IMG 20230217 WA0060

ಕಾಂಗ್ರೆಸ್ ಸರ್ಕಾರದಿಂದ 2 ಲಕ್ಷ ಕೋಟಿ ಸಾಲ…!

Genaral STATE

ಕೋವಿಡ್ ಇಲ್ಲದ ಸಂದರ್ಭದಲ್ಲಿಯೂ ಕಾಂಗ್ರೆಸ್ ಸರ್ಕಾರದಿಂದ 2 ಲಕ್ಷ ಕೋಟಿ ಸಾಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಫೆಬ್ರವರಿ 17 : ಕೋವಿಡ್ ಇಲ್ಲದ ಸಂದರ್ಭದಲ್ಲಿಯೂ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್ ಸರ್ಕಾರದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರದವರು 5 ವರ್ಷದ ಅವಧಿಯಲ್ಲಿ 2 ಲಕ್ಷ ಕೋಟಿ ಸಾಲ ಮಾಡಿದ್ದರು. 70 ವರ್ಷದಲ್ಲಿ 1 ಲಕ್ಷ ಕೋಟಿ ಸಾಲ ರಾಜ್ಯದ ಮೇಲಿತ್ತು. ಅವರು ಮಾಡಿದ ಸಾಲವನ್ನು ನಾವು ತೀರಿಸುತ್ತಿದ್ದೇವೆ. ಆರ್ಥಿಕ ನಿರ್ವಹಣೆ ಸರಿಯಾಗಿ ಮಾಡದಿದ್ದರೆ ಸಾಲ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.

ನಮ್ಮದು ಜವಾಬ್ದಾರಿಯುತ ಸರ್ಕಾರ :
ಸರ್ಕಾರ ಅತ್ಯಂತ ಉತ್ತಮವಾದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಜನಕೇಂದ್ರಿತ, ಜನಪರ ಆಯವ್ಯಯವನ್ನು ನೀಡಲಾಗಿದೆ.ಚುನಾವಣಾ ವರ್ಷ ವೆಂದು ಬೇಜವಾಬ್ದಾರಿಯ ಘೋಷಣೆ ಮಾಡಬಹುದಿತ್ತು. ಜನರಿಂದ ಕೇವಲ ಮತ ಪಡೆಯುವ ಉದ್ದೇಶದಿಂದ ಯೋಜನೆಗಳನ್ನು ಮಾಡಬಹುದಿತ್ತು. ಆದರೆ ಭಾಜಪ ಜವಾಬ್ದಾರಿ ಇರುವ ಪಕ್ಷ , ನಮ್ಮದು ಜವಾಬ್ದಾರಿ ಇರುವ ಸರ್ಕಾರ. ರಾಜ್ಯದ ಆರ್ಥಿಕತೆ , ಅಭಿವೃದ್ಧಿ ಮತ್ತು ಸಾಮಾಜಿಕ ಅಗತ್ಯಗಳನ್ನು ನೋಡಿಕೊಂಡು ಸಮತೋಲನಗೊಳಿಸಿ ಕೆಲಸ ಮಾಡಬೇಕಾಗುತ್ತದೆ. ದುಡಿಯುವ ವರ್ಗಕ್ಕೆ ಶಕ್ತಿ ಕೊಟ್ಟರೆ , ಅವರ ಆರ್ಥಿಕತೆ ಉತ್ತಮಗೊಳ್ಳುತ್ತದೆ. ಅನುಷ್ಠಾನಗೊಳಿಸಲು ಸಾಧ್ಯವಾದ ಯೋಜನೆಗಳನ್ನು ಹಮ್ಮಿಕೊಂಡು, ಸಾಧಿಸಿ ತೋರಿಸುವ ಬಜೆಟ್ ನ್ನು ಮಂಡಿಸಲಾಗಿದೆ ಎಂದರು.

ನಮ್ಮ ಬಜೆಟ್ ಮೇಲೆ ಜನರ ಭರವಸೆಯಿದೆ :
ತೆರಿಗೆ ಇಲ್ಲದೇ ಆಡಳಿತದಲ್ಲಿ ಸುಧಾರಣೆ ತಂದು , ತೆರಿಗೆ ಕ್ಷಮತೆಯನ್ನು ತಂದು ಬಜೆಟ್ ನೀಡಲಾಗಿದೆ. ಈ ಬಜೆಟ್ ನಿಂದಾಗಿ ಮುಂದಿನ ಚುನಾವಣೆಗೆ ಲಾಭವಾಗುವ ನಿರೀಕ್ಷೆ ಇದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಜನರು ನಮ್ಮ ಹಿಂದಿನ ಸಾಧನೆಗಳನ್ನು ನೋಡುವುದಲ್ಲದೇ, ನಮ್ಮ ಬಜೆಟ್ ನ ಮೇಲೆ ಭರವಸೆಯನ್ನಿಡುತ್ತಾರೆ. ಈ ಭರವಸೆಯೇ ಭಾಜಪ ಪಕ್ಷಕ್ಕೆ ಜಯ ದೊರಕಿಸಿಕೊಡುತ್ತದೆ ಎಂಬ ವಿಶ್ವಾಸವಿದೆ ಎಂದರು.