ನೇಪಾಳ: ಪೋಖರಾ ವಿಮಾನ ನಿಲ್ದಾಣದಲ್ಲಿ 72 ಪ್ರಯಾಣಿಕರಿದ್ದ ವಿಮಾನವು ರನ್‌ವೇಯಲ್ಲಿ ಪತನಗೊಂಡಿದೆ. ಹಳೆ ವಿಮಾನ ನಿಲ್ದಾಣ ಮತ್ತು ಪೋಖರಾ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ನಡುವೆ ಪತನಗೊಂಡಿದೆ.
ವಿಮಾನವು ರನ್‌ವೇಗೆ ಅಪ್ಪಳಿಸಿದ್ದು, ಅದರ ರಭಸಕ್ಕೆ ಕೂಡಲೇ ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ಮುಗಿಲೆತ್ತರ ಚಿಮ್ಮುತ್ತಿದ್ದ ಅಗ್ನಿ ಜ್ವಾಲೆಗಳನ್ನು ನಂದಿಸಲು ರಕ್ಷಣಾ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ರಕ್ಷಣಾ ಕಾರ್ಯಚರಣೆ ಮುಕ್ತಾಯವಾಗುವವರೆಗೂ ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ
ಈ ವಿಮಾನವು ಕಠ್ಮಂಡುವಿನಿಂದ ಪೋಖರಾ ಕಡೆಗೆ ತೆರಳುತ್ತಿತ್ತು ಎಂದು ಯೇತಿ ಏರ್‌ಲೈನ್ಸ್ (Yeti Airlines) ತಿಳಿಸಿದೆ. .
ಕಠ್ಮಂಡುವಿನಿಂದ ಬೆಳಿಗ್ಗೆ 10.33ಕ್ಕೆ ವಿಮಾನ ಟೇಕ್ ಆಫ್ ಆಗಿತ್ತು ಎಂದು ನೇಪಾಳದ ನಾಗರಿಕ ವಿಮಾನ ಪ್ರಾಧಿಕಾರ (ಸಿಎಎಎನ್) ತಿಳಿಸಿದೆ. ಟೇಕ್ ಆಫ್ ಆದ ಸುಮಾರು 20 ನಿಮಿಷಗಳಲ್ಲಿಯೇ ಅಪಘಾತ ಸಂಭವಿಸಿದೆ. ಪೋಖರಾ ಏರ್‌ಪೋರ್ಟ್‌ನ ಲ್ಯಾಂಡಿಂಗ್ ಸಮೀಪ ಇದ್ದ ವಿಮಾನವು, ಸೇತಿ ನದಿ ತೀರಕ್ಕೆ ಅಪ್ಪಳಿಸಿದೆ.
ಕನಿಷ್ಠ 32 ಮಂದಿ ಮೃತದೇಹಗಳು ಪತ್ತೆಯಾಗಿವೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ