ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಮಾತುಗಳು..
ರಾಜೀವ್ ಗಾಂಧಿ ಅವರು ಯುವಕರಿಗೆ ಮತ್ತು ಆಧುನಿಕ ಯುಗಕ್ಕೆ ಚಾಲನೆ ನೀಡಿದ ಮಹಾನ್ ಶಕ್ತಿ. ಅವರ ನೆನಪಿಸೃನಲ್ಲಿ ಪರಮೇಶ್ವರ್ ಅವರು ಹಾಗೂ ಕಾಂಗ್ರೆಸ್ ಮುಖಂಡರು ಭವನ ನಿರ್ಮಾಣ ಮಾಡಿರುವ ಹಿನ್ನೆಲೆ.ಲ್ಲಿ ನನ್ನ ಬೇರೆ ಕಾರ್ಯಕ್ರಮವನ್ನು ಪಕ್ಕಕ್ಕಿಟ್ಟು ಈ ಕಾರ್ಯಕ್ರಮಕ್ಕೆ ಬಹಳ ಸಂತೋಷದಿಂದ ಆಗಮಿಸಿದ್ದೇನೆ.
ಇದು ಕಾಂಗ್ರೆಸ್ ಪಕ್ಷದ ದೇವಾಲಯ. ಅನೇಕರು ಹರಕೆ ಹೊತ್ತು ದೇವಾಲಯ ಕಟ್ಟುತ್ತಾರೆ. ಅದು ಅವರ ವೈಯಕ್ತಿಕ ಆತ್ಮಸಾಕ್ಷಿಗೆ ನಿರ್ಮಾಣ ಮಾಡುತ್ತಾರೆ. ಆದರೆ ಈ ಭವನ, ಎಲ್ಲರನ್ನು ಸರಿಸಮಾನವಾಗಿ ನೋಡುವ ಗುಡಿ. ಇದು ಎಲ್ಲ ವರ್ಗಕ್ಕೆ ಸೇರಿದ ದೇವಾಲಯ. ಇದನ್ನು ನಾವು ಮರೆಯಬಾರದು.
ಈ ದೇಶದಲ್ಲಿ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ಯಾವ ರೀತಿ ನಡೆಸುತ್ತಿವೆ, ಸಂವಿಧಾನ ಹಾಗೂ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗಮನಿಸಬೇಕು. ಮೋದಿ ಅವರು ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದಾಗ ಕಲಬುರ್ಗಿಗೆ ಬಂದು ಅನೇಕ ಮಾತುಗಳನ್ನು ಹೇಳಿದರು. ಅವರು ಪ್ರಧಾನಿ ಬಂದು ಮಾತನಾಡಲಿ ಎಂದು ಸ್ವಾಗತಿಸಿದೆ. ಅವರು ರಾಜ್ಯದ ಅಭಿವೃದ್ಧಿಗೆ ಸರ್ಕಾರ ಹಣ, ವಿಮಾನ, ಸೌಲಭ್ಯ, ಅದಿಕಾರವನ್ನು ಬಳಸಿಕೊಳ್ಳಬೇಕೇ ಹೊರತು, ನಮ್ಮನ್ನು ಟೀಕೆ ಮಾಡಲು ಇವುಗಳನ್ನು ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ? ಅವರನ್ನು ಪ್ರಧಾನಮಂರಿ ಮಾಡಿ ಅದಿಕಾರ ಮಾಡಿರುವುದು ದೇಶದ ಅಭಿವೃದ್ಧಿಗಾಗಿಯೋ ಅಥವಾ ನಮ್ಮ ಬಗ್ಗೆ ಟೀಕೆ ಮಾಡಲೋ?
ರಾಜ್ಯದಲ್ಲಿ 40% ಭ್ರಷ್ಟಾಚಾರ ನಡೆಯುತ್ತಿದೆ. ಮೋದಿ, ಅಮಿತ್ ಶಾ ಅವರು ಈ ಬಗ್ಗೆ ಮಾತನಾಡಬೇಕು. ಅವರ ಮೂಗಿನ ಕೆಳಗೆ ಭ್ರಷ್ಟಾಚಾರ ನಡೆಯುತ್ತಿದೆ. ಇವರು ಹುಪ್ಪಟ್ಟು ಅಂದಾಜು ವೆಚ್ಚ ನಿಗದಿ ಮಾಡಿ 100% ರಷ್ಟು ಭ್ರಷ್ಟಾಚಾರ ಮಾಡುತ್ತಿದ್ದಾರೆ. ನಾನು 52 ವರ್ಷಗಳ ರಾಜಕೀಯ ಜೀವನದಲ್ಲಿ 11 ಚುನಾವಣೆ ಸತತವಾಗಿ ಗೆದ್ದಿದ್ದು, ಇಂತಹ ಪ್ರಧಾನಿಯನ್ನು ನಾನು ನೋಡಿಲ್ಲ. ಈ ಪ್ರಧಾನಿ ಕೇವಲ ಕಾಂಗ್ರೆಸ್ ಪಕ್ಷದ ಟೀಕೆಗೆ ಸೀಮಿತವಾಗಿದ್ದಾರೆ.
ರಾಯ್ ಪುರದಲ್ಲಿ ನಡೆದ ಸಭೆ ವೇಳೆ ನಾನು ಗಾಂಧಿ ಟೋಪಿ ಧರಿಸಿದ್ದೆ. ನನ್ನ ಜತೆ ಪೂರ್ವ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಇದ್ದರು. ಮೋದಿ ಅವರಿಗೆ ನಮ್ಮ ಸಭೆಯ ಚರ್ಚೆ ವಿಚಾರಗಳು, ನಿರ್ಣಯಗಳು, ನಿರುದ್ಯೋಗ ಸಮಸ್ಯೆ, ವಿದೇಶಾಂಗ ನೀತಿ ಕುರಿತ ಚರ್ಚೆ ಅಂಶಗಳನ್ನು ನೋಡದ ಪ್ರಧಾನಮಂತ್ರಿಗಳು ನನ್ನ ತಲೆ ಮೇಲೆ ಛತ್ರಿ ಇರಲಿಲ್ಲ ಎಂಬುದನ್ನು ನೋಡಿದ. ಆತ ಕಪ್ಪು ಛತ್ರಿ ಅಡಿಯಲ್ಲಿದ್ದರೂ ಭ್ರಷ್ಟಾಚಾರ ನಡೆಯುತ್ತಿದೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿರುವ ಸಾಧನೆಗಳನ್ನು ತಾವೇ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ಜಿಲ್ಲೆಯಲ್ಲಿ ಹೆಚ್ಎಎಲ್ ಘಟಕ ತಂದಿದ್ದು ಯಾರು? ಕಾಂಗ್ರೆಸ್ ಸರ್ಕಾರದಲ್ಲಿ ಎ.ಕೆ ಆಂಟೋನಿಯವರು ನೀಡಿದ ಕೆಲಸ ಅದು. ಈಗ ಬಂದು ಇದು ನಾನು ಮಾಡಿದ್ದೇನೆ ಎಂದರು. ಕಾಂಗ್ರೆಸ್ ಪಕ್ಷ ಹೆಚ್ ಎಂಟಿ, ಐಐಟಿ, ಐಐಎಂ, ಆಣೆಕಟ್ಟುಗಳನ್ನು ಕಟ್ಟಿದ್ದಾರೆ. ಮೋದಿ ಅವರು ಒಂದಾದರೂ ಆಣೆಕಟ್ಟು ಕಟ್ಟಿದ್ದಾರಾ? ನೀರಾವರಿ ಯೋಜನೆ ಮಾಡಿದ್ದಾರಾ? ಆದರೂ ಅವರು ಬಡಾಯಿ ಕೊಚ್ಚಿಕೊಳ್ಳುತ್ತಾರೆ.
ಈ ಜಿಲ್ಲೆಗೆ ಹೇಮಾವತಿ ನೀರು ತಂದುಕೊಟ್ಟಿದ್ದು ವೀರೇಂದ್ರ ಪಾಟೀಲ್ ಅವರ ಕಾಲದಲ್ಲಿ. ದೇವರಾಜ ಅರಸು ಅವರ ಕಾಲದಲ್ಲಿ ಅದನ್ನು ಜಾರಿಗೆ ತಂದರೇ ಹೊರತು ಮೋದಿಯವರಲ್ಲ. ಅವರ ಪ್ರಕಾರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು 2014ರಲ್ಲಿ. 1947ರಿಂದ 2014ರವರೆಗೆ ಕಾಂಗ್ರೆಸ್ ಸಾವಿರಾರು ಕೆಲಸ ಮಾಡಿದ್ದಾರೆ. ದೇಶದಲ್ಲಿ ಜನರ ಹೊಟ್ಟೆ ತುಂಬಿಸಲು ಅನ್ನ ಇಲ್ಲದಾಗ ಹಸಿರು ಕ್ರಾಂತಿ ಮಾಡಿದ್ದು ನೆಹರು. ಪರಿಣಾಮ ಇಂದು ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಮೋದಿ ಅವರು ಬರುವ ಮುನ್ನ ದೇಶದ ಜನ ಉಪವಾಸದಲ್ಲಿದ್ದರು, ಇವರು ಬಂದ ನಂತರ ಮನೆಯಲ್ಲಿ ವಾಸ ಮಾಡುತ್ತಿದ್ದೆವು ಎಂಬಂತೆ ಅವರು ಮಾತನಾಡುತ್ತಾರೆ. ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮೋದಿ ಅವರೇ ನಿರ್ಮಾಣ ಮಾಡಿದ್ದಾರಾ? ನಾವು ಮಾಡದ ಕೆಲಸಕ್ಕೆ ಶ್ರೇಯಸ್ಸು ಪಡೆಯಲು ಮುಜುಗರ ಪಡುತ್ತೇವೆ. ಆದರೆ ಈತ ಬೇರೆಯವರ ಕೆಲಸ ತಾವೇ ಮಾಡಿರುವಂತೆ ಮಾತನಾಡುತ್ತಾರೆ. ಈ ದೇಶದಲ್ಲಿ ಸೂಜಿಯಿಂದ ರಾಕೆಟ್ ನಿರ್ಮಾಣದವರೆಗೂ ಸಾಧನೆ ಮಾಡಿರುವುದು ಕಾಂಗ್ರೆಸ್ ಪಕ್ಷ.
ಸ್ವಾತಂತ್ರ್ಯ ಪೂರ್ವದಲ್ಲಿ 16% ಇದ್ದ ಸಾಕ್ಷರತೆ, ಇಂದು 73% ಇದೆ. ಇದನ್ನು ಮೋದಿಯವರು ಮಾಡಿದರಾ? ನಿಮ್ಮ ಊರಿನಲ್ಲಿರುವ ಶಾಲೆಗಳನ್ನು ನಿರ್ಮಾಣ ಮಾಡಿದವರು ಯಾರು? ಈ ಎಲ್ಲ ಸಾಧನೆ ಮಾಡಿರುವವರು ನಾವು. ಕಾಂಗ್ರೆಸ್ ಬಗ್ಗೆ ಭ್ರಷ್ಟಾಚಾರದ ಆರೋಪ ಮಾಡುವವರು ಬಿಜೆಪಿ ತಮ್ಮ 40% ಭ್ರಷ್ಟಾರದ ಬಗ್ಗೆ ಮಾತನಾಡುವುದಿಲ್ಲ. ಅವರನ್ನು ರಕ್ಷಣೆ ಮಾಡುತ್ತಾರೆ. ಬೇರೆ ಪಕ್ಷದವರಿಗೆ ಐಟಿ, ಇಡಿ ದಾಳಿ ಮಾಡಿಸುತ್ತಾರೆ. ನಿಮ್ಮ ಶಾಸಕರ ಮನೆಯಲ್ಲಿ ಕೋಟಿಗಟ್ಟಲೆ ಹಣ ಸಿಕ್ಕಾಗ ಐಟಿ, ಇಡಿ ಸಂಸ್ಥೆಗಳು ಮಲಗಿವೆಯಾ? ಶಾ ಅವರಿಗೆ ಇಡಿ, ಐಟಿ ದುರ್ಬಳಕೆ ಮಾಡುವುದನ್ನು ಬಿಟ್ಟು ಬೇರೆ ಕೆಲಸ ಇಲ್ಲವೇ?
ನಾವು ಬ್ರಿಟೀಷರಿಗೆ ಹೆದರಲಿಲ್ಲ, ಇನ್ನು ಬಿಜೆಪಿಗೆ ಹೆದರುತ್ತೇವಾ? ಅಂಬೇಡ್ಕರ್ ಅವರು ಕೊಟ್ಟ ,ಸಂವಿಧಾನ ಉಳಿಸದಿದ್ದರೆ ಸರ್ವಾಧಿಕಾರಿ ಸರ್ಕಾರ ಬರುತ್ತದೆ. ಹಾಗಾಗಿ ಪ್ರಜಾಪ್ರಭುತ್ವ ಉಳಿಸಲು ನಾವು ಹೋರಾಟ ಮಾಡುತ್ತೇವೆ. ಜನ ಈ ಭ್ರಷ್ಟ ಸರ್ಕಾರ ಕಿತ್ತೊಗೆಯಬೇಕಾದರೆ, ನೀವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಇವರ ಅನಾಚಾರದ ಬಗ್ಗೆ ಜನರಿಗೆ ತಿಳಿಸಬೇಕು. ಮೋದಿ ಮುಖ ನೋಡಿ ಎಷ್ಟು ಬಾರಿ ಮತ ಹಾಕುತ್ತೀರಿ? ಗ್ರಾಮಪಂಚಾಯ್ತಿಯಿಂದ ಲೋಕಸಭೆ ಚುನಾವಣೆವರೆಗೂ ಮೋದಿ ಮುಖ ನೋಡಿ ಮತ ಹಾಕಬೇಕಾ? ಇಲ್ಲೆಲ್ಲಾ ಮೋದಿ ಬಂದು ಆಡಳಿತ ಮಾಡುತ್ತಾರಾ?
ಮೋದಿ ನಮ್ಮ ರಾಜ್ಯಕ್ಕೆ ಏನು ಮಾಡಿದ್ದಾರಾ? ಎಷ್ಟು ಆಣೆಕಟ್ಟು, ಸಾರ್ವಜನಿಕ ವಲಯ ಕಾರ್ಖಾನೆ ಮುಚ್ಚಿದ್ದಾರೆ? ಕೇಂದ್ರ ಸರ್ಕಾರದಲ್ಲಿ 30 ಲಕ್ಷ ನೌಕರಿ ಖಾಲಿ ಇವೆ. ರಾಜ್ಯದಲ್ಲಿ ಸುಮಾರು 3 ಲಕ್ಷ ಸರ್ಕಾರಿ ಹುದ್ದೆ ಖಆಲಿ ಇವೆ. ನಾವು ಅಧಿಕಾರಕ್ಕೆ ಬಂದಾಗ ಈ ಹುದ್ದೆ ತುಂಬುತ್ತೇವೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು. 9 ವರ್ಷಗಳಲ್ಲಿ 18 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದೀರಿ ಎಂದು ಕೇಳಿದಾಗ ನನ್ನ ಮಾತನ್ನು ಸದನದ ಕಡತದಿಂದ ತೆಗೆದುಹಾಕಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಸಾಕಷ್ಟು ಜನಪರ ಯೋಜನೆ ನೀಡಿದೆ. ಅಂತಹ ಕಾರ್ಯಕ್ರಮಗಳು ಮತ್ತೆ ಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕು.
ಡಿ ಕೆ ಶಿವಕುಮಾರ್ ಮಾತುಗಳು…
ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನ್ನ ಭಾಗ್ಯ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸುದೀರ್ಘ 50 ವರ್ಷಗಳ ರಾಜಕೀಯ ಪಯಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಈಗ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. ಅವರು ತಾಲೂಕು ಮಟ್ಟದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಾಲಯದಂತಹ ಬ್ಲಾಕ್ ಕಾಂಗ್ರೆಸ್ ಕಚೇರಿ ರಾಜೀವ್ ಭವನ ಉದ್ಘಾಟನೆ ಮಾಡಿರುವುದು ನಮ್ಮ ಭಾಗ್ಯ.
ಪರಮೇಶ್ವರ್ ಅವರ ನೇತೃತ್ವದಲ್ಲಿ ಬೆಂಗಳೂರಿನ ಕಚೇರಿಯಲ್ಲೂ ಕಾಂಗ್ರೆಸ್ ಭವನ ನಿರ್ಮಿಸಿದ್ದಾರೆ. ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲೂ ಇಂತಹ ಭವನ ನಿರ್ಮಾಣ ಮಾಡಿದ್ದಾರೆ. ಪರಮೇಶ್ವರ್ ಅವರು ಈ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಅನೇಕವಾಗಿದೆ. ಈ ಸಾಧನೆ ಬಗ್ಗೆ ಹೆಜ್ಜೆ ಗುರುತು ಎಂಬ ಪುಸ್ತಕ ತಂದಿದ್ದಾರೆ. ಮನುಷ್ಯ ಹುಟ್ಟಿ ಸಾಯುವ ನಡುವೆ ಅವರು ಯಾವ ಸಾಧನೆ ಮಾಡುತ್ತಾರೆ ಎಂಬುದು ಮುಖ್ಯ. ಈ ಕ್ಷೇತ್ರ ಬಹಳ ಹಿಂದುಳಿದ ಕ್ಷೇತ್ರವಾಗಿತ್ತು. ಆದರೆ ಪರಮೇಶ್ವರ್ ಅವರು ಕೊರಟಗೆರೆ ಹಾಗೂ ಮಧುಗಿರಿ ಕ್ಷೇತ್ರದಲ್ಲಿ ಶಾಸಕರಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಇವರ ಸಾಮರ್ಥ್ಯ ಗಮನಿಸಿ ಸೋನಿಯಾ ಗಾಂಧಿ ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ 8 ವರ್ಷ ಜವಾಬ್ದಾರಿ ನೀಡಿದ್ದರು. ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿತ್ತು. ಅಲ್ಲದೆ ಹತ್ತಾರೂ ಶಾಸಕರನ್ನು ಬೆಳೆಸಿದ್ದಾರೆ. ಧೀಮಂತ, ಸರಳ, ಸಜ್ಜನ ನಾಯಕರನ್ನು ನೀವು ಕಳೆದುಕೊಳ್ಳಬೇಡಿ.
ಬಿಜೆಪಿಯವರು ಭಾವನೆ ಕೆರಳಿಸಿ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ನಿಮ್ಮ ಬದುಕಿನ ಬಗ್ಗೆ ಯೋಚಿಸಿ ಕೆಲಸ ಮಾಡುತ್ತಿದೆ. ನಿಮ್ಮ ಭಾಗದಲ್ಲಿ ಅಂತರ್ಜಲ ಹೆಚ್ಚಳ, ರಸ್ತೆ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಮಾಡಿದ್ದಾರೆ. ನೀವು ಅವರ ಕೈ ಬಲ ಪಡಿಸಬಾಕು. ಇಲ್ಲದಿದ್ದರೆ ನೀವು ನಿಮ್ಮ ಆತ್ಮಸಾಕ್ಷಿಗೆ ಮೋಸ ಮಾಡಿಕೊಂಡಂತೆ. ನಾನು 1989ರಿಂದ ಶಾಸಕನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಬಹಳ ಸರಳ ನಾಯಕನಾಗಿ ರಾಜ್ಯಕ್ಕೆ ಖರ್ಗೆ ಅವರ ನಂತರ ಹೃದಯ ಶ್ರೀಮಂತ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರ ಆಸ್ಪತ್ರೆ, ವಿದ್ಯಾ ಸಂಸ್ಥೆಗಳು ಅವರ ಮಾನವೀಯತೆಗೆ ಸಾಕ್ಷಿಯಾಗಿವೆ. ನಾವೆಲ್ಲರೂ ಅವರ ಮುಖಂಡತ್ವದಲ್ಲಿ ಕೆಲಸ ಮಾಡುತ್ತೇವೆ. ಅವರು ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬುತ್ತಿದ್ದಾರೆ. ಪರಮೇಶ್ವರ್ ಅವರಿಗೆ ನಮ್ಮಂತಹ ಹತ್ತಾರು ನಾಯಕರನ್ನು ಬೆಳೆಸುತ್ತಾರೆ.
ಈ ಜಿಲ್ಲೆ ಕಲ್ಪತರು ನಾಡು. ಇಲ್ಲಿ ದಾನ, ಧರ್ಮ, ಮಠ ಮಾನ್ಯಗಳ ಇತಿಹಾಸವನ್ನು ಹೊಂದಿದೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿದೆ. ಆಪರೇಷನ್ ಕಮಯದ ಮೂಲಕ ನಮ್ಮಿಂದ ಅಧಿಕಾರ ಕಿತ್ತುಕೊಂಡು ಅಧಿಕಾರ ಮಾಡುತ್ತಿದ್ದಾರೆ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಆದರೆ ಮಾಡಿದರಾ? 20 ಸಾವಿರ ಇದ್ದ ಕ್ವಿಂಟಾಲ್ ಕೊಬ್ಬರಿ ಬೆಲೆ 9 ಸಾವಿರಕ್ಕೆ ಇಳಿದಿದೆ. ಇನ್ನು ಪೆಟ್ರೋಲ್ ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಡಬಲ್ ಮಾಡಿದ್ದಾರೆ. ಅವರು ನುಡಿದಂತೆ ನಡೆಯಲು ಆಗಿಲ್ಲ.ಅವರಿಗೆ ಮತ ಕೇಳುವ ಶಕ್ತಿ ಇಲ್ಲ.
ಯುವಕರು ಉದ್ಯೋಗವಿಲ್ಲದೆ ಪರಿತಪಿಸಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಮಾಡಲಿಲ್ಲ. ಕೋವಿಡ್ ಸಮಯದಲ್ಲಿ ಪರಮೇಶ್ವರ್ ಅವರು ತಮ್ಮ ಆಸ್ಪತ್ರೆಯಲ್ಲಿ ಸಾಮಾನ್ಯ ಜನರಿಗೆ ಚಿಕಿತ್ಸೆ ನೀಡಿ ಜನಸೇವೆ ಮಾಡಿದ್ದಾರೆ. ಆದರೆ ಬಿಜೆಪಿಯವರು ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ಗೌರವಯುತ ಅಂತ್ಯಸಂಸ್ಕಾರ ನೀಡಿಲ್ಲಿಲ್ಲ. ಆಸ್ಪತ್ರೆಯಲ್ಲಿ ಸತ್ತವರಿಗೆ ಪರಿಹಾರ ನೀಡಲಿಲ್ಲ. ಅಸಂಘಟಿತ ಕಾರ್ಮಿಕರಿಗೆ ಸಹಾಯ ಮಾಡಲಿಲ್ಲ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ವಿಶೇಷ ಪ್ಯಾಕೇಜ್ ಜನಸಾಮಾನ್ಯರನ್ನು ತಲುಪಲಿಲ್ಲ.
ಬಿಜೆಪಿ ಸರ್ಕಾರದ ಕರ್ಮಕಾಂಡವನ್ನು ನೀವು ಗಮನದಲ್ಲಿಟ್ಟುಕೊಳ್ಳಿ. ಬಿಜೆಪಿ 600 ಭರವಸೆ ನೀಡಿ 550 ಭರವಸೆ ಈಡೇರಿಸಲಿಲ್ಲ. ನಾವು ಈ ಬಗ್ಗೆ ಪ್ರತಿನಿತ್ಯ ಪ್ರಶ್ನೆ ಕೇಳುತ್ತಿದ್ದು, ಅವರು ಒಂದಕ್ಕೂ ಉತ್ತರ ನೀಡಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನಾವು ಕೊಟ್ಟಿದ್ದ 165 ಭರವಸೆಗಳಲ್ಲಿ 159 ಭರವಸೆ ಈಡೇರಿಸಿದೆವು. ಬಿಜೆಪಿಯವರು ನುಡಿದಂತೆ ನಡೆಯಲಿಲ್ಲ. ಬಿಜೆಪಿ ಪಾಪದ ಪುರಾಣವನ್ನು ನಾವು ಬಿಡುಗಡೆ ಮಾಡಿದ್ದು, ಈ ವಿಚಾರವಾಗಿ ಬಿಜೆಪಿ ಹಾಗೂ ಬೊಮ್ಮಾಯಿ ಅವರು ಉತ್ತರ ನೀಡಲು ಆಗಿಲ್ಲ.
ನಿಮ್ಮ ನೋವು, ಸಂಕಷ್ಟ ಅರಿತು ಅದಕ್ಕೆ ಪರಿಹಾರ ನೀಡಲು ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇವೆ. ಬೆಲೆ ಏರಿಕೆಯಿಂದ ಮಹಿಳೆಯರು ಮನೆ ನಡೆಸುವುದೇ ಕಷ್ಟವಾಗಿದೆ. ಇದಕ್ಕೆ ಪರಿಹಾರ ನೀಡಲು ಕಾಂಗ್ರೆಸ್ ಪಕ್ಷ 3 ಗ್ಯಾರಂಟಿ ಯೋಜನೆ ಪ್ರಕಟಿಸಿದೆ. ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಇದರಿಂದ ಪ್ರತಿ ತಿಂಗಳು 1500 ರೂ. ಉಳಿತಾಯವಾಗುತ್ತದೆ. ಇನ್ನು ಮಹಿಳೆಯರಿಗೆ ಬೆಲೆ ಏರಿಕೆ ಸಮಸ್ಯೆಯಿಂದ ಪರಿಹಾರ ನೀಡಲು ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ್ದೇವೆ. ಈ ಎರಡು ಯೋಜನೆ ಮೂಲಕ ವರ್ಷಕ್ಕೆ 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷದಷ್ಟು ಆರ್ಥಿಕ ಶಕ್ತಿ ತುಂಬಲಾಗುವುದು. ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ತಿಂಗಳಿಗೆ 10 ಕೆ.ಜಿ ಅಕ್ಕಿ ನೀಡಲಾಗುವುದು. ನಾವು ಈ ಯೋಜನೆ ಜಾರಿ ಮಾಡದಿದ್ದರೆ ನಾವು ಮತ್ತೆ ನಿಮ್ಮ ಮುಂದೆ ಬಂದು ಮತ ಕೇಳುವುದಿಲ್ಲ. ಬಿಜೆಪಿ, ದಳದವರು ಇಂತಹ ಯಾವುದಾದರೂ ಒಂದು ಕಾರ್ಯಕ್ರಮ ನೀಡಿದ್ದಾರಾ? ಈ ಗ್ಯಾರಂಟಿ ಯೋಜನೆಗಳಿಗೆ ನಮ್ಮ ಸಹಿ ಹಾಕಿಸಿ ಗ್ಯಾರಂಟಿ ಕಾರ್ಡ್ ನೀಡಲಾಗುವುದು. ನೀವು ಮನೆ ಮನೆಗೆ ಈ ಕಾರ್ಡ್ ತಲುಪಿಸಬೇಕು.
ಕಾಂಗ್ರೆಸ್ ಪಕ್ಷ ದೇವೇಗೌಡರನ್ನು ಪ್ರಧಾನಿ ಮಾಡಿತ್ತು. ನಾವು ಬಿಜೆಪಿಯನ್ನು ಅಧಿಕಾರದಿಂದ ದೂವಿಡಲು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಸರ್ಕಾರ ನಡೆಸಲು ಬೇಷರತ್ ಬೆಂಬಲ ನೀಡಿದೆವು. ಅವರು ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ. ನಾವು ನಿಮ್ಮ ಸೇವೆಗೆ ಸಿದ್ಧವಾಗಿದ್ದು, ಖರ್ಗೆ, ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ನನ್ನ ಕೈ ಬಲಪಡಿಸಿ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಪರಮಶ್ವರನ ಕೈ ಅಧಿಕಾರದಲ್ಲಿದ್ದರೆ ಚೆಂದ ಹೀಗಾಗಿ ನೀವು ಕೈ ಜತೆ ಕೈ ಜೋಡಿಸಬೇಕು ಎಂದು ಪ್ರಾರ್ಥಿಸುತ್ತೇನೆ. ನಾವು ಬೆಳಗ್ಗೆ ಎಧ್ದು ಕೈ ನೋಡುತ್ತಲೇ ದೇವರನ್ನು ಕಾಣುತ್ತೇವೆ.
ನಾವು ಭಾರತ ಜೋಡೋ ಯಾತ್ರೆ ಮಾಡುವಾಗ ಚಿತ್ರದುರ್ಗದ ಬಳಿ ಸಾಗುವಾಗ ವಯಸ್ಸಾದ ಮಹಿಳೆ ಬಂದು ಸೌತೇಕಾಯಿ ಕೊಟ್ಟು, ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದು, ತಗೊಳ್ಳಿ ಎಂದು ರಾಹುಲ್ ಗಾಂಧಿ ಅವರಿಗೆ ಕೊಟ್ಟರು. ಇದು ಕಾಂಗ್ರೆಸ್ ಕೆಲಸ.
ಈ ಸರ್ಕಾರ ಎಲ್ಲ ಹಂತದಲ್ಲೂ ಭ್ರಷ್ಟಾಚಾರ ಮಾಡುತ್ತಿದೆ. ನೇಮಕಾತಿ ಅಕ್ರಮ ಮಾಡುತ್ತಿದೆ. ನಾನು ಇಂಧನ ಸಚಿವನಾಗಿದ್ದಾಗ 25 ಸಾವಿರ ಜನರಿಗೆ ಉದ್ಯೋಗ ನೀಡಿದ್ದೆ. ಆದರೆ ಒಬ್ಬನಿಂದಲೂ ಒಂದು ನಯಾ ಪೈಸೆ ಹಣ ಪಡೆದಿಲಿಲ್ಲ. ನಾನು ಹಣ ಪಡೆದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನಾವು ಸರ್ಕಾರದ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಿದಾಗ ಬಿಜೆಪಿಯವರು ಸಾಕ್ಷಿ ಕೇಳುತ್ತಾರೆ. ಇಂದು ಲೋಕಾಯುಕ್ತದವರು ಶಾಸಕರ ವಿರೂಪಾಕ್ಷಪ್ಪ ಅವರ ಮನೆ ಮೇಲೆ ದಾಳಿ ಮಾಡಿ ಸರ್ಕಾರಕ್ಕೆ ಸಾಕ್ಷಿ ಕೊಟ್ಟಿದ್ದಾರೆ. ಆದರೂ ಮುಖ್ಯಮಂತ್ರಿಗಳು ಇನ್ನು ರಾಜೀನಾಮೆ ನೀಡಿಲ್ಲ. ಹೀಗಾಗಿ ಮಾ.9ರಂದು ರಾಜ್ಯದಾದ್ಯಂತ ಬೆಳಗ್ಗೆ 9ರಿಂದ 11ರವರೆಗೆ ಬಂದ್ ಆಚರಿಸಬೇಕು. ನಾವು ವಾಹನ ಸವಾರರು, ಶಾಲೆ, ಆಸ್ಪತ್ರೆಗಳಿಗೆ ತೊಂದರೆ ನೀಡುವುದಿಲ್ಲ. ಆದರೆ ಸಾರ್ವಜನಿಕರು ಈ ಭ್ರಷ್ಟ ಸರ್ಕಾರದ ವಿರುದ್ಧ 2 ತಾಸು ಬಂದ್ ಆಚರಣೆ ಮಾಡಬೇಕು ಎಂದು ಮನವಿ ಮಾಡುತ್ತೇನೆ. ಈ ಭ್ರಷ್ಟ ಸರ್ಕಾರ ಕಿತ್ತೊಗೆಯುವ ಸಂಕಲ್ಪ
ಮಾಡಬೇಕು.
ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ:
ನಾವು ನಮ್ಮ ರಾಜ್ಯ ಹಾಗೂ ರಾಷ್ಟ್ರ ನಾಯಕರ ಜತೆ ಕೆಲವು ವಿಚಾರ ಚರ್ಚೆ ಮಾಡುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ನಾವು ಬಿಜೆಪಿ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿಸಿದ್ದೇವೆ. ಈ ಸರ್ಕಾರ ರಾಜ್ಯಕ್ಕೆ ಭ್ರಷ್ಟಾಚಾರದ ಕಳಂಕ ತಂದಿದೆ. ಗುತ್ತಿಗೆಯಲ್ಲಿ 40% ಕಮಿಷನ್, ಪಾಲಿಕೆಯಲ್ಲಿ 50% ಕಮಿಷನ್, ಮಠಗಳಿಗೆ 30% ಕಮಿಷನ್, ಕೋವಿಡ್ ಸಮಯದಲ್ಲಿ 100% ರೂ ಹೆಚ್ಚಿನ ಕಮಿಷನ್ ಭ್ರಷ್ಟಾಚಾರ ಮಾಡಿದ್ದಾರೆ. ಈ ಬಗ್ಗೆ ನಾವು ಧ್ವನಿ ಎತ್ತಿದ್ದೇವೆ. ಪ್ರತಿ ಬಾರಿ ಮುಖ್ಯಮಂತ್ರಿಗಳು ಸಾಕ್ಷಿ ಕೇಳುತ್ತಿದ್ದರು. ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು ಪ್ರಧಾನಿಗೆ 40% ಕಮಿಷನ್ ಬಗ್ಗೆ ಪತ್ರ ಬರೆದರು. ನಾನು ತಿನ್ನಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂದು ಹೇಳಿದ್ದ ಮೋದಿ ಅವರು ಮೌನವಾಗಿದ್ದಾರೆ.
ಇನ್ನು ನೇಮಕಾತಿ ಅಕ್ರಮಗಳ ಮೂಲಕ ರಾಜ್ಯದ ಯುವಕರಿಗೆ ಅನ್ಯಾಯವಾಗುತ್ತಿದೆ. ನೇಮಕಾತಿ ಅಕ್ರಮದಲ್ಲಿ ಹಿರಿಯ ಅಧಿಕಾರಿಗಳು ಜೈಲು ಸೇರಿದ್ದಾರೆ. ಈಗ ಲೋಕಾಯುಕ್ತ ಸಂಸ್ಥೆ ಬಿಜೆಪಿ ಶಾಸಕರ ಭ್ರಷ್ಟಾಚಾರವನ್ನು ಬಯಲು ಮಾಡಿ ಸರ್ಕಾರಕ್ಕೆ ಮತ್ತೊಂದು ಸಾಕ್ಷಿ ನೀಡಿದ್ದಾರೆ. ನಾನು ಜನರ ಪರವಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇವೆ. ನಾವು ಈ ಬಗ್ಗೆ ಜನರ ಗಮನ ಸೆಳೆಯಲು ಮುಖ್ಯಮಂತ್ರಿಗಳ ರಾಜೀನಾಮೆ ಆಗ್ರಹಿಸಿ ಮಾ.9ರಂದು 2 ಗಂಟೆಗಳ ಕಾಲ ಸಾಂಕೇತಿಕ ಬಂದ್ ಆಚರಣೆಗೆ ಕರೆ ನೀಡಿದ್ದೇವೆ. ನಾವು ಯಾರಿಗೂ ತೊಂದರೆ ನೀಡುವುದಿಲ್ಲ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಎಲ್ಲ ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ.
ಮುಂದಿನ ಚುನಾವಣೆಯಲ್ಲಿ ಜನ ನಮಗೆ ಆಶಈರ್ವಾದ ಮಾಡಲಿದ್ದು, ನಾವು ರಾಜ್ಯದಲ್ಲಿ ಉತ್ತಮ ದಕ್ಷ ಆಡಳಿತ ನೀಡುತ್ತೇವೆ. ಇಂದು ಕೊರಟಗೆರೆ ಕಾಂಗ್ರೆಸ್ ಕಚೇರಿ ಉದ್ಘಾಟನೆ ಮಾಡಿ ಈ ವಿಚಾರ ತಿಳಿಸಲು ಬಯಸುತ್ತೇನೆ.
ಅಮಿತ್ ಶಾ ಅವರ ಧಾರವಾಡ ಕಾರ್ಯಕ್ರಮ ಮುಂದೂಡಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರು ಕಾರ್ಯಕ್ರಮ ಮುಂದೂಡಿಕೊಳ್ಳಲಿ. ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಜನರ ಬದುಕಿನ ಬಗ್ಗೆ ಆಲೋಚಿಸುತ್ತೇವೆ. ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು. ಅಥವಾ ಪ್ರಧಾನಿಗಳೇ ಅವರನ್ನು ವಜಾ ಮಾಡಬೇಕು’ ಎಂದು ಆಗ್ರಹಿಸಿದರು.