IMG 20230306 WA0012

BJP: ಸಿದ್ದರಾಮಯ್ಯರ ಭ್ರಷ್ಟಾಚಾರ ವಿಚಾರದಲ್ಲಿ ಐದಾರು ಪ್ರಕರಣ ಶೀಘ್ರವೇ ತನಿಖೆಗೆ…!

POLATICAL STATE


ಸಿದ್ದರಾಮಯ್ಯರ ಭ್ರಷ್ಟಾಚಾರ ವಿಚಾರದಲ್ಲಿ ಐದಾರು ಪ್ರಕರಣ ಶೀಘ್ರವೇ ತನಿಖೆಗೆ: ಎನ್.ಆರ್.ರಮೇಶ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಭ್ರಷ್ಟಾಚಾರ ವಿಚಾರದಲ್ಲಿ ಕನಿಷ್ಠ ಐದಾರು ಪ್ರಕರಣಗಳನ್ನು ರಾಜ್ಯ ಸರಕಾರವು ಶೀಘ್ರವೇ ತನಿಖೆಗೆ ಒಪ್ಪಿಸಲಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್.ಆರ್.ರಮೇಶ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ದಾಖಲೆಗಳ ಸಹಿತ ದೂರು ಕೊಟ್ಟಿದ್ದೇನೆ. ದಾಖಲೆÉಗಳ ಸತ್ಯಾಸತ್ಯತೆಯ ಪರಿಶೀಲನೆ ಆಗುತ್ತಿದೆ. ಇದೇ 15ರೊಳಗೆ ಅವುಗಳನ್ನು ತನಿಖೆಗಾಗಿ ಸೂಕ್ತ ಸಂಸ್ಥೆಗೆ ಒಪ್ಪಿಸಲಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯರ ಅವಧಿಯಲ್ಲಿ ಮುಖ್ಯಮಂತ್ರಿಗಳ ಅಧಿಕೃತ ವಿಧಾನಸೌಧದ ಕಚೇರಿಗೆ ಸಂಬಂಧಿಸಿ (314, 315, 316 ಕೊಠಡಿಗಳು) 200 ಕೋಟಿಗೂ ಹೆಚ್ಚು ಹಣವನ್ನು ಅತಿಥಿ ಗಣ್ಯರ ಉಪಚಾರಕ್ಕೆ ಎಂದು ಬಳಸಿದ್ದು ಕಾಣುತ್ತದೆ. 5 ವರ್ಷಕ್ಕೆ 410 ರಜಾ ದಿನಗಳಿದ್ದವು. 1,825 ದಿನಗಳಲ್ಲಿ ಒಂದೇ ಒಂದು ದಿನ ಬಿಡದೆ ಕೆಲಸ ಮಾಡಿದ್ದಾರೆಂದು ಭಾವಿಸಿದರೂ ಒಂದು ದಿನಕ್ಕೆ 11 ಲಕ್ಷ ರೂಪಾಯಿ ಖರ್ಚು ಮಾಡಿದಂತೆ ಕಾಣುತ್ತದೆ. ರಜೆ ಪರಿಗಣಿಸಿದರೆ ಪ್ರತಿದಿನಕ್ಕೆ 14 ಲಕ್ಷ ಬಳಕೆ ಆದಂತಾಗುತ್ತದೆ. ಇದು ಸಾರ್ವಜನಿಕ ಹಣದ ದುರ್ಬಳಕೆ ಮತ್ತು ಲೂಟಿ ಎಂದು ಆರೋಪಿಸಿದರು.

ಅತಿಥಿಗಳಿಗೆ ಸಿದ್ದರಾಮಯ್ಯ ಅವರು ಚಿನ್ನದ ಬಿಸ್ಕೆಟ್ ಕೊಟ್ಟರೇ ಎಂದು ಪ್ರಶ್ನಿಸಿದರು. ಈ ಕುರಿತು ಸಾರ್ವಜನಿಕವಾಗಿ ಚರ್ಚೆಗೆ ಬನ್ನಿ ಎಂದು ಅವರು ಸವಾಲೆಸೆದರು. ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯರವರು ಇದರ ಕುರಿತು ಗಂಭೀರವಾಗಿದ್ದರೆ ಮೊದಲನೇ ಆಡಿಟ್ ವರದಿ ಬಂದಾಗ ಎಚ್ಚತ್ತುಕೊಳ್ಳಬೇಕಿತ್ತಲ್ಲವೇ ಎಂದು ಕೇಳಿದರು.
ಅವರು ಭಂಡ ರಾಜಕಾರಣಿ. ಬಿಜೆಪಿಯ ಮೂರೂವರೆ ವರ್ಷಗಳ ಅವಧಿಯಲ್ಲಿ ಸಿಎಂ ಕಚೇರಿಗೆ ಅತಿಥಿ ಗಣ್ಯರ ಉಪಚಾರಕ್ಕೆ ಸಂಬಂಧಿಸಿ 3.97 ಕೋಟಿ ಖರ್ಚಾಗಿದೆ. ಇವೆರಡನ್ನು ಹೋಲಿಕೆ ಮಾಡಿ ಎಂದು ತಿಳಿಸಿದರು. ಒಂದು ದಿನಕ್ಕೆ 10 ಸಾವಿರ ಎಲ್ಲಿ? ಒಂದು ದಿನಕ್ಕೆ 11 ಲಕ್ಷ ಎಲ್ಲಿ ಎಂದು ಅವರು ಪ್ರಶ್ನೆಯನ್ನು ಮುಂದಿಟ್ಟರು.
ಇದಕ್ಕೆ ಆಡಿಟ್ ವರದಿಯಲ್ಲೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

2018 ಜನವರಿಯಲ್ಲಿ 31 ದಿನಗಳಿದ್ದು, ದಿನಕ್ಕೆ 59 ಸಾವಿರ ಖರ್ಚಾಗಿದೆ. ಅಧಿಕಾರಿಗಳ, ಅತಿಥಿ ಗಣ್ಯರ ಜಾತ್ರೆ ನಡೆದಿತ್ತೇ? ಎಂದು ಕೇಳಿದರು. ಬೆಂಗಳೂರಿನ ಮತ್ತು ರಾಜ್ಯದ ಜನರ ಕಿವಿಯಲ್ಲಿ ಹೂ ಇಡುವ ಕಾರ್ಯ ಮಾಡಿದ್ದಾರೆ ಎಂದು ಟೀಕಿಸಿದರು. ರೀಡೂ ಪ್ರಕರಣದ ಅಕ್ರಮದ ಕುರಿತು ಶೀಘ್ರವೇ ಮಾಹಿತಿ ಕೊಡುವುದಾಗಿ ತಿಳಿಸಿದರು.

ನನ್ನದು ರಾಜಿರಹಿತ ಹೋರಾಟ. ಎಷ್ಟೇ ಬೆದರಿಕೆ ಬಂದರೂ ನಾನು ಪ್ರಕರಣಗಳನ್ನು ವಾಪಸ್ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ರೀಡೂ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಬಚಾವ್ ಆಗಿರಬಹುದು. ಆದರೆ, ರೀಡೂ ಸಮಯದಲ್ಲಿ ಬಿಡಿಎದಲ್ಲಿ ನಡೆದ ಅಕ್ರಮಗಳ ದಾಖಲೆಗಳ ಸಹಿತ ನಿಮ್ಮ ಮುಂದೆ ಬರಲಿದ್ದೇನೆ ಎಂದು ಪ್ರಕಟಿಸಿದರು. ಅಷ್ಟೆಲ್ಲ ಕಾನೂನು ತಜ್ಞ, ಕಾನೂನು ಪ್ರಾಧ್ಯಾಪಕರಾದ ಸಿದ್ದರಾಮಯ್ಯನವರು ಎಲ್ಲೋ ಒಂದು ಕಡೆ ಕುರುಹು ಬಿಟ್ಟು ಹೋಗಿರುವುದು ಸಿಗಲಿದೆ ಎಂದರು.

ಕೆ.ಕೆ.ಗೆಸ್ಟ್ ಹೌಸ್‍ನಲ್ಲಿ ತಂಗುವ ಅತಿಥಿಗಳ ವಾಹನ, ವಾಸ್ತವ್ಯಕ್ಕೆ ಸಂಬಂಧಿಸಿ ಹಗರಣ ಇದರ ಹಲವು ಪಟ್ಟುಗಳಷ್ಟಿದೆ. ಹಾಸಿಗೆ, ದಿಂಬು, ಇಂದಿರಾ ಕ್ಯಾಂಟೀನ್, ಏಯ್‍ಡ್‍ಸ್ ವಿಚಾರದಲ್ಲೂ ಹಣ ಅವ್ಯವಹಾರ ಆಗಿದೆ. ಪ್ರಕರಣ ಸಿಐಡಿಗೆ ಒಪ್ಪಿಸಲು ಮುಖ್ಯಮಂತ್ರಿಗಳನ್ನು ಕೋರಿದ್ದೇನೆ. ಅಧಿಕಾರಿಗಳು, ನೌಕರರ ವಿರುದ್ಧ ಪ್ರಕರಣ ದಾಖಲಿಸಿದ್ದೇನೆ. ಗುರುವಾರ ಸಿದ್ದರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಲಿದ್ದೇನೆ ಎಂದು ಪ್ರಕಟಿಸಿದರು.
ಪ್ರತಿ 12 ದಿನಕ್ಕೊಮ್ಮೆ ಪತ್ರಿಕಾಗೋಷ್ಠಿ ನಡೆಸಿ ಹಗರಣಗಳನ್ನು ಬಯಲಿಗೆ ತಂದಿದ್ದೇನೆ ಎಂದು ಅವರು ವಿವರಿಸಿದರು.

169 ಪತ್ರಿಕಾಗೋಷ್ಠಿ ಮಾಡಿದ್ದೇನೆ. ಹಾಸಿಗೆ, ದಿಂಬು, ಇಂದಿರಾ ಕ್ಯಾಂಟೀನ್, ಏಯ್‍ಡ್‍ಸ್ ವಿಚಾರದಲ್ಲೂ ಹಣ ಅವ್ಯವಹಾರ ಆಗಿದೆ ಎಂದು ತಿಳಿಸಿದರು. ಭ್ರಷ್ಟಾಚಾರ ಸಂಬಂಧ ತನಿಖೆಗಾಗಿ ಹಲವು ಅಧಿಕಾರಿಗಳು ಕೋರ್ಟ್‍ಗೆ ಅಲೆಯುತ್ತಿದ್ದಾರೆ ಎಂದು ನುಡಿದರು.
ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಅವರು ಮಾತನಾಡಿ, ಒಂದು ರಾಜಕೀಯ ಪಕ್ಷವಾಗಿ ಅನೇಕ ಮುಖಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ. ರಮೇಶ್ ಅವರಿಗೆ ಜೀವದ ಆತಂಕ ಇದ್ದರೂ ಅವರು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಕಾನೂನಿನಡಿ ಹೋರಾಟ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಆರು ಕೋಟಿ ಜನರಿಗೆ ಗೊತ್ತಾಗುವ ದೃಷ್ಟಿಯಿಂದ ಈ ಪತ್ರಿಕಾಗೋಷ್ಠಿ ನಡೆಸಲಾಗುತ್ತಿದೆ. ಸತ್ಯದ ಅಂಶ ಬಯಲಿಗೆ ಬರಲು ತನಿಖೆ ಅಗತ್ಯ ಎಂದು ನುಡಿದರು. ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಪಕ್ಷ ಹೊಂದಿದೆ. ಉಪ್ಪು ತಿಂದವನು ನೀರು ಕುಡಿಯುತ್ತಾನೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಪಕ್ಷವು ತೀವ್ರ ಕ್ರಮ ಕೈಗೊಳ್ಳಲಿದೆ ಎಂದು ಉತ್ತರ ನೀಡಿದರು. ಅವರು ತಮ್ಮ ಪದವಿಗೆ ರಾಜೀನಾಮೆ ಕೊಟ್ಟಿದ್ದಾರೆ. ಪಕ್ಷವೂ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. ಬೆಂಗಳೂರು ದಕ್ಷಿಣ ಜಿಲ್ಲಾ ವಕ್ತಾರ ರಾಘವೇಂದ್ರ ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

(