IMG 20200727 202910

ಸಮಸ್ಯೆ-ಸವಾಲುಗಳ ವರ್ಷ: ಪರಿಹಾರದ ಸ್ಪರ್ಶ

STATE Genaral

ಸಮಸ್ಯೆ-ಸವಾಲುಗಳ ವರ್ಷ: ಪರಿಹಾರದ ಸ್ಪರ್ಶ

ಬೆಂಗಳೂರು, ಜುಲೈ 27 (ಕರ್ನಾಟಕ ವಾರ್ತೆ): ಕಳೆದ ವರ್ಷದ ತೀವ್ರ ಬರ-ನೆರೆಯಂತಹ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಪ್ರಸ್ತುತ ರಾಜ್ಯ ಸರ್ಕಾರ ಶತಮಾನದಲ್ಲೇ ಕಂಡರಿಯದ ಕೋವಿಡ್-19 ಸಮಸ್ಯೆ ಸೇರಿದಂತೆ ಹಲವು ಸಂಕಷ್ಟಗಳ ನಡುವೆಯೂ ದೃಢ ಸಂಕಲ್ಪದೊಂದಿಗೆ ಬಸವಾದಿ ಶರಣರ ಕನಸಿನ ಕಲ್ಯಾಣ ಕರ್ನಾಟಕ ಕಟ್ಟುವ ಸಂಕಲ್ಪದೊಂದಿಗೆ ಅಭಿವೃದ್ಧಿಯ ಪಥದಲ್ಲಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಇಂದು ರಾಜ್ಯಾದ್ಯಂತ ವಚ್ರ್ಯುಯಲ್ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯಮಟ್ಟದ ಕಾರ್ಯಕ್ರಮವನ್ನು ವಿಧನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ 150 ಅಡಿ ವಿಶಾಲ ಎಲ್.ಇ.ಡಿ ಪರದೆಯ ಮೇಲೆ ರಾಜ್ಯದ 30 ಜಿಲ್ಲೆಗಳಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಬಹುದಾಗಿತ್ತು. ಅದೇ ರೀತಿಯಲ್ಲಿ ಜಿಲ್ಲಾ ಕಾರ್ಯಕ್ರಮಗಳಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಕಾರ್ಯಕ್ರಮವನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ರಾಜ್ಯದ ಮೂಲೆ ಮೂಲೆಯಲ್ಲಿರುವ ಫಲಾನುಭವಿಗಳು ಮುಖ್ಯಮಂತ್ರಿಗಳಿಂದ ತಾವು ಪಡೆದ ಸಹಾಯವನ್ನು ಸ್ಮರಿಸಿ ಅವರಿಗೆ ಶುಭ ಹಾರೈಸಿದರು. ಅದರಲ್ಲಿ ಹಲವರು ಸಲ್ಲಿಸಿದ ಬೇಡಿಕೆಗಳಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.

IMG 20200727 202902

 

ಫಲಾನುಭವಿಗಳೊಂದಿಗೆ ಸಂವಾದ:

ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಆಯ್ದ ಫಲಾನುಭವಿಗಳ ಜೊತೆ ಮಾನ್ಯ ಮುಖ್ಯಮಂತ್ರಿಗಳು ನವ ಮಾಧ್ಯಮದ ಮೂಲಕ ನೇರ ಸಂವಾದದಲ್ಲಿ ಭಾಗವಹಿಸಿದರು. ಈ ಸಮಯದಲ್ಲಿ ಎಲ್ಲಾ ಫಲಾನುಭವಿಗಳ ಮಾತುಗಳನ್ನು ಶಾಂತಚಿತ್ತದಿಂದ ಮಾನ್ಯ ಮುಖ್ಯಮಂತ್ರಿಗಳು ಆಲಿಸಿದರು. ರಾಜ್ಯ ಸರ್ಕಾರದ ಯೋಜನೆಯ ಲಾಭ ಪಡೆದ ಫಲಾನುಭವಿಗಳು ಮುಖ್ಯಮಂತ್ರಿಗಳ ಜೊತೆ ಮಾತನಾಡುವ ಸಮಯದಲ್ಲಿ ಖುಷಿಯಲ್ಲಿ ತೇಲಾಡಿದರು.

ಶಿವಮೊಗ್ಗದ ಮಂಜುಳ ಅವರು ಎರಡು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದು, ಅತಿಯಾದ ಮಳೆಯಿಂದಾಗಿ ಮನೆ ಬಿದ್ದು ಹೋದಾಗ ಮನೆ ಕಟ್ಟಲು ಹಣ ಕಾಸಿನ ತೊಂದರೆ ಉದ್ಭವವಾಯಿತು. ಅಂತಹ ಸಮಯದಲ್ಲಿ ಸರ್ಕಾರವು ನೆರವಿಗೆ ಬಂದು ಒಂದೇ ಸಲ 3 ಲಕ್ಷಗಳನ್ನು ನೀಡಿತು. ಇದರಿಂದ ನನಗೆ ದೇವರೇ ನೆರವು ನೀಡಿದಂತಾಯಿತು ಎಂದು ಹೇಳಿ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಧನ್ಯವಾಧಗಳನ್ನು ತಿಳಿಸಿದರು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಶಾಂತವೀರನಗೌಡ ಪಾಟೀಲ್ ಅರುವು ಪ್ರತಿಕ್ರಿಯಿಸಿ ಕೊರೋನಾ ಇದ್ದರೂ ಸಹ ಗ್ರಾಮೀಣ ಖಾತ್ರಿ ಯೋಜನೆಯಡಿ ನೆರುವು ನೀಡಲಾಗಿದ್ದು ನನಗೆ ಕೆಲಸ ಸಿಕ್ಕಿರುವುದರಿಂದ ನನಗೆ ಸಂತೋಷವಾಗಿದೆ. ಇದರಿಂದ ನನ್ನ ಕುಟುಂಬದ ನಿರ್ವಹಣೆ ನೆಡಯುತ್ತಿದೆ. ಎಂದು ತಿಳಿಸಿದರು.

IMG 20200727 202844

ಬೆಳಗಾವಿಯ ಪವಿತ್ರ ಅರಭಾವಿ ಮಾತನಾಡಿ ಲಾಕ್‍ಡೌನ್ ಸಮಯದಲ್ಲಿ ತಂದೆ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ನನಗೆ ಔಷಧಿ ತರಲು ಕಷ್ಟವಾಗಿತ್ತು. ನಮ್ಮ ತಂದೆ ಕಿಡ್ನಿ ಸಮಸ್ಯೆಯಿಂದ ಬಳಲುತಿದ್ದರು. ಇಂತಹ ಸಮಯದಲ್ಲಿ ಸರ್ಕಾರ ನನ್ನ ನೆರವಿಗೆ ಬಂದು ಔಷಧಿಯನ್ನು ಕೊಡಿಸಿಕೊಟ್ಟರು. ನಾನು ಸರ್ಕಾರಕ್ಕೆ ಚಿರಋಣಿಯಾಗಿರುತ್ತೇನೆ ಎಂದರು.

ಮತ್ತೊಬ್ಬ ಫಲಾನುಭವಿ ಮೈಸೂರು ಜಿಲ್ಲೆಯ ನಂಜನಗೂಡಿನ ಬಸವಣ್ಣ ಅವರು ಮಾತನಾಡಿ ಕಪಿಲ ನದಿ ತೀರಲದಲಿ ವಾಸವಿದ್ದ ನಾವು ಪ್ರವಾಹ ಬಂದು ಮನೆಗಳೆಲ್ಲ ಕೊಚ್ಚಿಹೋದವು ಅಂತಹ ಸಮಯದಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಕೇಂದ್ರಗಳು ನಮ್ಮ ನೆರವಿಗೆ ಬಂದವು. ಮನೆ ಮಠ ಕಳೆದುಕೊಂಡವರಿಗೆ ಸೌಲಭ್ಯ ಕಲ್ಪಿಸಿತು ಎಂದು ಸರ್ಕಾರಕ್ಕೆ ತಮ್ಮ ಧನ್ಯವಾದಗಳನ್ನು ಸಲ್ಲಿಸಿದರು.

IMG 20200727 203414

ತುಮಕೂರಿನ ಫಲಾನುಭವಿ ಕಲಾವತಿ ಅವರು ಮಾತನಾಡಿ, ಸ್ಟಾಪ್ ನರ್ಸ್ ಆಗಿರುವ ನಾನು ಕೋವಿಡ್-19 ಸಾಂಕ್ರಮಿಕ ರೋಗಕ್ಕೆ ಒಳಗಾದಗ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ನನಗೆ ಮಾನಸಿಕ ಸ್ಥೈರ್ಯ ತುಂಬಿದರು. ಅವರು ನೀಡಿದ ಧೈರ್ಯದಿಂದಾಗಿ ನಾನು ಬಹಳ ಬೇಗ ಗುಣಮುಖಳಾಗಿದ್ದೇನೆ. ಈಗಲೂ ನಾನು ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಸರ್ಕಾರದ ಸ್ಪೂರ್ತಿಯಿಂದ ಬೇಗ ಗುಣಮುಖವಾಗಿದ್ದು, ಸರ್ಕಾರಕ್ಕೆ ತಮ್ಮ ಧನ್ಯವಾದಗಳನ್ನು ಸಲ್ಲಿಸಿದರು.

ಹಾಸನದ ಪುಷ್ಪ ಮಡಿವಾಳ ಮಾತನಾಡಿ, ಕೋವಿಡ್ ಸಮಯದಲ್ಲಿ ನಮಗೆ ಕೆಲಸವೇ ಇರಲಿಲ್ಲ. ಇದರಿಂದ ಜೀವನ ನಡೆಸುವುದೇ ಕಷ್ಟವಾಗಿತ್ತು. ಇಂತಹ ಸಮಯದಲ್ಲಿ ಸರ್ಕಾರ ಪರಿಹಾರ ಧನವನ್ನು ಘೋಷಿಸಿತು. ಇದರಿಂದ ನಾವು ಪರಿಹಾರ ಪಡೆದಿದ್ದೇವೆ. ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ಹೇಳಿದರು.

ಹಿರಿಯೂರು ತಾಲ್ಲೂಕಿನ ವಸಂತ ಕುಮಾರಿ ರೈತ ಮಹಿಳೆ ಮಾತನಾಡಿ ಕೊರೋನಾ ಲಾಕ್‍ಡೌನ್ ಸಮಯದಲ್ಲಿ ನಾವು ಬೆಳೆದ ಈರುಳ್ಳಿ ಬೆಳೆಯನ್ನು ಹೇಗೆ ಮಾರಾಟ ಮಾಡುವುದು ಎಂದು ದಿಕ್ಕು ತೋಚದಂತಾಗಿತ್ತು. ಅಂತಹ ಸಮಯದಲ್ಲಿ ಸರ್ಕಾರದ ಸಾಮಜಿಕ ಜಾಲತಾಣದಿಂದ ಸಿಕ್ಕ ಸಲಹೆಯ ಮೇರೆಗೆ ನಮ್ಮ ಸಮಸ್ಯೆ ಬಗೆಹರಿಯಿತು. ತಕ್ಷಣ ನಮ್ಮ ಸಮಸ್ಯೆಗೆ ಸರ್ಕಾರ ಸ್ಪಂದಿಸಿತು ಎಂದು ತಮ್ಮ ಧನ್ಯವಾಧಗಳನ್ನು ಮುಖ್ಯಮಂತ್ರಿಗಳಿಗೆ ತಿಳಿದರು.

IMG 20200727 203353

ಶಿಡ್ಲಘಟ್ಟ ತಾಲ್ಲೂಕು ಬೈಯಪ್ಪನಹಳ್ಲಿಯ ಗ್ರಾಮದ ಬಿ.ಎಲ್. ರವಿಚಂದ್ರ ಮಾತನಾಡಿ, ಲಾಕ್‍ಡೌನ್ ಸಮಯದಲ್ಲಿ ನಾವು ನೇಯ್ಕೆ ಮಾಡಿದ ರೇಷ್ಮೇ ಸೀರೆಗಳು ಮಾರಾಟವಾಗದೆ ಸ್ಟಾಕ್ ಆದವು. ಜೀವನ ನಡೆಸುವುದೇ ಕಷ್ಟವಾಯಿತು. ಇಂತಹ ಸಮಯದಲ್ಲಿ ಸರ್ಕಾರವು ನೇಕಾರರಿಗೆ ಪ್ರೋತ್ಸಾಹ ಧನ ಘೋಷಣೆ ಮಾಡಿತು. ಇದರಿಂದ ನಮಗೆ ತುಂಬಾ ಸಹಾಯವಾಯಿತು ಎಂದು ಮುಖ್ಯಮಂತ್ರಿಗಳಲ್ಲಿ ತಮಗೆ ದೊರೆತ ನೆರವಿನ ಬಗ್ಗೆ ವಿಶ್ಲೇಷಿಸಿದರು.

ಹಾವೇರಿಯ ಜ್ಯೋತಿ ಅವರು ಮಾತನಾಡಿ ನೆರೆಯಿಂದ ನಮ್ಮ ಮನೆ ಕುಸಿಯಿತು. ನಮಗೆ ನೆಲೆಯಿಲ್ಲದಾಯಿತು. ಇಂತಹ ಸಮಯದಲ್ಲಿ ಸರ್ಕಾರದಿಂದ ದೊರೆತ 5 ಲ್ಕಷಗಳ ಪರಿಹಾರದಿಂದಾಗಿ ನಾವು ಮತ್ತೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು ಎಂದು ತಿಳಿಸಿದರು.

 

ಧಾರವಾಡ ಜಿಲ್ಲೆಯ ಗುರ್ಗಪ್ಪ ಹನುಮಂತಪ್ಪ ಕಟ್ಟಡ ಕಾರ್ಮಿಕ ಮಾತನಾಡಿ ಕೋವಿಡ್ ಸಮಯದಲ್ಲಿ ಕಾಮಿಕರಿಗೆ ನೀಡಿರುವ ನೆರವನ್ನು ಶ್ಲಾಘಿಸಿದರು. ಕೆಲಸವಿಲ್ಲದ ಸಮಯದಲ್ಲಿ ಕಾರ್ಮಿಕರಿಗೆ ಪರಿಹಾರ ಧನವಾಗಿ ಸರ್ಕಾರವು ತಲಾ ಐದು ಸಾವಿರ ರೂಪಾಯಿಗಳನ್ನು ಘೋಷಿಸಿರುವುದಕ್ಕೆ ಧನ್ಯವಾಧಗಳನ್ನು ಸಲ್ಲಿಸಿದರು.