IMG 20221014 WA0032

ಬೆಂಗಳೂರು ಉತ್ಸವ ಕ್ಕೆ ಚಾಲನೆ…!

BUSINESS


ದೀಪಾವಳಿ ಹಬ್ಬದ ಶಾಪಿಂಗ್ ಪ್ರಿಯರನ್ನು ಕೈಬೀಸಿ ಕರೆದ ‘ಬೆಂಗಳೂರು ಉತ್ಸವ’

ಬೆಂಗಳೂರು, ಅಕ್ಟೋಬರ್ 14,2022: ಬೆಳಕಿನ ಹಬ್ಬದ ಪ್ರಯುಕ್ತ ಚಿತ್ತಾರ ಸಹಯೋಗದೊಂದಿಗೆ ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ‘ಬೆಂಗಳೂರು ಉತ್ಸವವನ್ನು’ ಆಯೋಜಿಸಿದೆ.ಅಕ್ಟೋಬರ್ 14ರಿಂದ ಅಕ್ಟೋಬರ್ 23ರವರೆಗೆ 10 ದಿನಗಳ ನಡೆಯಲಿರುವ ಈ ಕರಕುಶಲವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನಟಿ ಹಾಗೂ ಗಾಯಕಿಯಾದ ಸಾಯಿ ಪ್ರಿಯಾ ಉದ್ಘಾಟಿಸಿದರು.ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು

IMG 20221014 WA0033

ಇನ್ನು ಈ ಕಾರ್ಯಕ್ರಮವನ್ನು ಉದ್ಘಾಟಟಿಸಿದ ನಟಿ ಸಾಯಿ ಪ್ರಿಯಾ ಅವರು “ದೀಪಾವಳಿ ಪ್ರಯುಕ್ತ ಚಿತ್ತಾರ ಸಹಯೋಗದೊಂದಿಗೆ ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಆಯೋಜಿಸಿದ ಈ ‘ಬೆಂಗಳೂರು ಉತ್ಸವ’ ತುಂಬಾನೇ ಚೆನ್ನಾಗಿದೆ. ನೋಡುತ್ತಾ ಇದ್ದರೆ ಒಂದಕ್ಕಿಂತ ಒಂದು ಚೆಂದವಿದೆ. ಯಾವುದನ್ನು ತೆಗೆದುಕೊಳ್ಳುವುದು ಎಂದು ಗೊತ್ತಾಗುತ್ತಿಲ್ಲ. ಇನ್ನು ಇದು ನೇರವಾಗಿ ತಯಾರಕರಿಂದ ಗ್ರಾಹಕರಿಗೆ ಸಿಗುವುದರಿಂದ ಕೈಗೆಟುಕವ ದರದಲ್ಲಿ ಇದು ಲಭ್ಯವಿದೆ. ಹಬ್ಬಕ್ಕೆ ಮನೆಗೆ ಬೇಕಾಗುವ ವಸ್ತುಗಳಿಂದ ಹಿಡಿದು ಉಡುಪು, ಆಭರಣಗಳು ಎಲ್ಲವೂ ಇಲ್ಲಿ ಸಿಗಲಿದೆ” ಎಂದರು.

“ಹಬ್ಬದ ಶಾಪಿಂಗ್ ಮಾಡುವುವವರಿಗೆ ಇದು ಒಳ್ಳೆಯ ತಾಣ. ದೀಪಾವಳಿ ಹಬ್ಬಕ್ಕೆ ಮುಖ್ಯವಾಗಿ ಬೇಕಾದ ಹಣತೆಗಳು ಇಲ್ಲಿವೆ. ನಾನಾ ವಿನ್ಯಾಸದ ರಂಗು ರಂಗಿನ ದೀಪಗಳನ್ನು ಕಣ್ತುಬ್ಬಿಕೊಳ್ಳುವುದೇ ಖುಷಿಯ ಸಂಗತಿ. ಇನ್ನು ಬೆಲೆ ಕೂಡ ಕೈಗೆಟುಕವ ರೀತಿ ಇದೆ.ಇಲ್ಲಿರುವ ವಸ್ತುಗಳನ್ನು ನೋಡುತ್ತಾ ಇದ್ದರೆ ಸಮಯ ಸರಿದದ್ದೆ ತಿಳಿಯುತ್ತಿಲ್ಲ. ದೇಶದ ನಾನಾ ಭಾಗದ ಕರಕುಶಲಕಾರರು ತಯಾರಿಸಿದ ಈ ವಸ್ತುಗಳು ಕಣ್ಮನವನ್ನು ಸೆಳೆಯುತ್ತಿವೆ. ಈ ಬಾರಿ ಹಬ್ಬದ ಸಂಭ್ರಮ ಮತ್ತಷ್ಟೂ ಹೆಚ್ಚಲಿದೆ” ಎಂದು ಗ್ರಾಹಕರೊಬ್ಬರು ತಮ್ಮ ಖುಷಿ ಹಂಚಿಕೊಂಡರು.

IMG 20221014 WA0030

ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ ‘ಬೆಂಗಳೂರು ಉತ್ಸವ’ದಲ್ಲಿ 100ಕ್ಕೂ ಹೆಚ್ಚು ಮಳಿಗೆಗೆಳು ಇವೆ, ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು, ರಂಗು ರಂಗಿನ ದೀಪಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ. ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್ ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.