ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ ಅನುಷ್ಠಾನ ಕುರಿತು ದುಂಡು ಮೇಜಿನ ಸಮ್ಮೇಳನ
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಮೌಲ್ಯ ಶಿಕ್ಷಣ ಅಳವಡಿಕೆಗೆ ಪ್ರಯತ್ನ
ಶಿಕ್ಷಣ ತಜ್ಞರು, ಚಿಂತಕರು, ಧಾರ್ಮಿಕ ಗುರುಗಳು ಸೇರಿದಂತೆ 50ಕ್ಕೂ ಹೆಚ್ಚು ಗಣ್ಯರು ಭಾಗಿ
ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ ಅಳವಡಿಕೆ ತುರ್ತು ಅಗತ್ಯವೆಂದು ಅಭಿಪ್ರಾಯ
ಬೆಂಗಳೂರು: ಜನವರಿ 9, 2023 ಮೌಲ್ಯ ಶಿಕ್ಷಣವನ್ನು ಈ ಶೈಕ್ಷಣಿಕ ವರ್ಷದಿಂದಲೇ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು.
‘ಶಾಲಾ ಹಂತದಲ್ಲಿ ಮೌಲ್ಯ ಶಿಕ್ಷಣದ ಅನುಷ್ಠಾನ’ ಕುರಿತು ಶಿಕ್ಷಣ ತಜ್ಞರು, ವಿವಿಧ ಧಾರ್ಮಿಕ ಗುರುಗಳು, ಚಿಂತಕರು, ಉನ್ನತ ಅಧಿಕಾರಿಗಳೊಂದಿಗೆ ವಿಧಾನಸೌಧದ 3ನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ (ಜ.9) ನಡೆದ ದುಂಡು ಮೇಜಿನ ಸಮಾಲೋಚನಾ ಸಭೆಯ ಬಳಿಕ ಸುದ್ದಿಗಾರರ ಜೊತೆ ಸಚಿವರು ಮಾತನಾಡಿದರು.

‘ಮೌಲ್ಯ ಶಿಕ್ಷಣ ಅಳವಡಿಸುವುದು ತುರ್ತು ಅಗತ್ಯ ಎಂದು ಸಭೆಯಲ್ಲಿ ಭಾಗವಹಿಸಿದ ಎಲ್ಲ ಗಣ್ಯರು ಅಭಿಪ್ರಾಯ ನೀಡಿದ್ದಾರೆ. ಲಿಖಿತ ರೂಪದಲ್ಲಿ ಇನ್ನಷ್ಟು ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಪಡೆಯಲಾಗುತ್ತದೆ.
ಅತ್ಯಂತ ಅರ್ಥಪೂರ್ಣವಾಗಿ ಸಭೆ ನಡೆದಿದೆ. ಆನ್¬ಲೈನ್ ಮತ್ತು ಆಫ್¬ಲೈನ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದ ಬಹುತೇಕ ಎಲ್ಲರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಸಭೆಯಲ್ಲಿ ವ್ಯಕ್ತವಾಗುವ ಅಂಶಗಳ ಆಧಾರದ ಮೇಲೆ ಇಲಾಖಾ ಹಂತದಲ್ಲಿ ಆಯೋಜಿಸುವ ಸಭೆಗಳಲ್ಲಿ ಚರ್ಚಿಸಿ ‘ಮೌಲ್ಯ ಶಿಕ್ಷಣ’ದ ಅನುಷ್ಠಾನದ ವಿಧಾನಗಳನ್ನು ಅಂತಿಮಗೊಳಿಸಲಾಗುತ್ತದೆ’ ಎಂದು ಸಚಿವರು ಹೇಳಿದರು.
‘ಕರ್ನಾಟಕ ಸೇರಿದಂತೆ ದೇಶದ ಅನೇಕ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಈಗಾಗಲೇ ಮೌಲ್ಯ ಶಿಕ್ಷಣವನ್ನು ಅಳವಡಿಸಿಕೊಂಡಿವೆ. ಇದನ್ನು ವ್ಯಾಪಕವಾಗಿ ಎಲ್ಲ ಶಾಲೆಗಳಲ್ಲೂ ಅಳವಡಿಸಬೇಕು ಎಂಬ ಅಭಿಪ್ರಾಯಗಳು ಸಭೆಯಲ್ಲಿ ಮೂಡಿ ಬಂದಿವೆ’ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು
*ದೇವರು, ಗುರುಗಳು, ಹಿರಿಯರು ಎನ್ನುವ ಗೌರವ ಭಾವನೆ, ಭಕ್ತಿಯನ್ನು ನೈತಿಕ ಶಿಕ್ಷಣವು ಒಳಗೊಂಡಿರಬೇಕು.
*ನೈತಿಕತೆ, ಮೌಲ್ಯಗಳು ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತವಾಗದೇ ದೈನಂದಿನ ಜೀವನದಲ್ಲಿ ಅಳವಡಿಕೆಯಾಗಬೇಕು. ಆಚರಣೆಗೆ ಬರಬೇಕು. ನೈತಿಕ ಶಿಕ್ಷಣದ ಪಾಠಗಳು ಪ್ರಾಯೋಗಿಕವಾಗಿರಬೇಕು.
*ರಾಜಕಾರಣಿಗಳು ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಮೌಲ್ಯ ಶಿಕ್ಷಣಕ್ಕೆ ಮೇಲ್ಪಂಕ್ತಿ ಹಾಕಬೇಕು. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಬೇಕು.
*ಶಿಕ್ಷಕರು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು.
*ಮಕ್ಕಳಿಗೆ ಸಾತ್ವಿಕ ಆಹಾರವನ್ನು ನೀಡಬೇಕು. ಇದರಿಂದ ಮಕ್ಕಳಿಗೆ ಉತ್ತಮ ಆರೋಗ್ಯ ಮತ್ತು ಮೌಲ್ಯಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ.
*ಮಕ್ಕಳ ಮೊಬೈಲ್ ಫೋನ್ ಗೀಳು ಬಿಡಿಸಬೇಕು. ಅದಕ್ಕಾಗಿ ಪಾಲಕರು ಕೂಡ ಸಾಧ್ಯವಾದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಿ ಮಾದರಿಯಾಗಬೇಕು.
*ಮನೆಯಲ್ಲಿ ಪಾಲಕರು ಮಕ್ಕಳಿಗೆ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಸೂಕ್ತ ವಾತಾವರಣ ನಿರ್ಮಾಣ ಮಾಡಬೇಕು.
*ನೈತಿಕತೆ, ಮೌಲ್ಯಗಳನ್ನು ಶಿಕ್ಷಣದ ಪ್ರತಿ ಹಂತದಲ್ಲೂ, ಹಂತ ಹಂತವಾಗಿ ನೀಡಬೇಕು. ಈ ಬಗ್ಗೆ ಮೌಲ್ಯಾಂಕನ ನಿಗದಿಯಾಗಬೇಕು. ಪರೀಕ್ಷೆಯನ್ನೂ ಮಾಡಬೇಕು.
*ನೈತಿಕ, ಮೌಲ್ಯ ಶಿಕ್ಷಣದಿಂದ ಮಕ್ಕಳು ವ್ಯಕ್ತಿತ್ವ ರೂಪಿಸಲು ಸಾಧ್ಯವಾಗುತ್ತದೆ.
*ಮೌಲ್ಯ ಶಿಕ್ಷಣವೂ ಸಹಬಾಳ್ವೆ, ಅಹಿಂಸೆ, ಸತ್ಯ ಮಾರ್ಗ, ಭಾರತೀಯತೆಯನ್ನು ಒಳಗೊಂಡಿರಬೇಕು.

ಸಭೆಯಲ್ಲಿ ಹಾಜರಿದ್ದವರು
ಶ್ರೀ ಪ್ರೊ. ಕೆ. ಕಸ್ತೂರಿ ರಂಗನ್, ಹಿರಿಯ ವಿಜ್ಞಾನಿ, ಎನ್ ಇಪಿ-2020 ರಚನಾ ಸಮಿತಿ ಮುಖ್ಯಸ್ಥರು.
ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಧ್ಯಕ್ಷರು, ವಿಧಾನಸಭೆ.
ಶ್ರೀ ಪಿ. ರಾಜೀವ್, ಶಾಸಕರು
ಶ್ರೀ ತೇಜಸ್ವಿನಿ ಅನಂತಕುಮಾರ್, ಅದಮ್ಯ ಚೇತನ ಫೌಂಡೇಶನ್ ಮುಖ್ಯಸ್ಥರು.
ಶ್ರೀ ಎ.ಟಿ. ರಾಮಸ್ವಾಮಿ, ಶಾಸಕರು
ಶ್ರೀ ಬಸವರಾಜ ಪಾಟೀಲ್ ಸೇಡಂ, ಮಾಜಿ ಸಂಸದರು
ಶ್ರೀ ಅರುಣ್ ಶಹಾಪುರ, ಮಾಜಿ ಸದಸ್ಯರು, ವಿಧಾನ ಪರಿಷತ್
ಶ್ರೀ ಪ್ರೊ. ಎಂ.ಆರ್. ದೊರೆಸ್ವಾಮಿ, ಸಲಹೆಗಾರರು, ರಾಜ್ಯ ಶಿಕ್ಷಣ ಸುಧಾರಣೆಗಳು
ಶ್ರೀ ಡಾ. ಗುರುರಾಜ ಕರಜಗಿ, ಶಿಕ್ಷಣ ತಜ್ಞರು
ಶ್ರೀ ಪ್ರೊ. ಎಂ.ಕೆ. ಶ್ರೀಧರ್, ರಾಷ್ಟ್ರೀಯ ಶಿಕ್ಷಣ ನೀತಿ ರಚನಾ ಸಮಿತಿ ಸದಸ್ಯರು, ಶಿಕ್ಷಣ ತಜ್ಞರು.
ಶ್ರೀ ರಾಮಚಂದ್ರ ಭಟ್ ಕೋಟೆಮನೆ, ಚನ್ನೇನಹಳ್ಳಿ ಗುರುಕುಲ, ಬೆಂಗಳೂರು.
ಶ್ರೀ ಜಯರಾಮ, ಮುಖ್ಯಸ್ಥರು, ಗೋಕುಲ ಎಜುಕೇಷನ್ ಫೌಂಡೇಶನ್. ಬೆಂಗಳೂರು
ಶ್ರೀ ಮೌಲಾನಾ ಮಸೂದ್ ರಶೀದ್, ರಶೀದ್ ಮಸ್ಜಿದ್ ಬೆಂಗಳೂರು.
ಶ್ರೀ ಅಬ್ದುಲ್ ರಹೀಂ, ಅಧ್ಯಕ್ಷರು, ಗ್ಲೋಬಲ್ ಎಜುಕೇಷನ್ ಇನ್ಸ್¬ಟಿಟ್ಯೂಷನ್.
ಶ್ರೀ ಮಹಮ್ಮದ್ ಸನಾವುಲ್ಲಾ, ನಿವೃತ್ತ ಐಎಎಸ್ ಅಧಿಕಾರಿ, ಫೆಡರೇಷನ್ ಆಫ್ ಮಸ್ಜೀದ್ ಇಂದಿರಾ ನಗರ. ಬೆಂಗಳೂರು.
ಶ್ರೀ ಅಬ್ದುಸ್ ಸುಬಾನ್, ಶಾಹೀನ್ ಎಜುಕೇಷನ್ ಇನ್ಸಿಟ್ಯೂಷನ್, ಬೀದರ್.
ಶ್ರೀ ಫಾದರ್ ಫ್ರಾನ್ಸಿಸ್, ಸೆಂಟ್ ಅಂಥೋನಿ ಚರ್ಚ್, ಕಮಲಾಪುರ, ವಿಜಯನಗರ ಜಿಲ್ಲೆ.
ಶ್ರೀ ರೇವರೆಂಡ್ ಡಾ. ಪ್ರಸನ್ನ ಕುಮಾರ್ ಸ್ಯಾಮ್ಯುಯಲ್.
ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ, ರುದ್ರಾಕ್ಷಿ ಮಠ, ನಾಗನೂರು, ಬೆಳಗಾವಿ.
ಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ.
ಪೂಜ್ಯ ಶ್ರೀ ಗುರುಬಸವ ಪಟ್ಟದೇವರು, ಭಾಲ್ಕಿ ಸಂಸ್ಥಾನ ಮಠ.
ಪೂಜ್ಯ ಶ್ರೀ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಮೈಸೂರು.
ಪೂಜ್ಯ ಶ್ರೀ ಮುಕ್ತಿದಾನಂದ ಜೀ, ರಾಮಕೃಷ್ಣ ಆಶ್ರಮ, ಮೈಸೂರು.
ಪೂಜ್ಯ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಸಿರಿಗೆರೆ, ಚಿತ್ರದುರ್ಗ.
ಪೂಜ್ಯ ಶ್ರೀ ಅಮೃತಗೀತಾನಂದಪುರಿ ಸ್ವಾಮೀಜಿ, ಅಮೃತಾನಂದಮಯಿ ಮಠ.
ಶ್ರೀ ಬ್ರಹ್ಮಕುಮಾರ ಬಸವರಾಜ, ರಾಜ ಋಷಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ.
ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಅದೋಕ್ಷಜ ಮಠ, ಉಡುಪಿ.
ಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಶ್ರೀ ಸ್ವರ್ಣವಲ್ಲಿ ಮಠ ಶಿರಸಿ. ಉತ್ತರ ಕನ್ನಡ.
ಪೂಜ್ಯ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಮಾದರ ಚನ್ನಯ್ಯ ಗುರುಪೀಠ.
ಶ್ರೀಮತಿ ಶಾಂತಿ ಕೃಷ್ಣಮೂರ್ತಿ, ಚಿನ್ಮಯ ಮಿಷನ್. ತಮಿಳುನಾಡು.
ಪೂಜ್ಯ ಶ್ರೀ ಈಶಪ್ರಿಯ ಸ್ವಾಮೀಜಿ, ಅದಮಾರು ಮಠ, ಉಡುಪಿ
ಪೂಜ್ಯ ಶ್ರೀ ಗುರುಸಿದ್ದ ಸ್ವಾಮೀಜಿ, ಅಧ್ಯಕ್ಷರು, ವೀರಶೈವ ವಿದ್ಯಾವರ್ಧಕ ಸಂಘ. ಬಳ್ಳಾರಿ.
ಶ್ರೀ ರೆವರೆಂಡ್ ಡಾ. ಪೀಟರ್ ಮ್ಯಾಚಾಡೋ ಆರ್ಚ್ ಬಿಷಪ್ ಆಫ್ ಬೆಂಗಳೂರು.
ಶ್ರೀಮತಿ ಸುಶೀಲ ಸಂತೋಷ್, ನಿರ್ದೇಶಕರು, ವಿಶ್ವವಿದ್ಯಾಪೀಠ. ಬೆಂಗಳೂರು.
ಪೂಜ್ಯ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಹೊಸನಗರ. ಶಿವಮೊಗ್ಗ.
ಶ್ರೀಮತಿ ಶಾಂತಿ ಕೃಷ್ಣಮೂರ್ತಿ
ಚಿನ್ಮಯ ಮಿಷನ್ , ಚೆನ್ನೈ.
ಶ್ರೀ ಶಂಕರಾನಂದ, ಭಾರತೀಯ ಶಿಕ್ಷಣ ಮಂಡಲ , ನವದೆಹಲಿ.
ಶ್ರೀ ಗುಂಟಾ ಲಕ್ಷ್ಮಣ, ಶೈಕ್ಷಿಕ ಮಹಾಸಂಘ, ನವದೆಹಲಿ.
ಪೂಜ್ಯಶ್ರೀ ಪ್ರಭುಸಾರಂಗದೇವ ಶಿವಾಚಾರ್ಯ,
ಸಾರಂಗಮಠ, ವಿಜಯಪುರ.
ಶ್ರೀ ರವಿಶಂಕರ ಗುರೂಜಿ, ಆರ್ಟ್ ಆಫ್ ಲಿವಿಂಗ್ ಬೆಂಗಳೂರು.
ಪೂಜ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ರಾಮಚಂದ್ರಪುರ ಮಠ.
ಪೂಜ್ಯ ಶ್ರೀ ಮಧುಸೂಧನ್ ಸಾಯಿ, ಶ್ರೀ ಸತ್ಯಸಾಯಿ ಗ್ರಾಮ, ಮುದ್ದೇನಹಳ್ಳಿ.