IMG 20230217 WA0058

ಹಣಕಾಸಿನ ನಿರ್ವಹಣೆಯಲ್ಲಿ ದಕ್ಷತೆ : 402 ಕೋಟಿ ರೂ.ಗಳ ರಾಜಸ್ವ ಹೆಚ್ಚಳದ ಬಜೆಟ್:

Genaral STATE

ಹಣಕಾಸಿನ ನಿರ್ವಹಣೆಯಲ್ಲಿ ದಕ್ಷತೆ : 402 ಕೋಟಿ ರೂ.ಗಳ ರಾಜಸ್ವ ಹೆಚ್ಚಳದ ಬಜೆಟ್:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಫೆಬ್ರವರಿ 17:

ಹಣಕಾಸಿನ ನಿರ್ವಹಣೆಯನ್ನು ಅತ್ಯಂತ ದಕ್ಷತೆಯಿಂದ ಮಾಡಿ, ಸುಮಾರು 402 ಕೋಟಿ ರೂ.ಗಳ ರಾಜಸ್ವ ಹೆಚ್ಚಳದ ಆಯವ್ಯಯವನ್ನು ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 2023-24 ರ ಆಯವ್ಯಯ ಕುರಿತಂತೆ ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. .

ಕೋವಿಡ್ ಕಾಲದಲ್ಲಿ ರಾಜ್ಯದ ಬಜೆಟ್ ಆದಾಯ ಕೊರತೆಯುಳ್ಳ ಆಯವ್ಯಯವಾಗಿತ್ತು. ಆರ್ಥಿಕ ತಜ್ಞರು ರಾಜಸ್ವ ಹೆಚ್ಚಳದ ಬಜೆಟ್ ಆಗಲು ಸುಮಾರು ಐದು ವರ್ಷಗಳ ಅಗತ್ಯವಿದೆ ಎಂದು ಹೇಳಿದ್ದರು. ಕೇವಲ ಎರಡೇ ವರ್ಷದಲ್ಲಿ ನಾವು ರಾಜಸ್ವ ಹೆಚ್ಚಳದ ಆಯವ್ಯಯ ಮಂಡಿಸಲಾಗಿದೆ. ಕಳೆದ ವರ್ಷ 14. 699 ಕೋಟಿ ರೂ.ಗಳ ಕೊರತೆಯಿತ್ತು. ಆರ್ಥಿಕತೆಯ ಬೆಳವಣಿಗೆ ಆಗಿದೆ. ದೇಶದ ಆರ್ಥಿಕ ಸರಾಸರಿಗಿಂತ ಹೆಚ್ಚಿನ ಆದಾಯ ರಾಜ್ಯದಲ್ಲಿದೆ. ರಾಜ್ಯದಲ್ಲಿ ಆರ್ಥಿಕ ಶಿಸ್ತು ಕಾಪಾಡಿಕೊಂಡು ಬಂದಿದ್ದು, ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಲು ತೆರಿಗೆ ಕ್ಷಮತೆ ಹೆಚ್ಚು ಮಾಡಲಾಗಿದೆ. ಇದರ ಪರಿಣಾಮ ರಾಜಸ್ವ ಸ್ವೀಕೃತಿಗಳ ಹೆಚ್ಚಾಗಿದೆ. ಸರಾಸರಿ ಶೇ 23 ರಷ್ಟು ಹೆಚ್ಚಾಗಿದ್ದು, ಕಳೆದ ಬಾರಿ 72 ಸಾವಿರ ರೂ. ಕೋಟಿ ರೂ.ಸಾಲ ತೆಗೆದುಕೊಳ್ಳುವುದಾಗಿ ಹೇಳಿದ್ದೆವು. ಆದರೆ ಪೂರ್ಣ ಸಾಲ ಪಡೆಯದೆ ಕಡಿಮೆ ಸಾಲ ಮಾಡಿದ್ದೇವೆ. 2021-22 ರಲ್ಲಿಯೂ 71 ಸಾವಿರ ಕೋಟಿ ಸಾಲ ಪಡೆಯುವುದಾಗಿ ಹೇಳಿದ್ದೆವು. ಆದರೆ ಕಳೆದ ಬಾರಿ 69 ಸಾವಿರ ಕೋಟಿ ಮಾತ್ರ ಸಾಲ ಪಡೆದಿದ್ದೇವೆ. ಈ ಬಾರಿಯೂ ಕೂಡ 72 ರೊಳಗೆಯೇ ಸಾಲದ ಮಿತಿ ಇರಲಿದೆ. ಆದಾಯ ಹೆಚ್ಚು ಮಾಡಿ, ಸಾಲ ಕಡಿಮೆ ಮಾಡಿದ್ದೇವೆ. ಆರ್ಥಿಕ ಶಿಸ್ತು ತಂದು ರಾಜಸ್ವ ಹೆಚ್ಚಳದ ಬಜೆಟ್ ಮಂಡನೆಯಾಗಿದೆ. ಹಿಂದಿನ ಯಾವುದೇ ಸರ್ಕಾರ ಈ ಸಾಧನೆ ಮಾಡಿಲ್ಲ. ಜಿಎಸ್.ಟಿ ಸಂಗ್ರಹದಲ್ಲಿ ರಾಜ್ಯ ದೇಶದಲ್ಲಿಯೇ 2 ನೇ ಸ್ಥಾನದಲ್ಲಿದೆ. ನಮ್ಮ ಬೆಳವಣಿಗೆಯ ಪ್ರಮಾಣ ಕೇಂದ್ರಕ್ಕಿಂತ ಅಂದರೆ ಶೇ. 6.8ರಷ್ಟಿದೆ. ನಮ್ಮ ರಾಜ್ಯದ್ದು ಶೇ.7.8 ಇದೆ ಎಂದರು.

ಮೂರು ವಲಯಗಳಲ್ಲಿ ಉತ್ತಮ ಸಾಧನೆ
ಮೂರು ವಲಯದಲ್ಲಿ ನಮ್ಮ ಬೆಳವಣಿಗೆಯ ದರ ಹೆಚ್ಚಿದೆ. ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ಮೂರು ವಲಯಗಳಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. ಕೃಷಿ, ಉತ್ಪಾದನೆ ಹಾಗೂಸೇವಾ ವಲಯದಲ್ಲಿ ಹೆಚ್ಚಿರುವುದರಿಮದ ಸಾಧನೆ ಮಾಡಲು ಸಾದ್ಯವಾಗಿದೆ. ಅತ್ಯಂತ ದಕ್ಷ ಆಡಳಿತ ನಿರ್ವಹಣೆ ರಾಜ್ಯ ಸರ್ಕಾರಕ್ಕೆ ಬಹಳ ಮುಖ್ಯ. ಹಣಕಾಸಿನ ಲಭ್ಯತೆ ಇದ್ದಾಗ ಮಾತ್ರ ಯೋಜನೆಗಳ ಅನುಷ್ಠಾನ ಸಾಧ್ಯ. ಕಳೆದ ಬಾರಿ ಮಾಡಿದ ಘೋಷಣೆಗಳ ಪೈಕಿ ಶೇ 90% ರಷ್ಟು ಯೋಜನೆ ಗಳಿಗೆ ಸರ್ಕಾರಿ ಆದೇಶವಾಗಿದ್ದು, ಹಲವಾರು ಕಾರ್ಯಕ್ರಮಗಳ ಅನುಷ್ಠಾನ ಪ್ರಾರಂಭವಾಗಿದೆ. ಕೆಲವು ಅನುಷ್ಠಾನದ ಪ್ರಕ್ರಿಯೆಯಲ್ಲಿವೆ. ಪ್ರಥಮ ಬಾರಿಗೆ ಒಟ್ಟಾರೆ ಆದಾಯ ಮತ್ತು ಬಂಡವಾಳ ವೆಚ್ಚ ಜನವರಿಗೆ ಶೇ. 76 ರಷ್ಟು ಆಗಿದೆ. ಹಿಂದಿನ ಯಾವುದೇ ಸರ್ಕಾರದಲ್ಲಿ ಇಷ್ಟು ದೊಡ್ಡ ಪ್ರಮಾಣದ ವೆಚ್ಚವನ್ನು ಯಾವುದೇ ಸರ್ಕಾರ ಮಾಡಲು ಸಾಧ್ಯವಾಗಿಲ್ಲ. ಅಂದರೆ ಯೋಜನೆಗಳ ಅನುಷ್ಠಾನ ವಾಗುತ್ತಿದೆ ಎಂದು ಅರ್ಥ ಎಂದರು.

ಆಕ್ಷನ್ ಟೇಕನ್ ರಿಪೋರ್ಟ್
ಕಳೆದ ಬಾರಿ ಬಜೆಟ್ ನಲ್ಲಿ ಹೇಳಿದಕ್ಕಿಂತ ಹೆಚ್ಚಿನ ವೆಚ್ಚ ಮಾಡಲಾಗಿದೆ. 204587 ಕೋಟಿ ವೆಚ್ಚ ಮಾಡಿಲಾಗಿದೆ. ಬಂಡವಾಳ ವೆಚ್ಚವೂ ಹೆಚ್ಚಾಗಿದ್ದು, ನಮ್ಮ ಅನುಷ್ಠಾನವೂ ಹೆಚ್ಚಾಗಿದೆ. ಯಾವ ಯೋಜನೆಯಲ್ಲಿ ಎಷ್ಟು ಅನುಷ್ಠಾನವಾಗುತ್ತಿದೆ ಹಾಗೂ ವೆಚ್ಚವಾಗುತ್ತಿದೆ ಎನ್ನುವ ಆಕ್ಷನ್ ಟೇಕನ್ ರಿಪೋರ್ಟ್ ನೀಡಲಾಗುತ್ತಿದೆ. ಕಳೆದ ಬಾರಿಯ ಬಜೆಟ್ ನಲ್ಲಿ ಹೇಳಿರುವುದು ಅನುಷ್ಠಾನವಾಗಿಲ್ಲ ಎನ್ನುವ ಆರೋಪ ಶುದ್ಧ ಸುಳ್ಳು. ಯೋಜನಾವಾರು, ಇಲಾಖಾವಾರು ವಿವರಗಳನ್ನು ನೀಡಲಾಗುವುದು ಎಂದರು.

ಬಜೆಟ್ ಗಾತ್ರದಲ್ಲಿ ಶೇ. 16% ರಷ್ಟು ಹೆಚ್ಚಳ

2022-23 ರ ಬಜೆಟ್ ಗಾತ್ರ 265720 ಕೋಟಿ ರೂ.ಗಳಷ್ಟಿತ್ತು. 2023-24 ಕ್ಕೆ 309182 ಕೋಟಿ ರೂ.ಗಳ ಬಜೆಟ್ ಗಾತ್ರವಿದೆ. ಕಳೆದ ವರ್ಷಕ್ಕಿಂತ 43462 ಕೋಟಿ ರೂ.ಗಳ ಬಜೆಟ್ ಪ್ರಮಾಣ ಹೆಚ್ಚಳವಾಗಿದೆ. ವರ್ಷದ ಹಣಕಾಸಿನ ಬೆಳವಣಿಗೆಯ ಆಧಾರದ ಮೇಲೆ ನಮ್ಮ ಬೆಳವಣಿಗೆಯ ಮೇಲೆ ವಿಶ್ವಾಸ ಮೂಡಿದೆ. ಪ್ರತಿಬಾರಿ ಶೇ 5-6 ರಷ್ಟು ಮಾತ್ರ ಬಜೆಟ್ ಪ್ರಮಾಣ ಹೆಚ್ಚಳವಾಗುತ್ತದೆ. ಶೇ. 16% ರಷ್ಟು ಬಜೆಟ್ ಗಾತ್ರದಲ್ಲಿ ಹೆಚ್ಚಳವಾಗಿದೆ. ಇನ್ನೂ ಒಂದೂವರೆ ತಿಂಗಳಿದೆ. ಎಲ್ಲವನ್ನು ಖರ್ಚು ಮಾಡಲಾಗುವುದು. ವಿತ್ತೀಯ ಮಾನದಂಡದೊಳಗೆ ಎಲ್ಲವೂ ಇದೆ. ರಾಜ್ವಸ ಹಚ್ಚಳವಿದೆ. ಫಿಸಿಕಲ್ ಡೆಫಿಸಿಟ್ ಶೇ 3% ಒಳಗೆ ಇದೆ. ಜಿಎಸ್ ಡಿ ಪಿಗೆ ಒಟ್ಟಾರೆ ಸಾಲ ಹೊರೆ ಶೇ 25% ಒಳಗೆ ಇರಬೇಕು. ಹಾಗೂ ರಾಜಸ್ವ ಹೆಚ್ಚಳವಿದೆ. ನಮ್ಮದು ಅದರೊಳಗಿದೆ. ಆರ್ಥಿಕ ಬೆಳವಣಿಗೆಯನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರು.

ಎಸ್ ಸಿಎಸ್ ಪಿ/ ಟಿಎಸ್ ಪಿ: 1989 ಕೋಟಿ ರೂ. ಹೆಚ್ಚಳ

ಎಸ್ ಸಿಎಸ್ ಪಿ/ ಟಿಎಸ್ ಪಿ ಯಲ್ಲಿ ಕಳೆದ ಬಾರಿಗಿಂತ 1989 ಕೋಟಿ ಹೆಚ್ಚಿಗೆ ನೀಡಲಾಗಿದೆ. ಕಳೆದ ಬರಿ 28234 ಕೊಟಿ ಇತ್ತು ಈ ಬಾರಿ 30215 ಕೋಟಿ ನೀಡಲಾಗಿದೆ. ಕಾಯ್ದೆಯ ಪ್ರಕಾರ 24.1 ರಷ್ಟಿರಬೇಕು. 24.53 ದೆ. 24.1 ಗಿಂತ ಹೆಚ್ಚಿದೆ ಎಂದರು.

ಬಂಡವಾಳ ವೆಚ್ಚ ಶೇ.30 ರಷ್ಟು ಹೆಚ್ಛಳ :

ಬಜೆಟ್ ಪ್ರಮಾಣ ಹೆಚ್ಚಳವಾದಾಗ ಸಾಲದ ಪ್ರಮಾಣ ಹೆಚ್ಚಳವಾಗಿದೆ. ಆದರೆ, ಬಜೆಟ್ ಗಾತ್ರಕ್ಕೆ ಬೇಕಾದಷ್ಟು ಸಾಲ ತೆಗೆದುಕೊಳ್ಳಲು ಅವಕಾಶ ಇದೆ. ಬಜೆಟ್ ಔಟ್ ಲೇ 42 ಸಾವಿರ ಕೋಟಿ ಹಚ್ಚಾಗಿದೆ. ವಿತ್ತೀಯ ಕೊರತೆ ಜಿಎಸ್ ಟಿ ಪಿಯ ಶೇ. 3 ರೊಳಗೆ ಇರಬೇಕಾಗಿದ್ದು, ಇಲ್ಲಿ ಶೇ. 2.6 ರಷ್ಟಿದೆ. ಈ ವರ್ಷ ಅತಿ ಹೆಚ್ಚು ಕ್ಯಾಪಿಟಲ್ ಔಟ್ ಲೇ ಇಡಲಾಗಿದೆ. ಪ್ರಸ್ತುತ ವರ್ಷ ಬಂಡವಾಳ ವೆಚ್ಚ ಹೆಚ್ಚಿಗೆ ಇರಿಸಿದ್ದು, ಹೆಚ್ಚು ಆಸ್ತಿ ನಿರ್ಮಾಣಕ್ಕೆ ಅನುಕೂಲವಾಗುತ್ತದೆ. ಕಳೆದ ಹಲವಾರು ವರ್ಷಗಳಿಗಿಂತ ಬಂಡವಾಳ ವೆಚ್ಚವನ್ನು 30% ಹೆಚ್ಚಳ ಮಾಡಲಾಗಿದ್ದು, ಇದು ದಾಖಲೆಯಾಗಿದೆ. 14279 ಕೋಟಿ ರೂ. ಹೆಚ್ಚು ಮಾಡಲಾಗಿದೆ. 2022-23 ರಲ್ಲಿ 46955 ಕೋಟಿ ಇತ್ತು ಈಗ ಬಂಡವಾಳ ವೆಚ್ಚ 61234 ಕೋಟಿ ಇದೆ ಎಂದರು.

ಸರ್ ಪ್ಲಸ್ ಬಜೆಟ್ ಮಂಡನೆ :
ಬದ್ಧತಾ ವೆಚ್ಚ ಅಂದರೆ ಸಂಧ್ಯಾ ಸುರಕ್ಷಾರೈತರಿಗೆ, ಬಡವರಿಗೆ ನೀಡುವ ಯೋಜನೆಗಳು ಹಾಗೂ ಸಬ್ಸಿಡಿ ಯೋಜನೆಗಳಿಗೆ ವೆಚ್ಚ ಮಾಡುವ ಹಣ. ಯಾವುದೇ ತೆರಿಗೆ ಇಲ್ಲದೆ ಬಜೆಟ್ ಮಾಡಿ ಸರ್ ಪ್ಲಸ್ ಬಜೆಟ್ ಮಂಡನೆ ಮಾಡಲಾಗಿದೆ ಎಂದರು.

ಆರ್ಥಿಕ ಮಿತಿಯ ಉತ್ತಮ ನಿರ್ವಹಣೆ :
ಕೋವಿಡ್ ಸಂದರ್ಭ ಹಾಗೂ ಕೋವಿಡ್ ಇಲ್ಲದ ಸಂದರ್ಭವನ್ನು ಹೋಲಿಸಲು ಸಾಧ್ಯವಿಲ್ಲ. ಕೋವಿಡ್ ಸಂದರ್ಭದಲ್ಲಿ ಆರ್ಥಿಕತೆ ಸಂಪೂರ್ಣ ಕುಸಿದಿದೆ. ಜನರಿಗೆ ಸಹಾಯ ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಯಿತು. ಸರ್ಕಾರಿ ನೌಕರರಿಗೆ ವೇತನ ಕಟಾಯಿಸದೇ ನೀಡಲಾಯಿತು. ಕೋವಿಡ್ ಸಂದರ್ಭದಲ್ಲಿ ಇಡೀ ದೇಶದಲ್ಲಿಯೇ ಸಾಲ ಪ್ರಮಾಣ ಹೆಚ್ಚಾಯಿತು. ಕೋವಿಡ್, ಪ್ರವಾಹ ದಂತಹ ಸಂಕಷ್ಟಗಳ ನಡುವೆಯೂ ಆರ್ಥಿಕ ಮಿತಿಯನ್ನು ಉತ್ತಮವಾಗಿ ನಿರ್ವಹಿಸಿ, ಆದಾಯವನ್ನು ಹೆಚ್ಚು ಮಾಡಿ, ಸಾಲವನ್ನು ಕಡಿಮೆಗೊಳಿಸಿ ಸರ್ಪ್ಲಸ್ ಬಜೆಟ್ ನ್ನು ನಮ್ಮ ಸರಕಾರ ನೀಡಿದೆ ಎಂದರು.