20230116 221741

ಕಾಂಗ್ರೆಸ್ :1.50 ಲಕ್ಷ ಕೋಟಿ ನಿಮ್ಮ ಹಣವನ್ನು ಭ್ರಷ್ಟಾಚಾರದ ಮೂಲಕ ಲೂಟಿ ಮಾಡಿದ್ದಾರೆ

POLATICAL STATE

ನಾ ನಾಯಕಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ, ನಾಯಕಿಯರ ಮಾತುಗಳು

ಪ್ರಿಯಾಂಕಾ ಗಾಂಧಿ:

ನನಗಾಗಿ ಇಷ್ಟು ಅಭಿಮಾನದಿಂದ ಇಲ್ಲಿಗೆ ಬಂದಿರುವ ಎಲ್ಲರಿಗೂ ನಮಸ್ಕಾರ. ನಾನು ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಅಭಿಮಾನವನ್ನು ಕಂಡಿದ್ದೇನೆ.

ನಾನು ಇಲ್ಲಿಗೆ ಆಗಮಿಸಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ. ನೀವು ಬುದ್ಧಿವಂತರು, ಶಕ್ತಿವಂತರು, ಶ್ರಮಜೀವಿಗಳು. ಈ ದೇಶವೇ ಹೆಮ್ಮೆಪಡುವಂತೆ ರಾಜ್ಯವನ್ನು ಕಟ್ಟಿದ್ದೀರಿ. ವಿಶ್ವದ ಎಲ್ಲೆಡೆ ನಿಮ್ಮ ಪರಿಶ್ರಮ ಗುರುತಿಸಲಾಗುತ್ತಿದೆ. ಐಟಿ ಬಿಬಿ ಕ್ಷೇತ್ರ, ಕೈಗಾರಿಕಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದೀರಿ.

ನಾನು ನಮ್ಮ ಸಹೋದರಿಯರ ಶ್ರಮದ ಬಗ್ಗೆ ಹೆಮ್ಮೆಪಡುತ್ತೇನೆ. ನಿಮ್ಮ ಶ್ರಮದಿಂದ ಈ ರಾಜ್ಯ ಇಷ್ಟು ದೊಡ್ಡ ಮಟ್ಟಿಗೆ ಬೆಳೆದಿದೆ. ನೀವು ನಿಮ್ಮ ಕುಟುಂಬಕ್ಕೆ ನೀವು ಬೆಂಬಲ ನೀಡದಿದ್ದರೆ ಈ ರಾಜ್ಯ ಬೆಳೆಯಲು ಆಗುತ್ತಿರಲಿಲ್ಲ. ಇದನ್ನು ನಾವು ಹೃದಯಪೂರ್ವಕವಾಗಿ ಹೇಳುತ್ತಿದ್ದೇನೆ.

IMG 20230116 WA0002

ನೀವು ಕರ್ನಾಟಕ ಭುವನೇಶ್ವರಿ ಹಾಗೂ ತಾಯಿ ಚಾಮುಂಡೇಶ್ವರಿಯ ಮಕ್ಕಳು. ಈ ನಾಡು ಅತ್ಯಂತ ಪ್ರಬಲಶಾಲಿ ಮಹಿಳೆಯರಾದ ಕಿತ್ತೂರು ರಾಣಿ ಚೆನ್ನಮ್ಮನ ಮಕ್ಕಳು. ನಿಮ್ಮಲ್ಲಿ ಅಹಿಂಸೆಯ ಗುಣ ನಿಮ್ಮ ಇತಿಹಾಸದಲ್ಲಿ ಅಡಗಿದೆ. ಬಸವಣ್ಣ ಅವರು ಪ್ರತಿಯೊಬ್ಬ ಮನುಷ್ಯನ ಪ್ರಾಮುಖ್ಯತೆಯನ್ನು ಸಾರಿದ್ದಾರೆ. ಬಸವಣ್ಣನವರಿಗೆ ಎಲ್ಲರೂ ಸಮಾನರು. ಅವರಿಗೆ ಜಾತಿ, ಧರ್ಮ, ಲಿಂಗದ ಭೇದವಿರಲಿಲ್ಲ. ಮಹಿಳೆಯರು ನಾಡಿನ ಸಂಸ್ಕೃತಿ ಕಾಪಾಡಿ, ನಮ್ಮ ಸಮಾಜವನ್ನು ಕಟ್ಟುವಲ್ಲಿ ಮಹಿಳೆಯರು ಸದಾ ಶ್ರಮಿಸಿದ್ದಾರೆ.

ನನ್ನನ್ನು ಇಬ್ಬರು ಪ್ರಬಲ ಮಹಿಳೆಯರು ಬೆಳೆಸಿದ್ದಾರೆ. ನಾನು ಆಕೆಯನ್ನು ಎಂಟನೇ ವಯಸ್ಸಿನಲ್ಲಿ ನೋಡಿದೆ. ಆಕೆ ತನ್ನ 33 ವರ್ಷದ ಮಗನನ್ನು ಕಳೆದುಕೊಂಡಾಗ ಕುಗ್ಗದೇ ಮರು ದಿನವೇ ತನ್ನ ಕೆಲಸಕ್ಕೆ ಹಾಜರಾಗಿ ದೇಶ ಸೇವೆಗೆ ಮುಂದಾಗಿದ್ದರು. ಅದು ಆಕೆಯ ವೃತ್ತಿಧರ್ಮವಾಗಿತ್ತು. ತನ್ನ ಪುತ್ರಸೋಕದ ನಡುವೆಯೂ ಆಕೆ ದೇಶಕ್ಕಾಗಿ ತನ್ನ ಕರ್ತವ್ಯ ಮಾಡಲು ಮುಂದಾಗಿದ್ದು, ಆಕೆಯ ಮಾನಸಿಕ ಸ್ಥೈರ್ಯಕ್ಕೆ ಸಾಕ್ಷಿ. ಆಕೆ ತನ್ನ ಕೊನೆ ಉಸಿರಿರುವವರೆಗೂ ದೇಶಕ್ಕಾಗಿ ಸೇವೆ ಮುಂದುವರಿಸಿದರು.

ನಾನು ಬೆಳೆದಿದ್ದು ತಾಯಿ ಸೋನಿಯಾಗಾಂಧಿ ಅವರನ್ನು ನೋಡಿಕೊಂಡು. ತನ್ನ 21ನೇ ವಯಸ್ಸಿನಲ್ಲಿ ತಂದೆ ರಾಜೀವ್ ಗಾಂಧಿ ಅವರನ್ನು ಪ್ರೀತಿಸಿ, ತಾನು ಹುಟ್ಟಿದ ಇಟಲಿ ಬಿಟ್ಟು ಭಾರತಕ್ಕೆ ಆಗಮಿಸುತ್ತಾರೆ. ಆಕೆ ಇಲ್ಲಿನ ಸಂಸ್ಕೃತಿ, ಆಚಾರ ವಿಚಾರ, ಭಾಷೆಗಳನ್ನು ಇಂದಿರಾ ಗಾಂಧಿ ಅವರಿಂದ ಕಲಿತರು. ಆಕೆ ತನ್ನ 44ನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡರು. ಆಕೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲದಿದ್ದರೂ ದೇಶದ ಸೇವೆ ಮಾಡಲು ರಾಜಕೀಯದಲ್ಲಿ ಇದ್ದಾರೆ.

ಈ ಇಬ್ಬರು ಮಹಿಳೆಯರ ಜತೆಗೆ ನಾನು ನೂರಾರೂ ಮಹಿಳೆಯರನ್ನು ನನ್ನ ಜೀವನದಲ್ಲಿ ಕಂಡಿದ್ದೇನೆ. ಇವರೆಲ್ಲರಿಂದ ನಾನು ಒಂದು ವಿಚಾರ ಕಲಿತಿದ್ದೇನೆ. ನಿಮ್ಮ ಜೀವನದಲ್ಲಿ ಏನೇ ಆಗಲಿ, ಎಷ್ಟೇ ಕಷ್ಟ ಬರಲಿ, ಅದು ಮನೆಯಲ್ಲಾಗಲಿ, ಕೆಲದ ವಿಚಾರದಲ್ಲಾಗಲಿ, ನೀವು ಅವುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ. ಇಲ್ಲಿರುವ ಪ್ರತಿ ಸಹೋದರಿಯರು ದೊಡ್ಡ ಸವಾಲು ಎದುರಿಸಿದ್ದೀರಿ ಎಂದು ನನಗೆ ಗೊತ್ತಿದೆ. ನಿಮ್ಮ ಮನೆಯನ್ನು ಒಟ್ಟಾಗಿಟ್ಟು, ನಿಮ್ಮ ಜೀವನದ ಸಮಸ್ಯೆಗಳನ್ನು ಬಹಳ ಧೈರ್ಯವಾಗಿ ಎದುರಿಸುತ್ತಿದ್ದೀರಿ. ಇಷ್ಟಾದರೂ ನಿಮ್ಮ ಜೀವನದಲ್ಲಿ ಬದಲಾವಣೆ ತರುವ ಸಾಮರ್ಥ್ಯ ನಿಮ್ಮಲ್ಲಿದೆ.

ಇದು ನಿಮ್ಮ ಜೀವನದಲ್ಲಿ ಬದಲಾವಣೆ ತರುವ ಸಮಯ ಇದಲ್ಲವೇ? ನಿಮ್ಮ ಜೀವನದಲ್ಲಿ ನಿಮಗೆ ಶಿಕ್ಷಣ, ಉದ್ಯೋಗ, ಮಕ್ಕಳಿಗೆ ಭವ್ಯ ಭವಿಷ್ಯ ನಿರ್ಮಾಣ ಮಾಡಬೇಕಲ್ಲವೇ? ಇವೆಲ್ಲವನ್ನು ನಿಮಗೆ ಯಾರು ನೀಡುತ್ತಾರೆ? ನಿಮ್ಮ ಸಾಮರ್ಥ್ಯವನ್ನು ನೀವು ಅರಿಯುತ್ತಿಲ್ಲ. ಈ ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರಿದ್ದೀರಿ. ಪ್ರತಿ ಮೆನೆಯಲ್ಲೂ ಗಂಡಸರಷ್ಟೇ ಹೆಣ್ಣುಮಕ್ಕಳಿದ್ದಾರೆ. ಎಲ್ಲ ಹಳ್ಳಿ, ಪಟ್ಟಣಗಳಲ್ಲಿ, ನೀವು ಬಲಿಷ್ಠರು. ಆದರೆ ನಿಮ್ಮ ಧೈರ್ಯ ಹಾಗೂ ಶಕ್ತಿ ಅಱಿಯಬೇಕು.

ನಿಮ್ಮ ದೊಡ್ಡ ಶಕ್ತಿ ರಾಜಕೀಯ. ರಾಜಕೀಯ ಪಕ್ಷಗಳು ಒಂದು ವರ್ಗದ ಓಲೈಕೆಗೆ ಮುಂದಾಗುತ್ತಾರೆ. ಆದರೆ ಮಹಿಳೆಯರ ಬಗ್ಗೆ ವಿಚಾರ ಮಾಡುವುದಿಲ್ಲ. ನೀವು ಎಲ್ಲ ರಾಜಕೀಯ ಪಕ್ಷಗಳು ನಿಮ್ಮ ಹಕ್ಕು ಸಮಾನತೆಗೆ ಆದ್ಯತೆ ನೀಡುವಂತೆ ಮಾಡಬೇಕು. ನಾನು ಬಿಜೆಪಿಯನ್ನು ಟೀಕಿಸುವುದಿಲ್ಲ. ನಾನು ಇಲ್ಲಿರುವ ಮಹಿಳೆಯರಿಗೆ ಒಂದು ಪ್ರಸ್ನೆ ಕೇಳುತ್ತೇನೆ. ಬಿಜೆಪಿ ಬಹಳ ದಿನಗಳಿಂದ ಬಿಜೆಪಿ ಅಧಿಕಾರದಲ್ಲಿದೆ ನಿಮ್ಮ ಜೀವನದಲ್ಲಿ ಸುಧಾರಣೆ ಕಂಡಿದ್ದೀರಾ? ಬೆಲೆಗಳು ಇಳಿಕೆಯಾಗಿವೆಯೇ? ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ವಿಚಾರಗಳಿವೆಯೇ? ನೀವು ಸಂತೋಷವಾಗಿದ್ದೀರಾ? ಇದು ಬಹಳ ಸರಳವಾದ ಪ್ರಶ್ನೆ.

ಮುಂದಿನ ಕೆಲ ದಿನಗಳಲ್ಲಿ ಚುನಾವಣೆ ಬರುತ್ತಿವೆ. ನೀವು ಕಳೆದ ಕೆಲ ವರ್ಷಗಳ ಆಡಳಿತವನ್ನು ನೋಡಿ, ಯಾರು ಉತ್ತಮರು ಎಂದು ನೀವೆ ತುಲನೆ ಮಾಡಿ, ಯಾರು ನಿಮಗೆ ಅಗತ್ಯವಿರುವ ನೆರವು ನೀಡಿದ್ದಾರೆ ಎಂದು ತೀರ್ಮಾನಿಸಿ. ಕರ್ನಾಟಕದಲ್ಲಿ ಮಹಿಳೆಯರ ಪರಿಸ್ಥಿತಿ ನೀಜಕ್ಕೂ ನಾಚಿಕೆಗೇಡಿನ ವಿಚಾರವಿದೆ. ನಿಮ್ಮ ಸಚಿವರು ಉದ್ಯೋಗ ನೀಡಲು 40% ಲಂಚ ಪಡೆಯುತ್ತಿದ್ದಾರೆ ಎಂದು ಕೇಳಿದೆ. 1.50 ಲಕ್ಷ ಕೋಟಿ ನಿಮ್ಮ ಹಣವನ್ನು ಭ್ರಷ್ಟಾಚಾರದ ಮೂಲಕ ಲೂಟಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ 8 ಸಾವಿರ ಕೋಟಿ ಬಜೆಟ್ ಇದ್ದರೆ ಅದರಲ್ಲಿ 3200 ಕೋಟಿ ಇವರ ಜೇಬಿಗೆ ಹೋಗುತ್ತದೆ. ಪಿಎಸ್ಐ ಹಗರಣದಂತೆ ಹಲವು ನೇಮಕಾತಿ ಅಕ್ರಮಗಳಿವೆ. ಪಿಎಸ್ಐ ಹುದ್ದೆ ಮಾರಿಕೊಂಡಿದ್ದಾರೆ. ನೀವು ನಿಮ್ಮ ಮಕ್ಕಳು ಉತ್ತಮ ಕೆಲಸ ಪಡೆಯಲಿ ಎಂದು ಶಿಕ್ಷಣೆ ಕೊಟ್ಟು ಬೆಳೆಸುತ್ತೀರಾ? ಈ ರೀತಿ ಹಗರಣವಾದರೆ, ನೀವು ಪ್ರತಿಯೊಂದಕ್ಕೂ ಲಂಚ ಕೊಡಬೇಕಾಗಿದೆ. ಚಾಲಕರ ಪರವಾನಿಗೆ, ಪಡಿತರ ಪಡೆಯಲು ಲಂಚ ನೀಡಬೇಕು.

ಕೋವಿಡ್ ಸಮಯದಲ್ಲಿ ಸರ್ಕಾರ ಮಹಿಳೆಯರಿಗೆ ಯಾವುದೇ ರೀತಿಯ ನೆರವು ನೀಡಲಿಲ್ಲ. ಗಾರ್ಮೆಂಟ್ಸ್ ಕಾರ್ಮಿಕರಿಗೆ ಸರ್ಕಾರ ನೆರವು ನೀಡಲಿಲ್ಲ. ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿವೆ. ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ರಾಜ್ಯದ 2.50 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ತುಂಬಿಲ್ಲ. ಮಹಿಳೆಯರ ಮೇಲಿನ ಅಪರಾಧ ಹೆಚ್ಚಳವಾಗಿದ್ದು, ಪ್ರತಿನಿತ್ಯ ಮಹಿಳೆಯರ ಮೇಲೆ 46 ಅಪರಾಧ ನಡೆಯುತ್ತಿವೆ.

ನೀವು ಕಾಂಗ್ರೆಸ್ ಅವಧಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಎಷ್ಟಕ್ಕೆ ಪಡೆಯುತ್ತಿದ್ದಿರಿ, ಈಗ ಅದು ಎಷ್ಟಾಗಿದೆ ಎಂದು ನಿಮಗೆ ಗೊತ್ತಿದೆ. ಜೀವನಸಾಗಿಸುವುದು ದುಬಾರಿಯಾಗಿದ್ದು, ಕಷ್ಟವಾಗಿದೆ. ಮಕ್ಕಳ ಶುಲ್ಕವಾಗಲಿ, ಮದುವೆ ಸಮಾರಂಭವಾಗಲಿ ಎಲ್ಲವೂ ಆರ್ಥಿಕ ಹೊರೆಯಾಗಿವೆ. ಆದರೂ ಸರ್ಕಾರದ ಹೊಣೆಗಾರಿಕೆಯನ್ನು ಪ್ರಶ್ನೆ ಮಾಡುತ್ತಿಲ್ಲ. ಹೀಗಾಗಿ ಸರ್ಕಾರ ಪಠ್ಯ ಪರಿಷ್ಕರಣೆ ಹೆಸರಲ್ಲಿ ಮಹನೀಯರ ವಿಚಾರವನ್ನು ತೆಗೆಯುವ ಮೂಲಕ ಗಮನ ಬೇರೆಡೆ ಸೆಳೆಯುತ್ತಿದ್ದಾರೆ. ಇಡೀ ಆಡಳಿಯ ಯಂತ್ರ ಕೆಲವು ಬಂಡವಾಳ ಶಾಹಿಗಳ ಹಿತ ಕಾಯಲು ಇದೆ. ಕೆಲವರು ಮಾತ್ರ ಶ್ರೀಮಂತರಾಗುತ್ತಿದ್ದರೆ, ಉಳಿದ ಭಾರತ ದಿನನಿತ್ಯ ಬಡವಾಗುತ್ತಿದೆ.

IMG 20230116 WA0005

ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಕರಣ ಮಾಡುತ್ತಿದ್ದಾರೆ. ಕೃಷಿಗೆ ಆರ್ಥಿಕ ನೆರವು ನೀಡದೇ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಸರ್ಕಾರದ ಜಿಎಸ್ ಟಿ, ನೋಟು ರದ್ಧತಿಗಳಿಂದ ಕೆಟ್ಟ ನಿರ್ಧಾರಗಳಿಂದ ನರಳುವಂತಾಗಿವೆ. ಕಾಂಗ್ರೆಸ್ ಸರ್ಕಾರ ಭೂ ಸುಧಾರಣಾ ಕಾಯ್ದೆಯಂತಹ ಕಾರ್ಯಕ್ರಮಗಳನ್ನು ನೀಡಿತ್ತು. ರೈತರ 8 ಸಾವಿರ ಕೋಟಿ ಸಾಲ ಮನ್ನಾ, ಬೆಂಗಳೂರಿನಲ್ಲಿ ಐಟಿ ಕ್ಷೇತ್ರಗಳ ಅಭಿವೃದ್ಧಿ ಮಾಡಲಾಗಿದೆ. ಅನ್ನಭಾಗ್ಯದ ಮೂಲಕ 3.80 ಲಕ್ಷ ಜನರಿಗೆ ಅಕ್ಕಿ, ಬೇಳೆಯಂತಹ ದಿನಸಿ ನೀಡಿದೆ. ಇಂದಿರಾ ಕ್ಯಾಂಟೀನ್, ಕ್ಷೀರ ಭಾಗ್ಯ, ಮಾತೃಪೂರ್ಣದಂತಹ ಕಾರ್ಯಕ್ರಮಗಳನ್ನು ನಿಮಗಾಗಿ ಕಾಂಗ್ರೆಸ್ ಸರ್ಕಾರ ನೀಡಿತ್ತು. ಹೀಗೆ ಸ್ವಸಹಾಯಕ ಯೋಜನೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳಂದತಹ ಕಾರ್ಯಕ್ರಮ ನೀಡಿದೆ.

ಈ ನಾ ನಾಯಕಿ ಕಾರ್ಯಕ್ರಮ ಮೂಲಕ ನೀವು ನಾಯಕರಾಗುವ ಮೂಲಕ ನಿಮ್ಮ ಜೀವನ ಬದಲಿಸಿಕೊಳ್ಳಿ. ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ಕುಟುಂಬದ ಓರ್ವ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ ವರ್ಷಕ್ಕೆ 24 ಸಾವಿರ ಆರ್ಥಿಕ ನೆರವು ನೀಡಲಾಗುವುದು. ನನಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದಾಗ ನೀವು ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಮಾಡಿದರೆ ಮಾತ್ರ ನಾನು ಈ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದೆ. ಮಹಿಳೆಯರು ಸಶಕ್ತರಾಗಲು ಕೇವಲ ಒಂದು ಕಾರ್ಯಕ್ರಮ ನೀಡುತ್ತಿಲ್ಲ. ಅನೇಕ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ನೆರವು ನೀಡಲು ನಿರ್ಧರಿಸಿದ್ದು, ಅದರ ಭಾಗವಾಗಿ ಇತ್ತೀಚೆಗೆ ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ 200 ಯುನಿಟ್ ವಿದ್ಯತ್ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಮಹಿಳಾ ಪ್ರಣಾಳಿಕೆ ಮೂಲಕ ಇನ್ನಷ್ಟು ಜನಪರ ಕಾರ್ಯಕ್ರಮವನ್ನು ನಮ್ಮ ನಾಯಕರು ನೀಡಲಿದ್ದಾರೆ.

ನೀವು ಬಲಿಷ್ಠ ಕರ್ನಾಟಕದ ಮೇಲೆ ನಂಬಿಕೆ ಇಟ್ಟೀದ್ದೀರಿ ಅಲ್ಲವೇ? ಇದಕ್ಕಾಗಿ ನೀವು ಬದಲಾವಣೆ ತರುತ್ತೀರಾ ಅಲ್ಲವೇ? ಇದು ನಿಮ್ಮ ಕೈಯಲ್ಲಿದೆ. ನಿಮ್ಮ ಸಮಾಜ, ರಾಜ್ಯದ ಬದಲಾವಣೆ ತರುವ ಶಕ್ತಿ ನಿಮ್ಮಲ್ಲಿದೆ. ಮುಂದಿನ ದಿನಗಳಲ್ಲಿ ಚುನಾವಣೆಗಾಗಿ ನಿಮ್ಮ ನಾಯಕರು ನಿಮ್ಮ ಬಳಿಗೆ ಬಂದಾಗ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಕೇಳುವುದಾಗಿ ನನಗೆ ಮಾತು ಕೊಡಿ.

ಉತ್ತರಪ್ರದೇಶದಲ್ಲಿ ಮಹಿಳಾ ಪ್ರಣಾಳಿಕೆ ಬಿಡುಗಡೆ ಮಾಡಿದಾಗ ಹಲವರು ನಮ್ಮನ್ನು ನೋಡಿ ನಕ್ಕರು. ಆದರೂ ನಮಗೆ ಹೆಚ್ಚಿನ ಮತಗಳು ಬರಲಿಲ್ಲ. ಆದರೆ ಪ್ರತಿ ರಾಜಕೀಯ ಪಕ್ಷಗಳು ಮಹಿಳೆಯರ ಆಗತ್ಯವನ್ನು ಗುರುತಿಸಿ, ಅವುಗಳಿಗೆ ಸ್ಪಂದಿಸುವಂತೆ ಮಾಡಿದೆವು. ಪರಿಣಾಮ ಇಂದು ಬಿಜೆಪಿ ಕೂಡ ತಾನು ಮಹಿಳೆಯರಿಗಾಗಿ ಏನು ಮಾಡುತ್ತೇವೆ ಎಂದು ಜಾಹೀರಾತು ನೀಡಿದೆ. ನಾವೆಲ್ಲರೂ ಮಹಿಳೆಯರು ನಮ್ಮ ಶಕ್ತಿ ತೋರಿಸುವ ಕಾಲ ಬಂದಿದೆ. ಈ ಚುನಾವಣೆಯನ್ನು ನಿಮ್ಮ ಚುನಾವಣೆ, ನಿಮ್ಮ ಭವಿಷ್ಯಕ್ಕಾಗಿ ಮಾಡಬೇಕಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ:

ಪ್ರಿಯಾಂಕಾ ಗಾಂಧಿ ಅವರು ಇಂದು ಮಹಿಳೆಯರ ಧ್ವನಿಯಾಗಿದ್ದರೆ. ಅವರು ಕೇವಲ ಮಹಿಳೆಯರಿಗೆ ಮಾತ್ರ ಧ್ವನಿಯಾಗುತ್ತಾರೆ ಎಂದು ನಾವು ಹೇಳುವುದಿಲ್ಲ. ಅವರು ಈ ದೇಶದಲ್ಲಿ ಯಾರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತದೆಯೋ ಅವರ ಧ್ವನಿಯಾಗುತ್ತಾರೆ.

ಈ ದೇಶದ ಮಹಿಳೆಯರು, ಯುವಕರಿಗೆ ಹೊಸ ಧ್ವನಿ ನೀಡಿರುವ, ನಾನು ಹೆಣ್ಣು ನಾನು ಹೋರಾಡಬಲ್ಲೇ ಎಂಬ ಆತ್ಮಬಲ ತುಂಬಿರುವ ಪ್ರಿಯಾಂಕಾ ಗಾಂಧಿ ಅವರ ಜತೆ ರಾಜ್ಯದ ಮಹಿಳಾ ನಾಯಕಿಯರು ಇದ್ದಾರೆ.

ಕರ್ನಾಟಕಕ್ಕೂ ಹಾಗೂ ನೆಹರೂ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಇಂದಿರಾ ಗಾಂಧಿ ಅವರು ರಾಜಕೀಯದಲ್ಲಿ ಹೊಸ ಆರಂಭ ಪಡೆಯಲು ಮುಂದಾದಾಗ ಅವರು ಕರ್ನಾಟಕದ ಸಂಸದರಾಗಿದ್ದರು. ಚಿಕ್ಕಮಗಳೂರು ಆಗಲಿ, ಬಳ್ಳಾರಿ ಆಗಲಿ, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು, ಕಾರ್ಮಿಕರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ಇಂದು ಈ ರಾಜ್ಯದ ಜನ ಬೆಲೆ ಏರಿಕೆಯಿಂದ ನೊಂದಿದ್ದು, ಕಾಂಗ್ರೆಸ್ ಪಕ್ಷ ನಾರಿ ಶಕ್ತಿ ಹಿಂದೆ ನಿಲ್ಲಲು ಹೊಸ ಕಾರ್ಯಸೂಚಿಯನ್ನು ತೆಗೆದುಕೊಳ್ಳಬೇಕಿದೆ. ಅದಕ್ಕಾಗಿ ನಾವು ಕೆಲವು ಕ್ರಮಗಳನ್ನು ಕೈಗೊಂಡಿದ್ದು, ಈ ಬಗ್ಗೆ ಕಾಂಗ್ರೆಸ್ ಪಕ್ಷ ಸುದೀರ್ಘ ಚರ್ಚೆ ನಡೆಸಿದೆ. ಈ ದಿನ ರಾಜ್ಯದ ಮಹಿಳೆಯರ ಬಡತನ, ಬೆಲೆ ಏರಿಕೆಯಿಂದ ಬಳಲಿರುವ ಮಹಿಳೆಯರಿಗೆ ಇಂದು ಈ ವೇದಿಕೆಯಿಂದ ಹೊಸ ಆಶಾ ಕಿರಣ ಮೂಡಲಿದೆ. ಹೀಗಾಗಿ ಈ ದಿನ ಒಂದು ಐತಿಹಾಸಿಕ ದಿನವಾಗಲಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ:

ನಾವು ರಾಜ್ಯದಲ್ಲಿ ಮಹಿಳಾ ಸಮಾವೇಶವನ್ನು ಏರ್ಪಾಡು ಮಾಡಿ, ಅದರಲ್ಲಿ ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರು ಪಾಲ್ಗೊಳ್ಳುತ್ತಾರೆ ಎಂದು ಗೊತ್ತಾದಮೇಲೆ ರಾಜ್ಯ ಬಿಜೆಪಿ ಸರ್ಕಾರ ದೊಡ್ಡ ಜಾಹಿರಾತನ್ನು ನೀಡಿ ತಾವು ಮುಂದೆ ಮಂಡಿಸುವ ಬಜೆಟ್ ನಲ್ಲಿ ಮಹಿಳಾ ಪರವಾದ ಕಾರ್ಯಕ್ರಮಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಭಾರತೀಯ ಜನತಾಪಕ್ಷ ಅಧಿಕಾರಕ್ಕೆ ಬಂದು ಮೂರುವರೆ ವರ್ಷಗಳಾಯಿತು, ಆದರೆ ಇಂದಿನ ವರೆಗೆ ಮಹಿಳೆಯರಿಗಾಗಿ ಒಂದೇ ಒಂದು ಕಾರ್ಯಕ್ರಮ ರೂಪಿಸಿ ಜಾರಿ ಮಾಡಿಲ್ಲ. 2018ರ ಚುನಾವಣೆ ವೇಳೆ ಮಹಿಳೆಯರಿಗಾಗಿ 21 ಭರವಸೆಗಳನ್ನು ನೀಡಿದ್ದರು ಅದನ್ನು ಕೂಡ ಈಡೇರಿಸಿಲ್ಲ. ಈ ವರೆಗೆ ಮಲಗಿದ್ದ ರಾಜ್ಯ ಸರ್ಕಾರ ನಾವು ರಾಜ್ಯದ ಪ್ರತಿ ಮನೆಗೆ ಉಚಿತವಾಗಿ 200 ಯುನಿಟ್‌ ನೀಡುತ್ತೇವೆ ಎಂದು ಘೋಷಿಸಿದ ಮೇಲೆ ಮಹಿಳೆಯರಿಗೆ ಪುಂಕಾನುಪುಂಕವಾಗಿ ಭರವಸೆಗಳನ್ನು ನೀಡಲು ಆರಂಭ ಮಾಡಿದೆ.

ಬಿಜೆಪಿ ಪಕ್ಷ 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ 600 ಭರವಸೆಗಳನ್ನು ನೀಡಿತ್ತು, ಅದರಲ್ಲಿ ಶೇ.10 ಅನ್ನು ಕೂಡ ಈಡೇರಿಸಿಲ್ಲ. ಬಿಜೆಪಿಯಂಥಾ ವಚನಭ್ರಷ್ಟ ಸರ್ಕಾರ ಯಾವುದೂ ಇಲ್ಲ. ಬಿಜೆಪಿ ಸಂವಿಧಾನ ಜಾರಿಯಾಗುವ ಮೊದಲಿನಿಂದಲೂ ಮಹಿಳೆಯರ ಪರವಾಗಿ ಇಲ್ಲ. ಇದೇ ಜನ ಮನುಸ್ಮೃತಿಯ ಮೂಲಕ ಮಹಿಳೆಯರನ್ನು ದಮನ ಮಾಡಿದ್ದರು. ಬಾಬಾ ಸಾಹೇಬರು ಸಂವಿಧಾನ ರಚಿಸಿದ ಕಾರಣಕ್ಕೆ ಇಂದು ಈ ದೇಶದ ಮಹಿಳೆಯರಿಗೆ ಎಲ್ಲಾ ಹಕ್ಕುಗಳು ಸಿಗುತ್ತಿವೆ. ದೇಶದ ಮೊದಲ ಪ್ರಧಾನಿ ಜವಹರಲಾಲ್‌ ನೆಹರು ಅವರು “ಈ ದೇಶದ ಅಭಿವೃದ್ಧಿ ಆಗಬೇಕಾದರೆ ದೇಶದ ಅರ್ಧದಷ್ಟಿರುವ ಮಹಿಳಾ ಸಮುದಾಯ ಅಭಿವೃದ್ಧಿಯಾಗಬೇಕು” ಎಂದು ಹೇಳಿದ್ದರು. ನೆಹರು ಅವರ ಆಡಳಿತದಲ್ಲಿ ಬಾಲ್ಯ ವಿವಾಹ, ಸತಿ ಪದ್ಧತಿಗಳಂಥ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಹಿಂದೂ ವಿವಾಹ ಕಾಯ್ದೆ ಜಾರಿಗೆ ತಂದರು. ಹಿಂದೂ ಉತ್ತರಾಧಿಕಾರಿ ಕಾಯ್ದೆ, 1950ರಲ್ಲಿ ದತ್ತು ಸ್ವೀಕರಿಸುವ ಕಾಯ್ದೆ, 1961ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರು. ಇದನ್ನು ಮಾಡಿದ್ದು ಕಾಂಗ್ರೆಸ್‌ ಪಕ್ಷ. 1951ರ ಜನಗಣತಿ ಪ್ರಕಾರ ದೇಶದ ಮಹಿಳಾ ಸಾಕ್ಷರತೆ ಪ್ರಮಾಣ 8.86% ಇದ್ದದ್ದು 2011ರ ಜನಗಣತಿಯ ಪ್ರಕಾರ 65.45% ಗೆ ಹೆಚ್ಚಳವಾಗಲು ಕಾಂಗ್ರೆಸ್‌ ಸರ್ಕಾರ ಕಾರಣ.

ನಾವು ಅಧಿಕಾರದಲ್ಲಿದ್ದಾಗ ಮಹಿಳೆಯರಿಗೆ ಉದ್ಯೋಗದಲ್ಲಿ ಸಿಗುತ್ತಿದ್ದ 30% ಮೀಸಲಾತಿ ಪ್ರಮಾಣವನ್ನು 33% ಗೆ ಹೆಚ್ಚಿಸಿದ್ದೇವೆ. ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನ ತಿದ್ದುಪಡಿ ಮಾಡಿ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡಿದ್ದು ಮತ್ತು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮೀಸಲಾತಿ ಸಿಗಬೇಕು. ಮಹಿಳೆಯರಿಗೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿ 33% ಮೀಸಲಾತಿ ನೀಡಬೇಕು ಎಂಬ ಬಿಲ್‌ ಅನ್ನು 1995ರಲ್ಲಿ ಲೋಕಸಭೆ ಮುಂದೆ ತರಲಾಗಿದೆ. ಈ ಬಿಲ್ ಇನ್ನು ಹಾಗೆ ಇದೆ. ಒಂದು ವೇಳೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮೀಸಲಾತಿ ನೀಡುವ ಈ ಬಿಲ್‌ ಅನ್ನು ಪಾಸ್‌ ಮಾಡಿ ಜಾರಿ ಮಾಡುವ ಕೆಲಸ ಮಾಡಬೇಕು ಎಂಬ ನಿರ್ಣಯವನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಬೇಕು. ಇದು ನನ್ನ ಒತ್ತಾಯ.

ಬಿಜೆಪಿ ಅವರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡಿರುವವರು. ಮನುಸ್ಮೃತಿಯಲ್ಲಿ ಮಹಿಳೆಯರಿಗೆ ಸ್ಥಾನಮಾನಗಳು ಇಲ್ಲ. ಮಹಿಳೆಯರು ಗಂಡಸರ ಅಡಿಯಾಳಾಗಿ ಇರಬೇಕು ಎಂದು ಇದು ಹೇಳುತ್ತದೆ. ಮನುಸ್ಮೃತಿಯ ಅಧ್ಯಾಯ 5 ನಿಯಮ 48ರ ಪ್ರಕಾರ ಮಹಿಳೆಯೊಬ್ಬಳು ಬಾಲ್ಯದಲ್ಲಿ ತಂದೆತಾಯಿಯ ಅಧೀನದಲ್ಲಿ, ನಂತರ ಗಂಡನ ಅಧೀನದಲ್ಲಿ, ನಂತರ ಮಕ್ಕಳ ಅಧೀನದಲ್ಲಿರಬೇಕು ಎಂಬುದನ್ನು ಹೇಳುತ್ತದೆ. ಇದನ್ನು ಒಪ್ಪಿ, ಸಮಾಜದಲ್ಲಿ ಜಾರಿಗೊಳಿಸಿದವರು ಆರ್‌,ಎಸ್‌,ಎಸ್‌ ಮತ್ತು ಬಿಜೆಪಿ ಪಕ್ಷ. ಕಾಂಗ್ರೆಸ್‌ ಪಕ್ಷ ಮೊದಲಿನಿಂದಲೂ ಮಹಿಳೆಯರ ಪರವಾಗಿದೆ. ಮಹಿಳೆಯರಿಗೆ ನ್ಯಾಯಯುತ ಹಕ್ಕುಗಳು ಸಿಗಬೇಕು, ಸಮಾನ ಗೌರವ, ಅವಕಾಶಗಳು ಸಿಗಬೇಕು ಎಂದು ಕಾಂಗ್ರೆಸ್‌ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದಿದೆ, ಮುಂದೆಯೂ ಇದಕ್ಕೆ ಬದ್ಧವಾಗಿರಲಿದೆ.

ಎಐಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ:

ಇಂದಿನ ದಿನ ಜ.16 2023 ಇತಿಹಾಸದಲ್ಲಿ ಅವೀಸ್ಮರಣೀಯವಾಗಲಿದೆ. ನಾವೆಲ್ಲರೂ ಇಂದು ಇಲ್ಲಿ ಸಭೆ ಸೇರಿದ್ದರೆ, ಅಲ್ಲಿ ಸಹೋದರ ರಾಹುಲ್ ಗಾಂಧಿ ಅವರು ಮಹಿಳೆಯರ ಜತೆ ಸೇರಿ ಭಾರತ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಮಹಿಳೆಯರಿಗೆ ಸರಿಯಾದ ನಾಯಕತ್ವ ನೀಡಲು ನಾ ನಾಯಕಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾಂಗ್ರೆಸ್ ಪಕ್ಷದ ಇತಿಹಾಸ ನೋಡಿದರೆ, 1984ರಲ್ಲಿ ಇದೇ ಸ್ಥಳದಲ್ಲಿ ಇಂದಿರಾ ಗಾಂಧಿ ಅವರು ಮಹಿಳಾ ಕಾಂಗ್ರೆಸ್ ಸ್ಥಾಪಿಸಿದ್ದರು. ಇದು ನಮಗೆ ಭಾವುಕ ವಿಚಾರ.

ರಾಜೀವ್ ಗಾಂಧಿ ಅವರು 73-74ನೇ ಸಂವಿಧಾನ ತಿದ್ದುಪಡಿಯಲ್ಲಿ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಿದ ಪರಿಣಾಮ ಇಂದು ಸಹಕಾರ ಕ್ಷೇತ್ರ, ಪಾಲಿಕೆಗಳು, ಪಂಚಾಯ್ತಿಗಳಲ್ಲಿ ಮಹಿಳೆಯರು ನಾಯಕಿಯರಾಗಿ ಬೆಳೆಯಲು ಅವಕಾಶ ನೀಡಿದೆ. ಹೀಗಾಗಿ ಇಂದಿನ ದಿನ ನಮಗೆಲ್ಲರಿಗೂ ಬಹಳ ಜವಾಬ್ದಾರಿಯುತ ದಿನವಾಗಲಿದೆ.

ಇಂದು ಪ್ರಿಯಾಂಕಾ ಗಾಂಧಿ ಅವರು ನೀಡುವ ಸಂದೇಶವನ್ನು ನೀವು ಪ್ರತಿ ಗ್ರಾಮಗಳು, ಗಲ್ಲಿ ಗಲ್ಲಿಗೂ ತಲುಪಿಸಬೇಕು. ಆ ಜವಾಬ್ದಾರಿ ನಿಮ್ಮ ಮೇಲಿದೆ.

IMG 20230116 WA0007

ಮಾಜಿ ಸಚಿವೆ ಉಮಾಶ್ರೀ:

ನಾ ನಾಯಕಿ ಎಂಬ ಕಾರ್ಯಕ್ರಮ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಕಾರ್ಯಕ್ರಮ. ಈ ಕಾರ್ಯಕ್ರಮ ಮಹಿಳಾ ಶಕ್ತಿಯನ್ನು ಮುಂದೆ ತಂದು, ಸದುಪಯೋಗ ಮಾಡಿಕೊಳ್ಳುವ ಮೂಲಕ ಮಹಿಳಾ ಶಕ್ತಿ ದೇಶವನ್ನು ಕಟ್ಟಲಿದೆ ಎಂದು ಸಾರಲು ಹಮ್ಮಿಕೊಳ್ಳಲಾಗಿದೆ.

ದೇಶದಲ್ಲಿರುವ ಮೋದಿ ಸರ್ಕಾರ ಹಾಗೂ ರಾಜ್ಯದಲ್ಲಿರುವ ಭ್ರಷ್ಟ ಬಿಜೆಪಿಯ ಸರ್ಕಾರವನ್ನು ಕಿತ್ತೊಗೆಯಬೇಕು. ಇಲ್ಲಿ ಬಂದಿರುವ ಎಲ್ಲ ನಾಯಕಿಯರು ನಿಮ್ಮ ಹಳ್ಳಿಗಳಲ್ಲಿ ಹೋಗಿ ನಿಮ್ಮ ಬದುಕಿನಲ್ಲಿ ಬೆಲೆ ಏರಿಕೆ, ಮಕ್ಕಳ ನಿರುದ್ಯೋಗ ಸಮಸ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ ಸಮಯದಲ್ಲಿ ನೀವು ಬಿಜೆಪಿ ಸರ್ಕಾರ ಕಿತ್ತೊಗೆಯಲು ಪ್ರತಿಜ್ಞೆ ಮಾಡಬೇಕು.

ಇಂದು ಗ್ರಾಮದಲ್ಲಿರುವ ತಾಯಂದಿರು ಈ ದೇಶವನ್ನು ಕಟ್ಟಬೇಕಿದೆ. ವಿವಿಧ ಪಂಚಾಯ್ತಿ ಮಟ್ಟದಲ್ಲಿರುವ ಹಾಲಿ ಮತ್ತು ಮಾಜಿ ನಾಯಕಿಯರು ಈ ದೇಶವನ್ನು ಕಟ್ಟಬೇಕು. ನೀವೆಲ್ಲರೂ ಒಂದಾಗಿ ದುಡಿದರೆ ನಮ್ಮ ಪುರುಷ ಸದಸ್ಯರು ನಮಗೆ ಬೆಂಬಲವಾಗಿ ನಿಲ್ಲುತ್ತಾರೆ. ನಾವು ಯಾವುದಕ್ಕೂ ಅಂಜುವುದು, ಅಳುಕಬೇಕಾಗಿಲ್ಲ. ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿರುವ ಸರ್ಕಾರ ಕಿತ್ತೊಗೆಯಬೇಕು.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಗರ್ಭಿಣಿಯರಿಗೆ ಪೌಷ್ಠಿಕ ಆಙಾರ, ಬಡವರಿಗೆ ಅನ್ನ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದದ್ದರು. ಬಡವರಿಗಾಗಿ ಇರುವ ಪಕ್ಷ ಕಾಂಗ್ರೆಸ್. ಈ ಪಕ್ಷವನ್ನು ಕಿತ್ತೊಗೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನೀವೆಲ್ಲರೂ ಇಂದು ಪಣ ತೊಡಬೇಕು. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಂದೇ ತರುವ ಸಂಕಲ್ಪ ಮಾಡಿ. ನಿಮ್ಮ ನೋವು, ದೇಶದ ಮಹಿಳೆಯರ ನೋವು. ಬನ್ನಿ ನಾಯಕಿಯರೇ ರಾಜ್ಯ ಹಾಗೂ ದೇಶ ಕಟ್ಟಿ, ಕಾಂಗ್ರೆಸ್ ಪಕ್ಷ ಕಟ್ಟೋಣ.

ಶಾಸಕಿ ಸೌಮ್ಯಾ ರೆಡ್ಡಿ ಅವರಿಂದ ಪ್ರತಿಜ್ಞೆ ವಚನ:

ನಾವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ನಮ್ಮ ದೇಶದ ಸಂವಿಧಾನಕ್ಕೆ ಸದಾ ಬದ್ಧರಾಗಿರುತ್ತೇವೆಂದು ಪ್ರಮಾಣ ಮಾಡುತ್ತೇವೆ. ಸಮಾಜದಲ್ಲಿ, ಸೌಹಾರ್ದತೆ, ಸಮಾನತೆ ಮೂಡಿಸಲು, ಪಕ್ಷದ ಸಂವಿಧಾನ, ತತ್ವ ಸಿದ್ಧಾಂತ, ಜಾತ್ಯಾತೀತ ನಿಲುವು, ಸಾಮಾಜಿಕ ನ್ಯಾಯಗಳನ್ನು ಜಾರಿಗೆ ತರಲು ಸತತವಾಗಿ ಶ್ರಮಿಸುತ್ತೇವೆ. ಮಹಿಳೆ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಕೃಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಪ್ರತಿ ಮನೆಯ ಹೆಣ್ಣಿಗೂ ತಲುಪಿಸುವ ಜವಾಬ್ದಾರಿ ನಮ್ಮದು. ದ್ವೇಷ ಬಿತ್ತು, ದ್ವೇಷವನ್ನೇ ಬೆಳೆಯುತ್ತಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ನಮ್ಮ ಹೋರಾಟ. ಈ ಸಮರಕ್ಕೆ ನಾವು ಸಿದ್ಧ. ರಾಜಕೀಯವಾಗಿ ಮಹಿಳಾ ಮೀಸಲಾತಿಗೆ ಧ್ವನಿ ಎತ್ತಿದ ಸೋನಿಯಾ ಗಾಂಧಿ ಅವರ ಕನಸು ನನಸಾಗಿಸುತ್ತೇವೆ. ಮಹಿಳೆಯರಲ್ಲಿ ಸ್ವಮೌಲ್ಯದ ಬಗ್ಗೆ ಜಾಗೃತಿ ಮೂಡಿಸಿ, ಸಬಲೀಕರಣಗೊಳಿಸುವ ಕಾಂಗ್ರೆಸ್ ಸಿದ್ಧಾಂತಕ್ಕೆ ನಾವು ಬದ್ಧ, ಶಕ್ತಿಯುತ ಸ್ತ್ರೀ ಸಮಾಜ ನಿರ್ಮಾಣ, ಇದೇ ನಮ್ಮ ವಾಗ್ದಾನ. ಸಶಕ್ತ ಮಹಿಳೆ, ಸಶಕ್ತ ಭಾರತ, ಇದೇ ನಮ್ಮ ಧ್ಯೇಯ. ಇದೇ ನಮ್ಮ ಪ್ರತಿಜ್ಞೆ.