IMG 20230225 WA0011

ಆಲ್ಟಿಯಸ್ ಹಾಸ್ಪಿಟಲ್ ಈಗ ಕ್ಯಾಥ್‌ಲ್ಯಾಬ್‌ನೊಂದಿಗೆ ಸನ್ನದ್ಧ

BUSINESS

ಆಲ್ಟಿಯಸ್ ಹಾಸ್ಪಿಟಲ್ ಈಗ ಕ್ಯಾಥ್‌ಲ್ಯಾಬ್‌ನೊಂದಿಗೆ ಸನ್ನದ್ಧ

ಬೆಂಗಳೂರು, ಫೆಬ್ರವರಿ 25, 2023: ಆಲ್ಟಿಯಸ್ ಇಂದು ಎಚ್‌ಬಿಆರ್ ಕೇಂದ್ರದಲ್ಲಿ ಕ್ಯಾಥ್ ಲ್ಯಾಬ್ ಸೇವೆಗಳನ್ನು ಪ್ರಾರಂಭಿಸಿತು. ಈ ಲ್ಯಾಬ್ 24/7 ಲ್ಯಾಬ್ ಆಗಿದ್ದು ಹೃದಯಾಘಾತಗಳಿಗೆ ಆಂಜಿಯೊಪ್ಲಾಸ್ಟಿ, ಡೇ ಕೇರ್ ಆಂಜಿಯೊಗ್ರಾಮ್‌ಗಳು(ರೇಡಿಯಲ್ ಅಪ್ರೋಚ್), ಸಂಕೀರ್ಣ ಕೊರೊನರಿ ಇಂಟರ್‌ವೆನ್ಷನ್ಸ್, ಇಎಫ್‌ಆರ್ ಮತ್ತು ಇನೇಜ್ ಗೈಡೆಡ್ ಆಂಜಿಯೊಪ್ಲಾಸ್ಟಿ ಮತ್ತು ಐಸಿಡಿ ಇಪ್ಲ್ಯಾಂಟೇಷನ್ ಗಳನ್ನು ಹೊಂದಿದೆ.

ಈ ಸಂದರ್ಭ ಕುರಿತು ಮಾತನಾಡಿದ ಡಾ.ಬಿ.ರಮೇಶ್, “ಈ ಲ್ಯಾಬ್ ಸ್ಥಳೀಯ ನಿವಾಸಿಗಳಿಗೆ ಅತ್ಯಂತ ಉಪಯುಕ್ತವಾಗಲಿದ್ದು ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ಯಾವುದೇ ಹೃದಯದ ಸಮಸ್ಯೆಗೆ ಆಸ್ಪತ್ರೆಗೆ ಪ್ರಯಾಣಿಸುವುದು ಅತ್ಯಂತ ದೊಡ್ಡ ಸವಾಲಾಗಿದೆ. ಆಲ್ಟಿಯಸ್ ಈ ಸವಾಲನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ” ಎಂದರು.

ಈ ವಿಶೇಷ ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಜಿ.ಎನ್. ಮಂಜುನಾಥ್ ಉದ್ಘಾಟಿಸಿದರು. ಖ್ಯಾತ ನಟ ದಿಗಂತ್ ಮಂಚಾಲೆ ಮತ್ತು ನಿಮಿಕಾ ರತ್ನಾಕರ್, ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಪ್ರಮೋದ್ ಗೌಡ ಕಾರ್ಯಕ್ರಮದ ಅತಿಥಿಯಾಗಿದ್ದರು.

ಆಲ್ಟಿಯಸ್ ಆಸ್ಪತ್ರೆ ಸಮೂಹವು 2004ರಲ್ಲಿ ವಿಶ್ವಮಟ್ಟದ ಆರೋಗ್ಯಸೇವೆಗಳನ್ನು ಒದಗಿಸುವ ಉದ್ದೇಶದಿಂದ ಆರೋಗ್ಯಸೇವೆಗಳಿಗೆ ಹೆಜ್ಜೆ ಇರಿಸಿದ್ದು ಗುಣಮಟ್ಟ, ದಕ್ಷತೆ ಮತ್ತು ವಿಶ್ವಾಸಾರ್ಹತೆಗೆ ಆದ್ಯತೆ ನೀಡುತ್ತದೆ. ಆಲ್ಟಿಯಸ್ ಆಸ್ಪತ್ರೆಗಳು ಮೂರು ಟರ್ಷಿರಿ ಕೇರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಈ ಮಾನದಂಡಗಳ ಮೂಲಕ ಉನ್ನತ ಗುಣಮಟ್ಟ ನಿಗದಿಪಡಿಸಿದೆ. ಅತ್ಯಂತ ಹೈ-ಟೆಕ್ ಆಸ್ಪತ್ರೆಯನ್ನು ಬೆಂಗಳೂರಿನ ಎಚ್‌ಬಿಆರ್ ಲೇಔಟ್‌ನಲ್ಲಿ ಪ್ರಾರಂಭಿಸಲಾಗಿದ್ದು 100 ಹಾಸಿಗೆಗಳ ಈ ಆಸ್ಪತ್ರೆ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನದಿAದ ಸನ್ನದ್ಧವಾಗಿದೆ. ಬೆಂಗಳೂರಿನ ಐಷಾರಾಮಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಒಂದಾಗಿ ಪ್ರಾರಂಭವಾಗಿ ಇಂದು ಆರೋಗ್ಯಸೇವೆಯಲ್ಲಿ ಅತ್ಯಂತ ಮಾನ್ಯತೆ ಪಡೆದ ಮತ್ತು ವಿಶ್ವಾಸಾರ್ಹ ಮನೆ ಮನೆ ಮಾತಾಗಿದೆ. ಈ ತಂಡವನ್ನು ಡಾ.ಬಿ. ರಮೇಶ್ ಅವರು ಮುನ್ನಡೆಸುತ್ತಿದ್ದಾರೆ.

IMG 20230225 WA0013

ಎಚ್‌ಬಿಆರ್ ಲೇಔಟ್, ರಾಜಾಜಿನಗರ ಮತ್ತು ರಾಜರಾಜೇಶ್ವರಿ ನಗರದಲ್ಲಿ ಕೇಂದ್ರಗಳನ್ನು ಹೊಂದಿದ್ದು ಒಂದು ದಶಕಕ್ಕಿಂತ ಹೆಚ್ಚು ಕಾಲದಿಂದ ಒಂದು ಮಿಲಿಯನ್‌ಗೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ಒದಗಿಸಿದ್ದು ಈಗ 200 ಹಾಸಿಗೆಯ ಸಾಮರ್ಥ್ಯಕ್ಕೆ ಹೆಚ್ಚಿಸಿದೆ.

ವೇಗವಾಗಿ ಬದಲಾಗುತ್ತಿರುವ ವೈದ್ಯಕೀಯ ತಂತ್ರಜ್ಞಾನಕ್ಕೆ ಪೂರಕವಾಗಿ ನಾವು ಕಾರ್ಯ ನಿರ್ವಹಿಸುತ್ತಿದ್ದು ನಮ್ಮ ರೋಗಿಗಳ ಕುರಿತು ನಾವು ನಮ್ಮ ಅಗತ್ಯ ಜವಾಬ್ದಾರಿ ಕುರಿತು ಎಚ್ಚರದಿಂದ ಇರುತ್ತೇವೆ ಮತ್ತು ಪರಿಣಾಮಕಾರಿತ್ವ, ವಿಶ್ವಾಸಾರ್ಹತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ತಂತ್ರಜ್ಞಾನ ಬಳಸುತ್ತೇವೆ.

ಹೆಚ್ಚು ಮುಖ್ಯವಾಗಿ ಆಲ್ಟಿಯಸ್ ಹಾಸ್ಪಿಟಲ್ ವ್ಯಕ್ತಿಗಳ ಖಾಸಗಿತನಕ್ಕೆ ಗೌರವ ನೀಡುತ್ತಿದ್ದು ಶಸ್ತ್ರ ಚಿಕಿತ್ಸೆ ಗಳಿಗೆ ಮನೆಯಂತಹ ವಾತಾವರಣ ನೀಡುತ್ತದೆ ಅಲ್ಲದೆ ವೈದ್ಯರ ತಂಡದಲ್ಲಿ ಭಾರತದ ಮತ್ತು ಅಂತರಾಷ್ಟ್ರೀಯ ಮಟ್ಟದ ಅತ್ಯುತ್ತಮ ಪ್ರತಿಭಾವಂತರಿದ್ದಾರೆ. ನಾವು ಅತ್ಯಾಧುನಿಕ ಸೌಲಭ್ಯದೊಂದಿಗೆ ಸನ್ನದ್ಧವಾಗಿದ್ದು ಅತ್ಯುತ್ತಮ ಮತ್ತು ಸಮಗ್ರ ಆರೋಗ್ಯಸೇವೆ ಒದಗಿಸಲು ಸನ್ನದ್ಧರಾಗಿದ್ದೇವೆ. ಆಲ್ಟಿಯಸ್ ಆಸ್ಪತ್ರೆಯ ಸ್ಪೆಷಾಲಿಟಿ ಸೇವೆಗಳಲ್ಲಿ ಇಂಟರ್‌ನಲ್ ಮೆಡಿಸಿನ್, ಕಾರ್ಡಿಯಾಕ್ ಸೈನ್ಸ್, ಆರ್ಥೊಪಿಡಿಕ್, ನ್ಯೂರೋಸೈನ್ಸ್, ನೆಫ್ರಾಲಜಿ, ಯುರಾಲಜಿ, ಜನರಲ್ ಮತ್ತು ಲ್ಯಾಪ್ ಸರ್ಜರಿ, ಗ್ಯಾಸ್ಟ್ರೋ ಸೈನ್ಸ್, ಪ್ಲಾಸ್ಟಿಕ್ ಸರ್ಜರಿ, ಗೈನಕಾಲಜಿ, ಐವಿಎಫ್, ಪೀಡಿಯಾಟ್ರಿಕ್ಸ್, ಲ್ಯಾಬ್ ಅಂಡ್ ರೇಡಿಯಾಲಜಿ ಒಳಗೊಂಡಿವೆ.