ತುರ್ತು ಆಂಬುಲೆನ್ಸ್ ವಾಹನ ಸಮಯಕ್ಕೆ ಸರಿಯಾಗಿ ಬಾರದೆ ಮಹಿಳೆಯ ಜೀವ ಹಾರಿ ಹೋಯಿತು …
ಮದುಗಿರಿ : – ತಾಲ್ಲೂಕು ಐಡಿ ಹಳ್ಳಿ.ಹೋಬಳಿ ಐಡಿ ಹಳ್ಳಿಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ ಆದರೆ ಆರೋಗ್ಯ ಕೇಂದ್ರ 24*7 ಆಸ್ಪತ್ರೆ ಆಗಿರುವುದಿಲ್ಲ . ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 6:00 ಗಂಟೆವರವಿಗೂ.ಕರ್ತವ್ಯ ನಿರ್ವಹಿಸುತ್ತಾರೆ ರಾತ್ರಿಹೂತ್ತಿನಲ್ಲಿ ಹೆರಿಗೆ ವಿಭಾಗಕ್ಕೆ ಸಂಬಂಧಿಸಿದಂತೆ ಸ್ಟಾಫ್ ನರ್ಸ್ ಕೆಲಸ ನಿರ್ವಹಿಸುತ್ತಿರುತ್ತಾರೆ. ಆದರೂ ಕೂಡ ರೋಗಿಗಳು ಬಂದರೆ ಅವರಿಗೆ ಚಿಕಿತ್ಸೆ ನೀಡಿ ಕಳಿಸಿಕೊಡಲಾಗುತ್ತದೆ.
ಐಡಿ ಹಳ್ಳಿ ಗ್ರಾಮದಲ್ಲಿ ದಲಿತ ಮಹಿಳೆಯಾದ ಸುಮಾರ 65 ವರ್ಷ ವಯಸ್ಸುಳ್ಳ ಜಯಮ್ಮ ಕೋಂ ಲೇಟ್ ಪುಟ್ಟಪ್ಪ ರವರು ತುಂಬಾ ಉಸಿರಾಟದಿಂದ ಬಳಲುತ್ತಿದ್ದು ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಕರದೊಯ್ಯಲು ತುರ್ತು ಆಂಬುಲೆನ್ಸ್ ವಾಹನಕ್ಕೆ ಕರೆ ಮಾಡಿದರೆ ಕರೆಯನ್ನು ಸ್ವೀಕರಿಸುತ್ತಿಲ್ಲ ಇಡೀ ರಾಜ್ಯದಲ್ಲಿಯೇ ತುರ್ತು ಅಂಬುಲೆನ್ಸ್ ವಾಹನಗಳ ಸೇವೆ ತುಂಬಾ ಸಮಸ್ಯೆಯಾಗಿತ್ತು.
ಈ ಆರೋಗ್ಯ ಕೇಂದ್ರಕ್ಕೆ ತುರ್ತು ಅಂಬುಲೆನ್ಸ್ ವಾಹನದ ವ್ಯವಸ್ಥೆ ಈ ಹಿಂದೆ ಇತ್ತು. ತಾಲೂಕ್ ಆರೋಗ್ಯ ಅಧಿಕಾರಿಗಳಾದ ರಮೇಶ್ ಬಾಬುರವರನ್ನು ಫೋನ್ ಕರೆಯ ಮೂಲಕ ಮಾತನಾಡಿದಾಗ ಅವರು ಆರೋಗ್ಯ ಕೇಂದ್ರಕ್ಕೆ ತುರ್ತು ಅಂಬುಲೆನ್ಸ್ ವಾಹನ ಸೌಲಭ್ಯ ಇದೆ ಆದರೆ ವಾಹನವನ್ನು ರಿಪೇರಿಗೆ ಕಳಿಸಿಕೊಡಲಾಗಿತ್ತು ಎಂದು ತಿಳಿಸಿರುತ್ತಾರೆ. ಎಷ್ಟು ದಿನದಿಂದ ವಾಹನದ ರಿಪೇರಿ ಸಮಸ್ಯೆ ಇದೆ ಎಂದು ಕೇಳಿದಾಗ ಎರಡು ತಿಂಗಳಿಂದಲೂ ಇದೆ ಆದರೆ ವಾಹನ ಈಗ ರಿಪೇರಿಯಾಗಿ ವಾಪಸ್ ಬರಲಿದೆ ಎಂದರು.
ತುರ್ತು ಆಂಬುಲೆನ್ಸ್ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ನರ್ಸುಗಳು ಏಕಕಾಲದಲ್ಲಿ ರಜೆ ಹಾಕಿರುವುದರಿಂದ ತುರ್ತು ವಾಹನ ಆಂಬುಲೆನ್ಸ್ ನಲ್ಲಿ ಕರ್ತವ್ಯ ನಿರ್ವಹಿಸಲು ಯಾರು ಇಲ್ಲದೆ ಕಾರಣ ಬೆಳಧರ ಆರೋಗ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡಿಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ
ಕೂಡಲೇ ತಾಲೂಕ್ ಆರೋಗ್ಯ ಅಧಿಕಾರಿಗಳು ತುರ್ತು ಆಂಬುಲೆನ್ಸ್ ವಾಹನ ವ್ಯವಸ್ಥೆ ಮಾಡಿದ್ದರೆ ಈ ಒಂದು ಘಟನೆ ನಡೆಯುತ್ತಿರಲಿಲ್ಲ ಎಂದು ಜಿಲ್ಲಾ ಸಾಮಾಜಿಕ ದಲಿತ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿಯಾದ ಐ ಡಿ ಹಳ್ಳಿ ಬಾಲಕೃಷ್ಣರವರು ತುಂಬಾ ಆಕ್ರೋಶ ವ್ಯಕ್ತಪಡಿಸಿ. ಮಾತನಾಡಿದರು.
ತಾಲೂಕಿನಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂತಹ ಗಂಭೀರವಾದ ಘಟನೆಗಳು ಮರಿಕಳಿಸದಂತೆ ಎಚ್ಚರವಹಿಸಿ ಬಡಜೀವಗಳ ಪ್ರಾಣ ಹೋಗದಂತೆ ಆರೋಗ್ಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಸಂಘಟನೆ ವತಿಯಿಂದ ಇಡೀ ರಾಜ್ಯದಾದ್ಯಂತ ಜಿಲ್ಲಾದಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ತಿಳಿಸಿರುತ್ತಾರೆ
ಈ ಸಂದರ್ಭದಲ್ಲಿ ಐ ಡಿ ಹಳ್ಳಿ ರಾಮಾಂಜನೇಯ . ಸಾವನ್ನಪ್ಪಿರುವ ಜಯಮ್ಮನ ಸಂಬಂಧಿಕರು ತುಂಬಾ ಆಕ್ರೋಶ ವ್ಯಕ್ತಪಡಿಸಿ ಯಾರಿಗೂ ಕೂಡ ಇಂತಹ ಸನ್ನಿವೇಶಗಳು ಮರುಕಳಿಸಬಾರದು ಎಂದಿದ್ದಾರೆ.
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.