ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ದ್ವಿಗುಣ
ಬೆಂಗಳೂರು, ಡಿ. 18- ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಮಾಸಿಕ ಗೌರವಧನವನ್ನು ದ್ವಿಗುಣ ಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ವರೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ 3 ಸಾವಿರ ರೂ., ಉಪಾಧ್ಯಕ್ಷರು 2 ಸಾವಿರ ರೂ ಹಾಗೂ ಸದಸ್ಯರಿಗೆ 1 ಸಾವ್ರಿರ ರೂ. ಮಾಸಿಕ ಗೌರವ ಧನ ನೀಡಲಾಗುತ್ತಿತ್ತು. ಇದೀಗ ಅಧ್ಯಕ್ಷರಿಗೆ 6 ಸಾವಿರ ರೂ. , ಉಪಾಧ್ಯಕ್ಷ ರಿಗೆ 4 ಸಾವ್ರಿರ ರೂ. ಹಾಗೂ ಸದಸ್ಯರಿಗೆ 2 ಸಾವಿರ ರೂ. ಗೌರವ ಧನ ನಿಗದಿ ಪಡಿಸಿ ಸರ್ಕಾರಿ ಆದೇಶ ಹೊರಡಿಸಲಾಗಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರಿಗೆ ಗೌರವಧನ ಹೆಚ್ಚಳ: ಮುಖ್ಯಮಂತ್ರಿಗಳಿಗೆ ಸಚಿವ ಕೋಟ ಅಭಿನಂದನೆ
ನಿರಂತರವಾಗಿ ರಾಜ್ಯದ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವಧನ ದುಪ್ಪಟ್ಟು ಮಾಡಬೇಕೆಂಬ ಬೇಡಿಕೆಯನ್ನು ಮಾಡುತ್ತಿದ್ದು, ಇದೀಗ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಕೋರಿಕೆಯ ಮೇರೆಗೆ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ 6000, ಉಪಾಧ್ಯಕ್ಷರಿಗೆ 4000 ಹಾಗೂ ಸದಸ್ಯರಿಗೆ 2000 ಹೆಚ್ಚಿಸಲಾಗಿದೆ.
ಇದರಿಂದ ರಾಜ್ಯ ಸರ್ಕಾರಕ್ಕೆ 130 ಕೋಟಿ ರೂಪಾಯಿಗಳ ಹೆಚ್ಚುವರಿ ಹೊರೆ ಬರುತ್ತದೆ. ಅಷ್ಟಾಗಿಯೂ ಕೂಡ ನಮ್ಮೆಲ್ಲರ ಕೋರಿಕೆಯಂತೆ ಬಡವರ ಮಧ್ಯೆ ಬಡಿದಾಡುವ ಗ್ರಾಮ ಪಂಚಾಯತಿ ಸದಸ್ಯರ ಗೌರವಧನ ಹೆಚ್ಚಿಸಿದ್ದಕ್ಕಾಗಿ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಮತ್ತು ಗೌರವಧನ ಹೆಚ್ಚಿಸಲು ಸಲಹೆ ನೀಡಿದ ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ರವರಿಗೆ ಈ ಮೂಲಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.