IMG 20230215 WA0001

ಅಡ್ವಾಂಟೇಜ್‌: ಆಂಧ್ರ ಪ್ರದೇಶ:ಗ್ಲೋಬಲ್ ಇನ್ವೆಸ್ರ‍್ಸ್‌ ಸಮ್ಮಿಟ್- 2023

BUSINESS

ಅಡ್ವಾಂಟೇಜ್‌: ಆಂಧ್ರ ಪ್ರದೇಶ
ದೇಶೀಯ ಮತ್ತು ಜಾಗತಿಕ ಹೂಡಿಕೆಯನ್ನು ಹಲವು ವಲಯಗಳಲ್ಲಿ ಆರ‍್ಷಿಸುತ್ತಿರುವ ಆಂಧ್ರ ಪ್ರದೇಶ, ಭಾರತದ ರಫ್ತಿನಲ್ಲಿ ಶೀಘ್ರ ೧೦% ಪಾಲು ಹೊಂದುವ ಗುರಿ
ಆಂಧ್ರ ಪ್ರದೇಶದ “ಗ್ಲೋಬಲ್ ಇನ್ವೆಸ್ರ‍್ಸ್‌ ಸಮ್ಮಿಟ್ ೨೦೨೩” ಅನ್ನು ಯಶಸ್ವಿಯಾಗಿ ಬೆಂಗಳೂರಿನಲ್ಲಿ ನಡೆಸಲಾಯಿತು, ೪೮,೩೫೨ ಕೋಟಿ ಭೂಮಿ ತುಣುಕುಗಳನ್ನು ಔದ್ಯಮಿಕ ಅಭಿವೃದ್ಧಿಗೆ ಒದಗಿಸಲಾಗಿದ್ದು, ಹೊಸ ಘಟಕಗಳನ್ನು ಸ್ಥಾಪಿಸಲು ಬೇಕಿರುವ ಅವಧಿಯನ್ನು ಕಡಿಮೆ ಮಾಡಲು ನರ‍್ಮಾಣ ಸಿದ್ಧ ಮೂಲಸೌರ‍್ಯವನ್ನು ಒದಗಿಸುವ ಭರವಸೆ ನೀಡಲಾಯಿತು
ಬೆಂಗಳೂರು, ೧೪ಣh ಫೆಬ್ರವರಿ ೨೦೨೩: ಆಂಧ್ರ ಪ್ರದೇಶ ರಾಜ್ಯವು ತನ್ನ ಶ್ರೀಮಂತ ನೈರ‍್ಗಿಕ ಸಂಪನ್ಮೂಲಗಳು, ಮೂಲಸೌರ‍್ಯದಲ್ಲಿ ಭಾರಿ ಹೂಡಿಕೆ, ಭೂಮಿ ಸಂಪತ್ತು ಮತ್ತು ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಬೆಂಗಳೂರಿನಲ್ಲಿ ಇಂದು ನಡೆದ ಯಶಸ್ವಿ ಹೂಡಿಕೆದಾರರ ಸಭೆಯಲ್ಲಿ ಪ್ರಸ್ತಾಪಿಸಿತು. ಒಟ್ಟಾಗಿ ಈ ಪ್ರಯತ್ನದಿಂದಾಗಿ ಅಪಾರ ಸಂಪನ್ಮೂಲ ಇರುವ ರಾಜ್ಯವನ್ನಾಗಿ ಆಂಧ್ರಪ್ರದೇಶವನ್ನು ರೂಪಿಸಿದೆ. ವಿಶಾಖಪಟ್ಟಣಮ್‌ ನಲ್ಲಿ ೨೦೨೩ ಮರ‍್ಚ್‌ ೨-೪ ರ ವರೆಗೆ ನಡೆಯಲಿರುವ ಗ್ಲೋಬಲ್ ಇನ್ವೆಸ್ರ‍್ಸ್‌ ಸಮ್ಮಿಟ್‌ ಹಿನ್ನೆಲೆಯಲ್ಲಿ ಇಂತಹ ಹಲವು ಕರ‍್ಯಕ್ಷಮತಗಳನ್ನು ಆಯೋಜಿಸಲಾಗುತ್ತಿದೆ.
ಈ ಸಂರ‍್ಭದಲ್ಲಿ ಮಾತನಾಡಿದ ಉದ್ಯಮಗಳು, ಮೂಲಸೌರ‍್ಯ, ಹೂಡಿಕೆ ಮತ್ತು ವಾಣಿಜ್ಯ, ಐಟಿ, ಕೈಮಗ್ಗ ಮತ್ತು ಜವಳಿ ಸಚಿವ ಶ್ರೀ ಗುಡಿವಡ ಅಮರನಾಥ್‌ ರಾಜ್ಯದ ರಫ್ತು ಸಾಧ್ಯತೆಯನ್ನು ಒತ್ತಿ ಹೇಳಿದರು. ಗೌರವಯುತ ಸಚಿವರು ಮಾತನಾಡಿದಂತೆ “ಲೀಡ್ಸ್‌ ವರದಿ ೨೦೨೨ ರ ಪ್ರಕಾರ, ರಾಜ್ಯದ ರಫ್ತು ೨೦೨೧-೨೨ ರಲ್ಲಿ ಹಿಂದಿನ ರ‍್ಷಕ್ಕೆ ಹೋಲಿಸಿದರೆ ೧೫.೩೧% ರಷ್ಟು ಹೆಚ್ಚಳವಾಗಿದ್ದು, ಕರಾವಳಿ ರಾಜ್ಯಗಳಲ್ಲಿ “ಸಾಧಕ” ಎಂದು ಇದನ್ನು ರ‍್ಗೀಕರಿಸಿದೆ. ಹೊಸ ಬಂದರುಗಳ ನರ‍್ಮಾಣ ಮುಕ್ತಾಯಗೊಳ್ಳುವುದು ಮತ್ತು ಲಾಸ್ಟ್ ಮೈಲ್ ಕನೆಕ್ಟಿವಿಟಿಗೆ ಇತರ ಮೂಲಸೌರ‍್ಯ ಅಭಿವೃದ್ಧಿಯ ಮೂಲಕ, ರಫ್ತಿನಲ್ಲಿ ರಾಜ್ಯದ ಪಾಲು ಭಾರತದ ಒಟ್ಟು ರಫ್ತಿನಲ್ಲಿ ೧೦% ರ ವರೆಗೆ ಸಾಗಬಹುದಾಗಿದೆ.” ಎಂದರು.
ಹೂಡಿಕೆದಾರರನ್ನು ಉಲ್ಲೇಖಿಸಿ ಮಾತನಾಡಿದ ಹಣಕಾಸು, ಯೋಜನೆ, ವಾಣಿಜ್ಯ ತೆರಿಗೆಗಳು, ಕೌಶಲ ಅಭಿವೃದ್ಧಿ, ತರಬೇತಿ ಮತ್ತು ಶಾಸನಾತ್ಮಕ ವ್ಯವಹಾರಗಳ ಸಚಿವ ಶ್ರೀ ಬುಗ್ಗನ ರಾಜೇಂದ್ರನಾಥ ಅವರು ರಾಜ್ಯದಲ್ಲಿ ಪ್ರಾಜೆಕ್ಟ್‌ಗಳ ಅನುಷ್ಠಾನ ವೇಗವಾಗಿ ನಡೆಯುವ ಭರವಸೆ ವ್ಯಕ್ತಪಡಿಸಿದರು. “ಬ್ಯುಸಿನೆಸ್ ಆರಂಭಿಸುವ ಸಮಯವನ್ನು ಕಡಿಮೆ ಮಾಡುವುದು ಉತ್ಪಾದಕರ ಲಾಬಾಂಶದ ಮೇಲೆ ಗಮನರ‍್ಹ ಪರಿಣಾಮ ಬೀರುತ್ತದೆ ಎಂದು ನಾವು ನಂಬಿದ್ದೇವೆ. ರಾಜ್ಯವು ಹಲವು ಪ್ಲಗ್ ಆಂಡ್ ಪ್ಲೇ ಸೌಲಭ್ಯಗಳನ್ನು ನರ‍್ಮಾಣ ಮಾಡುತ್ತಿದೆ. ಇದರಲ್ಲಿ ಸಿದ್ಧ ಫ್ಯಾಕ್ಟರಿ ಶೆಡ್‌ಗಳು ಇರಲಿವೆ. ಗುಣಮಟ್ಟದ ವಿದ್ಯುತ್ ಮತ್ತು ನೀರಿನ ಪೂರೈಕೆ ಇರಲಿದೆ ಮತ್ತು ಉತ್ಪಾದನೆ ಘಟಕಗಳನ್ನು ವೇಗವಾಗಿ ಸ್ಥಾಪನೆ ಮಾಡಲು ಸಹಾಯವಾಗಲಿದೆ” ಎಂದು ಗೌರವಯುತ ಸಚಿವರು ಹೇಳಿದ್ದಾರೆ.
ಕಳೆದ ೩.೫ ರ‍್ಷಗಳಲ್ಲಿ ರಾಜ್ಯವು ೧.೯ ಲಕ್ಷ ಕೋಟಿ ರೂ. ಮೌಲ್ಯದ ಹೂಡಿಕೆಗಳನ್ನು ಅನುಮೋದಿಸಿದೆ. ಇದರಿಂದ ರಾಜ್ಯದಲ್ಲಿ ಭವಿಷ್ಯದಲ್ಲಿ ಸುಮಾರು ೯೦,೦೦೦ ಜನರಿಗೆ ಉದ್ಯೋಗ ಲಭ್ಯವಾಗಲಿದೆ” ಎಂದರು.
ವಿವಿಧ ಇಲಾಖೆಗಳು, ಸಚಿವಾಲಯಗಳು ಮತ್ತು ರಾಜ್ಯ ರ‍್ಕಾರಿ ಸಂಸ್ಥೆಗಳ ಪ್ರಮುಖ ಅಧಿಕಾರಿಗಳು ಬೆಂಗಳೂರಿನಲ್ಲಿ ಇಂದು ಹೂಡಿಕೆದಾರರ ಸಮುದಾಯದ ಜೊತೆಗೆ ಸಂವಾದ ನಡೆಸಿದರು. ಸಂಭಾವ್ಯ ಹೂಡಿಕೆದಾರರಿಗೆ ಮಾಹಿತಿ ನೀಡುವುದು ಮತ್ತು ತ್ವರಿತವಾಗಿ ಪ್ರತಿಕ್ರಿಯಿಸುವ ಭರವಸೆಯನ್ನು ನೀಡಿದರು. ಪ್ರೆಸೆಂಟೇಶನ್‌ನಲ್ಲಿ ಪ್ರಸ್ತುತ ಮತ್ತು ಭವಿಷ್ಯದ ಮೂಲಸೌರ‍್ಯವನ್ನು ಪ್ರರ‍್ಶಿಸಲಾಯಿತು ಮತ್ತು ರಾಜ್ಯದಲ್ಲಿ ಸೂಕ್ತ ನೀತಿ ನಿರೂಪಣೆ ಪರಿಸರ ಇರುವುದಾಗಿ ತಿಳಿಸಲಾಯಿತು.
ಉತ್ಪಾದನೆ, ಆಹಾರ ಪ್ರಕ್ರಿಯೆ, ಬಂದರುಗಳು, ಐಟಿ ಮತ್ತು ಎಲೆಕ್ಟ್ರಾನಿಕ್ಸ್, ಕೈಮಗ್ಗ ಮತ್ತು ಜವಳಿ ವಲಯಗಳು ಕರ‍್ಯಕ್ರಮದಲ್ಲಿ ಗಮನರ‍್ಹ ಆಸಕ್ತಿಯನ್ನು ತೋರಿಸಿದವು. ಆಗ್ನೇಯ ಭಾಗಕ್ಕೆ ಆಂಧ್ರ ಪ್ರದೇಶವು ಮಹತ್ವದ ಸ್ಥಳವಾಗಿದ್ದು, ೯೭೪ ಕಿ.ಮೀ ಕರಾವಳಿಯನ್ನು ಹೊಂದಿದೆ. ಇದು ದೇಶದಲ್ಲಿ ಎರಡನೇ ಅತಿದೊಡ್ಡದಾಗಿದ್ದು, ೬ ಪ್ರಸ್ತುತ ಬಂದರುಗಳು ಮತ್ತು ೪ ಮುಂಬರುವ ಪರ‍್ಟ್‌ಗಳನ್ನು ಹೊಂದಿದೆ. ಅಲ್ಲದೆ, ಈವರೆಗೆ ಬಿಡುಗಡೆಯಾದ ಅಂಕಿಸಂಖ್ಯೆಗಳ ಪ್ರಕಾರ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯ ಎಂದೂ ಹೆಸರು ಪಡೆದಿದೆ. ೨೦೨೧-೨೨ ರಲ್ಲಿ ೧೧.೪೩% ಎರಡಂಕಿ ಬೆಳವಣಿಗೆಯನ್ನು ರಾಜ್ಯ ದಾಖಲಿಸಿದೆ. ಗೌರವಯುತ ಮುಖ್ಯಮಂತ್ರಿ ಶ್ರೀ ವೈ ಎಸ್ ಜಗನ್‌ ಮೋಹನ ರೆಡ್ಡಿ ನೇರ‍್ವದಲ್ಲಿ ರಾಜ್ಯವು ತ್ವರಿತ ಪ್ರಗತಿ ಪಥದಲ್ಲಿ ಸಾಗಿದೆ. ಆಡಳಿತಾತ್ಮಕ ಸುಧಾರಣೆ ಮತ್ತು ರ‍್ಕಾರದ ಹೂಡಿಕೆದಾರ ಸ್ನೇಹಿ ನೀತಿಗಳಿಂದಾಗಿ ರಾಜ್ಯವು ಸತತ ಮೂರು ರ‍್ಷಗಳಿಂದಲೂ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ವಿಷಯದಲ್ಲಿ ಪ್ರಮುಖ ಸ್ಥಾನದಲ್ಲಿದೆ.
ದೇಶ ಹನ್ನೊಂದು ಔದ್ಯಮಿಕ ಕಾರಿಡಾರ್‌ಗಳ ಪೈಕಿ ಮೂರನ್ನು ಆಂಧ್ರಪ್ರದೇಶದಲ್ಲೇ ನರ‍್ಮಾಣ ಮಾಡಲಾಗುತ್ತಿದ್ದು, ಕಿರಿಕಿರಿ ರಹಿತ ಹೂಡಿಕೆ ಮಾಡುವ ಅನುಕೂಲವನ್ನು ಒದಗಿಸಲು ಆಡಳಿತದಲ್ಲಿ ನಿರಂತರ ಸುಧಾರಣೆ ಮಾಡಲಾಗುತ್ತಿದೆ. ಸುಧಾರಣೆಗಳ ಬಗ್ಗೆ ಅತ್ಯಂತ ಮೆಚ್ಚುಗೆ ವಹಿಸಲಾಗಿದೆ ಮತ್ತು ಕಳೆದ ಒಂದು ರ‍್ಷದಲ್ಲೇ ರಾಜ್ಯವು ಹಲವು ಪುರಸ್ಕಾರಗಳನ್ನು ಪಡೆದಿದೆ. ಲಾಜಿಸ್ಟಿಕ್ಸ್‌ಗೆ ಲೀಡ್ಸ್‌ ಅವರ‍್ಡ್‌ ೨೦೨೨, ಎರ‍್ಜಿಗಾಗಿ ಇರ‍್ಶಿಯಾ ಅವರ‍್ಡ್‌ ೨೦೨೨, ಪರ‍್ಟ್‌ ಲೆಡ್‌ಗೆ ಇಟಿ ಅವರ‍್ಡ್‌ ಮತ್ತು ಇನ್‌ಫ್ರಾಸ್ಟ್ರಕ್ಚರ್‌ ಪ್ರಾಕಜೆಕ್ಟ್‌ ೨೦೨೨ ಗೆ ಪುರಸ್ಕಾರ ಇತ್ಯಾದಿಯನ್ನು ರಾಜ್ಯವು ಪಡೆದಿದೆ.
ರಾಜ್ಯ ರ‍್ಕಾರದ ಪ್ರಮುಖ ಅಧಿಕಾರಿಗಳಾದ ಡಾ. ಶ್ರೀಹನ ಗುಮ್ಮಲ್ಲ, ಐಎಎಸ್‌, ಉದ್ಯಮಗಳು, ವಾಣಿಜ್ಯ ಮತ್ತು ರಫ್ತು ಉತ್ತೇಜನ ನರ‍್ದೇಶಕರು, ಉಪಾಧ್ಯಕ್ಷರು ಮತ್ತು ವ್ಯವಸ್ಥಾಪಕ ನರ‍್ದೇಶಕರು ಎಪಿ ಇಂಡಸ್ಟ್ರಿಯಲ್ ಇನ್‌ಫ್ರಾಸ್ಟ್ರಕ್ಚರ್‌ ಕರ‍್ಪೊರೇಶನ್‌, ಸಿಇಒ, ಎಪಿ ಎಕಾನಮಿಕ್‌ ಡೆವಲಪ್‌ಮೆಂಟ್ ಬರ‍್ಡ್‌ ಹಾಗೂ ಶ್ರೀ ಎಲ್‌ ಶ್ರೀಧರ ರೆಡ್ಡಿ, ಸಿಇಒ, ಎಪಿ ಫುಡ್ ಪ್ರೋಸೆಸಿಂಗ್ ಸೊಸೈಟಿ, ಶ್ರೀ ರವೀಂದ್ರನಾಥ ರೆಡ್ಡಿ, ಡೆಪ್ಯುಟಿ ಸಿಇಒ, ಎಪಿ ಮೆರಿಟೈಮ್‌ ಬರ‍್ಡ್‌, ಶ್ರೀಮತಿ ಕೆ ಸುನೀತಾ, ಐಎಎಸ್‌, ಪ್ರಿನ್ಸಿಪಲ್ ಸೆಕ್ರೆಟರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಆಂಧ್ರಪ್ರದೇಶ ರ‍್ಕಾರ ಇದ್ದರು.