂರಪ್ಪನವರ ಮಗ ವಿಜಯೇಂದ್ರ 10 ಪರ್ಸೆಂಟ್ ಕಮಿಷನ್ ಪಡೆದಿದ್ದಾರೆ ಎಂದು ಆರೋಪ ಮಾಡುತ್ತಾರೆ.

2018ರ ಚುನಾವಣೆಯಲ್ಲಿ ಮೋದಿ ಅವರು ಚುನಾವಣೆ ಪ್ರಚಾರ ಮಾಡಲು ಬಂದಿದ್ದರು. ಆಗ ಅವರು ಆಧಾರರಹಿತ ಆರೋಪ ಮಾಡಿದರು. ಸಿದ್ದರಾಮಯ್ಯ ಅವರ ಸರ್ಕಾರ 10 ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದರು. ನಾನು ಆಗ ಹೇಳಿದೆ. ನೀವು ಪ್ರಧಾನಿಗಳು ನಿಮ್ಮ ಬಳಿ ಎಲ್ಲ ತನಿಖಾ ಸಂಸ್ಥೆಗಳಿವೆ ನಿಮ್ಮ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಿ ಎಂದು ಹೇಳಿದ್ದೆ. ಆದರೆ ಅವರು ಮಾಡಲು ಸಾಧ್ಯವಾಗಲಿಲ್ಲ. ನಾನು ಈಗಲೂ ಹೇಳುತ್ತೇನೆ ನಿಮ್ಮ ಬಳಿ ಆಧಾರ ಇದ್ದರೆ ತಾಕತ್ತಿದ್ದರೆ ತನಿಖೆ ಮಾಡಿಸಿ.

ಇಂದು ರಾಜ್ಯದ ಇತಿಹಾಸದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರು ಪ್ರಧಾನಿಗಳಿಗೆ ಪತ್ರ ಬರೆದಿದ್ದು, ಬಿಜೆಪಿ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ಕೊಡಬೇಕು ಎಂದು ಹೇಳಿದ್ದಾರೆ. ಈ ದೇಶದ ಚೌಕಿದಾರ ನಾ ಖಾವೂಂಗಾ ನಾ ಖಾನೇದೂಂಗಾ ಎಂದು ಹೇಳಿದ್ದ ಮೋದಿ ಅವರೇ. ಈ ಪತ್ರ ಬರೆದಿದ್ದು 6-7-21ರಲ್ಲಿ ಬರೆದಿದ್ದರು. ಇಂದಿನವರೆಗೂ ತನಿಖೆ ಆಗಿಲ್ಲ ಮೋದಿಜಿ. ಇದರರ್ಥ ಏನು? ಮೋದಿ ಅವರು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ಇದು ಸತ್ಯ ಅಲ್ಲವೇ? ಇವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಮೋದಿ ಅವರು ಸರ್ಕಾರವನ್ನು ವಜಾಗೊಳಿಸಬೇಕಿತ್ತು.

ನಿಮಗೆ ಮಾನ ಮರ್ಯಾದೆ ಇದ್ದರೆ ನೀವೇ ರಾಜೀನಾಮೆ ಕೊಟ್ಟು ತೊಲಗಬೇಕು. ರಾಜ್ಯ ಹಾಳಾಗುತ್ತಿದೆ. ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಇವರು ಅಧಿಕಾರಕ್ಕೆ ಬಂದು 3 ವರ್ಷ ಆಯ್ತು. ಒಂದು ಮನೆಯನ್ನು ಬಡವರಿಗೆ ಮಂಜೂರು ಮಾಡಿಲ್ಲ.

ನಾವು ಸಂವಿಧಾನ ಪ್ರಕಾರ ನಡೆಯಲು ಇದ್ದೇವೆ, ನೀವು ಮನುವಾದಿಗಳು ಸಂಘ ಪರಿವಾರದವರು ಹೇಳಿದಂತೆ ಕೇಳಲು ಅಲ್ಲ. ಕಾಂಗ್ರೆಸ್ ಸಂವಿಧಾನಕ್ಕೆ ಗೌರವ ಕೊಟ್ಟು ಅದರ ಧ್ಯೇಯೋದ್ದೇಶಕ್ಕಾಗಿ ಕೆಲಸ ಮಾಡುತ್ತದೆ. ನಾವು ಎಲ್ಲ ಧರ್ಮದವರನ್ನು ಪ್ರೀತಿಸುತ್ತೇವೆ. ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತ.

ಮನುವಾದಿಗಳೇ ನೀವು ಎಲ್ಲಿಯವರೆಗೆ ಜಾತಿ ಧರ್ಮದ ಹೆಸರಲ್ಲಿ ಸಮಾಜ ಒಡೆಯುತ್ತೀರಿ ನಿಮ್ಮನ್ನು ಜನ ಕ್ಷಮಿಸುವುದಿಲ್ಲ. ಜನರ ಕಣ್ಣೀರು, ರಕ್ತಕ್ಕೆ ಯಾವ ಜಾತಿ, ಧರ್ಮ ಇದೆ? ಬಿಜೆಪಿಯವರು ಎಷ್ಟೇ ಕೋಮುವಾದಿಗಳಾಗಿದ್ದರು, ರಾಜ್ಯದ ಜನರನ್ನು ಎಚ್ಚರಿಸಿ ಕೋಮುವಾದಿಗಳನ್ನು ಅಧಿಕಾರದಿಂದ ಕಿತ್ತು ಹಾಕೋಣ. ನಿವೆಲ್ಲರೂ ಅದಕ್ಕೆ ತಯಾರಾಗಿ. ನಿವೆಲ್ಲರೂ ಎಂ.ಬಿ ಪಾಟೀಲ್ ಅವರಿಗೆ ಬೆಂಬಲ ನೀಡಬೇಕು. ನನ್ನ ಬೆಂಬಲ ಅವರ ಜತೆಗಿರುತ್ತದೆ ಎಂದು ಹೇಳಿ ಅವರಿಗೆ ಶುಭ ಕೋರುತ್ತೇನೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ:

ಇನ್ನು ಒಂದು ವರ್ಷದಲ್ಲಿ ಚುನಾವಣೆ ಬರಲಿದ್ದು, ಈ ಒಂದು ವರ್ಷದಲ್ಲಿ ಕೆಪಿಸಿಸಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರಿಗೆ ಇರುವಷ್ಟೇ ಜವಾಬ್ದಾರಿ ಪ್ರಚಾರ ಸಮಿತಿ ಅಧ್ಯಕ್ಷರಿಗೂ ಇದೆ.
ಈ ಒಂದು ವರ್ಷ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಕೊಟ್ಟ 165 ಭರವಸೆಗಳಲ್ಲಿ ಅಷ್ ಈಡೇರಿಸಿರುವುದು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾತ್ರ.

ಬಿಜೆಪಿ ಪಾಜ್ಯದಲ್ಲಿ ಕೋಮುವಾದ ಬಿತ್ತುವ ಮೂಲಕ ವರ್ಗಗಳ ನಡುವೆ, ಜಾತಿಗಳ ನಡುವೆ, ಧ್ರಮಗಳ ಮಧ್ಯೆ ಜಗಳ ತಂದಿಟ್ಟು ದೇಶದಲ್ಲಿ ಆಡಳಿತ ಮಾಡುತ್ತಿದೆ.

ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಕೊಟ್ಟ ಭರವಸೆಗಳು ಈಡೇರುತ್ತಿಲ್ಲ, ದಿನೇದಿನೆ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿದೆ. ಜನಜೀವನ ದುಸ್ಥರವಾಗುತ್ತಿದೆ. ಇದೆಲ್ಲವನ್ನು ಜನರಿಗೆ ತಿಳಿಸುವುದು ಪ್ರಚಾರ ಸಮಿತಿ ಜವಾಬ್ದಾರಿ.

ಈ ಅಧಿಕಾರ ಅವಧಿಯಲ್ಲಿ ನಾವೆಲ್ಲರೂ ಒಟ್ಟಾಗಿ ಶ್ರಮಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡೋಣ ಎಂದು ಹೇಳಲು ಬಯಸುತ್ತೇನೆ.

ಕೆಪಿಸಿಸಿ ಮಾಧ್ಯಮ ವಿಭಾಗ ಮುಖ್ಯಸ್ಥರಾದ ಬಿ.ಎಲ್ ಶಂಕರ್:

ಅತ್ಯಂತ ಸವಾಲಿನ ಸಮಯದಲ್ಲಿ ಎಂ.ಬಿ ಪಾಟೀಲರು ಈ ಜವಾಬ್ದಾರಿ ವಹಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಐವರು ಕಾರ್ಯಾಧ್ಯಕ್ಷರು ಪಕ್ಷದ ಜವಾಬ್ದಾರಿ ಹೊತ್ತಿದ್ದರು. ಅವರ ಜತೆಗೆ ಈಗ ಬೆನ್ನೆಲುಬಾಗಿ ಎಂ.ಬಿ ಪಾಟೀಲ್ ಅವರು ಈ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ.

ಪ್ರತಿಪಕ್ಷ ಇಲ್ಲದಿರುವಂತೆ ಮಾಡುವ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದ್ದು, ಸರ್ವಂ ಏಕವ್ಯಕ್ತಿಮಯಂ ನಂತೆ ನಡೆದುಕೊಳ್ಳುತ್ತಿದ್ದಾರೆ. ಅಧಿಕಾರಕ್ಕೆ ಬಂದು 8 ವರ್ಷವಾದರೂ ಕಾಂಗ್ರೆಸ್ ನ 60 ವರ್ಷಗಳ ಕಾರ್ಯಕ್ರಮ, ನೆಹರೂ ಕುಟುಂಬ ಟೀಕಿಸುವುದರಲ್ಲೇ ಕಾಲ ಹರಣ ಮಾಡುತ್ತಿದೆ. ಈ ಅವಧಿಯಲ್ಲಿ ಅವರು ಏನು ಮಾಡಿದ್ದಾರೆ ಎಂದು ಹೇಳುತ್ತಿಲ್ಲ. ಅದರರ್ಥ ಅವರು ಆ 8 ವರ್ಷದಲ್ಲಿ ಯಾವುದೇ ಸಾಧನೆ ಆಗಿಲ್ಲ. ಇದಕ್ಕಾಗಿ 60 ವರ್ಷದ ಬಗ್ಗೆ ಮಾತನಾಡುತ್ತಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ 20 ಕೋಟಿ ಮತದಾರರು ಕಾಂಗ್ರೆಸ್ ಪರ ನಿಂತಿದ್ದರು. ಆದರೆ ಆ ಮತಗಳು ಕ್ಷೇತ್ರಗಳಾಗಿ ಪರಿವರ್ತನೆಯಾಗಲಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.38ರಷ್ಟು ಹಾಗೂ ಬಿಜೆಪಿಗೆ ಶೇ.36ರಷ್ಟು ಮತ ಸಿಕ್ಕಿದ್ದವು. ನಮಗೆ ಹೆಚ್ಚು ಕ್ಷೇತ್ರಗಳು ಸಿಗದ ಕಾರಣ ಬಿಜೆಪಿ ವಾಮಮಾರ್ಗದಲ್ಲಿ ಸರ್ಕಾರ ರಚನೆ ಮಾಡಿವೆ.

ನಮಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಪ್ರಮಾಣ ಇದ್ದು, ಅವುಗಳನ್ನು ಕ್ಷೇತ್ರಗಳಾಗಿ ಪರಿವರ್ತಿಸುವುದು ನಮ್ಮ ಮುಂದಿರುವ ಸವಾಲು. ಹೀಗಾಗಿ ಸಂಘಟನೆಗೆ ಪ್ರಾಮುಖ್ಯತೆ ನೀಡಬೇಕು. ಡಿ.ಕೆ. ಶಿವಕುಮಾರ್ ಅವರು ಅಧ್ಯಕ್ಷರಾಗಿ ಅದಿಕಾರ ವಹಿಸಿಕೊಂಡಾಗ ಕೋವಿಡ್ ಬಾಧೆ ಸಾಕಷ್ಟು ಕಾಡಿತ್ತು. ಆದರೂ ಅವರು ರಾಜ್ಯದ ಎಲ್ಲ ಜಿಲ್ಲೆ ಪ್ರವಾಸ ಮಾಡಿ ಅವರದೇ ಆದ ರೀತಿಯಲ್ಲಿ ಸಂಘಟನೆ ಮಾಡಿದ್ದಾರೆ.

ಇಂದು ದೇಶದಲ್ಲಿ ಯಾವ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ, ದೇಶದಲ್ಲಿ ಸಂವಿಧಾನಿಕ ಸಂಸ್ಥೆಗಳು ಉಸಿರುಗಟ್ಟುವ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಲೋಕಪಾಲ್ ಬಿಲ್ ಮಸೂದೆ ಜಾರಿಗೆ ತಂದಿದ್ದರು. ಆದರೆ ಇಂದು ದೇಶದಲ್ಲಿ ಒಬ್ಬ ಲೋಕಪಾಲರು ಇದ್ದು, ಅವರ ಹೆಸರು ಯಾರು ಎಂದು ತಿಳಿಯದ ಸ್ಥಿತಿ ನಿರ್ಮಾಣವಾಗಿದೆ. ಚುನಾವಣಾ ಆಯೋಗ, ಸಿಬಿಐ, ರಿಸರ್ವ್ ಬ್ಯಾಂಕ್, ವಿಜಿಲೆನ್ಸ್ ಕಮಿಷನ್ ಎಲ್ಲವೂ ಅಪಾಯಕ್ಕೆ ಸಿಲುಕಿವೆ. ಈಗ ನಾವು ಆ ಸಂಸಅತೆಗಳ ಬಲಪಡಿಸಲು ಕಾಂಗ್ರೆಸ್ ಬಲಪಡಿಸಬೇಕು.

ಲಕ್ಷಾಂತರ ಜನ ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದರೂ ದೊಡ್ಡ ಪ್ರಮಾಣದಲ್ಲಿ ಮಾಧ್ಯಮಗಳು ಆಡಳಿತ ಪಕ್ಷದ ಪರವಾಗಿ ನಿಂತಿವೆ. ಇಡೀ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಅವರು ಅವರ ವಿರುದ್ಧ ಏಳುವ ಧ್ವನಿ ಹತ್ತಿಕ್ಕುತ್ತಿದ್ದಾರೆ. ಪೆಗಾಸಸ್, ರೈತ ಕಾಯ್ದೆಗಳು ಸುಪ್ರೀಂ ಕೋರ್ಟ್, ಸಂಸತ್ತಿನಲ್ಲಿ ಚರ್ಚೆ ಆಗಲಿಲ್ಲ. ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ಕಡೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ.

136 ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷ ಇಂತಹ ಅನೇಕ ಸವಾಲುಗಳನ್ನು ಎದುರಿಸಿದ್ದು, ಸರ್ವಾಧಿಕಾರಿ ಮನಸ್ಥಿತಿಯನ್ನು ಮೆಟ್ಟಿ ನಿಂತಿದೆ. ಈ ಸಂದರ್ಭದಲ್ಲಿ ಕುವೆಂಪು ಅವರ ಒಂದು ಕವನ ನೆನಪಾಗುತ್ತಿದೆ. ಮುಗಿಯಿತು, ಮುಗಿಯಿತು, ಓರ್ವೋರ್ವರ ಕಾಲ, ಗರ್ವದ ಕಾಲ, ಇದು ಸರ್ವರ ಕಾಲ ಸರ್ವೋದಯದಯವೇ ಯುಗ ಮಂತ್ರ, ಸ್ರವೋದಯ ಸ್ವಾಂತ್ರ್ಯ ಶ್ರೀತಂತ್ರ ಎಂಬುದು ಪ್ರಸ್ತುತವಾಗಿದೆ.

ಎಂ.ಬಿ ಪಾಟೀಲ್ ಅವರು ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿರುವ ನಾಯಕರು. ಅವರ ತಂದೆ ಬಿ.ಎಂ. ಪಾಟೀಲ್ 5 ಬಾರಿ ವಿಧಾನ ಸಭೆ ಹಾಗೂ 1 ಬಾರಿ ಪರಿಷತ್ ಸದಸ್ಯರಾಗಿ ಮಾಜಿ ಸಚಿವರಾಗಿ ಕೆಲಸ ಮಾಡಿದ್ದಾರೆ. 80ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಅವರ ತಂದೆಯ ಅಕಾಲಿಕ ಮರಣದಿಂದ 1991ರಲ್ಲಿ 26ನೇ ವಯಸ್ಸಿಗೆ ಶಾಸಕರಾಗಿ ಈಗ ಐದು ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾಗಿ ಕೆಲಸ ಮಾಡಿದ್ದಾರೆ. ಅವರು ಸರಳ, ಸುಸಂಸ್ಸಕೃತ, ಸಜ್ಜನ ಹಾಗೂ ಶ್ರೀಮಂತರೂ ಆಗಿದ್ದಾರೆ. ಅವರ ಆರ್ಥಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಗೆ ದೊಡ್ಡದಾಗಿದೆ.

ಸರಸಂಗಿ ಲಿಂಗರಾಜ ದೇಸಾಯಿ ಹಾಗೂ ಹಾನಗಲ್ ಪರಮಪೂಜ್ಯ ಕುಮಾರಮಹಾಸ್ವಾಮಿ ಸೇರಿ ವಿರಶೈವ ಮಹಾಸಭಾ ಕಟ್ಟಿ ಸಭೆ ಮಾಡಿದ್ದಾರೆ. ಎಂ.ಬಿ ಪಾಟೀಲ್ ಅವರಿಗೆ ಬೇಕಾದಷ್ಟು ರಾಷ್ಟ್ರ ಮಟ್ಟದಲ್ಲಿ ಅವಕಾಶ ಇದ್ದರೂ ರಾಜ್ಯದಲ್ಲಿ ಕಾರ್ಯಕ್ಷೇತ್ರ ಮಾಡಿಕೊಳ್ಳಲು ನಿರ್ಧರಿಸಿದರು. ಪರಿಣಾಮ ಇಂದು ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ 5 ವರ್ಷ ಜಲಸಂಪನ್ಮೂಲ ಸಚಿವರಾಗಿದ್ದು, ಆಗ ಕಾವೇರಿ ನದಿ ನೀರಿನ ವಿವಾದ ಬಗೆಹರಿಸಲು ನಾರಿಮನ್ ಅವರನ್ನು ಒಪ್ಪಿಸಿ ನಮ್ಮ ಪರ ವಕಾಲತ್ತು ಮಾಡುವತಂ ಮಾಡಿದರು. ಪರಿಣಾಮ ರಾಜ್ಯಕ್ಕೆ ಕಾವೇರಿ ಪಾಲು ಹೆಚ್ಚಾಗಿದೆ. ಇದರಲ್ಲಿ ಇವರ ಪರಿಶ್ರಮ ಹೆಚ್ಚಾಗಿದೆ.

ಏಷ್ಯಾದಲ್ಲಿ ಅತಿ ದೊಡ್ಡ ಹನಿನೀರಾವರಿ ಯೋಜನೆ ಕೀರ್ತಿ ಇವರದು. ಬಿಜಾಪುರದಲ್ಲಿ 1200 ಹಾಸಿಗೆಗಳಿರುವ ಅತಿ ದೊಡ್ಡ ಆಸ್ಪತ್ರೆ ಕಟ್ಟಿದ್ದರು. ಬಿಜಾಪುರದಲ್ಲಿ ಅವರ ಆಸ್ಪತ್ರೆ ಸರ್ಕಾರ ನಿಗದಿ ಮಾಡಿದ ಅರ್ಧ ದುಡ್ಡಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದರು. ಈ ಆಸ್ಪತ್ರೆಯಲ್ಲಿ ಹೆಚ್ಚಿನ ಜನ ಕೋವಿಡ್ ಚಿಕಿತ್ಸೆ ಪಡೆದಿದ್ದಾರೆ.

ಇವರ ಸಾರ್ವಜನಿಕ ಸೇವೆಯಲ್ಲಿ ಸಾಹಿತ್ಯ ಕ್ಷೇತ್ರವೂ ಬಹಳಷ್ಟಿದೆ. ವಚನ ಸಾಹಿತ್ಯಕ್ಕೆ ಆದ್ಯತೆ ನೀಡಿದ್ದಾರೆ. ಆದಿಲ್ ಶಾ ಅವರ ಕಾಲದಲ್ಲಿನ ಉರ್ದು ಹಾಗೂ ಇತರೆ ಭಾಷೆಗಳಲ್ಲಿನ ಕವನ ಸಾಹಿತ್ಯವನ್ನು ಕನ್ನಡ ಮತ್ತು ಇಂಗ್ಲೀಷ್ ಗೆ ತರ್ಜುಮೆ ಮಾಡಿ ಉಚಿತವಾಗಿ ಮುದ್ರಿಸಿದೆ.

ಸಿದ್ದರಾಮಯ್ಯ ಅವರ ಅನುಭವಿ ನಾಯಕತ್ವ, ಅವರ ಕಾಲದಲ್ಲಿ ಕೊಟ್ಟ ಜನಪರ ಕಾರ್ಯಕ್ರಮ, ಡಿ.ಕೆ. ಶಿವಕುಮಾರ್ ಅವರ ಸೋಲರಿಯದ ಹಾಗೂ ಕೋವಿಡ್ ಸಮಯದಲ್ಲಿ ಜನರಿಗೆ ಸ್ಪಂದಿಸಿದ, ರಾಜ್ಯದಲ್ಲಿ 50 ಲಕ್ಷ ಸದಸ್ಯತ್ವವನ್ನು ಮಾಡುವ ಗುರಿಯಲ್ಲಿ ಒಂದು ಹಂತ ತಲುಪಿದ್ದಾರೆ. ಹರಿಪ್ರಸಾದ್ ಅವರ ಅಪಾರ ಅನುಭವ, ಮಲ್ಲಿಕಾರ್ಜುನ ಖರ್ಗೆ ಅವರು 10 ಬಾರಿ ಶಾಸಕರು, 3 ಬಾರಿ ಸಂಸದರು, ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ವೇರೋಧ ಪಕ್ಷದ ನಾಯಕರಾಗಿದ್ದಾರೆ. ಇವರ ಜತೆಗೆ ಎಂ.ಬಿ ಪಾಟೀಲ್ ಅವರ ಸೇರ್ಪಡೆ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪತಾಕೆ ವಿಧಾನಸೌಧದ ಮೇಲೆ ಹಾರಾಡಲು ಇವರ ಪರಿಶ್ರಮದಿಂದ ಆಗಲಿ.