IMG 20220609 WA0014

ಪಾವಗಡ :ಎಸ್ ಎಸ್ ಎಲ್ ಸಿ ಮರುಮೌಲ್ಯ ಮಾಪನದಲ್ಲಿ ಗಾನವಿ ಎ ರಾಜ್ಯಮಟ್ಟದ ಸಾಧನೆ…

Uncategorized

ಎಸ್ ಎಸ್ ಎಲ್ ಸಿ ಮರುಮೌಲ್ಯ ಮಾಪನದಲ್ಲಿ ಗಾನವಿ ಎ ರಾಜ್ಯಮಟ್ಟದ ಸಾಧನೆ…

ಪಾವಗಡ .. 2021-22 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 621 ಅಂಕಗಳನ್ನು ಗಳಿಸಿದ್ದ ಎ.ಗಾನವಿ ತಾಲೂಕಿನ ಕೋಟಗುಡ್ಡದ ಸಹನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮರುಮೌಲ್ಯಮಾಪನದ ನಂತರ 4 ಅಂಕಗಳು ಹೆಚ್ಚಾಗಿ. ರಾಜ್ಯಯ ಮಟ್ಟದ ಸಾಧಕಿ ಆಗಿದ್ದಾರೆ .

ಮೊದಲು ಎಸ್ ಎಸ್ ಎಲ್ ಸಿ ಫಲಿತಾಂಶ ಬಂದ ನಂತರ ಆಂಗ್ಲ ಭಾಷೆಯಲ್ಲಿ 100 ಕ್ಕೆ 96 ಅಂಕಗಳು ಮಾತ್ರ ಬಂದಿದ್ದು ಇದರಿಂದ ಅಸಮಧಾನಗೊಂಡ ಗಾನವಿ ಆಂಗ್ಲ ವಿಷಯದ ಉತ್ತರ ಪತ್ರಿಕೆಯ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಈಗ ಫಲಿತಾಂಶ ಹೊರಬಿದ್ದಿದ್ದು. ಆಂಗ್ಲ ಭಾಷೆಯಲ್ಲಿ 100 ಅಂಕಗಳಿಗೆ 100 ಅಂಕಗಳು ಬಂದಿದ್ದು.. ಆಕೆಯ ಒಟ್ಟು ಅಂಕಗಳು 625 ಕ್ಕೆ 625 ಅಂಕಗಳು ಬಂದಿದ್ದು. ರಾಜ್ಯ ಮಟ್ಟದ ಸಾಧನೆ ಮಾಡಿ ಪಾವಗಡ ತಾಲ್ಲೂಕು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಹೆಸರಿನ ಕೀರ್ತಿ ಪತಾಕೆಯನ್ನು ರಾಜ್ಯ ಮಟ್ಟದಲ್ಲಿ ಹಾರಿಸಿದ ಗ್ರಾಮೀಣ ಪ್ರತಿಭೆ ಗಾನವಿ.ಎ ರವರು ಇಂದು ಎಲ್ಲಾ ವಿದ್ಯಾರ್ಥಿಗಳಿಗೂ ಸ್ಪೂರ್ತಿಯಾಗಿದ್ದಾರೆ.

ಪಾವಗಡ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ನಿವಾಸಿ ಶಿಕ್ಷಕರಾದ ಆನಂದ್ ಮತ್ತು ರಾಧಾ ದಂಪತಿಗಳ ಮಗಳಾದ ಗಾನವಿ.ಎ ರವರು ಕೋಟಗುಡ್ಡದ ಸಹನಾ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಪಠ್ಯೇತರ ಚಟುವಟಿಕೆಗಳಲ್ಲಿಯೂ ಸದಾ ಮುಂಚೂಣಿಯಲ್ಲೇ ಇರುತ್ತಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಇಂಗ್ಲೀಷ್ ಕಂಠಪಾಠ ಮತ್ತು ಹಿಂದಿ ಕಂಠಪಾಠ ವಿಭಾಗದಲ್ಲಿ ಪ್ರಥಮ ಸ್ಥಾನ, ತಾಲ್ಲೂಕು ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಸೇರಿದಂತೆ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಅನೇಕ ಪಠ್ಯೇತರ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ.

ಮೃದು ಸ್ವಭಾವದ ವಿದ್ಯಾರ್ಥಿನಿಯಾದ ಗಾನವಿ.ಎ ತಾನು ವ್ಯಾಸಂಗ ಮಾಡುವ ಸಮಯದಲ್ಲಿ ಶಿಕ್ಷಕರೊಂದಿಗೆ, ಸಹಪಾಠಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಎಲ್ಲಾ ಶಿಕ್ಷಕರಿಗೂ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿ,
ಅದೇ ರೀತಿಯಲ್ಲಿ ಮನೆಯ ಕೆಲಸಗಳಲ್ಲಿಯೂ ಸಹ ಪೋಷಕರಿಗೆ ಸಹಾಯ ಮಾಡುತ್ತಾ ತನ್ನ ಮನೆಗೆ ಅಚ್ಚುಮೆಚ್ಚಿನ ಮಗಳಾಗಿದ್ದಾರೆ.

ಶಾಲಾ ಆಡಳಿತ ಮಂಡಳಿಯ ಶಿಸ್ತುಬದ್ಧ ಮೇಲ್ವಿಚಾರಣೆ, ಶಿಕ್ಷಕರು ಹೇಳಿದ ಸಲಹೆ-ಸೂಚನೆಗಳು, ಪರಿಣಾಮಕಾರಿ ಬೋಧನೆ, ಅತ್ಯುತ್ತಮವಾದ ಶಾಲೆಯ ಕಲಿಕಾ ವಾತಾವರಣ, ಮನೆಯಲ್ಲಿ ಪೋಷಕರ ಪ್ರೋತ್ಸಾಹ ಈ ಎಲ್ಲಾ ಅಂಶಗಳಿಂದ ತಾನು ಈ ಸಾಧನೆ ಮಾಡಿರುವುದಾಗಿ ಗಾನವಿ.ಎ ಅಭಿಪ್ರಾಯಪಟ್ಟಿರುತ್ತಾರೆ. ಇಂದು ರಾಜ್ಯ ಮಟ್ಟದ ಸಾಧನೆ ಮಾಡಿದ ಗಾನವಿಗೆ ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶ್ವಥನಾರಾಯಣ ರವರು ಇಲಾಖೆಯ ಪರವಾಗಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಬಿ ಆರ್.ಸಿ. ಪವನ್ ಕುಮಾರ್ ರೆಡ್ಡಿ. ಶಿವಮೂರ್ತಿ ನಾಯ್ಕ. ಇ.ಸಿ.ಓ ಶಿವಕುಮಾರ್. ಪಿ.ಇ.ಒ ಚಿದಾನಂದ ಸ್ವಾಮಿ .ಇ.ಸಿ.ಒ ರಂಗನಾಥ್ . ಉಪಪ್ರಾಂಶುಪಾಲರಾದ ಓ.ಧನಂಜಯ. ಎಡಿಎಂಎಂ. ಹನುಮಂತರಾಯಪ್ಪ. ಕಟ್ಟಾ ನರಸಿಂಹಮೂರ್ತಿ. ಮುಖ್ಯಶಿಕ್ಷಕ ನರಸಿಂಹಪ್ಪ. ಇತರರು ಉಪಸ್ಥಿತರಿದ್ದರು.

ವರದಿ: ಶ್ರೀನಿವಾಸುಲು ಎ