IMG 20220330 WA0010

ಬಿಜೆಪಿ ಬಲವರ್ಧನೆಗೆ ಏ.12ರಿಂದ 3 ತಂಡಗಳಪ್ರವಾಸ….!

POLATICAL STATE


ಬಿಜೆಪಿ ಬಲವರ್ಧನೆಗೆ ಏ.12ರಿಂದ 3 ತಂಡಗಳ
ಪ್ರವಾಸ- ನಿರ್ಮಲ್ ಕುಮಾರ್ ಸುರಾಣ
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಬಲವರ್ಧನೆಗಾಗಿ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ತಂಡವು ವಿಭಾಗ ಮಟ್ಟದಲ್ಲಿ ಪ್ರವಾಸ ಮಾಡಲಿದೆ. ಏಪ್ರಿಲ್ 12ರಿಂದ 24ರವರೆಗೆ 3 ತಂಡಗಳಲ್ಲಿ ಪ್ರವಾಸ ನಡೆಯಲಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣ ಅವರು ತಿಳಿಸಿದ್ದಾರೆ.

ಈ ತಂಡಗಳು ವಿಭಾಗ ಕೇಂದ್ರದಲ್ಲಿ 2 ದಿನಗಳ ಕಾರ್ಯಕ್ರಮ ಸಂಘಟಿಸಲಿವೆ. ಪ್ರತಿ ಜಿಲ್ಲಾ ಕೇಂದ್ರದಲ್ಲೂ ಕೋರ್ ಕಮಿಟಿ ಸಭೆ ನಡೆಯಲಿದೆ. ನಂತರ ಆ ಜಿಲ್ಲಾ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಜಿಲ್ಲೆಯ ಪ್ರಮುಖರೊಂದಿಗೆ ವೈಯಕ್ತಿಕ ಮಾತುಕತೆ ಏರ್ಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ತಂಡಗಳು ವಿಭಾಗ ಕೇಂದ್ರದ ಮಂಡಲಗಳ ಬೂತ್ ಅಧ್ಯಕ್ಷರ ಮತ್ತು ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶವನ್ನು ನಡೆಸುವಂತೆ ಅವರು ತಿಳಿಸಿದ್ದಾರೆ.