IMG 20230115 WA0023

ಶಿರಸಿಯಲ್ಲಿ ಪರಿಸರ ವಿಶ್ವವಿದ್ಯಾಲಯ ಸ್ಥಾಪಿಸಲು ತೀರ್ಮಾನ…!

Genaral STATE

ಶಿರಸಿಯಲ್ಲಿ ಪರಿಸರ ವಿಶ್ವವಿದ್ಯಾಲಯ ಸ್ಥಾಪಿಸಲು ತೀರ್ಮಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಉತ್ತರ ಕನ್ನಡ,( ಶಿರಸಿ) ಜನವರಿ 15:
ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸಮಗ್ರವಾಗಿ ಪರಿಸರ ಅಧ್ಯಯನ ಮಾಡುವ ಪರಿಸರ ವಿಶ್ವವಿದ್ಯಾಲಯವನ್ನು ಶಿರಸಿಯಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಶಿರಸಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಅರಣ್ಯ ಹಾಗೂ ತೋಟಗಾರಿಕೆ ಕಾಲೇಜುಗಳು ಇಲ್ಲಿರುವುದರಿಂದ ಇವೆರಡನ್ನೂ ಸಂಯೋಜಿಸಿ, ತೋಟಗಾರಿಕೆ, ಕೃಷಿ, ಜೀವ ವೈವಿಧ್ಯತೆ, ವನ್ಯಜೀವಿ ರಕ್ಷಣೆ, ಜನರ ಅಭಿವೃದ್ಧಿ, ಪರಿಸರ ಸಮತೋಲನ ಮಾಡುವ ಹಿನ್ನೆಲೆಯಲ್ಲಿ ಪರಿಸರ ವಿಶ್ವವಿದ್ಯಾಲಯವನ್ನು ಇಲ್ಲಿ ಸ್ಥಾಪಿಸುವುದು ಸೂಕ್ತ ಎಂದು ಭಾವಿಸಲಾಗಿದೆ ಎಂದರು

ಸಂಯೋಜಿತ ವಿಶ್ವವಿದ್ಯಾಲಯ
ಪರಿಸರ ವಿಶ್ವವಿದ್ಯಾಲಯದ ಜೊತೆಗೆ ಕಲಾ, ವಿಜ್ಞಾನ, ವಾಣಿಜ್ಯ ಮುಂತಾದ ಸಾಮಾನ್ಯ ಕಲಿಕೆಗೂ ಅವಕಾಶ ಕಲ್ಪಿಸಲಾಗುವುದು. ಸಂಯೋಜಿತ ವಿಶ್ವವಿದ್ಯಾಲಯದ ಇದಾಗಲಿದೆ. ವಿಶೇಷವಾಗಿ ಪರಿಸರದ ಬಗ್ಗೆ ಕೆಲಸ ಮಾಡಲಿದೆ. ಬರುವ ಬಜೆಟ್ ನಲ್ಲಿ ಅದಕ್ಕೆ ಅನುದಾನ ನೀಡಲಾಗುವುದು. ಈ ಭಾಗದ ಜನರಿಗೆ ಕೊಡುಗೆಯಾಗಿ ನೀಡಲಾಗುತ್ತಿದೆ ಎಂದರು.

IMG 20230115 WA0026

ಒಕ್ಕಲೆಬ್ಬಿಸುವುದಿಲ್ಲ
ಅಭಿವೃದ್ಧಿ ಜೊತೆಗೆ ಅರಣ್ಯ ಪ್ರದೇಶ ಹೆಚ್ಚಿಸಿ ಪರಿಸರ ಸಮತೋಲನ ಕಾಯ್ದುಕೊಳ್ಳಬೇಕು. ವಿಶೇಷವಾಗಿ ಇಲ್ಲಿ ಪ್ರವಾಹ, ಅಭಿವೃದ್ಧಿ ಯೋಜನೆ ನೀಡುವಾಗ ಅರಣ್ಯ ವಾಸಿಗಳ ಸಮಸ್ಯೆ ಎದುರಾಗುತ್ತಿದೆ. ಕಾನೂನಿನಲ್ಲಿ ಹಲವಾರು ಸಮಸ್ಯೆಗಳಿವೆ. ಪ್ರವಾಹ ಉಂಟಾದಾಗ ಅರಣ್ಯ ವಾಸಿಗಳಿಗೆ ಪರಿಹಾರ ನೀಡಿದ್ದೇವೆ. ಮನೆಯನ್ನು ಸಹ ನೀಡಿದ್ದೇವೆ. ತಲ ತಲಾಂತರದಿಂದ ನೆಲೆಸಿ, ಸಾಗುವಳಿ ಮಾಡಿರುವ ಅರಣ್ಯ ವಾಸಿಗಳ ಸಮಸ್ಯೆ ಸುಪ್ರೀಂಕೋರ್ಟ್ ನಲ್ಲಿ ಇದ್ದರೂ ಕೂಡ ಎಲ್ಲಾ ರಾಜ್ಯ ಗಳಲ್ಲಿ ಈ ಸಮಸ್ಯೆ ಇದೆ. ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇವೆ. ಮೂರು ತಲೆಮಾರುಗಳನ್ನು ತೆಗೆದುಕೊಳ್ಳುವ ಬದಲು ಒಂದೇ ತಲೆಮಾರನ್ನು ತೆಗೆದುಕೊಂಡು ಅರಣ್ಯ ವಾಸಿಗಳೆಂದು ನಿರ್ಣಯ ಮಾಡಿ ಹಕ್ಕುಪತ್ರಗಳನ್ನು ನೀಡಲು ವ್ಯವಸ್ಥೆ ಮಾಡಲು ರಾಜ್ಯದ ಅಭಿಪ್ರಾಯವನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಅದರ ಕೆಲಸ ವಾಗುತ್ತದೆ. ಕನ್ನಡ ನಾಡಿನ ಅರಣ್ಯವಾಸಿಗಳಿಗೆ ಯಾವುದೇ ಕಾರಣಕ್ಕೂ ಒಕ್ಕಲು ಎಬ್ಬಿಸುವ ಕೆಲಸ ವನ್ನು ರಾಜ್ಯ ಸರ್ಕಾರ ಮಾಡುವುದಿಲ್ಲ. ಈ ಬಗ್ಗೆ ಸ್ಪಷ್ಟವಾಗಿ ಅಧಿಕಾರಿಗಳಿಗೆ ಸಭೆಯಲ್ಲಿ ನಿರ್ದೇಶನ ನೀಡಿದೆ. ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ಯಾವುದೇ ರೀತಿಯ ತೊಂದರೆ ನೀಡಬಾರದೆಂದು ಸೂಚನೆ ನೀಡಲಾಗಿದೆ. ಯಾರೂ ಆತಂಕ ಪಡುವ ಪ್ರಶ್ನೆಯೇ ಇಲ್ಲ. ಎಲ್ಲಿಯೂ ಅವರಿಗೆ ತೊಂದರೆ ಮಾಡುವ ಪ್ರಶ್ನೆ ಇಲ್ಲ ಎಂದರು.

IMG 20230115 WA0025

ಸಚಿವ ಸಂಪುಟ ವಿಸ್ತರಣೆ
ಅದರ ಪ್ರಸ್ತಾವನೆ ಚರ್ಚೆಯಾಗಿದೆ. ವರಿಷ್ಠರು ಸೂಚನೆ ನೀಡಿದ ಕೂಡಲೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತಿಳಿಸಲಾಗುವುದು ಎಂದರು.

ನಿಗಮ ಮಂಡಳಿಗೆ ನೇಮಕ
ನಿಗಮ ಮಂಡಳಿಗಳ ನೇಮಕಾತಿ ಬಗ್ಗೆ ಉತ್ತರಿಸಿ, ಕೆಲವರ ಅವಧಿ ಮುಗಿದಿದೆ ಕೆಲವರದ್ದು ಮುಗಿದಿಲ್ಲ. ಪರಿಶೀಲನೆ ಮಾಡಿ ಅಧ್ಯಕ್ಷರು ಮತ್ತು ಸದಸ್ಯ ನೇಮಕ ಮಾಡಲಾಗುವುದು ಎಂದರು.

ಹೊಸ ಜಿಲ್ಲೆ
ಹೊಸ ಜಿಲ್ಲೆ ರಚನೆ ಬಗ್ಗೆ ಮನವಿ, ಮನವರಿಕೆ ಮಾಡಿಕೊಟ್ಟಿದ್ದಾರೆ. ಇಡೀ ರಾಜ್ಯದಲ್ಲಿ ಈ ರೀತಿಯ ಬೇಡಿಕೆಗಳಿವೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡುವ ಅವಶ್ಯಕತೆ ಇದೆ. ಸಾಧಕ ಬಾಧಕಗಳನ್ನು ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಾಮಕೃಷ್ಣ ಹೆಗಡೆಯವರ ಪೀಠ
ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ರಾಮಕೃಷ್ಣ ಹೆಗಡೆಯವರ ಅಧ್ಯಯನ ಪೀಠ ಪ್ರಾರಂಭಿಸುವ ಪ್ರಸ್ತಾಪವಿತ್ತು ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ ಈಗಾಗಲೇ ಗ್ರಾಮೀಣಾಭಿವೃದ್ಧಿ ವಿಶ್ವ ವಿದ್ಯಾಲಯದಲ್ಲಿ ಅಧಿಕಾರ ವಿಕೇಂದ್ರೀಕರಣದ ಅಧ್ಯಯನ ನಡೆಯುತ್ತಿದೆ. ರಾಮಕೃಷ್ಣ ಹೆಗಡೆ ಯವರದ್ದು ಬಹುಆಯಾಮವುಳ್ಳ ವ್ಯಕ್ತಿತ್ವ.60 ರ ದಶಕದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿ ಅಧಿಕಾರ ವಿಕೇಂದ್ರೀಕರಣ ತರಲು ದೊಡ್ಡ ಪ್ರಭಾವ ಬೀರಿದವರು. ನೆಹರು ಅವರ ಸಂಪುಟದಲ್ಲಿ ಡಿ.ಪಿ.ಧರ್ ಅವರ ಪ್ರಭಾವದಿಂದ ಅಧಿಕಾರ ವಿಕೇಂದ್ರೀಕರಣ ಕಾಯ್ದೆಯನ್ನು ತಂದರು ಈ ರಾಜ್ಯಕ್ಕೆ ಯೋಜನಾ ಮಂಡಳಿ, ಲೋಕಾಯುಕ್ತ ತಂದವರು ಅವರು ಯಾವ ವಿಷಯದ ಮೇಲೇ ಆಗಬೇಕೆಂದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪೀಠ ಸ್ಥಾಪಿಸಲಾಗುವುದು ಎಂದರು.

IMG 20230115 WA0019

ಮಹದಾಯಿ: ಕಾನೂನುಬದ್ಧವಾಗಿ ಕಾಮಗಾರಿ
ಸುಪ್ರೀಂಕೋರ್ಟ್ ನಿರ್ದೇಶಿತ ನ್ಯಾಯಾಧಿಕರಣ ಮಂಡಳಿ ರಚನೆಯಾಗಿತ್ತು. ಸುಪ್ರೀಂಕೋರ್ಟ್ ಆದೇಶದ ಮೇಲೆ ನ್ಯಾಯಮಂಡಲಿ ತನ್ನ ಆದೇಶವನ್ನು ನೀಡಿದೆ. ವರದಿಗಳನ್ನು ನೀಡಿದ ನಂತರ ಅಧಿಸೂಚನೆಯಾಗಿದೆ. ಜಲ ನ್ಯಾಯಾಧಿಕರಣದ ಅಧಿಸೂಚನೆ ಸುಪ್ರೀಂಕೋರ್ಟ್ ಆದೇಶದಷ್ಟೇ ಮಹತ್ವವುಳ್ಳದ್ದು. ಅದರನ್ವಯ ಡಿಪಿಆರ್ ಗೆ ಅನುಮೋದನೆಯಾಗಿದೆ. ಎಲ್ಲವೂ ಕಾನೂನು ಬದ್ಧವಾಗಿದೆ. ಸುಪ್ರೀಂಕೋರ್ಟ್ ಹಲವಾರು ವರ್ಷ ಪರಿಶೀಲಿಸಿ ಆದೇಶ ನೀಡಿದೆ. ಆ ಕಾಮಗಾರಿಗಳನ್ನು ಕಾನೂನುಬದ್ಧವಾಗಿ, ಸುಪ್ರೀಂಕೋರ್ಟ್ ಆದೇಶಕ್ಕೆ ಬದ್ಧವಾಗಿ ಕೈಗೊಳ್ಳಲಾಗುವುದು ಎಂದರು.

ಕಳಚೆ ಕ್ಷೇತ್ರ ರಕ್ಷಣೆಗೆ ಅನುದಾನ
ಈ ಭಾಗ ಅರಣ್ಯ ಪ್ರದೇಶದಿಂದ ಕೂಡಿದೆ. ಶಿರಸಿ, ಎಲ್ಲಾಪುರ, ಮುಡಗೋಡ, ಹಲಿಯಾಳ ಘಟ್ಟದ ಮೇಲೆ ಹಾಗೂ ಕೆಳಗಿನ ಪ್ರದೇಶ ದಟ್ಟವಾದ ಅರಣ್ಯ ಪ್ರದೇಶ. ವೈವಿಧ್ಯಮಯ ಜೀವಸಂಕುಲವಿದೆ. ನಿಸರ್ಗದತ್ತವಾದ ಕ್ಷೇತ್ರವಾಗಿದ್ದು, ಇನ್ನಷ್ಟು ವ್ಯವಸ್ಥಿತವಾದ, ಯೋಜನಾಬದ್ಧ ಬೆಳವಣಿಗೆ ಅಗತ್ಯ ವಿದೆ. ಹಸಿರು ಪದರ, ಕಾಡು ಬೆಳೆಸುವುದು, ಪರಿಸರ ಸಮತೋಲನವನ್ನು ಮಾಡಬೇಕಿದೆ. 2022- 23 ರಲ್ಲಿ ಹಸಿರು ಬಜೆಟ್ ರೂಪಿಸಲಾಗಿದ್ದು, ಸಂಪೂರ್ಣವಾಗಿ ಯೋಜನೆಗಳು ಈ ಜಿಲ್ಲೆಯಲ್ಲಿ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ಗುಣಮಟ್ಟದ ಕೆಲಸಗಳು ಆಗುತ್ತವೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು. ಕಳಚೆ ಕ್ಷೇತ್ರದ ರಕ್ಷಣೆ ಮಾಡಲು ಪರಿಸರ ಬಜೆಟ್ ನಲ್ಲಿ ಅನುದಾನ ನೀಡಲಾಗಿದೆ. ಅಲ್ಲಿ ನಷ್ಟವಾಗಿರುವ ಅರಣ್ಯವನ್ನು ಸರಿದೂಗಿಸಲು ಯೋಜನೆಗಳನ್ನು ಅರಣ್ಯ ಇಲಾಖೆ ತೆಗೆದುಕೊಂಡಿದೆ. ಅಲ್ಲೋ ಪುನರ್ವಸತಿ ಬಗ್ಗೆ ಚರ್ಚೆಯಾಗಿದ್ದು, ಕೆಲವರು ಸ್ಥಳಾಂತರಗೊಳ್ಳಲು ಒಪ್ಪಿದ್ದು, ಕೆಲವರು ಒಪ್ಪಿಲ್ಲ. ಸಮಗ್ರವಾದ ಪುನರ್ವಸತಿಗೆ ಯೋಜನೆ ರೂಪಿಸಲು ಅನುದಾನ ಒಡಗಿಸಿದ್ದು, ಇನ್ನಷ್ಟು ಅನುದಾನ ಕೋರಿದ್ದು, ಅನುದಾನವನ್ನು ಒದಗಿಸಲು ಸಿದ್ಧನಿದ್ದೇನೆ ಎಂದರು.