IMG 20230116 123456 scaled

Bangalore:ಲಾಲ್‍ಬಾಗ್‍ನಲ್ಲಿ “ಬೆಂಗಳೂರು ಇತಿಹಾಸ ಆಧಾರಿತ”  ಫಲಪುಷ್ಪ ಪ್ರದರ್ಶನ…!

Genaral STATE

ಲಾಲ್‍ಬಾಗ್‍ನಲ್ಲಿ “ಬೆಂಗಳೂರು ಇತಿಹಾಸ ಆಧಾರಿತ”  ಫಲಪುಷ್ಪ ಪ್ರದರ್ಶನ   – ಸಚಿವ ಮುನಿರತ್ನ

ಬೆಂಗಳೂರು, ಜನವರಿ 16 (ಕರ್ನಾಟಕ ವಾರ್ತೆ) :

 “ಬೆಂಗಳೂರು ಇತಿಹಾಸ ಆಧಾರಿತ” ಫಲಪುಷ್ಪ ಪ್ರದರ್ಶನವನ್ನು ಇದೇ 20 ರÀಂದು        ಬೆಳಿಗ್ಗೆ 10 ಗಂಟೆಗೆ, ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಎಸ್. ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ ಎಂದು  ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ತಿಳಿಸಿದರು.

ಇಂದು  ಲಾಲ್‍ಬಾಗ್‍ನ ಮಾಹಿತಿ ಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಲಾಲ್‍ಬಾಗ್‍ನ ಗಾಜಿನ ಮನೆಯ ಪ್ರದರ್ಶನದಲ್ಲಿ 65ಕ್ಕೂ ಹೆಚ್ಚು ಬಗೆಯ ಹೂಗಳು, ಹಾಲೆಂಡ್, ಸೌತ್ ಅಮೆರಿಕಾ, ಕೀನಿಯಾ, ಆಸ್ಟ್ರೇಲಿಯಾ, ಇಸ್ರೇಲ್, ಬೆಲ್ಜಿಯಂ, ಯಥೋಪಿಯಾ ಹಾಗೂ ಕೊಲಂಬಿಯಾ ಇತ್ಯಾದಿ 11 ದೇಶಗಳಿಗೆ ಸೇರುವ 69 ಬಗೆಯ 112 ಪುಷ್ಫ ಡೋಮ್ ಹಾಗೂ ಕ್ಯಾಲಿಯಾಲಿಲ್ಲಿ, ಹೈಡ್ರಾಂಜಿಯಾ, ಸ್ಟೀಟ್ ವಿಲಿಯಂ, ಆಸ್ ಪರಾಗಸ್, ಲೈಯಾಟ್ರಿಸ್, ಆನಿಯರ್ ಪ್ಲವರ್ (ಚಿಲಿ) ಹೈಪರಿಕಂ, ಸ್ನ್ಯಾಪ್ ಡ್ರಾಗನ್, ಟೂಲಿಪ್, ಕ್ಯಾಸ್ ಪೀಡಿಯಾ, ಯರಿಂಜಿಯಾ, ಪಿಂಕ್ ಕುಷನ್, ಸ್ಪಾಕ್ಸ್, ವ್ಯಾಕ್ಸ್ ಪಲವರ್, ಹೈಸಿಂತ್, ಇತ್ಯಾದಿ ಹೂಗಳನ್ನು ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

IMG 20230116 134146

ಡಾರ್ಜೆಲಿಂಗ್ ನಿಂದ ಸಿಂಬಡಿಯಂ ಆರ್ಕಿಡ್ಸ್, ಶೀತಲವಲಯದ ಇತರೆ ಹೂಗಳು ಆಗಮಿಸಲಿವೆ. ಗಾಜಿನ ಮನೆಯಲ್ಲಿ ಕುಂಡದಲ್ಲಿ ಬೆಳೆದ ಹಾಗೂ ಪ್ರತ್ಯೇಕಿಸಿದ ಒಟ್ಟಾರೆ 6 ಲಕ್ಷಕ್ಕೂ ಅಧಿಕ ಸಂಖ್ಯೆಯ ಹೂಕುಂಡ ಮತ್ತು ಹೂಗಳನ್ನು ಬಳಸಲಾಗುತ್ತಿದೆ. ಸಸ್ಯತೋಟದ ಆಯ್ದ ಭಾಗಗಳಲ್ಲಿ ಬೆಡ್‍ಗಳಲ್ಲಿ,       ಟಬ್‍ಗಳಲ್ಲಿ, ಕುಂಡಗಳಲ್ಲಿ ಹಾಗೂ ವಿವಿಧ ವಿನ್ಯಾಸಗಳಲ್ಲಿ ಒಟ್ಟಾರೆ 5 ಲಕ್ಷಕ್ಕೂ ಹೆಚ್ಚಿನ ಬಣ್ಣ ಬಣ್ಣದ ವಾರ್ಷಿಕ ಹೂವಿನ ಗಿಡಗಳನ್ನು ಬೆಳೆಸಲಾಗಿದೆ ಎಂದರು.


ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಗಾಜಿನ ಮನೆಯ ಒಳಾಂಗಣ ಹಾಗೂ ಸಸ್ಯತೋಟದ ಇತರೇ ಹೊರಾಂಗಣ ಪ್ರದೇಶಗಳು ಸೇರಿ ಒಟ್ಟಾರೆ 11 ಲಕ್ಷಕ್ಕೂ ಅಧಿಕ ಸಂಖ್ಯೆ ಕುಂಡದಲ್ಲಿ ಬೆಳೆದ, ಬೆಡ್‍ಗಳಲ್ಲಿ ಬೆಳೆದ ಹಾಗೂ ಪ್ರತ್ಯೇಕಿಸಿದ ಹೂಗಳನ್ನು ಪ್ರದರ್ಶಿಸಲಾಗುತ್ತಿದೆ. ಇದೇ ಪ್ರಥಮ ಬಾರಿಗೆ ಗಾಜಿನ ಮನೆಯ ಜೊತೆಗೆ ಲಾಲ್ ಬಾಗ್‍ನ ಹೊರಾಂಗಣದ ಜಾವಫಿಗ್ ಪ್ರದೇಶದಲ್ಲಿಯೂ ಸಹ 200 ಅಡಿ ಉದ್ದದ ಬೃಹತ್ ಕುಟೀರವನ್ನು ನಿರ್ಮಿಸಿ ಇದರಲ್ಲಿ ಬೆಂಗಳೂರು ಇತಿಹಾಸದ ಪರಿಕಲ್ಪನೆಯನ್ನು ಸಹಕಾರಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

“ಬೆಂಗಳೂರು ಇತಿಹಾಸ ಆಧಾರಿತ”  ಫಲಪುಷ್ಪ ಪ್ರದರ್ಶನದಲ್ಲಿ ಜನವರಿ 20ರಂದು  ಕಾರ್ಯಕ್ರಮದಲ್ಲಿ  ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ  ಉದಯ್ ಬಿ. ಗರುಡಚಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯರಾದ ತೇಜಸ್ವಿಸೂರ್ಯ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ ಮತ್ತು ಅ. ದೇವೇಗೌಡ,  ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರಾದ  ಐ.ಎಸ್.ಎನ್.ಪ್ರಸಾದ್, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದಾರೆ ಎಂದು ತಿಳಿಸಿದರು.

ಇಕೆಬಾನ ಮತ್ತು ಪೂರಕ ಕಲೆಗಳ ಉದ್ಘಾಟನೆಯನ್ನು ಅದಮ್ಯ ಚೇತನ ಟ್ರಸ್ಟ್‍ನ ಅಧ್ಯಕ್ಷರಾದ  ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್  ಅವರು 21ನೇ ಜನವರಿ 2023ರಂದು ಮಧ್ಯಾಹ್ನ 1 ಗಂಟೆಗೆ  ಲಾಲ್‍ಬಾಗ್‍ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಮಾಡಲಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಬೋನ್ಸಾಯ್ ಪರಿಣಿತರಾದ ಶೀಮತಿ ಅನುಪಮಾ ವೇದಾಚಲ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಲಾಲ್‍ಬಾಗ್‍ನ  ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ 28ನೇ ಜನವರಿ 2023ರಂದು 2-30 ಗಂಟೆಗೆ ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿ ವಿಜೇತರಾವರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ  ಉದಯ್ ಬಿ. ಗರುಡಚಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪದ್ಮಶ್ರೀ ಪುರಸ್ಕøತ ಹಾಗೂ ಕನ್ನಡ ಸಾಹಿತಿಗಳಾದ ಪ್ರೊ. ದೊಡ್ಡರಂಗೇಗೌಡ, ದಿ ಮಿಥಿಕ್ ಸೊಸೈಟಿಯ ಕಾರ್ಯದರ್ಶಿ ವಿ. ನಾಗರಾಜ್ ಅವರು ಭಾಗವಹಿಸಿ ಬಹುಮಾನ ವಿತರಿಸಲಿದ್ದಾರೆ.

  ಪ್ರದರ್ಶನ ವೇಳೆಯು ಬೆಳಿಗ್ಗೆ 7-00 ಗಂಟೆಯಿಂದ  ಸಂಜೆ 6-30ರವರೆಗೆ ಹಾಗೂ ಜನವರಿ  30 ರಂದು ರಾತ್ರಿ 7-00 ಗಂಟೆಗೆ ಪ್ರದರ್ಶನವು ಮುಕ್ತಾಯಗೊಳ್ಳಲಿದೆ.
ಟಿಕೆಟ್ ದರವು ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ ತಲಾ ರೂ. 70/- ಮತ್ತು ರಜಾ ದಿನಗಳಲ್ಲಿ ರೂ. 75/-ಹಾಗೂ 12 ವರ್ಷದೊಳಗಿನ ಮಕ್ಕಳಿಗೆ ತಲಾ ಪ್ರತಿ ದಿವಸ ರೂ. 30/-, ಶಾಲಾ ಸಮವಸ್ತ್ರ ಮತ್ತು ಗುರುತಿನ ಚೀಟಿ ಧರಿಸಿ ಬರುವ 1 ರಿಂದ 10ನೇ ತರಗತಿಯ ವರೆಗಿನ ಎಲ್ಲಾ ಶಾಲಾ ಮಕ್ಕಳಿಗೂ ಪ್ರದರ್ಶನದ ಪೂರ್ಣ ಅವಧಿಯಲ್ಲಿ ಉಚಿತ ಪ್ರವೇಶ ಕಲ್ಪಿಸಿದೆ ಎಂದರು.

ಈ ಬಾರಿಯ ಫಲಪುಪ್ಪ ಪ್ರದರ್ಶನಕ್ಕೆ ಸುಮಾರು 10 ರಿಂದ 12 ಲಕ್ಷಕ್ಕೂ ಹೆಚ್ಚು ವೀಕ್ಷಕರು ಆಗಮಿಸುವ ನಿರೀಕ್ಷೆಯಿದೆ ಎಂದರು. ನಾಲ್ಕು ಗೇಟ್‍ನಲ್ಲಿ ಟಿಕೆಟ್ ಕೌಂಟರ್ ತೆರೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.