IMG 20230115 WA0030

ಆನೇಕಲ್:ಮೆಣಸಿಗನಹಳ್ಳಿ ನ್ಯಾಯಬೆಲೆ ಅಂಗಡಿಗೆ ಚಾಲನೆ…!

DISTRICT NEWS ಬೆಂಗಳೂರು

ಮೆಣಸಿಗನಹಳ್ಳಿ ನ್ಯಾಯಬೆಲೆ ಅಂಗಡಿಗೆ ಚಾಲನೆ: ಶಾಸಕ ಬಿ.ಶಿವಣ್ಣ

ಆನೇಕಲ್ ತಾಲ್ಲೂಕಿನ ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಣಸಿಗನಹಳ್ಳಿ ಗ್ರಾಮದಲ್ಲಿ ಶಾಸಕ ಬಿ.ಶಿವಣ್ಣ ರವರು ಸರ್ಕಾರಿ ನ್ಯಾಯಬೆಲೆ ಅಂಗಡಿ ಉಪ ಕೇಂದ್ರಕ್ಕೆ ಚಾಲನೆ ನೀಡಿದರು.

ಸುಮಾರು 4 ದಶಕಗಳಿಂದ ಪಡಿತರಕ್ಕಾಗಿ ಓಡಾಡಬೇಕಿದ್ದ ಗ್ರಾಮದ ಗ್ರಾಮಸ್ಥರು ನಿಟ್ಟುಸಿರು
ಬಿಟ್ಟಂತಾಗಿದೆ.
ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಮೆಣಸಿಗನಹಳ್ಳಿ ಗ್ರಾಮಸ್ಥರು ಪಡಿತರ ಪಡೆಯಲು ಪ್ರತಿ ತಿಂಗಳು ಪರದಾಡಬೇಕಿತ್ತು. ಈ ಗ್ರಾಮಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣದಿಂದ ಪಡಿತರ ತರುವ ಸಂದರ್ಭದಲ್ಲಿ ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿತ್ತು.
ದ್ವಿಚಕ್ರ ವಾಹನ ಹೊಂದಿದವರು ಪಡಿತರ ತಂದರೆ, ವಾಹನ ಸೌಲಭ್ಯ ಇಲ್ಲದವರು ತಲೆಯ ಮೇಲೆ ಹೊತ್ತುಕೊಂಡೇ ಪ್ರತಿ ತಿಂಗಳ ಪಡಿತರ ತರುತ್ತಿದ್ದರು. ಗ್ರಾಮಸ್ಥರು ಆಗಾಗ್ಗೆ ಸ್ಥಳೀಯವಾಗಿ ನ್ಯಾಯಬೆಲೆ ಅಂಗಡಿ ಸ್ಥಾಪಿಸುವಂತೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಅವರನ್ನು ಗ್ರಾಮಸ್ಥರು ಭೇಟಿ ಮಾಡಿ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿ ಉಪ ಕೇಂದ್ರಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕ ಬಿ ಶಿವಣ್ಣ ಜನರು ವಣಕನಹಳ್ಳಿ ಗ್ರಾಮಕ್ಕೆ ಪಡಿತರ ತರಲು ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇತ್ತು. ತುಂಬಾ ದೂರ ಆಗುತ್ತಿದ್ದ ಕಾರಣದಿಂದ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಈ ಉಪ ಕೇಂದ್ರ ಪ್ರಾರಂಭಿಸಲಾಗಿದೆ’ ಎಂದು ತಿಳಿಸಿದರು.

IMG 20230115 WA0029

‘ಆನ್‌ಲೈನ್ ವ್ಯವಸ್ಥೆ ಕೂಡ ಮಾಡಲಾಗಿದೆ. ಈ ಭಾಗದ ಜನರಿಗೆ ಪಡಿತರ ಪಡೆಯಲು ಯಾವುದೇ ಅಡ್ಡಿಯಿಲ್ಲ. ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ. ಗ್ರಾಮದ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ’ ಗ್ರಾಮದ ಸದಸ್ಯ ಚೈತ್ರ ಬಾಬು ಹೇಳಿದರು.

ಮುಖಂಡರಾದ ಲಿಂಗಣ್ಣ, ಆನೇಕಲ್ ಪುರಸಭಾ ಅಧ್ಯಕ್ಷ ಪದ್ಮನಾಭ (ಪದ್ಧಿ) ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ.ಭಾರ್ಗವ, ಗ್ರಾಮದ ಮುಖಂಡರಾದ ಮಾಜಿ ಅಧ್ಯಕ್ಷರಾದ ರಘುನಾಥ್ (ರಘು), ಮಾಜಿ ಉಪಾಧ್ಯಕ್ಷರಾದ ಮುನಿರಾಜು, ಗ್ರಾ. ಪಂ ಉಪಾಧ್ಯಕ್ಷರಾದ ಸವಿತಾ ಸನತ್ ಕುಮಾರ್ ,ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಚೈತ್ರ ಬಾಬು, ಸದಸ್ಯರಾದ ಶ್ರೀನಿವಾಸ ರೆಡ್ಡಿ (ವಾಸು), ನಾರಾಯಣಪ್ಪ, ಚಂದ್ರರೆಡ್ಡಿ, ನಾರಾಯಣಸ್ವಾಮಿ, ಕಾರ್ತಿಕ್ ರೆಡ್ಡಿ, ಸರಸ್ವತಿ ಅಶ್ವಥ್, ರಾಮಕ್ಕ ಮತ್ತು ವಣಕನಹಳ್ಳಿ ಶಿವಶಂಕರ್ ರೆಡ್ಡಿ (ರಮೇಶ್ ರೆಡ್ಡಿ) ಹಾಗೂ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.